ಗುಣಮಟ್ಟದ ಕಾಮಗಾರಿ ಮಾಡೋದು ಕರ್ತವ್ಯ,ನದಿ ಮರಳು ಇಲ್ಲದೆ ಕಾಮಗಾರಿ ಮಾಡಲ್ಲ!!.
ಶ್ರೀಧರ್ (ಗುತ್ತೆಗೆದಾರ)
ಬಳ್ಳಾರಿ(25) ಸರ್ಕಾರ ಕೋಟಿ ಕೋಟಿ ಅನುದಾನ ಖರ್ಚು ಮಾಡಿ ಅಭಿವೃದ್ಧಿ ಕಾಮಗಾರಿ ಗಳು,ಮಾಡುತಾ ಇರುತ್ತೆ ಆದರೇ, ಕಾಮಗಾರಿಗಳ ಟೆಂಡರ್ ಗಳಲ್ಲಿ ಕೂಡ ಗೋಲ್ಮಾಲ್, ಗೊಂದಲ, % ವಿಚಾರ ದಲ್ಲಿ, ಟೀಕೆ ಟಿಪ್ಪಣಿ ಗಳು, ಕೇಳಿಬರೋದು, ನೋಡಿದ್ದು ಇದೇ, ವಿರೋಧ ಪಕ್ಷ ಗಳು ಕೂಡ, ಮೈಕ್ ಇಟ್ಟು ಕೋಗಿದ್ದು ಇದೇ.
ಗುತ್ತೆ ಗೆ ದಾರರು ಕೂಡ ಲಾಭಿ ಮಾಡಿ, ಕಾಮಗಾರಿ ಪಡೆಯೋದು,ಗುತ್ತಿಗೆದಾರರ ಒಂದು ಇಷ್ಟು ಡಾಕ್ಯುಮೆಂಟ್ ಸರಿ ಇಲ್ಲ ಅಂದರೂ, ಅಧಿಕಾರಿಗಳು ರಾಜಕಾರಣಿ ಗಳ ದಿಂದ, ಒತ್ತಡ ಕ್ಕೆ ಮಣಿದು, ಸರಿಪಡಿಸಿ, ಕಳಪೆ ಡಾಕ್ಯುಮೆಂಟ್ ಗಳ ದಿಂದ ಕಾಮಗಾರಿ ಕೊಡೋದು, ಸಬ್ ಕಾಂಟ್ರಾಕ್ಟ್ ಗಳ ಮೂಲಕ ಕಾಮಗಾರಿ ಮಾಡೋದು ಸಾದಾರಣ ವಾಗಿದೆ.
ಇದು ಒಂದುಕಥೆ ಆದರೇ, ಗುಣ ಮಟ್ಟದ ಕಾಮಗಾರಿ ಅನ್ನೋದು, ಮರಿಚಿಕೆ ಆಗಿದೆ ಇತ್ತೀಚೆಗೆ.
ಯಾಕೆ ಅಂದ್ರೆ, "ಭಕಾಸುರರ ಗಳ ಕಾಟಕ್ಕೆ"ವ್ಯವಸ್ಥೆ ಸಂಪೂರ್ಣ ನಾಶ ಆಗಿದೆ.
ಆದರೇ ಬಳ್ಳಾರಿ ಯಲ್ಲಿ ಮಾತ್ರ, ನಗರ ಶಾಸಕ ಭರತ್ ರೆಡ್ಡಿ ಆಪ್ತ ಉದ್ಯಮಿ, ಗುತ್ತೇದಾರ ಆಗಿದ್ದ "ರೆಡ್ ಇನ್ ಫ್ರಾ " ಕಂಪನಿ, ಯಾ ಮಾಲೀಕರು, ಆಗಿದ್ದ, ಶ್ರೀಧರ್, ಅವರು ನಗರದಲ್ಲಿ ಕೋಟಿ ಗಟ್ಟಲೆ ಕಾಮಗಾರಿಗಳನ್ನು ಮಾಡತಾ ಇದ್ದಾರೆ, ಎಲ್ಲಿ ಕೂಡ ಈವರೆಗೆ ಯಾವದೇ ಕಪ್ಪು ಚುಕ್ಕೆ ಇಲ್ಲದಂತೆ ಕಾಮಗಾರಿ ಮಾಡುತಾ ಇದ್ದಾರೆ.
ಔದು ಇದು ಒಗಳಿಕೆ ಅಲ್ಲ, ಪ್ರಸ್ತುತ ತಾಳುರು ರಸ್ತೆ ಯಲ್ಲಿ ರಸ್ತೆ ಕಾಮಗಾರಿ ಗಳು ನಡೆಯುತ್ತವೆ,
•ಒಮ್ಮೆ ರಿಯಾಲ್ಟಿ, ಚೆಕ್ ಮಾಡಲು ನ್ಯೂಸ್ 9 ಟುಡೇ ಇನ್, ಸೋಶಿಯಲ್ ಮೀಡಿಯಾ, ಸುವರ್ಣ ಟೈಮ್ಸ್ ಆಫ್ ಕರ್ನಾಟಕ ದಿನಪತ್ರಿಕೆ,ಸ್ಥಳ ಪರಿಶೀಲನೆ ಮಾಡಿತ್ತು,ರಾಶಿ ರಾಶಿ ಜಿಲ್ಲೆಯ ಸಂಪನ್ಮೂಲಾಗಿರುವ ವೇದಾವತಿ ನದಿ ಮರಳು ಲೋಡ್ ಗಟ್ಟಲೆ ಕಾಮಗಾರಿಯಲ್ಲಿ ಬಳಕೆ ಮಾಡುತ್ತಿದ್ದು ಆಶ್ಚರ್ಯ ಮೂಡಿಸಿತ್ತದೆ.
ಜಿಲ್ಲೆಯಲ್ಲಿ ಅಪಾರ ಮಟ್ಟದಲ್ಲಿ ನದಿ ಭಾಗಗಳಲ್ಲಿ ಮರಳು ಸರಳವಾಗಿ ಸಿಗುತ್ತಿದ್ದರು ಕೂಡ ಸಾವಿರ ಕೋಟಿಗಟ್ಟಲೆ ಕಾಮಗಾರಿಗಳು ನಡೆಯುತ್ತಿದ್ದು ಆ ಕಾಮಗಾರಿಗಳಿಗೆ ಮರಳು ಬಳಕೆ ಮಾಡದೇ, ಜಲ್ಲಿ, ಎಂ ಸ್ಯಾಂಡ್ ಮುಂತಾದ ಅವುಗಳನ್ನು ಬಳಸಿ ರಸ್ತೆ ಬ್ರಿಡ್ಜು ಸರ್ಕಾರ ಭವನಗಳು, ನ್ಯಾಷನಲ್ ಹೈವೇಗಳು ನಿರ್ಮಾಣ ಮಾಡುತ್ತಿದ್ದು ನಾವು ನೋಡುತ್ತಿರುವ ವಿಚಾರವಾಗಿದೆ.
ಆದರೆ "ರೆಡ್ ಇನ್ ಫ್ರಾ ಕಂಪನಿ, ಶ್ರೀಧರ್ ಅವರು ಮಾಡುವ ಕಾಮಗಾರಿಗಳಲ್ಲಿ ನದಿ ಮರಳು ಇಲ್ಲದೆ ಕಾಮಗಾರಿಯನ್ನು ಮಾಡೋದೇ ಇಲ್ಲ ಎಂದು ಸ್ಥಳೀಯವಾಗಿ, ಮತ್ತು ಶ್ರೀಧರ್ ಅವರು ಕೂಡ ಹೇಳುವ ಸತ್ಯದ ವಿಚಾರವಾಗಿದೆ.
