Web Stories
News 9 Today
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸಚಿವ ಶ್ರೀರಾಮುಲು ಕೊರಳಿಗೆ ಭೂಕಂಟಕದ ಉರುಳು..!

*ಸಚಿವ ಶ್ರೀರಾಮುಲು ಕೊರಳಿಗೆ ಭೂಕಂಟಕದ ಉರುಳು..!*

ಬಳ್ಳಾರಿ:ಸಚಿವ ಬಿ.ಶ್ರೀರಾಮುಲು ಅವರು ಬಳ್ಳಾರಿ ನಗರದಲ್ಲಿ 27.25 ಎಕರೆ ಪ್ರದೇಶ ಜಮೀನು ಕಬಳಿಸಿದ್ದಾರೆಂಬ ಆರೋಪಕ್ಕೆ ಸಂಬಂಧ ಪಟ್ಟಂತೆ ಕೂಡಲೇ ಸಚಿವ ಶ್ರೀರಾಮುಲು ಅವರನ್ನು ಸಚಿವ ಸಂಪುಟದಿಂದ ಕೈಬಿಡಬೇಕು ಮತ್ತು ಈ ವಿಷಯವಾಗಿ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಾಧೀಶರಿಂದ ತನಿಖೆ ನಡೆಸಬೇಕೆಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ್ ಅವರು ಆಗ್ರಹಿಸಿದರು.

ಈ ಕುರಿತಾಗಿ ಬಳ್ಳಾರಿ ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ಕುರಿತಾಗಿ ಮುಖ್ಯಮಂತ್ರಿಗಳಿಗೆ ಒಂದು ವಾರದಲ್ಲಿಯೇ ಪತ್ರಬರೆದು ಶ್ರೀರಾಮುಲು ಅವರನ್ನು ಸಚಿವ ಸ್ಥಾನದಿಂದ ಕೈಬಿಡುವಂತೆ ಆಗ್ರಹಿಸಲಾಗುತ್ತದೆ. ಕ್ರಮವಹಿಸದಿದ್ದರೆ ನ್ಯಾಯಾಂಗ ಹೋರಾಟ ಮಾಡಲಾಗುತ್ತದೆ ಎಂದರು.

ವಿಚಾರಣೆ ನಡೆಸಲು ನ್ಯಾಯಾಲಯ ಸೂಚನೆ?
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದ್ದಾರೆ. ಆದರೆ ಸಕ್ರಮ ಪ್ರಾಧಿಕಾರದ ಪರವಾನಗಿ ಇಲ್ಲದೆ ಮಾಡಿದ್ದಾರೆಂದು ಶ್ರೀರಾಮುಲು ನ್ಯಾಯಾಲಯದ ಮೋರೆ ಹೋಗಿದ್ದರು.
ಆದರೆ ನ್ಯಾಯಾಲಯವು ಇವರ ಮನವಿಯನ್ನು ತಿರಸ್ಕರಿಸಿ ಪ್ರಕರಣ ವಿಚಾರಣೆ ನಡೆಸಲಿ ಎಂದು ಸೂಚಿಸಿದೆ ಎಂದು ತಿಳಿಸಿದ ಹಿರೇಮಠ್ ಇದೊಂದು ಮಹಾ ವಂಚನೆ ಪ್ರಕರಣವಾಗಿದೆ ಕ್ಯಾಬಿನೆಟ್ ಮಂತ್ರಿಯಾಗಿ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಪೋರ್ಜರಿ ದಾಖಲೆಗಳನ್ನ ಸೃಷ್ಟಿಸಿ ಸಾರ್ವಜನಿಕರ ಮತ್ತು ಸರ್ಕಾರ ವಶಪಡಿಸಿಕೊಂಡ ಭೂಮಿಯನ್ನೂ ಕಬಳಿಸಿದ್ದಾರೆ.

ಅತ್ಯಂತ ಕಡು ಭ್ರಷ್ಟ ಡಿಕೆ.ಶಿವಕುಮಾರ್ ಅಣ್ಣನ ಹಾಗೆ ಕ್ರಮಿನಲ್ ಕೆಲಸವನ್ನ‌ಮಾಡಿದ್ದಾರೆ ಎಂದರು
ಮೊದಲ ಹಂತವಾಗಿ ಅವರು ಅಧಿಕಾರ ದುರುಪಯೋಗ ಮಾಡಿಕೊಳ್ಳಲು ಅವಕಾಶ ನೀಡದಂತೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು.ಅನಂತರ ಬೇರೆ ಬೇರೆ ಬೆಳವಣಿಗೆ ಗಳಿವೆ ಅದ್ಯಾವ ರೀತಿ ಗಾಲಿ ಜನಾರ್ಧನ ರೆಡ್ಡಿ ಪ್ರಕರಣದಲ್ಲಿ ಅಯಿತೊ ಅದೆಲ್ಲ ಮುಂದೆ ನಡೆಯುತ್ತದೆ ಎಂದರು.

