ಶ್ರೀ ಸಾಯಿ ಟ್ರಾವೆಲ್ಸ್ ಅವರಿಂದ ಲಕ್ಷಾಂತರ ಜನಕ್ಕೆ ಮಜ್ಜಿಗೆ ವಿತರಣೆ. ಬಳ್ಳಾರಿ (11)ನಗರದ ತಾಳೂರು ರಸ್ತೆಯ ಶ್ರೀ ಸಾಯಿ ಟ್ರಾವೆಲ್ಸ್ ಮಾಲೀಕರಾಗಿರುವಂತ ಲೋಕೇಶ್ ಮತ್ತು ಇನ್ನು ಉಳಿದ ವಾಹನ ಮಾಲೀಕರು ಮತ್ತು ಸ್ನೇಹಿತರು ಇನ್ನು ಹಲವಾರು ಹಿತಾಸಕ್ತರು ಸೇರಿಕೊಂಡು ಬಳ್ಳಾರಿ ದುರ್ಗಮ್ಮ ಗುಡಿ ಸಿಡಿ ಬಂಡೆ ರಥೋತ್ಸವ ಸಂದರ್ಭವಾಗಿ ದೇವಸ್ಥಾನಕ್ಕೆ ಬಂದಿರುವಂತ ಲಕ್ಷಾಂತರ ಜನಕ್ಕೆ ತಂಪಾದ ಮಜ್ಜಿಗೆಯನ್ನು ಮತ್ತು ಪ್ರಸಾದವನ್ನು ವಿತರಣೆ ಮಾಡುತ್ತಿದ್ದಾರೆ. ಸಿಡಿಕೊಂಡಿರಥೋತ್ಸವ ಕಾರ್ಯಕ್ರಮ ಮಂಗಳವಾರ ಸಾಯಂಕಾಲದವರೆಗೆ ನಡೆಯಲಿದ್ದು ಅಂದಿನವರಿಗೆ ಎಷ್ಟೇ ಭಕ್ತರು ಬರಲಿ ಮಜ್ಜಿಗೆಯನ್ನು ವಿತರಣೆ ಮಾಡಿ ತಾಯಿ ಆಶೀರ್ವಾದ ಪಡೆಯುವ ಸಂಕಲ್ಪವನ್ನು ಮಾಡಿದ್ದೇವೆ ಎಂದು ಶ್ರೀ ಸಾಯಿ ಟ್ರಾವೆಲ್ಸ್ ಮಾಲೀಕರು ಆಗಿರುವಂತ ಲೋಕೇಶ್ ಮತ್ತು ಅವರು ಬಳಗ ನ್ಯೂಸ್ ಜೊತೆಗೆ ಮಾತನಾಡಿದ್ದಾರೆ.