ನೇತ್ರ ಶಸ್ತ್ರ ಚಿಕಿತ್ಸೆ..
ಮನುಷ್ಯನ ದೇಹದಲ್ಲಿ ಕಣ್ಣು ಅತ್ಯಂತ ಶ್ರೇಷ್ಠ ಅಂಗ-- ರಾಣಿ ಸಂಯುಕ್ತ
ಹೊಸಪೇಟೆ:
ಭಗವಂತ ನೀಡಿರುವ ಈ ದೇಹವು ನಶ್ವರ ಆದರೆ ಕಣ್ಣುಗಳು ಮತ್ತು ಅಂಗಾಂಗಗಳ ದಾನದಿಂದ ಮನುಷ್ಯನ ಅಸ್ಮಿತೆಯನ್ನು ಶಾಶ್ವತವಾಗಿಸುವ ವಿಧಾನ ವಾಗಿದೆ ಎಂದು ಬಿಜೆಪಿ ಮಹಿಳಾ ಮೋರ್ಚ ಕಾರ್ಯಕಾರಿಣಿ ಸದಸ್ಯೆ ರಾಣಿ ಸಂಯುಕ್ತ ಹೇಳಿದರು.
ನೇತ್ರಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್ ಆಸ್ಪತ್ರೆಯಲ್ಲಿ 52 ಜನ ನೇತ್ರ ಶಸ್ತ್ರ ಚಿಕಿತ್ಸೆಗೆ ಒಳಗಾದವರ ಚಿಕಿತ್ಸಾ ನಂತರ ಸಭೆಯಲ್ಲಿ ಮಾತನಾಡಿದರು.
ಉಸಿರಿನ ನಂತರವೂ ಕೂಡ ಹೆಸರು ಉಳಿಸುವ ಕಾರ್ಯವು ವಿಶ್ವದಾದ್ಯಂತ ನಡೆಯುತ್ತಿರುವುದು ವಿಷಯವಾಗಿದೆ ಎಂದರು.
ಅತ್ಯಂತ ಆಧುನಿಕ ಶಸ್ತ್ರ ಚಿಕಿತ್ಸಾ ಪದ್ಧತಿಯಲ್ಲಿ ನಿರಂತರವಾಗಿ ಈ ಶಾಸ್ತ್ರ ಚಿಕಿತ್ಸೆಯನ್ನು ಆರ್ಥಿಕವಾಗಿ ಹಿಂದುಳಿದ ಬಡವರಿಗಾಗಿ ದಾನಿಗಳ ಮೂಲಕ ಹಣ ಸಂಗ್ರಹಿಸಿ ಮಾಡುತ್ತಿರುವುದು ಅಂದರೆ ಬಾಳಿಗೆ ಬೆಳಕನ್ನು ನೀಡುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಹೇಳಿದರು. ಪಂಚೇಂದ್ರಿಯಗಳಲ್ಲಿ ಕಣ್ಣು ಶ್ರೇಷ್ಠವಾದದ್ದು ಮನುಷ್ಯನ ಎಲ್ಲಾ ಅಂಗಗಳಲ್ಲಿ ದೃಷ್ಟಿ ಸರಿಯಾಗಿದ್ದರೆ ಎಲ್ಲವನ್ನು ಸಾಧಿಸಬಹುದೆಂದು ಅಭಿಪ್ರಾಯ ಪಟ್ಟರು ಸಮಾಜದ ಕೆಳ ವರ್ಗದ ಆರ್ಥಿಕ ದುರ್ಬಲರ ಸೇವೆಗೆ ನಾನು ಸದಾ ನನ್ನ ಕೈಲಾದ ಮಟ್ಟಿಗೆ ಸಹಾಯ ಮಾಡುತ್ತೇನೆ ಎಂದು ತಿಳಿಸಿದರು.
ಡಾ.ಶ್ರೀನಿವಾಸ್ ದೇಶಪಾಂಡೆ ಮಾತನಾಡಿ, ರಾಣಿ ಸಂಯುಕ್ತ ರವರ ಆರ್ಥಿಕ ಸಹಕಾರದೊಂದಿಗೆ 52 ಜನರ ಯಶಸ್ವಿ ನೇತ್ರ ಚಿಕಿತ್ಸೆ ಮುಗಿದಿದ್ದು ಇಂದು ಅವರ ಮೂರನೇ ಬ್ಯಾಚ್ ಗೆ ಆರ್ಥಿಕ ಸಹಾಯ ಮಾಡಿರುತ್ತಾರೆ ಸಮಾಜದ ಗಣ್ಯ ವ್ಯಕ್ತಿಗಳು ಉದ್ಯಮಿಗಳು ಅಂದರಿಗೆ ಧನಸಹಾಯ ಮಾಡುವುದರ ಮೂಲಕ ಶಸ್ತ್ರಚಿಕಿತ್ಸೆಗೆ ಸಹಾಯ ಮಾಡಲೆಂದು ಆಶಿಸಿದರು.
ಈ ಸಂದರ್ಭದಲ್ಲಿ ನಗರಸಭೆಯ ಮಾಜಿ ಸದಸ್ಯ ಚಂದ್ರಕಾಂತ್ ಕಾಮತ್, ಕಟ್ಟಿಗೆ ರಾಮಕೃಷ್ಣ ಹಾಗೂ ಈ ಶಾಸ್ತ್ರ ಚಿಕಿತ್ಸೆಯ ಫಲಾನುಭವಿಗಳನ್ನು ಗುರುತಿಸುವಲ್ಲಿ ಸಹಕಾರ ನೀಡಿದ ಆರ್ಯವೈಶ್ಯ ಹಾಗೂ ವಾಸವಿ ಜನ ಸೇವಾ ಸಂಘದವರು ಭಾಗವಹಿಸಿದ್ದರು 52 ಜನ ಫಲಾನುಭವಿಗಳಿಗೆ ಔಷಧೋಪಚಾರಗಳನ್ನು ವಿತರಿಸಲಾಯಿತು.(ಕೆ.ಬಜಾರಪ್ಪ ವರದಿಗಾರರು ಕಲ್ಯಾಣ ಕರ್ಣಾಟಕ)