ಟಿಬಿ ಸ್ಯಾನಿಟೋರಿಯಂನ ಬಳಿ ಸರ್ವೆ ನಂಬರ್೫೯೭ ನಲ್ಲಿ ಇವರು ಹಾಕಿರುವ ಕಾಂಪೊಂಡ್ ಒಳಗಡೆ ಅನೇಕ ಜನರ ಜಮೀನು ಸೈಟ್ ಗಳಿದ್ದು ಈ ಕ್ರಿಮಿನಲ್ ಗಳು ಅವರ್ಯಾರನ್ನು ಒಳಗೆ ಬಿಡದೆ ದೌರ್ಜನ್ಯ ವೆಸಗಿದ್ದಾರೆ ಎಂದು ಅಕ್ರೋಶ ವ್ಯೆಕ್ತಪಡಿಸಿದರು. ಇದಕ್ಕೆ ಸಂಬಂಧಿಸಿದ ಅಧಿಕಾರಿಗಳನ್ನು ಜೈಲು ಗೆ ಕಳಸಬೇಕು.ನಿವೃತ್ತಿ ನ್ಯಾಯಾಧೀಶರು ಯಿಂದ ಈ ಪ್ರಕರಣ ವನ್ನು,ತನಿಖೆ ನಡೆಸಬೇಕು ಏಂದು ಒತ್ತಾಯ ಮಾಡಿದರು.

ಆದರೆ ಸಾರ್ವಜನಿಕರು ಈವರೆಗೆ ಶ್ರೀರಾಮುಲು ಅವರು ಗಾಲಿ ಜನಾರ್ದನ ರೆಡ್ಡಿ ಮೈನಿಂಗ್ ಅಕ್ರಮ ಗಳಲ್ಲಿ ಕೂಡ ಯಾವುದೇ ಕಪ್ಪು ಚುಕ್ಕೆ ಇಲ್ಲದಂತೆ ಇರುವ ನಾಯಕರು ಅನ್ನುವ ಗೌರವ ಇತ್ತು.

ಪ್ರಸ್ತುತ ಆರೋಪಗಳು ನೋಡಿದರೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿವೆ,ಇಷ್ಟು ಆರೋಪಗಳು ಇರುವ ಭೂಮಿ ಖರೀದಿ ಯಾಕೆ ಬೇಕಿತ್ತು, ಇದರಲ್ಲಿ ಏನಾದರೂ ಪ್ಲಾನ್ ಇರಬಹುದು ಅನಿಸುತ್ತದೆ.

ಈಹಿಂದೆ ಕೂಡ ಹದ್ದಿನ ಗುಂಡು ಪ್ರದೇಶದಲ್ಲಿ ಕೂಡ ಇಂತಹ ಸಮಸ್ಯೆಗಳು ಸೃಷ್ಟಿ ಆಗಿದ್ದವು ಸೈಟ್ ಗಳ ಮಾರಾಟ ವಿಚಾರದಲ್ಲಿ.

ಈಗಾಗಲೇ ಬಿಜೆಪಿ ಪಕ್ಷದಲ್ಲಿ ಬಳ್ಳಾರಿ ಅವರಿಗೆ,ಗೌರವ ಕಡಿಮೆ ಇದೇ ಅನ್ನುವ ಮಾತುಗಳು ಇದ್ದಾವೆ.

ಬಿಎಸ್ ವೈ ಪುತ್ರ ರಾಮುಲು ಅವರ ಆಪ್ತ ಸಹಾಯಕ ವಿಚಾರದಲ್ಲಿ ಸಮಸ್ಯೆ ಮಾಡಿದ್ದು,ಯಾಲ್ಲವು ನೋಡುತ್ತಾ ಇದ್ದರೆ,ದಾಖಲೆ ಗಳು,ಸತ್ಯದ ಕೆಡ ದಾರಿ ತೋರಿಸುವಂತೆ ಅಗಿದೆ.

ಈಗಾಗಲೇ ಆರೋಪ ಸ್ಥಾನವನ್ನು ಪಡೆದ,ಸಚಿವರು ಗೆ ಪಕ್ಷದಲ್ಲಿ ಹಿನ್ನಡೆ ಆಗುವ ಸಾಧ್ಯತೆ ಇದೆ,ಬಿಜೆಪಿ ಪಕ್ಷ ಕೂಡ ರಾಮುಲು ಅವರು ಸಿಕ್ಕರೆ ಸಾಕು,ಅವರ ಅಥೊಟಿ ದಲ್ಲಿ ಇಟ್ಟುಕೊಂಡು ಸ್ಪೀಡ್ ಬ್ರೇಕರ್ ಹಾಕಬೇಕು ಅನ್ನುವ ಆಲೋಚನೆ ದಲ್ಲಿ ಇದ್ದಾರೆ ಅನ್ನುವ ಮಾಹಿತಿ ಇದೆ.
ಇದು ಅಲ್ಲದೇ ಉಸ್ತುವಾರಿ ಸಚಿವರು ಆದಮೇಲೆ, ಸ್ಥಳೀಯ ಸ್ವ ಪಕ್ಷ ನಾಯಕರಲ್ಲಿ, ಅಸಮಾಧಾನ ವಾಸನೆ ಇದೆ,ಪಕ್ಷಕ್ಕೆ ದುಡಿದ, ಶ್ರೀ ರಾಮುಲು ಅವರ ಬೆಳವಣಿಗೆಗೆ ನಿಂತು ಹೋರಾಟ ಮಾಡಿದ ನಾಯಕರು ಗೆ ಯಾರಿಗೂ ಈವರೆಗೆ ಯಾವ ಸ್ಥಾನ ಮಾನ,ನೀಡಿಲ್ಲ.

