ಕೈಗಾರಿಕೆ ಇಂದಲೇ ಲಕ್ಷಾಂತರ ಜನರಿಗೆ ಜೀವನೋಪಾದಿಯಾಗಿದೆ. ಓಣ ಕೃಷಿ ನಂಬಿರುವ ಪ್ರದೇಶದ ಜನರಿಗೆ ಜಾನಕಿ ಕ್ರಾಪ್ ಲಿಮಿಟೆಡ್ ಅನ್ನ ನೀಡುತ್ತದೆ. ಕಷ್ಟ ಸುಖ ಸರ್ವಸಾಧಾರಣ ರೈತರ ಮನದಾಳ ಮಾತು.
ಬಳ್ಳಾರಿ(8) ತಾಲೂಕಿನ ಸಿಡಿಗಿನ ಮೊಳ ಕಾರೆಕಲ್ಲು ಮೀನಳ್ಳಿ , ವೀರಾಪುರ ಹಾವೇರಿ ಇನ್ನು ಸುತ್ತಮುತ್ತಲಿನ ಜನರಿಗೆ ಉದ್ಯೋಗ ಕಲ್ಪಿಸಿಕೊಟ್ಟು ಲಕ್ಷಾಂತರ ಜನರಿಗೆ ಆಸರೆಯಾಗಿರುವ ಹಲವಾರು ರೀತಿಯಲ್ಲಿ ಸಹಾಯ ಸಹಕಾರ ನೀಡುತ್ತಿರುವ
ಜಾನಿಕಿ ಕ್ರಾಪ್ ಲಿಮಿಟ್ ಕಾರ್ಖಾನೆಗಳ ವಿರುದ್ದ ಕೆಲ ಕಿಡಿಗೇಡಿಗಳು ವಿನಾಕಾರಣ ದೂರು ಸಲ್ಲಿಸುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳಿಗೆ ತೊಂದರೆ ಕೊಡುತ್ತಿರುವುದು ಸಹಿಸಲು ಆಗುವುದಿಲ್ಲ ವೆಂದು ಶಿಡಿಗಿನಮೊಳ ಗ್ರಾಮಸ್ಥರು ಸೋಮವಾರ ದೊಡ್ಡ ಸಂಖ್ಯೆಯಲ್ಲಿ ಬಂದ್ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿದ್ದಾರೆ. ಇನ್ನು ಮುಂದೆ ಕಾರ್ಖಾನೆಗಳ ವಿರುದ್ಧ ದೂರು ಸಲ್ಲಿಸಿದರೆ ಮನೆ ಮುಂದೆ ಕಾರ್ಖಾನೆಗಳಲ್ಲಿ ಜೀವನೋಪಾದಿ ಮಾಡುತ್ತಿರುವ ನಾವೆಲ್ಲರೂ ದೂರದ ಮನೆ ಮುಂದೇನೆ ಹೋಗಿ ನಮ್ಮೆಲ್ಲರಿಗೆ ಊಟ ಹಾಕಿ ಎಂದು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಅರಿತರು ಆಕಾಶ ವ್ಯಕ್ತಪಡಿಸಿದ್ದಾರೆ ಕಾರ್ಖಾನೆಗಳು ಇದ್ದಮೇಲೆ ಕೆಲ ಕಷ್ಟ ಸುಖಗಳು ಸರ್ವಸಾಧಾರಣ ಇರುತ್ತದೆ ಆದರೆ ಯಾವುದೇ ಕಾರ್ಖಾನೆಯಾಗಲಿ ರೈತರಿಗೆ ಅನ್ಯಾಯ ಮಾಡಿದರೆ ಯಾರು ಸಹಿಸುವುದಿಲ್ಲ ಆದರೆ ಹೋರಾಟ ನ್ಯಾಯಯುತವಾಗಿರಬೇಕೆಂದು ಬ್ಲಾಕ್ ಮೇಲ್ ವ್ಯವಸ್ಥೆಯನ್ನು