ಗುಣಮಟ್ಟದಲ್ಲಿ ಕಾಮಗಾರಿ ಮಾಡೋದ್ ನಮ್ಮ ಕರ್ತವ್ಯ ಆಗಿದೆ, ಜನರು ಮೆಚ್ಚುವಂತಹ ಕಾಮಗಾರಿ ಮಾಡುತಾ ಇದ್ದಿವಿ, ನಮಗೆ ನದಿ ಮರಳು ಸರಳ ವಾಗಿ ಸಿಗುತ್ತೆ, ಮರಳು ಹಾಕಿ ಕಾಮಗಾರಿ ಮಾಡಿದ್ರೆ ಅದರ ಕಥೆ ಬೇರೆ, ನಮಗೆ ಏನು ನಷ್ಟ ಇಲ್ಲ ಮರಳು, ಮತ್ತು ಬೇರೆ ಮೆಟೀರಿಯಲ್ ಖರ್ಚು ಎಲ್ಲಾ ಒಂದೇ ಇದೆ ನಾವು ಎಲ್ಲರಂತೆ ಬೇರೆ ಮೆಟೀರಿಯಲ್ ಬಳಕೆ ಮಾಡಿ ಕಾಮಗಾರಿ ಮಾಡಬಹುದು ಅದು ನಮಗೆ ತೃಪ್ತಿ ತರುವುದಿಲ್ಲ, ನಾವು ಎಂ ಸ್ಯಾಂಡ್ ಬಳಿಕೆ ಮಾಡುತೀವಿ, ಲಿಮಿಟ್ ನಲ್ಲಿ ಇರುತ್ತೆ ಎಂದು ದೂರವಾಣಿಯಲ್ಲಿ ಮಾತನಾಡಿದ್ದಾರೆ ಬಳ್ಳಾರಿ ಜಿಲ್ಲೆಯಲ್ಲಿ ಅಪಾರ ಮಟ್ಟದಲ್ಲಿ ನದಿ ಮರಳಿದೆ , ಸರ್ಕಾರ ಸರ್ಕಾರದ ಕಾಮಗಾರಿಗಳಿಗೆ ನದಿ ಮರಳಿಯನ್ನು ಒಂದಿಷ್ಟು ರಿಯಾಯಿತಿ ದರದಲ್ಲಿ ಒದಗಿಸಿದರೆ ಕಾಮಗಾರಿ ಅಪ್ಪಟ ಚಿನ್ನದಂತೆ ಮಾಡಬಹುದಾಗಿದೆ ಎಂದು ಅವರು ಮನೋಭಾವವನ್ನು ವ್ಯಕ್ತಪಡಿಸಿದ್ದಾರೆ, ಸರಳವಾಗಿ ಸಿಗುವ ಮರಳು ಯಾಕೆ ದುಬಾರಿಯಾಗಿದೆ ಜನರಿಗೆ ಮತ್ತು ಗುತ್ತಿಗೆದಾರರಿಗೆ ಸಿಗುತ್ತಾ ಇಲ್ಲವೆಂದು ನಾವು ಹೇಳಲು ಆಗುವುದಿಲ್ಲ ನೀವು ಕೇಳುವುದು ಬೇಡ ಎಂದು ನಗುನಗುತ್ತಾ ಉತ್ತರ ಕೊಟ್ಟರು. ಮರಳು ಅಲ್ಲದೆ ಇವರು ಬಳಿಸುವ, ಬೆಂಚೆ, ಮಿಕ್ಸಿಂಗಿಗೆ ಬಳಸುವ ಎಂ ಸ್ಯಾಂಡ್ ಕೂಡ ತುಂಬಾ ಗುಣಮಟ್ಟದ್ದು ಕಾಣುತ್ತದೆ.
ಮರಳು ಬಳಿಕೆ ಮಾಡಿ, ಕಾಮಗಾರಿ ಮಾಡೋದು ರೆಡ್ ಐನ್ ಫ್ರಾ ಜನರ ಮೆಚ್ಚುಗೆ ಪಡಿದಿದ್ದಾರೆ.
