ರಸ್ತೆ ಅಪಘಾತ ನಾಲ್ಕು ಜನ ಮೃತ.
ಸಂಡೂರು (26.) ಸಂಡೂರ್,ಹೊಸಪೇಟೆ ಸಿದ್ದಾಪುರ ರಸ್ತೆಯಲ್ಲಿ ಬೆಳಗ್ಗೆ 9:30 ಸಮಯದಲ್ಲಿ ಒಂದು ಟಿಪ್ಪರ್ ವಾಹನ ಈಟೋಸ್ ಕಾರು ಮುಖಾಮುಖಿ ಡಿಕ್ಕಿಯಾಗಿದ್ದು ಈ ರಸ್ತೆ ಅಪಘಾತದಲ್ಲಿ ನಾಲ್ಕು ಜನ ಸ್ಥಳದಲ್ಲಿ ಮೃತಪಟ್ಟಿದ್ದು ಇಬ್ಬರು ಹೆಣ್ಣು ಮಕ್ಕಳು ಎರಡು ಚಿಕ್ಕ ಮಕ್ಕಳು ಮೃತ ಪಟ್ಟಿದ್ದಾರೆ. ಸಂಡೂರು ತಾಲೂಕಿನ ಲಕ್ಷ್ಮಿಪುರ ಗ್ರಾಮದವರಾಗಿದ್ದು ಹೊಸಪೇಟೆ ಆಸ್ಪತ್ರೆಗೆ ಗರ್ಭಿಣಿ ಇದ್ದ ಹೆಣ್ಣುಮಗಳು ಗೆ ಚಿಕಿತ್ಸೆ ಗೆಂದು ಈಟಾಸ್ ಕಾರ್ ನಲ್ಲಿ ಕುಟುಂಬ ಸಮೇತ ಹೋಗುತ ಇದ್ದರು.
ಸಿದ್ದಾಪುರ ರಸ್ತೆಯಲ್ಲಿ ತಿಪ್ಪರ ವಾಹನ ಡಿಕ್ಕಿ ಹೊಡೆದ ಹಿನ್ನೆಲೆ ಮೃತ ಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಗರ್ಭಿಣಿ ಇದ್ದ ಅವರು ಕೂಡ ರಸ್ತೆ ಅಪಘಾತದಲ್ಲಿ ಮೃತ ಪಟ್ಟಿದ್ದಾರೆ.