ಮಾಡಬಾರದೆಂದು ಈಗಾಗಲೇ ಈ ಭಾಗದ ಕಾರ್ಖಾನೆಗಳಿಂದ ರೈತರಿಗೆ ಮಾತನಂತೆ ಪರಿಹಾರ ಸಿಗುತ್ತಾಯಿದೆ ಎಂದು ಸುಮ್ಮನೆ ಕಾರ್ಖಾನೆಗಳು ವಿರುದ್ಧ ಅದಕ್ಕೆ ಸಂಬಂಧಿಸಿದ ವಾಯುಮಾಲಿನ್ಯ ಅಧಿಕಾರಿಗಳ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುವುದು ದೂರು ನೀಡುವುದು ನಾವು ಸಹಿಸಲು ಆಗುವುದಿಲ್ಲವೆಂದು ಗ್ರಾಮಸ್ಥರು ಆಕೋಶ ವ್ಯಕ್ತಪಡಿಸಿದ್ದಾರೆ ಕಾರ್ಖಾನೆಗಳು ಕೂಡ ಜನರಿಗೆ ಯಾವುದೇ ತೊಂದರೆ ಆಗದಂತೆ ಸೂಕ್ತ ಕ್ರಮ ಮಾಡುತ್ತಾ ಇದ್ದಾರೆ ಎಂದು ಇಂಥ ಸಂದರ್ಭದಲ್ಲಿ ಸಂಬಂಧ ಇಲ್ಲದವರು ಕಂಪನಿಗಳ ವಿರುದ್ಧ ಕಿತ್ತೂರಿ ಮಾಡುತ್ತಿದ್ದಾರೆ ಎಂದು ಇದನ್ನು ಮತ್ತೆ ಮುಂದೆವರಿಸಿದರೆ ಆಗುವ ಅಪಾಯಗಳಿಗೆ ಅವರೇ ಜವಾಬ್ದಾರಿ ಎಂದು ಎಚ್ಚರಿಕೆ ನೀಡಿದ್ದಾರೆ ನಮ್ಮ ಭಾಗದ ಸುತ್ತು ಮುತ್ತಿನ ಕಾರ್ಖಾನೆಗಳಿಂದ ಪ್ರತಿ ಕುಟುಂಬಕ್ಕೆ ಜೀವನಪಾದಿ ಆಗಿದೆ ಎಂದು ತಿಳಿಸಿದ್ದಾ. ಕಾರ್ಖಾನೆಗಳ ವಿಚಾರದಲ್ಲಿ ಏನಾದರೂ ಸಮಸ್ಯೆ ಇದ್ದರೆ ನೇರವಾಗಿ ಕುಂತು ಬಹಿಹರಿಸಿಕೊಳ್ಳಬೇಕು ಹೊರತಾಗಿ ಈ ರೀತಿಯಲ್ಲಿ ಸಂಘ ಸಂಸ್ಥೆಗಳನ್ನು ಇಟ್ಟುಕೊಂಡು ಕಾರ್ಖಾನೆಗಳ ಘನ ಗೌರವನ್ನು ಹಾಳು ಮಾಡುವುದನ್ನು ಬಿಡುವುದಿಲ್ಲವೆಂದು ತಿಳಿಸಿದರು. ಒಣ ಖುಷಿನಲ್ಲಿರುವ ಪ್ರದೇಶವಾದ ನಾವು ಕಾರ್ಖಾನೆಗಳು ಬಂದಮೇಲೆ ಜೀವನ ಒಂದಿಷ್ಟು ನೆಮ್ಮದಿಯಾಗಿದೆ ಎಂದು ಸಮಯದಲ್ಲಿ ಅನ್ನ ನೀಡುವ ಅವರಿಗೆ ಕಲ್ಲು ಹಾಕಿದರೆ ಸರಿಯಲ್ಲ ಎಂದರು ಈಗಾಗಲೇ ಕೆಲ ದೇಶಗಳಲ್ಲಿ ಕೆಲ ರಾಜ್ಯಗಳಲ್ಲಿ ಕಾರ್ಖಾನೆಗಳು ಬಂದಾಗಿ ಅದನ್ನೇ ನಂಬಿಕೊಂಡು ಜೀವನ ಮಾಡುವ ಕುಟುಂಬಗಳು ಯಾವ ಸ್ಥಿತಿಯಲ್ಲಿ ಇದ್ದಾವೆ ಎನ್ನುವುದು ಪರಿಜ್ಞಾನ ಇಟ್ಟುಕೊಂಡು ಕಾರ್ಖಾನೆಗಳ ವಿರುದ್ಧ ಅಧಿಕಾರಗಳ ವಿರುದ್ಧ ದೂರು ನೀಡಬೇಕೆಂದು ಎಚ್ಚರಿಕೆ ನೀಡಿದರು. ಫ್ಯಾಕ್ಟರಿಗಳು ಹಾಕದ ಮುನ್ನ ನಮ್ಮ ಸುತ್ತಮುತ್ತಲಿನ ಗ್ರಾಮಸ್ಥರು ಒಂದು ಓಪ್ಪುತ್ತಿನ ಜೀವನ ಗೋಸ್ಕರ ಬೇರೊಂದು ನಗರಗಳಿಗೆ ಹೋಗಿ ಕೂಲಿ ಮಾಡಿ ಬರುವ ದಿನಮಾನಗಳನ್ನು ಮರೆಯಬಾರದೆಂದು ಹಳೆಯ ಜೀವನ ಬಗ್ಗೆ ಕೂಡ ನೆನಪಿಸಿಕೊಂಡುರು ಫ್ಯಾಕ್ಟರಿಗಳು ಬಂದಮೇಲೆ 100% ಜೀವನಗಳು ಅಸನಾಗಿದ್ದಾವೆ ಎಂದು ಸಂತೋಷವನ್ನು ವ್ಯಕ್ತ ಪಡಿಸಿದರು.
ಕೆಲ ವಾತಾವರಣ ಗಳಿಗೆ ಹೊಂದಿಕೊಂಡು ಹೋಗಬೇಕೆ ಹೊರತು ಎಲ್ಲವನ್ನು ಸರಿ ಪಡಿಸಿ ಕೊಂಡು ಅರ್ಥ ಮಾಡಿಕೊಂಡು ಹೋಗಬೇಕು ಎಂದರು.
•ಮನಿವಿ ಪತ್ರದಲ್ಲಿ
ಶಿಡಿಗಿನಮೊಳ ಗ್ರಾಮ, ಬಳ್ಳಾರಿ ತಾಲೂಕು ಗ್ರಾಮಪಂಚಾಯತಿ ಬಳ್ಳಾರಿ ಜಿಲ್ಲೆ, ಶಿಡಿಗಿನಮೊಳ ಗ್ರಾಮದ ಸಾರ್ವಜನಿಕರು, ಹಾಗೂ ಗ್ರಾಮಸ್ಥರು ಸದಸ್ಯರಾದ ನಾವುಗಳು ನಮ್ಮ ಸುತ್ತಮುತ್ತಲಿನ ಕೈಗಾರಿಕೆಯವರು ನಮ್ಮ ಗ್ರಾಮ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಗೆ ಎಲ್ಲಾ ಮೂಲಭೂತ ಸೌಕರ್ಯಗಳು ಹಾಗೂ ಗ್ರಾಮಸ್ಥರಿಗೆ ಸೌಲಭ್ಯಗಳನ್ನು ಒದಗಿಸುತ್ತಿದ್ದು ಅದರೇ ಯಾವುದೇ 2-3 ಕಿಡಿಗೇಡಿಗಳು ವಿನಾಕಾರಣ ಜಾನಿಕಿ ಕಾರ್ಪೋ ಪ್ರವೇಟ್ ಅಮಿಟೆಡ್ ಶಿಡಿಗಿನಮೊಳ ಇವರ ವಿರುದ್ದು ದೂರುಗಳನ್ನು ಪದೇ ಪದೇ ಸಲ್ಲಿಸುತ್ತಿದ್ದು, ಸದರಿ ಜಾನಕಿಯವರು ನಮ್ಮ ಗ್ರಾಮ ಹಾಗೂ ಸತ್ತುಮುತ್ತಲಿನ ಗ್ರಾಮಗಳಿಗೆ ಈಗಾಗಲೇ ಸಾಕಷ್ಟು ಸೌಲಭ್ಯಗಳನ್ನು ಹಾಗೂ ಸಹಾಯ ಹಸ್ತ ನೀಡುತ್ತಾ ಸಹಕಾರವನ್ನು ಕೊಡುತ್ತಾ ಬಂದಿರುತ್ತಾರೆ.
