
ಬಳ್ಳಾರಿ :(04.) ಮಂಗಳವಾರ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯಿತಿ ಬಳ್ಳಾರಿ. ಇವರು ಕಪ್ಪಗಲ್ಲು ಗ್ರಾಮಕ್ಕೆ ಬೇಟಿ ನೀಡಿ ಹಕ್ಕಿ ಜ್ವರದಿಂದ ಕೋಳಿ ಪಾರಂ ನಲ್ಲಿ ಕೋಳಿಗಳು ಸಾವನ್ನು ಅಪ್ಪುತ್ತಿರುವುದರಿಂದ ಕೋಳಿ ಪಾರಂ ಗೆ ಬೇಟಿ ನೀಡಿ ಕೋಳಿ ಪಾರಂನ ಮಾಲಕರಿಗೆ ಕೋಳಿ ಪಾರಂ ಸುತ್ತ ಸ್ವಚ್ಛತೆಯನ್ನು ಕೈಗೊಳ್ಳವಂತೆ ಮುನ್ನೆಚ್ಚರಿಗೆ ನೀಡಿದರು.
ಹಾಗೂ ಗ್ರಾಮದ ಜನರಿಗೆ ಹಕ್ಕಿ ಜ್ವರವು ಸಂಕ್ರಾಮಿಕ ರೋಗವಲ್ಲ ಇದರಿಂದ ಜನರು ಆತಂಕಪಡುವ ಅಗತ್ಯವಿಲ್ಲ ಎಂದು ತಿಳಿಸಿದರು ಹಾಗೂ ಕೋಳಿ ಮತ್ತು ಮೊಟ್ಟೆಯನ್ನು ಬೇಯಿಸಿ ಸೇವಿಸುವಂತೆ ಸೂಚಿಸಿದರು. ಈಗಲೇ ಕೋಳಿ ಪಾರಂ ನೋಡಲಾಯತು, ಸೂಕ್ತ ಕ್ರಮ ಕೈ ಗೊಂಡಿದ್ದು ಕಂಡು ಬಂದಿದೆ ಎಂದ್ರು. ಪಾರಂ ದಿಂದ ಯಾವ ಸಮಸ್ಯೆ ಇಲ್ಲ ವೆಂದು ತಿಳಿದು ಬಂದಿದೆ, ಇದು ಕೆಲ ದಿನಗಳು ಮಾತ್ರವೆ ಏನೋ ಆಗಿದೆ ಅನುಸುತ್ತೆ ಅಷ್ಟೇ ಎಂದು ಡಾಕ್ಟರ್ ಗಳು ಹೇಳಿದ್ದಾರೆ.
ಈ ಸಂದರ್ಬದಲ್ಲಿ, ಉಪ ನಿರ್ದೇಶಕರು. ತಾಲೂಕು ಪಂಚಾಯತ್ EO ಬಸಪ್ಪ ಪಂಚಾಯತ್ ಅಧಿಕಾರಿಗಳು ಸಾರ್ವಜನಿಕರು ಉಪಸ್ಥಿತರಿದ್ದರು.