ಇದರಿಂದ ಕೆಲವರು ತಟಸ್ಥದೊರಣಿ ಯಲ್ಲಿ ಇದ್ದಾರೆ ಅನ್ನುವ ಗುಸು,ಗುಸು ಇದೆ.
ಚುನಾವಣೆ ಹತ್ತಿರ ಸಮಯದಲ್ಲಿ ಮ್ಯಾಜಿಕ್ ಮಾಡಬಹುದು ಅನ್ನುವ ತಂತ್ರಗಾರಿಕೆ, ಸಾಹೇಬರು ಗೆ ಎಷ್ಟು ಫಲ ಕೊಡುತ್ತದೆ ಎಂದು ಕಾದು ನೋಡಬೇಕು ಅಗಿದೆ.        (ಕೆ.ಬಜಾರಪ್ಪ ವರದಿಗಾರರು)

[video width="640" height="352" mp4="https://news9today.in/wp-content/uploads/2022/08/VID-20220801-WA0025.mp4"][/video]

Author
News 9 Today
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಚೇರಿ ಗಳು ವೀಕ್ಷಣೆ ಮಾಡಿದ, ಜಿಲ್ಲಾಧಿಕಾರಿ. ಬೇಸಿಗೆ,ಸಂದರ್ಭದಲ್ಲಿ ಜನರು ಕಚೇರಿಗಳು ಸುತ್ತ ಬಾರದು, ನಿರ್ಲಕ್ಷ ಮಾಡಿದರೆ,ಕ್ರಮ.ಬಡವರಿಗೆ ಸಮಯ ನೀಡಬೇಕಿತ್ತು: ಶ್ರೀರಾಮುಲುಮಹಿಳಾ ಮೀಸಲು ಮಸೂದೆ ಸ್ವಾಗತಾರ್ಹ; ಆದರೆ ಕ್ಷೇತ್ರ ಪುನರ್ವಿಂಗಡಣೆಯಿಂದ ದಕ್ಷಿಣದ ರಾಜ್ಯಗಳಿಗೆ ಅನ್ಯಾಯ: ನಾರಾ ವೈಜಯಂತಿ ರೆಡ್ಡಿ ಅಂಬೇಡ್ಕರ್ ಜಯಂತಿ ಆಚರಣೆ.ಅಂಬೇಡ್ಕರ್ ಜಯಂತಿ ಆಚರಣೆ.ದುಬಾರಿ ಬೆಲೆ ಬಾಳುವ, ಗಾಲಿ ಆಪ್ತನ, ಬಂದುಗಳ, ಲೇಔಟ್ ಗಳು, ಕುಡುಕರ ಅಡ್ಡಗಳು!!. ಜನರು ಆತಂಕ ದಲ್ಲಿ.ದುಬಾರಿ ಬೆಲೆ ಬಾಳುವ, ಗಾಲಿ ಆಪ್ತನ, ಬಂದುಗಳ, ಲೇಔಟ್ ಗಳು, ಕುಡುಕರ ಅಡ್ಡಗಳು!!. ಜನರು ಆತಂಕ ದಲ್ಲಿ.ದುಬಾರಿ ಬೆಲೆ ಬಾಳುವ, ಗಾಲಿ ಆಪ್ತನ, ಬಂದುಗಳ, ಲೇಔಟ್ ಗಳು, ಕುಡುಕರ ಅಡ್ಡಗಳು!!. ಜನರು ಆತಂಕ ದಲ್ಲಿ.ಪಾಲಿಕೆಯಾ ನೌಕರರ ಧರಣಿಗೆ ಬಿಷ್ಮ ಎಂಟ್ರಿ!! ಯಾಲ್ಲವು, ನೋಡಿಕೊಳ್ಳುವ, ಬರವಸೆಯನ್ನು ಕೊಟ್ಟ ನಾರಾ ಸೂರ್ಯ ನಾರಾಯಣ ರೆಡ್ಡಿ.ಪಾಲಿಕೆಯಾ ನೌಕರರ ಧರಣಿಗೆ ಬಿಷ್ಮ ಎಂಟ್ರಿ!! ಯಾಲ್ಲವು, ನೋಡಿಕೊಳ್ಳುವ, ಬರವಸೆಯನ್ನು ಕೊಟ್ಟ ನಾರಾ ಸೂರ್ಯ ನಾರಾಯಣ ರೆಡ್ಡಿ.