ಈ ಕಳಕಂಡ ಸೌಲಭ್ಯಗಳನ್ನು ಶಿಡಿಗಿನಮೊಳ ಗ್ರಾಮಕ್ಕೆ ನೀಡುತ್ತಿದ್ದಾರೆ.
1) ಗ್ರಾಮದಲ್ಲಿ ಯಾವುದೇ ವ್ಯಕ್ತಿಗಳು ಮರಣ ಹೊಂದಿದರೆ ಅಂತ್ಯ ಸಂಸ್ಕಾರಕ್ಕೆರೂ: 5000/- ಗಳನ್ನು ನೀಡುತ್ತಿದ್ದಾರೆ.
2) ಸರ್ಕಾರಿ ಶಾಲೆ ಮಕ್ಕಳಿಗೆ ಸಮವಸ್ತ್ರ, ಶೂ, ನೋಟ್ ಪುಸ್ತಕಗಳನ್ನು ಪ್ರತಿವರ್ಷ ಉಚಿತವಾಗಿ ವಿತರಣೆಮಾಡುತ್ತಿದ್ದಾರೆ.
3) ಗ್ರಾಮದ ಶೌಚಾಲಯ ನಿರ್ಮಾಣದಾರರಿಗೆ ಪ್ರತಿ ಮನೆಗೆ ಶೌಚಾಲಯಕ್ಕೆ ಕೈಗಾರಿಕೆಯಿಂದ ರೂ: 3000/-ಸಹಾಯದನ್ನ ನೀಡುತ್ತಿದ್ದಾರೆ.
4) ಪಶುಗಳ ಆರೋಗ್ಯದಲ್ಲಿ ತೊಂದರೆಯಾದ ಸಮಯದಲ್ಲಿ ಗ್ರಾಮದ ಪಶುಗಳಿಗೆ ಉಚಿತ ಲಸಿಕೆ ಹಾಗೂ ವೈದ್ಯಕೀಯ ಸೌಲಭ್ಯಗಳನ್ನು ಸಹ ಕೊಡಿಸಿರುತ್ತಾರೆ.
5) ಹಾಗೂ ಶಾಲೆಯ ಅಭಿವೃದ್ಧಿ ಹಾಗೂ ಸ್ವಚ್ಛತೆ ಮತ್ತು ಬಣ್ಣ ಸುಣ್ಣ ಮಾಡಿಸುವುದಕ್ಕಾಗಿ ಇಂತಿಷ್ಟು ದೇಣಿಗೆ ನೀಡುತ್ತಿದ್ದಾರೆ.
6) ಹಾಗೂ ಹೆಚ್ಚಿನ ಹಾಗೂ ತುರ್ತು ಸೇವೆಗಳಿಗೆ ಒಂದು ಅಂಬ್ಯುಲೆನ್ಸ್ 24*7 ಸೇವೆಯನ್ನು ಒದಗಿಸುತ್ತಿದ್ದಾರೆ. 7) ಗ್ರಾಮದ ಎಲ್ಲಾ ದೇವಸ್ಥಾನಗಳಿಗೆ ಪ್ರತಿ ವರ್ಷ ಇಂತಿಷ್ಟು ದಾನ ರೂಪದಲ್ಲಿ ನೀಡಿ ದೇವಸ್ಥಾನದ ಅಭಿವೃದ್ಧಿಗೆ ಹಾಗೂ
ವಿಶೇಷವಾಗಿ ಪ್ರತಿ ವರ್ಷ ಮೊಹರಂ ಹಬ್ಬಕ್ಕೆ ಸಹ ಕೈಗಾರಿಕೆ ಪ್ರಾರಂಭಗೊಂಡಾಗಿನಿಂದಲೂ ಅನುದಾನವನ್ನು ನೀಡುತ್ತಾ ಬಂದಿರುತ್ತಾರೆ.
8) ಹಾಗೂ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಇತರೆ ಸ್ವಚ್ಚತೆ ಸೌಲಭ್ಯಗಳನ್ನು ಸಹ ಒದಗಿಸಿಕೊಟ್ಟಿರುತ್ತಾರೆ.
9) ಅದು ಅಲ್ಲದೇ ಯಾರಿಗಾದರೂ ಹೆಚ್ಚಿನ ಚಿಕಿತ್ಸೆ ಅಗತ್ಯ ಬಿದ್ದಲ್ಲಿ ಕೈಗಾರಿಕೆಯಿಂದ ಸಾಧ್ಯವಾದಷ್ಟು ಅನುದಾನವನ್ನು ನೀಡುತ್ತಿದ್ದಾರೆ.
10) ಹಾಗೂ ಕಾರ್ಮಿಕರು ಹಾಗೂ ಕಾರ್ಮಿಕರ ಮಕ್ಕಳಿಗೆ ವೈದ್ಯಕೀಯ ಹಾಗೂ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಸಹ ಆರ್ಥಿಕ ನೆರವು ನೀಡುತ್ತಿದ್ದಾರೆ.
11) ಅದು ಅಲ್ಲದೇ ಮುಖ್ಯವಾಗಿ ಗ್ರಾಮದ ಮೂಲಭೂತ ಸೌಕರ್ಯಗಳಾದ ಶುದ್ಧ ಕುಡಿಯುವ ನೀರು, ರಸ್ತೆಗಳ ಅಭಿವೃದ್ಧಿ, ಗ್ರಾಮಗಳಲ್ಲಿ ಸೋಲಾರ್ ವಿದ್ಯುತ್, ಹಾಗೂ ಗ್ರಾಮದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ಅವಶ್ಯಕವಾದಲ್ಲಿ ಅವರ ಕೈಗಾರಿಕೆಯಿಂದ ಕಾರ್ಯಗಳನ್ನು ಮಾಡುತ್ತಿದ್ದಾರೆ.
12) ವಿಶೇಷವಾಗಿ ಚರಂಡಿ ಹಾಗೂ ಕಸ ಸ್ವಚ್ಚತಾ ಸಿಬ್ಬಂದಿಗಳಾಗಿ ಕೈಗಾರಿಕೆ ವತಿಯಿಂದ ಶಿಡಿಗಿನಮೊಳ /ಮೀನಹಳ್ಳಿ 'ಗ್ರಾಮಕ್ಕೆ 3 ಕಾರ್ಮಿಕರನ್ನು ನೇಮಿಸಿ ಕೈಗಾರಿಕೆಯವರ ವೇತನ ನೀಡುತ್ತಿದ್ದಾರೆ.
