ಸಾಲ ಭಾದೆ ರೈತ ಆತ್ಮಹತ್ಯೆ!
ನ್ಯೂಸ್ 9 ಟುಡೆ:- ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ರೈತರ ಸಾವಿನ ಸಂಖ್ಯೆ ಹೆಚ್ಚುತ್ತಿದೆ. ಹೌದು! ಈ ವರ್ಷ ಅತೀಯಾದ ಮಳೆಯಿಂದ ಬೆಳೆ ಹಾನಿಯಾಗಿ ರೈತ ಕಂಗಾಲಾಗಿದ್ದು ಆನೇಕ ಜನ ರೈತರು ಸಾಲಭಾದೆ ತಾಳಲಾರದೆ ಸಾವಿನ ದಾರಿ ಹಿಡಿದಿದ್ದಾರೆ. ಇದಕ್ಕೆ ಕೈಗನ್ನಡಿಯಂತೆ ಬಳ್ಳಾರಿ ತಾಲೂಕಿನ ಬೊಬ್ಬಕುಂಟೆ ಗ್ರಾಮದ ರೈತ ಕೆ.ಹನುಮಂತರಾಯ (40) ವರ್ಷ ಈತ ತನ್ನ ಆರು ಎಕರೆ ಹೊಲಕ್ಕಾಗಿ ಲಕ್ಷಾಂತರ ರೂ. ಸಾಲ ಮಾಡಿದ್ದ ಆದರೆ ಈ ವರ್ಷ ಅತೀಯಾದ ಮಳೆಯಾದ ಕಾರಣ ರೈತರ ಬೆಳೆಗಳು ಹಾಳಾಗಿದ್ದು ಈತನ ಆರು ಎಕರೆ ಬೆಳೆ ಕೂಡ ಹಾಳಾಗಿದ್ದು ಇತ್ತ ಬೆಳೆಯೂ ಕೈ ಸೇರದೆ ಅತ್ತ ಸಾಲಗಾರರ ಕಾಟ ತಾಳಲಾರದೆ ಮಂಗಳವಾರ ಬೆಳಿಗ್ಗೆ 10 ಗಂಟೆ ಸಮಯದಲ್ಲಿ ಹೊಲಕ್ಕೆ ಹೊಡೆಯುವ ಔಷಧಿ ಸೇವನೆ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದಾನೆ.
ತನ್ನ ಆರು ಎಕರೆ ಜಮೀನಿನಲ್ಲಿ ಮೆಣಸಿನಕಾಯಿ ಹಾಗೂ ಮೆಕ್ಕೆ ಜೋಳ ಬೆಳೆದಿದ್ದು ಬೆಳೆ ನಷ್ಟವಾಗಿದ್ದು ಲಕ್ಷಾಂತರ ರೂ. ಸಾಲ ಮಾಡಿದ್ದು ರೈತ ಹನುಮಂತರಾಯ ಆತ್ಮಹತ್ಯೆಗೆ ಶರಣಾಗಿದ್ದಾನೆ. ಆತ್ಮಹತ್ಯೆಗೊಳಗಾದ ಹನುಮಂತರಾಯ ನನ್ನ ಚಿಕಿತ್ಸೆಗಾಗಿ ವಿಮ್ಸ್ ಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಮಧ್ಯ ರಾತ್ರಿ 2 ಗಂಟೆಗೆ ರೈತ ಹನುಮಂತರಾಯ ಮೃತ ಪಟ್ಟಿದ್ದಾನೆ.
ಇನ್ನು ಮೃತ ರೈತನಿಗೆ ಇಬ್ಬರು ಹೆಣ್ಣು ಮಕ್ಕಳು ಹಾಗೂ ಒಂದು ಗಂಡು ಮಗ ಇದ್ದು ಬಳ್ಳಾರಿ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.