ಕೆಲ ಗುತ್ತೇದಾರರು ಜಲ್ಲಿ ಪೌಡರ್ ನ್ನು ಎಮ್ ಸ್ಯಾಂಡುವನ್ನು ಕಾಮಗಾರಿಯಲ್ಲಿ ಬಳಕೆ ಮಾಡ್ತಾ ಇದ್ದಾರೆ ಅದು ಎಷ್ಟು ಸರಿಯೋ ಏನೋ ಗೊತ್ತಿಲ್ಲ ಎಂ ಸ್ಯಾಂಡ್ ಸರ್ಕಾರದಿಂದ ಅನುಮತಿದೆ ಇದೇ ಎಂದು ಅಧಿಕಾರಿಗಳು ಹೇಳುತಾರೆ, ಈ ನೆಪವನ್ನು ಇಟ್ಟುಕೊಂಡು ಇಡೀ ಪೂರ್ತಿ ಕಾಮಗಾರಿಗೆ ನದಿ ಮರಳು ಬಿಟ್ಟು ಉಳಿದವುಗಳನ್ನು ಬಳಸಿ ಕಾಮಗಾರಿ ಮಾಡುತ್ತಿರುವುದು ದೇವರೇ ಕಾಪಾಡಬೇಕು ಆಗಿದೆ.
ಬಳ್ಳಾರಿ ಜಿಲ್ಲೆಯಲ್ಲಿ ಉಚಿತ ನದಿ ಸಂಪನ್ಮೂಲವನ್ನು ಅಕ್ರಮ ಮರಳು ದಂದುಕೊರರು ಬೆಳೆ ಖಾದಿ ಬಟ್ಟೆ ಹಾಕಿ ಹಗಲು ದರೋಡೆ ಮಾಡಿ ಲೂಟಿ ಮಾಡುತ್ತಿರುವುದು ಹೆಬ್ಬುಟ್ಟಿನ ಎಲ್ಲಪ್ಪನು ಕೇಳಿದರು ತಿಮ್ಮಪ್ಪನ ಕಥೆ ಹೇಳ್ತಾರೆ, ಇದು ಒಂದು ಮರ್ಮದ ವಿಚಾರವೆಂದು ಇಲ್ಲಿ ಕೆಲ ರಾಜಕಾರಣಿಗಳ ಜಾತಿ ಸಮುದಾಯಗಳ ಕಪಿಮುಷ್ಠಿಯಲ್ಲಿ ನಡೆಯುತ್ತಿದೆ.
ಉಚಿತ ನದಿ ಮರಳು ಸರಬರಾಜು ಮಾಡಲು ಮಾತ್ರ ಸಾವಿರ ಗಟ್ಟಲೆ ಹಣ ಕಟ್ಟಬೇಕು ಆಗಿದೆ.
ಸರ್ಕಾರ ಅದನ್ನು ನಿಲ್ಲಿಸಿ ಸರ್ಕಾರವೇ ಸರಳ ವಾಗಿ ಸರಬರಾಜು ಮಾಡಿದರೆ ಆಧಾಯ ಬರುತ್ತೆ, ಕಾಮಗಾರಿ ಗಳು ಚನ್ನಾಗಿ ಇರುತ್ತೆ ಅನ್ನವದು, ಜನರ ಆಶೆ ಆಗಿದೆ. ಇನ್ನು ಉಳಿದ ಗುತ್ತೇದಾರರು ಈಗಲಾದರೂ ಕಾಮಗಾರಿಗಳಿಗೆ ನದಿ ಮರಳು ಬಳಕೆ ಮಾಡಬಹುದಾ ಅಥವಾ ಬೆಳೆ ಪೌಡರ್ ಹಾಕಿ ನಾಮ ಹಚ್ಚುತ್ತಾರೆ ಅನ್ನೋದು ನೋಡಬೇಕಾಗಿದೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಇದನ್ನು ಕಟ್ಟುನಿಟ್ಟುವಾಗಿ ಪಾಲಿನ ಮಾಡುವಂತೆ ಆದೇಶಿಸಬೇಕಾಗಿದೆ.
[video width="1280" height="720" mp4="https://news9today.in/wp-content/uploads/2026/03/VN20260325_101642.mp4"][/video]