
*ಹಳ್ಳಿ ನಾಗರಾಜನ ಸಾವಿಗೆ ಕಾರಣೀಭೂತರಾದ. ಎಇಇ ನವೀನ್,ಸೆಕ್ಷನ್ ಆಫೀಸರ್ ವೀರೇಶ್*
ಬಳ್ಳಾರಿ,ಜೂ.06: ನಗರದ ಬಿಕೆಎಸ್ ಆಸ್ಪತ್ರೆ ಹತ್ತಿರ ವಿದ್ಯುತ್ ಲೈನ್ ಸಮಸ್ಯೆ ಇದೆ ಎಂದು ಕೆಲಸ ಮಾಡಲು ಆಗಮಿಸಿದ್ದ ನಾಗರಾಜನಿಗೆ ಲೈನ್ ಟ್ರಿಪ್ ಆಗಿ ಜನರೇಟರ್ ಮೂಲಕ ವಿದ್ಯುತ್ ರಿವರ್ ಆಗಿ ಸರ್ಕ್ಯೂಟ್ ನಿಂದ ಲೈನ್ ಮನ್ ಹಳ್ಳಿ ನಾಗರಾಜ್ ಮೃತಪಟ್ಟಿದ್ದಾನೆ.
ಈ ಸಂಬಂಧ 5ರಂದು ಸಂಜೆ ಬಿಕೆ ಶ್ರೀನಿವಾಸ್ ನರ್ಸಿಂಗ್ ಹೋಮ್ ಹತ್ತಿರ ಸಂಜೆ ಸುಮಾರು 6.20ಕ್ಕೆ ವಿದ್ಯುತ್ ಟ್ರಾನ್ಸ್ ಫಾರಂ ಗೆ ಚಾರ್ಜ್ ಮಾಡಲಿಕ್ಕೆ ಆ ಭಾಗದಲ್ಲಿರುವ ಸೆಕ್ಷನ್ ಆಫೀಸರ್ ವೀರೇಶ್ ಅವರ ಜೊತೆಯಲ್ಲಿ ಕೆಲಸ ಮಾಡುವ ಸಂದೀಪ್, ಪರಸಪ್ಪ, ಗುತ್ತಿಗೆದಾರ ಸುಭಾಷ್, ಅವರ ಕೆಳಗಡೆ ಕೆಲಸ ಮಾಡುವ ಎಲೆಕ್ಟ್ರಿಷಿಯನ್ ನಾಗರಾಜ್ ಈ ಭಾಗದಲ್ಲಿ ಕೆಲಸ ಮಾಡುವರಾಗಿರುತ್ತಾರೆ.
ಆದರೆ ಸಾವಿಗೀಡಾದ ಲೈನ್ ಮನ್ ಹಳ್ಳಿ ನಾಗರಾಜ್ ಈ ಸೆಕ್ಷನ್ ಗೆ ಸಂಬಂಧಪಟ್ಟವರಲ್ಲ, ಇವರು ಪಕ್ಕದ 8.ನೆ ಸೆಕ್ಷನ್ ಗೆ ಸಂಬಂಧಪಟ್ಟವರು, ಆದರೂ ಇವರನ್ನು ಬೇರೆ ಸೆಕ್ಷನ್ ಗೆ ಕಳಿಸಬೇಕಾದರೆ ಅನುಮತಿಯನ್ನು ತೆಗೆದುಕೊಂಡು ಕಳಿಸಬೇಕು.
ಆದರೆ ಅದು ಯಾವುದು ಇಲ್ಲದೆ, ಕೆಲಸ ಮಾಡಲಿಕ್ಕೆ ಕಳಿಸಿ ದೊಡ್ಡತಪ್ಪು ಮಾಡಿದ್ದು, ಇವರನ್ನು ಹೇಳದೆ ಕೇಳದೆ ಲೈನ್ ಮನ್ ಹಳ್ಳಿ ನಾಗರಾಜ್ ಅವರನ್ನ ಕರೆಸಿ ಕೆಲಸ ಮಾಡಿಸಿಕೊಂಡ ಸೆಕ್ಷನ್ ಆಫೀಸರ್ ವೀರೇಶ ಅವರನ್ನು ಕೂಡಲೇ ಅಮಾನತು ಮಾಡಿ ವಜಾ ಮಾಡಬೇಕೆಂದು ರೈತ ಮುಖಂಡರು ಆಕ್ರೋಶಗೊಂಡಿದ್ದಾರೆ.