13) ಹಾಗೂ ಶಿಡಿಗಿನಮೊಳ ಗ್ರಾಮದ ಪ್ರೌಢಶಾಲೆಗೆ 1 ಕಾವಲುಗಾರ ಹಾಗೂ ಆಸ್ಪತ್ರೆಗೆ 1 ಕಾವಲಗಾರನ್ನು ತಮ್ಮ ಕೈಗಾರಿಕೆಯಿಂದ ನೇಮಿಸಿ ಅವರಿಗೆ ವೇತನ ನೀಡುತ್ತಿದ್ದಾರೆ.
14) ಗ್ರಾಮದಲ್ಲಿ ಅತ್ಯಂತ ಕಡುಬಡವರಿಗೆ ಆಹಾರ್ ಕಿಟ್ ಗಳನ್ನು ಸಹ ವಿತರಣೆ ಮಾಡುತ್ತಿದ್ದಾರೆ.
15) ಅಂಗವಿಕಲರು ಹಾಗೂ ದುಡಿಯುವ ಚೈತನವಿಲ್ಲದ ಹಿರಿಯ ನಾಗರೀಕರು ಸಹ ಇಂತಿಷ್ಟು ಆಹಾರ ಧಾನ್ಯ ಹಾಗೂ ಆರ್ಥಿಕ ನೆರವು ಸಹ ನೀಡುತ್ತಿದ್ದಾರೆ.
16) ಗ್ರಾಮಪಂಚಾಯತಿ ಹೊಸ ಕಟ್ಟಡ ನಿರ್ಮಾಣ ಹಾಗೂ ಮೂಲಭೂತ ಸೌಕರ್ಯಗಳಿಗೆ ಸಹ ಸಾಕಷ್ಟು ಸಹಕಾರ ನೀಡಿರುತ್ತದೆ.
17) ಶ್ರೀ ಡಾ||ಬಿ.ಆರ್.ಅಂಬೇಡ್ಕರ್ ಜಯಂತಿ ಅಚರಣೆಗೆ ಸಹಾಯಧನ ನೀಡುತ್ತಿದ್ದಾರೆ.
18) ಶ್ರೀ. ಕನಕದಾಸ ಜಯಂತಿಗೆ ಕೈಗಾರಿಕೆಯಿಂದ ಸಹಾಯಧನ
19) ಶ್ರೀ. ವಾಲ್ಮೀಕಿ ಜಯಂತಿಗೆ ಕೈಗಾರಿಕೆಯಿಂದ ಸಹಾಯಧನ
20)ಗಣೇಶ್ ಕೂಡಿಸುವುದಕ್ಕೆ ಸಹ ಅನುದಾನವನ್ನು ನೀಡುತ್ತಿದ್ದಾರೆ.
21) ವಿಶೇಷವಾಗಿ ಗ್ರಾಮದ ಬನಶಂಕರಿ ಜಾತ್ರೆ, ಓಂಕಾರೇಶ್ವರ ಜಾತ್ರ, ಕೊಟ್ರಬಸವೇಶ್ವರ ಜಾತ್ರೆಗೆ ವಿಶೇಷ ಅನುದಾನ ಹಾಗೂ
ಹೂವು ಹಾಗೂ ಅಲಂಕಾರಕ್ಕೆ ಸಂಬಂಧಿಸಿದ ಸಾಮಾಗ್ರಿಗಳನ್ನು ಸಹ ನೀಡಿರುತ್ತಾರೆ.
