Web Stories
News 9 Today
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮುಸ್ಲಿಂರು ವಿಧಾನಸಭೆಯ ಚುನಾವಣೆಯ ವೇಳೆಯೇ ನಮ್ಮನ್ನು ಗೆಲ್ಲಿಸಿ ಸನ್ಮಾಸಿದ್ದೀರಿ ಎಂದ ಶಾಸಕ ನಾರಾ ಭರತ್ ರೆಡ್ಡಿ.

ಮುಸ್ಲಿಂರು ವಿಧಾನಸಭೆಯ ಚುನಾವಣೆಯ ವೇಳೆಯೇ ನಮ್ಮನ್ನು ಗೆಲ್ಲಿಸಿ ಸನ್ಮಾಸಿದ್ದೀರಿ ಎಂದ ಶಾಸಕ ನಾರಾ ಭರತ್ ರೆಡ್ಡಿ.

ದೇಶಕ್ಕಾಗಿ ಮುಸ್ಲಿಂರ ಕೊಡುಗೆ ಅನನ್ಯವಾದುದು: ಶಾಸಕ ನಾರಾ ಭರತ್ ರೆಡ್ಡಿ

ಬಳ್ಳಾರಿ, ಫೆ.09: ಭಾರತದ ಮುಸ್ಲಿಂ ಸಮುದಾಯದ ಜನ ಸಾಕಷ್ಟು ಕೊಡುಗೆ ನೀಡಿದೆ, ಮೊದಲ ಸ್ವಾತಂತ್ರ್ಯ ಸಂಗ್ರಾಮದಿಂದ ಇಲ್ಲಿಯವರೆಗೆ ಮುಸ್ಲಿಂರು ದೇಶಕ್ಕಾಗಿ ತ್ಯಾಗ ಬಲಿದಾನ ಮಾಡುತ್ತಿದ್ದಾರೆ ಎಂದು ನಗರ ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.

ನಗರದ ಹೊರ ವಲಯದ ಖಾಸಗಿ ಸಭಾಂಗಣದಲ್ಲಿ ಮುಸ್ಲಿಂ ಸಮುದಾಯದ ವತಿಯಿಂದ ಏರ್ಪಡಿಸಿದ್ದ ಶಾಸಕರ ಸಂಸದರ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ದೇಶಕ್ಕಾಗಿ ಬಲಿದಾನಗೈದವರ ಹೆಸರನ್ನು ಇತಿಹಾಸದಿಂದ ತೆಗೆದು ಹಾಕುವ ಹುನ್ನಾರವನ್ನು ಯಾರಾದರೂ ಮಾಡಬಹುದು, ಆದರೆ ಹುತಾತ್ಮರ ಹೆಸರನ್ನು ಅಳಿಸಲಾಗದು ಎಂದು ಹೇಳಿದರು.

ಬಳ್ಳಾರಿ ನಗರದ 21 ಮಸೀದಿಗಳಿಗೆ 2.20 ಕೋಟಿ ರೂ.ಗಳ ಅನುದಾನ ತಂದಿರುವೆ, ಅದೇ ರೀತಿ ಎರಡು ಶಾದಿ ಮಹಲ್'ಗಳಿಗೆ 3 ಕೋಟಿ ರೂ.ಗಳ ಅನುದಾನ ತಂದಿರುವೆ ಎಂದು ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.

ಚುನಾವಣೆಯ ಸಂದರ್ಭ ಶಾದಿ ಮಹಲ್ ಬಗ್ಗೆ ಪ್ರಸ್ತಾಪ ಮಾಡಿದಾಗ ಅದು ಆಗದ ಕೆಲಸ ಎಂದು ವೃದ್ಧೆಯೊಬ್ಬರು ಹೇಳಿದ್ದರು ಆದರೆ ಇಂದು ಒಂದು ಶಾದಿ ಮಹಲ್ ಅಲ್ಲ ಎರಡು ಶಾದಿ ಮಹಲ್'ಗಳಿಗೆ ಅನುದಾನ ತಂದಿರುವೆ ಎಂದರು.

ನಿಮ್ಮ ಆಶೀರ್ವಾದದಿಂದ ನಾನು ಒಂದೇ ದಿನ ಅಲ್ಪಸಂಖ್ಯಾತ ಸಮುದಾಯಗಳ ಕಾಲೋನಿಗಳ ಅಭಿವೃದ್ಧಿಗಾಗಿ 5 ಕೋಟಿ ರೂ.ಗಳ ಕಾಮಗಾರಿಗೆ ಚಾಲನೆ ನೀಡಿದೆ ಎಂದ ಅವರು, ಹಿಂದೂ ಮುಸ್ಲಿಂರ ಐಕ್ಯತೆ ನಮ್ಮ ಸರ್ಕಾರದ ಮೊದಲ ಆದ್ಯತೆ, ಕೋಮು ಸೌಹಾರ್ದತೆ ಕಾಪಾಡುವ ಜವಾಬ್ದಾರಿ ನಮ್ಮದು ಎಂಬ ಭರವಸೆ ನೀಡುತ್ತೇವೆ ಎಂದರು.

