🔥ನ್ಯೂಸ್9ಟು ಡೇ ಬಿಗ್ ಇಂಪ್ಯಾಕ್ಟ್, ಮೊಟ್ಟ ಮೊದಲಿಗೆ ಬಯಲಿಗೆ ತಂದ ನ್ಯೂಸ್9ಟುಡೇ ಸೋಷಿಯಲ್ ಮೀಡಿಯಾ.
ತದನಂತರ ಎಚ್ಚೆತ್ತು ಕೊಂಡ ಡಿಪಾರ್ಟ್ಮೆಂಟ್.
ಬಳ್ಳಾರಿ ಏ 03. ಗ್ರಾಹಕರಿಗೆ ತಾವು ಕೊಡುವ ಹಣಕ್ಕೆ ಲಾಭಾಂಶವನ್ನು ಕೊಡುವುದಾಗಿ ನಂಬಿಸಿ ಗ್ರಾಹಕರಿಂದ ಹಣವನ್ನು ಪಡೆದು ಯಾವುದೇ ಲಾಭಾಂಶವನ್ನು ಕೊಡದೇ ಚೀಟಿ ವ್ಯವಹಾರ ಮಾಡಿ ಮೋಸ ಮಾಡುತ್ತಿದ್ದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲು.
ದಿನಾಂಕ: 02/04/2025 ರಂದು ರಾತ್ರಿ 10-00 ಗಂಟೆಗೆ ಗ್ಯಾನಪ್ಪ ತಂದೆ ಜಡಿಯಪ್ಪ, ಸಹಕಾರ ಸಂಘಗಳ ಸಹಾಯಕ ನಿಬಂಧಕರು ಬಳ್ಳಾರಿ ಉಪ-ವಿಭಾಗ, ರವರು ನೀಡಿದ ದೂರಿನಂತೆ ಬಳ್ಳಾರಿ ನಗರದ ಕಾಳಮ್ಮ ಸರ್ಕಲ್ ಹತ್ತಿರ ಕುಂಬಾರ್ ಬೀದಿಯಲ್ಲಿರುವ ವಾಸವಿ ಸ್ವಗೃಹ ಹೋಮ್ ನೀಡ್ಸ್ ಅಂಗಡಿಯ ಮಾಲಿಕರಾದ ಟಿ.ವಿಶ್ವನಾಥ ತಂದೆ ಲೇಟ್ ಟಿ.ಮಲ್ಲಿಕಾರ್ಜುನ, ವಯಸ್ಸು 58 ವರ್ಷ, ವೈಶ್ಯ ಜನಾಂಗ, ವಾಸ: ಇಂಡಿಯನ್ ಬ್ಯಾಂಕ್ ಪಕ್ಕದಲ್ಲಿ, ಗೊಲ್ಡ‌್ ಸ್ಮಿತ್ ಬೀದಿ, ಬಳ್ಳಾರಿ. ರವರು ದಿನಾಂಕ: 01/09/2024 ರಿಂದ ದಿನಾಂಕ: 02/04/2025 ರವರೆಗೂ ಸರ್ಕಾರದಿಂದ ಅಥವ ಮಂಜೂರು ಮಾಡುವ ಪ್ರಾಧಿಕಾರದಿಂದ ಪೂರ್ವ ಮಂಜುರಾತಿ ಪಡೆಯದೇ ಗ್ರಾಹಕರಿಗೆ ಮೋಸ ಮಾಡುವ ದುರುದೇಶದಿಂದ ಗ್ರಾಹಕರಿಂದ ಅನಧಿಕೃತವಾಗಿ ಚೀಟಿಯ ರೂಪದಲ್ಲಿ ನಗದು ಹಣವನ್ನು ಕಟ್ಟಿಸಿಕೊಂಡು ಹಣಕ್ಕೆ 25% ಹಣವನ್ನು ಬೋನಸ್ ರೂಪದಲ್ಲಿ ಕೊಡುವುದಾಗಿ ನಂಬಿಸಿ ಗ್ರಾಹಕರಿಗೆ ಯಾವುದೇ ಲಾಭಾಂಶವನ್ನು ಕೊಡದೇ ಚೀಟಿ ವ್ಯವಹಾರ ಮಾಡಿ ಮೋಸ ಮಾಡಿರುತ್ತಾರೆಂದು ನೀಡಿದ ದೂರನ್ನು ಪಡೆದು. Cr no: 51/2025. ಕಲಂ: 4,5,11 ಚಿಟ್ ಫಂಡ್ಸ್ ಆಕ್ಟ್-1982 ಹಾಗೂ ಕಲಂ: 316(2), 318(4) ಬಿಎನ್‌ಎಸ್-2023 ಅಡಿಯಲ್ಲಿ ಪ್ರಕರಣ ದಾಖಲಿಸಿ, S.P. ಡಾ|| ಶೋಭಾರಾಣಿ VJ, ಹಾಗು Add S.P. ಮತ್ತು DySP – ಬಳ್ಳಾರಿ ನಗರ, ಹಾಗು Dysp-C crime ರವರ ಮಾರ್ಗಧರ್ಶನದಲ್ಲಿ ” ವಾಸವಿ ಸ್ವಗೃಹ ಹೋಮ್ ನೀಡ್ಸ್ ಅಂಗಡಿಗೆ ಹೋಗಿ ಅಂಗಡಿ ಮಾಲೀಕರಾದ ಟಿ.ವಿಶ್ವನಾಥ ರವರು ಗ್ರಾಹಕರೊಂದಿಗೆ ನಿಶ್ಚಿತ ಅವದಿಗೆ ನಿಯತಕಾಲಿಕ ಕಂತುಗಳ ರೂಪದಲ್ಲಿ ಹಣದ ನಿಶ್ಚಿತ ಹಣವನ್ನು ಕೊಡಲು ಒಪ್ಪಿ ಚೀಟಿ ಒಪ್ಪಂದ ಮಾಡಿಕೊಂಡು ಗ್ರಾಹಕರಿಗೆ ಯಾವುದೇ ಲಾಭಾಂಶವನ್ನು ಕೊಡದೇ ಚೀಟಿ ವ್ಯವಹಾರ ಮಾಡಿ ಮೋಸ ಮಾಡುತ್ತಿರುವುದು ಕಂಡು ಬಂದಿದ್ದರಿಂದ, ಆಪಾದಿತನಿಂದ 1] ರೂ 19,38,500/- ಗಳು, ಮತ್ತು ಗ್ರಾಹಕರು ಆಪಾದಿತನಿಗೆ ಹಣ ಕಟ್ಟುತ್ತಿದ್ದ ಬಗ್ಗೆ ಇದ್ದ ಚೀಟಿಗಳು ಹಾಗು ವ್ಯವಹಾರಕ್ಕೆ ಬಳಸುತ್ತಿದ್ದ ಲೆಜ್ಜರ್ ಗಳನ್ನು ಬ್ರೂಸ್‌ಪೇಟೆ ಪೊಲೀಸ್ ಠಾಣೆಯ ಪಿ.ಐ. T. ಮಹಾಂತೇಶ್ ಹಾಗು ಸಿಬ್ಬಂದಿಗಳಾದ ASI ಶಂಕ್ರಪ್ಪ, ಅಶೋಕ್ ಮೈನಳ್ಳಿ, ಸಿಬ್ಬಂದಿಗಳಾದ HC- ಶರ್ಮಾಸ್, ಕುಮಾರ್ ರೆಡ್ಡಿ, ಆಂಜಿನೇಯ, ಹಾಗು ಪಿಸಿಗಳಾದ ವಿನಯ್‌ಕುಮಾರ್, ಶಿವಕುಮಾರ್, ಸಿದ್ದೇಶ್, ನಿಸಾರ್ ಅಹಮ್ಮದ್, ರವರು ವಶಪಡಿಸಿಕೊಳ್ಳುವುದರಲ್ಲಿ ಯಶಸ್ವಿಯಾಗಿರುತ್ತಾರೆ. ತನಿಖಾ ಪ್ರಗತಿ ಗತಿಯಲ್ಲಿದೆ.
ಈ ಪತ್ತೆ ಕಾರ್ಯವನ್ನು ಮಾನ್ಯ ಡಾ|| ಶೋಭಾರಾಣಿ ವಿ.ಜಿ, ಐ.ಪಿ.ಎಸ್, ಪೊಲೀಸ್ ವರಿಷ್ಠಾಧಿಕಾರಿಗಳು, ಬಳ್ಳಾರಿ. ಇವರು ಮೆಚ್ಚುಗೆ ವ್ಯಕ್ತಪಡಿಸಿರುತ್ತಾರೆ.