ಬಳ್ಳಾರಿಯ 11ನೇ ವಾರ್ಡಿನಲ್ಲಿ ಕಿಚನ್ ಕಿಟ್ ಹಂಚಿದ ಶಾಸಕ ನಾರಾ ಭರತ್ ರೆಡ್ಡಿ
ಬಳ್ಳಾರಿ, ನ.06: ಶಾಸಕ ನಾರಾ ಭರತ್ ರೆಡ್ಡಿ ತಮ್ಮ ಜನ್ಮ ದಿನದ ನಿಮಿತ್ಯ ಮನೆ ಮನೆಗೂ ಭರತ್ ಅಭಿಯಾನದ ಭಾಗವಾಗಿ ಬಳ್ಳಾರಿ ನಗರದ 11ನೇ ವಾರ್ಡಿನಲ್ಲಿ ಗುರುವಾರ ಕಿಚನ್ ಕಿಟ್ ವಿತರಿಸಿದರು.
11ನೇ ವಾರ್ಡಿನ ಸುಂಕ್ಲಮ್ಮ ದೇವಿ ದೇವಸ್ಥಾನದಿಂದ ಕಿಚನ್ ಕಿಟ್ ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಿದರು. ವಾರ್ಡಿನಾದ್ಯಂತ ಸಂಚರಿಸಿ ಜನ್ಮ ದಿನದ ಉಡುಗೊರೆಯಾಗಿ ಕಿಚನ್ ಕಿಟ್ ವಿತರಿಸಿದರು.
ಈ ಸಂದರ್ಭ ಸ್ಥಳೀಯ ಮುಖಂಡರಾದ ಲೋಕೇಶ್, ಸೋಮಪ್ಪ, ಮಡಿವಾಳಪ್ಪ, ಪ್ರಭಂಜನ, ಮಹೇಶ್, ಕಾಂಗ್ರೆಸ್ ವಕ್ತಾರ ವೆಂಕಟೇಶ ಹೆಗಡೆ, ಪಾಲಿಕೆಯ ಸದಸ್ಯರಾದ ನೂರ್ ಮೊಹಮ್ಮದ್, ಮಿಂಚು ಶ್ರೀನಿವಾಸ, ಕಾಂಗ್ರೆಸ್ ಮುಖಂಡರಾದ ಹೊನ್ನಪ್ಪ, ಹಗರಿ ಗೋವಿಂದ, ಸುಬ್ಬರಾಯುಡು, ಚಾನಾಳ್ ಶೇಖರ್, ಥಿಯೇಟರ್ ಶಿವು, ಕಪ್ಪೆ ಶಿವು, ರಘು, ಭರತ್, ಪದ್ಮಾ, ಕವಿತಾ, ಗೌತಮ್, ಧರ್ಮಶ್ರೀ ಸೇರಿದಂತೆ ಹಲವರು ಹಾಜರಿದ್ದರು.
ಇದೇ ಸಂದರ್ಭ ಸ್ಥಳೀಯರು ಹಲವು ದೂರುಗಳನ್ನು ಹೇಳಿಕೊಂಡರು. ಸ್ಥಳದಲ್ಲಿ ಹಾಜರಿದ್ದ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳುವಂತೆ ಶಾಸಕ ನಾರಾ ಭರತ್ ರೆಡ್ಡಿ ಸೂಚಿಸಿದರು.
ಬುಧವಾರ ನಗರದ 23ನೇ ವಾರ್ಡಿನ ಆದ್ಯಂತ ಕಿಚನ್ ಕಿಟ್ ವಿತರಿಸುವ ಕಾರ್ಯ ಪೂರ್ಣಗೊಳಿಸಲಾಯಿತು.