ವಕ್ಫ್ ಮಂಡಳಿಯ ಆಸ್ತಿ ಅದು ದೇವರಿಗೆ ಸೇರಿದ್ದು, ಅದರ ರಕ್ಷಣೆ ನಮ್ಮ ಹೊಣೆಯಾಗಿದೆ, ಬಳ್ಳಾರಿ ನಗರದ ಹಾವಂಭಾವಿಯಲ್ಲಿ ಕೆಲವರು ಒತ್ತುವರಿ ಮಾಡಿದ್ದರು, ಆದರೆ ನಾವು ನ್ಯಾಯಾಲಯದ ಮೊರೆ ಹೋಗಿ ಆಸ್ತಿಯನ್ನು ರಕ್ಷಣೆ ಮಾಡಿದ್ದೇವೆ ಎಂದರು.

ವಿಧಾನಸಭೆಯ ಚುನಾವಣೆಯ ವೇಳೆಯೇ ನಮ್ಮನ್ನು ಗೆಲ್ಲಿಸಿ ಸನ್ಮಾಸಿದ್ದೀರಿ ಎಂದ ಶಾಸಕ ನಾರಾ ಭರತ್ ರೆಡ್ಡಿ, ನಾನು ಕಿರಿಯ ವಯಸ್ಸಿನ ವ್ಯಕ್ತಿ, ಚುನಾವಣೆಯ ಸಂದರ್ಭ ನಾನು ಸ್ಪರ್ಧೆಗೆ ಬಂದಾಗ ನನಗೆ ಅವಕಾಶ ನೀಡಿದ್ದೀರಿ ಎಂದರು.

ನನ್ನ ತಂದೆ ತಾಯಿಯ ಪುಣ್ಯ, ಅಲ್ಲಾಹನ ಕೃಪೆಯಿಂದಾಗಿ ನಾನು ಶಾಸಕನಾದೆ ಎಂದರು.

ಬಳಕ ಮಾತನಾಡಿದ ರಾಜ್ಯಸಭಾ ಸದಸ್ಯ ಡಾ.ಸಯ್ಯದ್ ನಾಸಿರ್ ಹುಸೇನ್; ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ, ವಿಶೇಷವಾಗಿ ನಗರದ ಎರಡು ಶಾದಿಮಹಲ್'ಗಳಿಗೆ ಅನುದಾನ ಮಂಜೂರು ಮಾಡಿಸಿದ್ದೇವೆ ಎಂದರು.

ನಗರ ಹಾಗೂ ಗ್ರಾಮಾಂತರ ಕ್ಷೇತ್ರಗಳು ಸೇರಿಸಿ ಮುಸ್ಲಿಮರ ಸಂಖ್ಯೆ ದೊಡ್ಡದಿದೆ, ಹೀಗಾಗಿ ಎರಡು ಶಾದಿ ಮಹಲ್'ಗಳ ಅಗತ್ಯ ಇದೆ ಎಂದು ರಾಜ್ಯಸಭಾ ಸದಸ್ಯ ಡಾ.ಸಯ್ಯದ್ ನಾಸಿರ್ ಹುಸೇನ್ ಹೇಳಿದರು.

