ಗೌರವ ಕೊಟ್ಟು ಮಾತನಾಡಿ"ರೆಡ್ಡಿ ಗಾರು" ವಾಲ್ಮೀಕಿ ಸಮುದಾಯ ಒತ್ತಾಯ.
ಬಳ್ಳಾರಿ (3)ಜನಾರ್ದನ್ ರೆಡ್ಡಿ ಕೆಲ ವಾಲ್ಮೀಕಿ ಸಮುದಾಯದ ನಾಯಕರು ನಗರದ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ, ಗಂಗಾವತಿ ಶಾಸಕ ಗಾಲಿ ಜನಾರ್ದನ್ ರೆಡ್ಡಿ ಅವರ ಮೇಲೆ ಅಸಮಾಧಾನ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ವಾಲ್ಮೀಕಿ ಸಮುದಾಯದ ಹಿರಿಯ ಮುಖಂಡ ಪರಶುರಾಮ್ ಅವರು, “ಜನಾರ್ದನ್ ರೆಡ್ಡಿ ಅವರು ತಮ್ಮ ಸ್ವಾರ್ಥಕ್ಕೆ ಅನುಗುಣವಾಗಿ ಹೇಳಿಕೆ ನೀಡುವ ಪ್ರವೃತ್ತಿ ಹೊಂದಿದ್ದಾರೆ.
ಹಿಂದೆ ಶ್ರೀರಾಮುಲು ಅವರೊಂದಿಗೆ ವೈಮನಸ್ಸು ಉಂಟಾದಾಗ ಅವಹೇಳನಕಾರಿ ಮಾತುಗಳನ್ನು ಆಡಿದ್ದರು.
ತಮ್ಮ ಬಳಿ ಯಾರು ಇದ್ದಾರೋ ಅವರನ್ನು ಹೊಗಳಿ, ದೂರವಾದವರನ್ನು ಹೀನಾಯವಾಗಿ ಮಾತನಾಡುವುದು ಅವರ ಸ್ವಭಾವವಾಗಿದೆ” ಎಂದು ಆರೋಪಿಸಿದರು.
ನಮ್ಮ ಸಮುದಾಯದ ನಾಯಕ ಹಾಗೂ ಮಾಜಿ ಸಚಿವ ಬಿ. ನಾಗೇಂದ್ರ ಅವರು ಸತ್ಯವನ್ನು ಬಹಿರಂಗವಾಗಿ ಹೇಳಿದಾಗ ಅದನ್ನು ಸಹಿಸದೆ ಅವರ ವಿರುದ್ಧ ಅವಮಾನಕಾರಿಯಾಗಿ ಮಾತನಾಡಿರುವುದು ಖಂಡನೀಯ ಎಂದು ಹೇಳಿದರು. “ಬಿ. ನಾಗೇಂದ್ರ ಅವರು ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾದ ಜನನಾಯಕರು.
ಅವರ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡುವುದು ಸಂಪೂರ್ಣ ವಾಲ್ಮೀಕಿ ಸಮುದಾಯಕ್ಕೆ ಮಾಡಿದ ಅಪಮಾನ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಾಲ್ಮೀಕಿ ಮಹರ್ಷಿ ಪ್ರತಿಮೆಯ ಅನಾವರಣ ಸಂದರ್ಭದಲ್ಲಿ ನಡೆದ ಗಲಾಟೆಗೆ ಜನಾರ್ದನ್ ರೆಡ್ಡಿಯವರೇ ನೇರ ಕಾರಣ ಎಂದು ಆರೋಪಿಸಿದ ಅವರು, ಇಂತಹ ಘಟನೆಗಳಿಂದ ಸಮುದಾಯದ ಭಾವನೆಗಳಿಗೆ ಧಕ್ಕೆ ಉಂಟಾಗಿದೆ ಎಂದರು.
ಇದೇ ವೇಳೆ ಮಾತನಾಡಿದ ಸಮುದಾಯದ ಮುಖಂಡರು, “ಜನಾರ್ದನ್ ರೆಡ್ಡಿ ಅವರು ಮೊದಲು ತಮ್ಮ ಹಿನ್ನೆಲೆಯನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು.
ನಮ್ಮ ಸಮುದಾಯದ ನಾಯಕ ಬಿ. ನಾಗೇಂದ್ರ ಅವರ ಹಿನ್ನೆಲೆಯನ್ನು ಅರಿತು ಮಾತನಾಡಬೇಕು ಎಂದರು. ತಮ್ಮ ವಿರುದ್ಧ ತೀವ್ರವಾಗಿ ಹೋರಾಟ ಮಾಡಬೇಕು ಆಗುತ್ತೆ ಎಂದು ಎಚ್ಚರ ನೀಡಿದರು.
ಇದೇ ಸಂದರ್ಭದಲ್ಲಿ ಮತ್ತೊಬ್ಬ ಮುಖಂಡ ಲೋಕೇಶ್ ಅವರು ತಡವಾಗಿ ಬಂದು, ಗಡಿ ಬೇಡಿ ಯಲ್ಲಿ, ಸೋಮಶೇಖರ್ ರೆಡ್ಡಿ ಅವರ ಪದ್ಮಾವತಿ ಪ್ರಕರಣ,ಹತ್ಯೆ ಇನ್ನು ಕೆಲ ಇಂಜಿನಿಯರ್ ಗಳ ಹತ್ಯಗಳು, ಕೆಲವರು ಮಾನಸಿಕ ವಾಗಿ ಉಚ್ಚರು ಆಗಿದ್ದಾರೆ ಎಂದು ವೇದಿಕೆ ಮೇಲೆ ಪಟ್ಟಿ ಹಿಡಿದು ಹೇಳಿದರು.
ಇಷ್ಟು ಹತ್ಯೆ ಗಳು ಆಗಿದ್ದರೆ ಪೊಲೀಸ್ ರು ಮೌನ ಯಾಕೆ ಲೋಕೇಶ್ ಹೇಳಿಕೆ ಮೇಲೆ ಸುಮೊಟೊ ಮಾಡಿಕೊಂಡು ತನಿಖೆ ಆರಂಭ ಮಾಡಬೇಕು, ವಾಸ್ತವ ಬಹಿರಂಗ ಆಗಬೇಕು ಆಗಿದೆ. ಇಲ್ಲ ದಿದ್ದರೆ ಪೊಲೀಸ್ ವ್ಯವಸ್ಥೆ ಮೇಲೆ 0 % ನಂಬಿಕೆ ಆಗುತ್ತೆ..
ಈ ಸಂದರ್ಭದಲ್ಲಿ ಸಮುದಾಯದ ಹಿರಿಯ ಮುಖಂಡರಾದ ಜಗನ್ (ಚಿನ್ನಯ್ಯಪ್ಪ )ರಾಮ್ ಪ್ರಸಾದ್ ಮುದಿ ಮಲ್ಲಯ್ಯ ಲೋಕೇಶ್ ಎಲ್ ಮಾರಣ್ಣ ಸಂಗನಕಲ್ಲು ವಿಜಯ್ ಸೇರಿದಂತೆ ಅನೇಕ ಜನರಿದ್ದರು