Web Stories
News 9 Today
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಬಳ್ಳಾರಿಯಲ್ಲಿ ಬ್ಯಾನರ್ ವಿವಾದದಿಂದ ಗಲಭೆ: 26 ಆರೋಪಿಗಳ ಬಂಧನ, ತನಿಖೆ ಮುಂದುವರಿಕೆ

ಬಳ್ಳಾರಿಯಲ್ಲಿ ಬ್ಯಾನರ್ ವಿವಾದದಿಂದ ಗಲಭೆ: 26 ಆರೋಪಿಗಳ ಬಂಧನ, ತನಿಖೆ ಮುಂದುವರಿಕೆ
ಬಳ್ಳಾರಿ: ಬಳ್ಳಾರಿ ನಗರದಲ್ಲಿ ಬ್ಯಾನರ್ ಹಾಗೂ ಬಂಟಿಂಗ್‌ಗಳ ವಿಚಾರವಾಗಿ ಉಂಟಾದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದು, ಇದುವರೆಗೆ 26 ಮಂದಿ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಇಲಾಖೆ ತಿಳಿಸಿದೆ.
ಜಿಲ್ಲಾ ಪೊಲೀಸ್ ಕಚೇರಿ ಬಳ್ಳಾರಿ ನೀಡಿರುವ ಅಧಿಕೃತ ಮಾಹಿತಿಯ ಪ್ರಕಾರ, ದಿನಾಂಕ 01-01-2026 ರಂದು ಬಳ್ಳಾರಿ ನಗರದ ಆವಂಭಾವಿ ಪ್ರದೇಶದ ಸಿರುಗುಪ್ಪ ರಸ್ತೆಯಲ್ಲಿ ಹಾಗೂ ದಿನಾಂಕ 03-01-2026 ರಂದು ವಾಲ್ಮೀಕಿ ವೃತ್ತ ಮತ್ತು ಮಹರ್ಷಿ ಪುತ್ತಲಿ ಉದ್ಘಾಟನಾ ಸಮಾರಂಭದ ನಿಮಿತ್ತ ಅಳವಡಿಸಲಾದ ಬ್ಯಾನರ್‌ಗಳು ಮತ್ತು ಬಂಟಿಂಗ್‌ಗಳ ವಿಚಾರವಾಗಿ ಎರಡು ಗುಂಪುಗಳ ನಡುವೆ ಗಲಭೆ ಉಂಟಾಗಿದೆ. ಈ ವೇಳೆ ಕಲ್ಲು ತೂರಾಟ ನಡೆದಿದ್ದು, ಪರಿಸ್ಥಿತಿ ಉದ್ವಿಗ್ನಗೊಂಡಿದೆ.
ಗಲಭೆಯ ವೇಳೆ ಖಾಸಗಿ ಅಂಗರಕ್ಷಕರಿಂದ ಗುಂಡಿನ ದಾಳಿ (ಫೈರಿಂಗ್) ನಡೆದಿದ್ದು, ಇದರಿಂದ ರಾಜಶೇಖರ್ ರೆಡ್ಡಿ ಎಂಬ ಯುವಕ ಮೃತಪಟ್ಟಿದ್ದಾನೆ. ಘಟನೆಯಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಸೇರಿದಂತೆ ಹಲವು ಸಾರ್ವಜನಿಕರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ಬಳ್ಳಾರಿ ನಗರದ ಬ್ರೂಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ಒಟ್ಟು ಆರು (06) ಪ್ರಕರಣಗಳನ್ನು ದಾಖಲಿಸಲಾಗಿದ್ದು, ಎಲ್ಲಾ ಪ್ರಕರಣಗಳ ತನಿಖೆ ಪ್ರಗತಿಯಲ್ಲಿದೆ. ಪ್ರಕರಣಗಳ ತನಿಖೆಯ ಸಂದರ್ಭದಲ್ಲಿ ದೊರೆತ ಸಾಕ್ಷ್ಯಾಧಾರಗಳು, ಸ್ಥಳೀಯ ಸಾಕ್ಷಿಗಳ ಹೇಳಿಕೆಗಳು, ಸಿಸಿಟಿವಿ ದೃಶ್ಯಗಳು ಹಾಗೂ ವಿಡಿಯೋ ಫೋಟೇಜ್‌ಗಳ ಆಧಾರದ ಮೇಲೆ 26 ಮಂದಿ ಆರೋಪಿಗಳನ್ನು ಗುರುತಿಸಿ ಬಂಧಿಸಲಾಗಿದೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಕ್ರಮ ಕೈಗೊಳ್ಳಲಾಗಿದೆ.