ಮೇಯರ್ ಮುಲ್ಲಂಗಿ ನಂದೀಶ್, ಹುಮಾಯೂನ್ ಖಾನ್, ಮೆಹದಿ ಮಿಯಾ ಸಾಹೇಬ್, (ಅಜ್ಮೀರ್), ಖಾಜಿ ಗುಲಾಮ್ ಸಿದ್ದಿಕಿ, ಪೀರ್ ಬಾಷಾ ಸಾಹೇಬ್,
ಕಣೇಕಲ್ ಸಾಹೇಬ್, ಕರಿಮುದ್ದೀನ್ ಸಾಹೇಬ,
ಖಾಜುನ್ ಸಾಹೇಬ್, ಹಾಜಿ ಇಲ್ಯಾಸ್ ಸಾಹೇಬ್, ಭಂ ಭಂ ದಾದಾ ಭಾಯಿ, ಮುರ್ತುಜಾ ಖಾನ್ ಸಾಹೇಬ್, ಹುಸೇನ್ ಪೀರಾ, ಕಣೇಕಲ್ ಮಾಬುಸಾಬ, ನೂರ್ ಅಹ್ಮದ್, ಅಯಾಜ್ ಅಹ್ಮದ್, ಜಬ್ಬಾರ್, ಅಲ್ಲಾಬಕಾಶ್, ಶಿವರಾಜ್, ರಾಮಾಂಜನೇಯ, ಸೈಫುಲ್ಲಾ, ಮೊಹಮ್ಮದ್ ಭಾಯಿ, ಪೆರ್ರಂ ವಿವೇಕ್, ಸ್ಟಾರ್ ರಾಯಲ್ ಫಂಕ್ಷನ್ ಹಾಲ್ ಮಾಲೀಕ ಮೈನು ಭಾಯ್, ಅಸ್ಲಂ ಫರ್ವೇಜ್ ಭಾಯ್, ಅಲ್ಲಾಬಕಾಶ್ (ಮಾಜಿ ಅಧ್ಯಕ್ಷರು, ನಗರಸಭೆ ಚಿತ್ರದುರ್ಗ), ಕೆಎನ್ ಎಂ ಭಿಲಾಷ್, ಲೇಬಲ್ ರಾಜು ಭಾಯ್ (ಶೇಖ್ ಪಾಶಾ) ಮೊದಲಾದವರು ಹಾಜರಿದ್ದರು.

Author
News 9 Today
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಚೇರಿ ಗಳು ವೀಕ್ಷಣೆ ಮಾಡಿದ, ಜಿಲ್ಲಾಧಿಕಾರಿ. ಬೇಸಿಗೆ,ಸಂದರ್ಭದಲ್ಲಿ ಜನರು ಕಚೇರಿಗಳು ಸುತ್ತ ಬಾರದು, ನಿರ್ಲಕ್ಷ ಮಾಡಿದರೆ,ಕ್ರಮ.ಬಡವರಿಗೆ ಸಮಯ ನೀಡಬೇಕಿತ್ತು: ಶ್ರೀರಾಮುಲುಮಹಿಳಾ ಮೀಸಲು ಮಸೂದೆ ಸ್ವಾಗತಾರ್ಹ; ಆದರೆ ಕ್ಷೇತ್ರ ಪುನರ್ವಿಂಗಡಣೆಯಿಂದ ದಕ್ಷಿಣದ ರಾಜ್ಯಗಳಿಗೆ ಅನ್ಯಾಯ: ನಾರಾ ವೈಜಯಂತಿ ರೆಡ್ಡಿ ಅಂಬೇಡ್ಕರ್ ಜಯಂತಿ ಆಚರಣೆ.ಅಂಬೇಡ್ಕರ್ ಜಯಂತಿ ಆಚರಣೆ.ದುಬಾರಿ ಬೆಲೆ ಬಾಳುವ, ಗಾಲಿ ಆಪ್ತನ, ಬಂದುಗಳ, ಲೇಔಟ್ ಗಳು, ಕುಡುಕರ ಅಡ್ಡಗಳು!!. ಜನರು ಆತಂಕ ದಲ್ಲಿ.ದುಬಾರಿ ಬೆಲೆ ಬಾಳುವ, ಗಾಲಿ ಆಪ್ತನ, ಬಂದುಗಳ, ಲೇಔಟ್ ಗಳು, ಕುಡುಕರ ಅಡ್ಡಗಳು!!. ಜನರು ಆತಂಕ ದಲ್ಲಿ.ದುಬಾರಿ ಬೆಲೆ ಬಾಳುವ, ಗಾಲಿ ಆಪ್ತನ, ಬಂದುಗಳ, ಲೇಔಟ್ ಗಳು, ಕುಡುಕರ ಅಡ್ಡಗಳು!!. ಜನರು ಆತಂಕ ದಲ್ಲಿ.ಪಾಲಿಕೆಯಾ ನೌಕರರ ಧರಣಿಗೆ ಬಿಷ್ಮ ಎಂಟ್ರಿ!! ಯಾಲ್ಲವು, ನೋಡಿಕೊಳ್ಳುವ, ಬರವಸೆಯನ್ನು ಕೊಟ್ಟ ನಾರಾ ಸೂರ್ಯ ನಾರಾಯಣ ರೆಡ್ಡಿ.ಪಾಲಿಕೆಯಾ ನೌಕರರ ಧರಣಿಗೆ ಬಿಷ್ಮ ಎಂಟ್ರಿ!! ಯಾಲ್ಲವು, ನೋಡಿಕೊಳ್ಳುವ, ಬರವಸೆಯನ್ನು ಕೊಟ್ಟ ನಾರಾ ಸೂರ್ಯ ನಾರಾಯಣ ರೆಡ್ಡಿ.