ನಮ್ಮ ಓಣ ಕೃಷಿ ನಂಬಿರುವ ಪ್ರದೇಶವಾದ ನಮ್ಮ ಗ್ರಾಮಕ್ಕೆ ಸದರಿ ಕೈಗಾರಿಕೆ ಹಾಕಿದ ಸಮಯದಿಂದಲೂ ಇಲ್ಲಿಯವರೆಗೆ ಒಂದಲ್ಲಾ ಒಂದು ರೀತಿಯಲ್ಲಿ ಸಾಕಷ್ಟು ನೆರವು ನೀಡುತ್ತಿರುವ ಹಾಗೂ ನೂರಾರು ಕುಟುಂಬಗಳಿಗೆ ಉದ್ಯೋಗ, ಮೂಲಭೂತ ಸೌಕರ್ಯಗಳನ್ನು ಒದಗಿಸಿ ಸಾಕಷ್ಟು ಅನುಕೂಲ ಕಲ್ಪಿಸಿದ್ದು, ಇಂತಹ ಮಾನವೀಯತೆವುಳ್ಳ ಕೈಗಾರಿಕೆಯವರು ಇನ್ನೂ ಇಂತಹ ಹೆಚ್ಚಿನ ಕೈಗಾರಿಕೆಗಳನ್ನು ಪ್ರಾರಂಭಿಸಬೇಕೆಂದು ನಮ್ಮಗಳ ಆಶಯವಾಗಿರುತ್ತದೆ.
ಇಂತಹ ಮಾನವೀಯತೆ ಇರುವ ಕೈಗಾರಿಕೆ ವಿರುದ್ದು ಯಾವುದೇ ತಮಗೆ ಹಣ ನೀಡಿಲ್ಲಾ ಎಂಬ ವೈಯುಕ್ತಿಕ ವಿಚಾರವನ್ನು ಮನದಲ್ಲಿಟ್ಟುಕೊಂಡು ವಿನಾಕಾರಣ ತಮ್ಮ ಕಛೇರಿಗೆ ಸದರಿ ಕೈಗಾರಿಕೆ ಮೇಲೆ ಇಲ್ಲ ಸಲ್ಲದೆ ಆರೋಪಗಳನ್ನು ಮಾಡಿ ಈ ರೀತಿ ಕೈಗಾರಿಕೆ ಮೇಲೆ ದೂರು ಸಲ್ಲಿಸುತ್ತಿರುವ ವ್ಯಕ್ತಿಗಳು ತಮ್ಮ ಬಂಡವಾಳ ಬೇಯಿಸಿಕೊಳ್ಳುವುದಕ್ಕೆ ಈ ರೀತಿಯಾಗಿ ದೂರು ಸಲ್ಲಿಸುತ್ತಿದ್ದಾರೆ.
ಇಂತಹ ಸುಳ್ಳು ದೂರುಗಳಿಗೆ ಬೆಲೆ ಕೊಡಬಾರದೆಂದು ನಾವುಗಳು ಈ ಮನವಿ ಪತ್ರ ಸಲ್ಲಿಸುತ್ತಿದ್ದೇವೆ. ಸದರಿ ವಿಷಯಗಳ ಕುರಿತು ಮಾನ್ಯರಾದ ತಾವುಗಳು ಖುದ್ದಾಗಿ ಕೈಗಾರಿಕೆ ಹಾಗೂ ಶಿಡಿಗಿನಮೊಳ ಹಾಗೂ ಸುತ್ತುಮುತ್ತಲಿನ ಗ್ರಾಮಗಳಿಗೆ ಈ ಸೌಲಭ್ಯಗಳ ಕುರಿತು ಮಾಹಿತಿ ಪಡೆದಲ್ಲಿ ಯಾವುದು ಸತ್ಯವೆಂದು ತಮಗೆ ತಿಳಿಯತ್ತದೆಂದು ಮಾನ್ಯಗಾದ ತಾವುಗಳು ಇಂತಹ ಸುಳ್ಳು ದೂರುಗಳನ್ನು ಪರಿಗಣಿಸಬಾರದೆಂದು ಗ್ರಾಮಸ್ಥರು ಹಾಗೂ ಗ್ರಾಮಪಂಚಾಯತಿ ಸದಸ್ಯರು ತಮ್ಮಲ್ಲಿ ಕೋರುತ್ತೇವೆ,ಎಂದು ಮನವಿ ಪತ್ರ ಸಲ್ಲಿಸಿದ್ದಾರೆ.