ಲೈನ್ ಮನ್ ಹಳ್ಳಿ ನಾಗರಾಜ್ ಮೃತಪಟ್ಟು 24 ಗಂಟೆಗಳಾದರೂ ಒಬ್ಬ ಆಗಮಿಸಿದೆ ಕೆಇಬಿ ಅಧಿಕಾರಿಗಳು ನಿರ್ಲಕ್ಷ ವಹಿಸಿದ್ದರು.
ಕೊನೆಗೆ ವಿಮ್ಸ್ ಆಸ್ಪತ್ರೆಗೆ ಚೀಫ್ ಇಂಜಿನಿಯರ್ ತೇಜ ನಾಯಕ್ ಎಕ್ಸಿಕ್ಯೂಟ್ ಇಂಜಿನಿಯರ್ ಅಸ್ಮಾಕಾಂತ್ಅವರು ಬಂದು ಸರ್ಕಾರದಿಂದ ಬರುವಂತಹ ಸೌಲಭ್ಯಗಳನ್ನು ಮತ್ತು ನಾಗರಾಜ್ ಕುಟುಂಬಕ್ಕೆ ಬರುವಂತ ಇಲಾಖೆಯಾ ಸೌಲಭ್ಯಗಳು ಎಲ್ಲವೂ ಸಿಗುವಂತೆ ಸಹಕಾರ ಮಾಡ್ತೀವಿ ಎಂದು ಭರವಸೆ ನೀಡಿದ್ದರು, ಗೊಂದಲ ವಾತಾವರಣದಲ್ಲಿದ್ದ ಪರಿಸ್ಥಿತಿ ಸರಿಪಡಿಸಿ ಅಧಿಕಾರಿಗಳು ಹೋಗಿದ್ದಾರೆ.
ಒಬ್ಬ ಅಧಿಕಾರಿ ಕೆಲಸ ಮಾಡುತ್ತಿದ್ದಾನೆ ಎಂದರೆ ಆತನ ಸುತ್ತ ಎಲ್ಲ ವಸ್ತುಗಳು ರಕ್ಷಣೆ ಮಾಡುವಂತಹ ಸಿಬ್ಬಂದಿಗಳು ಇರಬೇಕು ಈ ರೀತಿ ಯಾವುದು ಇಲ್ಲದೆ ಬಳ್ಳಾರಿ ಒಂದೇ ಅಲ್ಲದೆ ಇಡೀ ರಾಜ್ಯದಲ್ಲೂ ಲೈನ್ ಮ್ಯಾನ್ ಗಳ ಪರಿಸ್ಥಿತಿ ರಕ್ಷಣೆ ಇಲ್ಲದಂತೆ ಸಾವಿಗೆ ಈಡಾಗಿರುವುದು ಅಂದರೆ ಈ ಬಳ್ಳಾರಿಯಲ್ಲಿ ಆಗಿರುವ ಘಟನೆ ಒಂದೇ ಸಾಕ್ಷಿ ಎಂದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಹಗಲು ರಾತ್ರಿ ಒಬ್ಬ ಲೈನ್ ಮ್ಯಾನ್ ಕೆಲಸ ಮಾಡುತ್ತಾನೆ ಎಂದರೆ ಕೆಇಬಿ ಅಧಿಕಾರಿಗಳಾದಂತ ಜೆಇ, ಎಇಇ, ಇಂಜಿನಿಯರ್, ಎಕ್ಸಕ್ಯೂಟಿವ್ ಇಂಜಿನಿಯರ್ ಅಧಿಕಾರಿಗಳು ಲೈನ್ ಮ್ಯಾನ್ ಬಗ್ಗೆ ಬೇಜವಾಬ್ದಾರಿ ಇಲ್ಲ ಎಂದರೆ ಇದು ನಾಚಿಕೆಗೇಡಿನ ಸಂಗತಿ ಎಂದು ರೈತ ಮುಖಂಡರು ಕಚೇರಿಯಲ್ಲಿ ಪ್ರತಿಭಟನೆಗೆ ಮುಂದಾಗಿದ್ದುರು.
ಇಂಥವರಿಗೆ ಲೈನ್ ಮನ್ ಗಳಿಗೆ ಮೋಸ ಮಾಡಿದ ಅಧಿಕಾರಿಗಳನ್ನು ಕೂಡಲೇ ಅಂಥವರನ್ನು ಮನೆಗೆ ಕಳಿಸಬೇಕೆಂದು ಸರ್ಕಾರಕ್ಕೆ ರೈತ ಮುಖಂಡರು ಗ್ರಾಮಸ್ಥರು ಮನವಿ ಮಾಡಿಕೊಂಡರು.