ಘಟನೆಯ ಗಂಭೀರತೆಯನ್ನು ಗಮನಿಸಿ ಬಳ್ಳಾರಿ ನಗರದಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಹೆಚ್ಚುವರಿ ಪೊಲೀಸ್ ಪಡೆ ನಿಯೋಜಿಸಲಾಗಿದ್ದು, ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್‌ ಜಾರಿಗೊಳಿಸಲಾಗಿದೆ. ಯಾವುದೇ ಅಹಿತಕರ ಘಟನೆಗಳು ಮರುಕಳಿಸದಂತೆ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ.
ಮೇಲ್ಕಂಡ ಎಲ್ಲಾ ಪ್ರಕರಣಗಳಲ್ಲಿ ತನಿಖೆ ಮುಂದುವರಿದಿದ್ದು, ಇನ್ನಿತರ ಆರೋಪಿಗಳ ಪಾತ್ರವಿದೆಯೇ ಎಂಬುದರ ಬಗ್ಗೆ ಪರಿಶೀಲನೆ ನಡೆಯುತ್ತಿದೆ. ತಪ್ಪಿತಸ್ಥರ ವಿರುದ್ಧ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ನಗರದ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕೆಂದು ಪೊಲೀಸರು ಮನವಿ ಮಾಡಿದ್ದಾರೆ.

Author
News 9 Today
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಚೇರಿ ಗಳು ವೀಕ್ಷಣೆ ಮಾಡಿದ, ಜಿಲ್ಲಾಧಿಕಾರಿ. ಬೇಸಿಗೆ,ಸಂದರ್ಭದಲ್ಲಿ ಜನರು ಕಚೇರಿಗಳು ಸುತ್ತ ಬಾರದು, ನಿರ್ಲಕ್ಷ ಮಾಡಿದರೆ,ಕ್ರಮ.ಬಡವರಿಗೆ ಸಮಯ ನೀಡಬೇಕಿತ್ತು: ಶ್ರೀರಾಮುಲುಮಹಿಳಾ ಮೀಸಲು ಮಸೂದೆ ಸ್ವಾಗತಾರ್ಹ; ಆದರೆ ಕ್ಷೇತ್ರ ಪುನರ್ವಿಂಗಡಣೆಯಿಂದ ದಕ್ಷಿಣದ ರಾಜ್ಯಗಳಿಗೆ ಅನ್ಯಾಯ: ನಾರಾ ವೈಜಯಂತಿ ರೆಡ್ಡಿ ಅಂಬೇಡ್ಕರ್ ಜಯಂತಿ ಆಚರಣೆ.ಅಂಬೇಡ್ಕರ್ ಜಯಂತಿ ಆಚರಣೆ.ದುಬಾರಿ ಬೆಲೆ ಬಾಳುವ, ಗಾಲಿ ಆಪ್ತನ, ಬಂದುಗಳ, ಲೇಔಟ್ ಗಳು, ಕುಡುಕರ ಅಡ್ಡಗಳು!!. ಜನರು ಆತಂಕ ದಲ್ಲಿ.ದುಬಾರಿ ಬೆಲೆ ಬಾಳುವ, ಗಾಲಿ ಆಪ್ತನ, ಬಂದುಗಳ, ಲೇಔಟ್ ಗಳು, ಕುಡುಕರ ಅಡ್ಡಗಳು!!. ಜನರು ಆತಂಕ ದಲ್ಲಿ.ದುಬಾರಿ ಬೆಲೆ ಬಾಳುವ, ಗಾಲಿ ಆಪ್ತನ, ಬಂದುಗಳ, ಲೇಔಟ್ ಗಳು, ಕುಡುಕರ ಅಡ್ಡಗಳು!!. ಜನರು ಆತಂಕ ದಲ್ಲಿ.ಪಾಲಿಕೆಯಾ ನೌಕರರ ಧರಣಿಗೆ ಬಿಷ್ಮ ಎಂಟ್ರಿ!! ಯಾಲ್ಲವು, ನೋಡಿಕೊಳ್ಳುವ, ಬರವಸೆಯನ್ನು ಕೊಟ್ಟ ನಾರಾ ಸೂರ್ಯ ನಾರಾಯಣ ರೆಡ್ಡಿ.ಪಾಲಿಕೆಯಾ ನೌಕರರ ಧರಣಿಗೆ ಬಿಷ್ಮ ಎಂಟ್ರಿ!! ಯಾಲ್ಲವು, ನೋಡಿಕೊಳ್ಳುವ, ಬರವಸೆಯನ್ನು ಕೊಟ್ಟ ನಾರಾ ಸೂರ್ಯ ನಾರಾಯಣ ರೆಡ್ಡಿ.