*ವಿದ್ಯುತ್ ಕೆಲಸ ಮಾಡಬೇಕಾದಾಗ ಲೈನ್ ಮನೆಗೆ ಇರಬೇಕಾದ ಸವಲತ್ತುಗಳು*
ಕೆಲಸ ಮಾಡುವ ಸಮಯದಲ್ಲಿ ಅವರನ್ನು ಹತ್ತಿಸಬೇಕಾದರೆ ಅಥವಾ ಕೆಲಸ ಮಾಡಬೇಕಾದರೆ ಸೇಫ್ಟಿ ಜೋನ್ ಇಡಬೇಕು ಅಂದರೆ, ಅರ್ತಿಂಗ್ ರಾಡುಗಳು ಇರಬೇಕು, ಕೆಳಗಡೆಯಿಂದನೇ ಎಲ್ಲಾ ಕಡೆ ರೆಡಿ ಮಾಡಬೇಕು, ಅವರಿಗೆ ಗ್ಲೋವ್ಸ್, ಹೆಲ್ಮೆಟ್, ಸೇಫ್ಟಿ ಬೆಲ್ಟ್ ಕೊಡಬೇಕು, ಇವೆಲ್ಲವೂ ರೆಡಿ ಮಾಡಿಕೊಂಡು ಸುತ್ತ ಮುತ್ತ ಕರೆಂಟ್ ಇದಿಯೋ ಇಲ್ಲ ಎಂದು ಚೆಕ್ ಮಾಡಿ ಕರೆಂಟ್ ಇಲ್ಲ ಅಂದಾಗ ಮಾತ್ರ ಲೈನ್ ಮನ್ ಅವರನ್ನು ಮೇಲೆ ಹತ್ತಿಸಿ ಕೆಲಸ ಮಾಡಿಸಬೇಕು.
ಆ ಕೆಲಸ ಮಾಡುವ ಸಮಯದಲ್ಲಿ ಅಂದ ಸ್ಪಾಟ್ನಲ್ಲಿ ಸೆಕ್ಷನ್ ಆಫೀಸರ್, ಎಇಇ ಅಧಿಕಾರಿ, ಎಕ್ಸಿಕ್ಯೂಟಿವ್ ಇಂಜಿನಿಯರ್ ಇರಬೇಕು, ಇವರೆಲ್ಲರೂ ಇದ್ದು ಅವರ ಸಮಕ್ಷಮದಲ್ಲಿ ಕೆಲಸ ಮಾಡಿದರೆ ಯಾವುದೇ ಅನಾಹುತ ಆಗಲು ಸಾಧ್ಯವಿರುವುದಿಲ್ಲ, ಅಂತ ಸಮಯದಲ್ಲಿ ಎಲ್.ಸಿ ತಗೋಬೇಕು, ಅಂದರೆ ಲೈನ್ ಕ್ಲಿಯರ್ ಎಂದು, ಅದು ಯಾವುದು ತೆಗೆದುಕೊಳ್ಳದೆ ಕೇವಲ ಕ್ಷುಲ್ಲಕ ಆ್ಯಂಟ್ರಿಪ್ ತೆಗೆದುಕೊಂಡು, ಜೀವಸ್ ಗಳನ್ನು ಓಪನ್ ಮಾಡಿಬಿಟ್ಟು ಬೇಜವಾಬ್ದಾರಿಯಿಂದ ಹಳ್ಳಿ ನಾಗರಾಜ್ ಅವರನ್ನು ಮೇಲೆ ಹತ್ತಿಸಿ ಕೆಲಸ ಮಾಡಿಸಿ ಅವರ ಸಾವಿಗೆ ಕಾರಣರಾಗಿರುತ್ತಾರೆ ಎಂದು ಹಳ್ಳಿ ನಾಗರಾಜ್ ಅವರ ಸ್ನೇಹಿತರು ಈ ಮಾಹಿತಿಯನ್ನು ನೀಡಿದ್ದಾರೆ.
*ಹಳ್ಳಿ ನಾಗರಾಜನ ಸಾವಿಗೆ ಕಾರಣರಾದ ವೀರೇಶ್ ಅವರನ್ನು ಅಮಾನತ್ತು ಮಾಡಿದ್ದೇವೆ*
ನಂತರ ಕೆಇಬಿ ಅಧಿಕ ಅಭಿಯಂತರರಾದ ತೆಜ್ಯೂನಾಯಕ್ ಅವರು ಪತ್ರಿಕೆಯ ಮೂಲಕ ಮಾತನಾಡಿ ಮೃತಪಟ್ಟ ಕುಟುಂಬಕ್ಕೆ ಸಾಂತ್ವನ ಹೇಳುತ್ತೇವೆ, ಈ ಸಾವಿಗೆ ಕಾರಣರಾದ ಅಧಿಕಾರಿಗಳನ್ನು ಈ ಕೂಡಲೇ ಅಮಾನತ್ತು ಮಾಡುತ್ತೇವೆ.
ಇದರ ಬಗ್ಗೆ ಯಾರು ಬೇಜವಾಬ್ದಾರಿ ಹೊತ್ತಿದ್ದಾರೆ ಅವರನ್ನು ಕೂಡಲೇ ಕ್ರಮ ಕೈಗೊಳ್ಳುತ್ತೇವೆ.
ಮೃತಪಟ್ಟ ಕುಟುಂಬಕ್ಕೆ ಒಂದು ಉದ್ಯೋಗವನ್ನು ಕೊಡಬೇಕೆಂದು ಸರ್ಕಾರದಿಂದ ಆದೇಶವಿದೆ ಅದನ್ನು ಕೊಡುತ್ತೇವೆ, ಅಲ್ಲದೆ ಮಗುವಿನ ವಿದ್ಯಾಭ್ಯಾಸಕ್ಕೇ ಸರ್ಕಾರದಿಂದ 25 ಲಕ್ಷದವರೆಗೆ ಸಹಾಯಧನವನ್ನು ಬರುವಂತ ಕೆಲಸವನ್ನು ಮಾಡುತ್ತೇವೆ.
ನಮ್ಮ ಕೆಇಬಿ ಡಿಪಾರ್ಟ್ಮೆಂಟ್ ನಲ್ಲಿ ಕೆಲಸ ಮಾಡುವಂತಹ ಪ್ರತಿಯೊಬ್ಬರಿಗೆ ಇನ್ಸೂರೆನ್ಸ್ ಲಭ್ಯವಿದ್ದು ಅದರಿಂದ ಒಂದು ಕೋಟಿ ರೂಪಾಯಿ ಬರುವಂತ ಅವಕಾಶವಿದ್ದು ಅದನ್ನು ಮಾಡಿಕೊಡುತ್ತೇವೆ ಎಂದು ಹೇಳಿದರು. ಕೊನೆಯಲ್ಲಿ ಕೆಇಬಿಯ ಎಲ್ಲಾ ಅಧಿಕಾರಿಗಳು ವಿಮ್ಸ್ ಆಸ್ಪತ್ರೆಗೆ ತೆರಳಿ ಅವರ ಕುಟುಂಬಕ್ಕೆ ಸಾಂತ್ವನ ಹೇಳಿ ಸರ್ಕಾರದಿಂದ ಬರುವಂತಹ ಸೌಲಭ್ಯಗಳನ್ನು ಖಂಡಿತವಾಗಿಯೂ ತಮಗೆ ತಲುಪಿಸುತ್ತೇವೆಂದು ಭರವಸೆಯನ್ನು ನೀಡಿ, ಅವರ ಮೃತ ದೇಹವನ್ನು ಎತ್ತಿನ ಬೂದಿಹಾಳ ಗ್ರಾಮಕ್ಕೆ ಕಳುಹಿಸಿ, ಹಳ್ಳಿ ನಾಗರಾಜನ ಸಾವಿಗೆ ಕಾರಣರಾದ ವೀರೇಶ್ ಅವರನ್ನು ಆ ಕೂಡಲೇ ಆದೇಶವನ್ನು ಹೊರಡಿಸಿ ಅಮಾನತ್ತು ಮಾಡಿದ್ದಾರೆ.
ಮುಂದೆ ಈ ರೀತಿಯಾದರೆ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ರೈತ ಮುಖಂಡರು ಗ್ರಾಮಸ್ಥರು ಕೆಇಬಿ ಅಧಿಕಾರಿಗಳಿಗೆ ಎಚ್ಚರಿಕೆಯನ್ನು ನೀಡಿದರು.