
ಬಳ್ಳಾರಿ (21) ನಗರದ ಮೋಕಾ ಮೂಲದ ಮುದ್ದುನಗೌಡ ಮತ್ತು ಮನೋಜ್ ಕುಮಾರ್ ಇವರು ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದ್ದಾರೆ ಎಂದು, 3.ಬಿ. ಬದಲಾಗಿ, 2ಎ ಜಾತಿ ಪ್ರಮಾಣ ಪತ್ರಪಡೆದಿದ್ದಾರೆ ಎಂದು .ಎo.ಮಂಜುನಾಥ್ ಅನ್ನವ ಅವರು ದೂರು ನೀಡಿದ್ದೀರು.
ಸಹಾಯಕ ಆಯುಕ್ತರು, ಹಾಗೂ ಉಪವಿಭಾಗದ ದಂಡಾಧಿಕಾರಿಗಳು ಬಳ್ಳಾರಿ
ಪಿ. ಪ್ರಮೋದ್ ಇವರು ಪರಿಶೀಲನೆ ಮಾಡಿದ್ದಾರೆ.
ಮುದ್ದನಗೌಡ ಮತ್ತು ಮನೋಜ್ ಕುಮಾರ್ ಇವರು ಸುಳ್ಳು ಜಾತಿ ಪ್ರಮಾಣ ಪತ್ರ 3ಬಿ ಬದಲಾಗಿ 2ಎ ಜಾತಿ ಪ್ರಮಾಣ ಪತ್ರದ
ಮುದ್ದನಗೌಡ ಮತ್ತು ಮನೋಜ್ ಕುಮಾರ್ ಇವರು ಸುಳ್ಳು ಜಾತಿ ಪ್ರಮಾಣ ಪತ್ರ 3ಬಿ ಬದಲಾಗಿ 2ಎ ಜಾತಿ ಪ್ರಮಾಣ ಪತ್ರ ಪಡೆದು ಹಾಗು ಕಡಿಮೆ ಆದಾಯವನ್ನು ತೋರಿಸಿ ಮತ್ತು ಎರಡು ಚುನಾವಣೆ ಚೀಟಿಯನ್ನು ವಡೆದು ಸರ್ಕಾರದ ಸೌಲಭ್ಯಗಳನ್ನು ಪಡೆದು ಸರ್ಕಾರಕ್ಕೆ ವಂಚನೆ ಮಾಡಿ ರಾಯಚೂರಿನಲ್ಲಿ ಮೆಡಿಕಲ್ ಸೀಟ್ ಪಡೆದಿದ್ದು ಇದರ ಬಗ್ಗೆ ತನಿಖೆಯನ್ನು ಮಾಡಿ ಸೂಕ್ತ ಕ್ರಮ ಜರುಗಿಸುವ ಬಗ್ಗೆ ಈ ಕಾರ್ಯಾಲಯಕ್ಕೆ ಮನವಿಯನ್ನು ಸಲ್ಲಿಸಿರುತ್ತಾರೆ.
ಇದನ್ನು ತಹಶೀಲ್ದಾರರು,ಬಳ್ಳಾರಿ ಇವರಿಗೆ ಸಂಪೂರ್ಣ ಪರಿಶೀಲನೆ ಮಾಡಿ ವರದಿ ಸಲ್ಲಿಸಲು ಸೂಚಿಸಲಾಗಿತ್ತು.
ಅದರಂತೆ ಸದರಿ ವಿಷಯದ ಕುರಿತು ವಿಚಾರಣೆ "*ಮೋಕಾ ಗ್ರಾಮದ ಮನೋಜ್ ಕುಮಾರ್ ತಂದೆ ಮುದ್ದನಗೌಡ ಇವರು ವರ್ಗಾವಣೆ ಪತ್ರದಲ್ಲಿ "ಬಣಜಿಗ" ಎಂದು ಇರುತ್ತದೆ."*
ಹಾಗಾಗಿ ಮುದ್ದನಗೌಡ ಇವರು ಹಾಗೂ ತಂದೆಯವರ ವರ್ಗಾವಣೆ ಪತ್ರದಲ್ಲಿ ವ್ಯತ್ಯಾಸ ಇರುವುದರಿಂದ
ತಂದೆ ಯವರ ವರ್ಗಾವಣ ಪತ್ರ ಕೇಳಲಾಗಿದ್ದು ಹಾಗೂ ಸದರಿಯವರುಗಳ ಮಕ್ಕಳ (TC) ಯನ್ನು ಕೇಳಲಾಗಿದ್ದು.
ಸದರಿ (TC) ಯಲ್ಲಿಯು ಸಹ ಜಾತಿ ಲಿಂಗಾಯಿತ ಎಂದು ಇರುತ್ತದೆ, ಹಾಗೂ ಸದರಿಯವರು ಶವಸಂಸ್ಕಾರ ಪದ್ಧತಿಯನು ವೀರಶೈವ ಲಿಂಗಾಯಿತ ಜಾತಿ ಅಂತ್ಯಸಂಸ್ಕಾರ ಪದ್ಧತಿ ಇರುತ್ತದೆ.
ಮುದ್ದನಗೌಡ ಅವರ ಸಹೋದರರು ಹಾಗೂ ಸಹೋದರರ ಮಕ್ಕಳ ಜಾತಿ ಪ್ರಮಾಣ ಪತ್ರ ಎಲ್ಲವೂ ವೀರಶೈವ ಲಿಂಗಾಯಿತ ಎಂದು ಇರುವುದು ಕಂಡು ಬಂದಿರುತ್ತದೆ.
ಆದ್ದರಿಂದ ಸದರಿಯವರು "ವೀರಶೈವ ಲಿಂಗಾಯಿತ ಜಾತಿಗೆ" ಸೇರಿರುತ್ತಾರೆಂದು ತಹಶೀಲ್ದಾರರು ವರದಿಯನ್ನು ಸಲ್ಲಿಸಿರುತ್ತಾರೆ.
ಮೇಲ್ಕಂಡ ತಹಶೀಲ್ದಾರರು, ಬಳ್ಳಾರಿ ಕಂದಾಯ ನಿರೀಕ್ಷಕರು, ಗ್ರಾಮ ಆಡಳಿತಾಧಿಕಾರಿಗಳು, ಇವರ ಮಹಜರು, ಹೇಳಿಕೆ ವರದಿಯ ಪ್ರಕಾರ ಸದರಿಯವರು ವೀರಶೈವಲಿಂಗಾಯತ ಜಾತಿಗೆ ಸೇರಿದವರೆಂದು ಮೇಲ್ನೋಟಕ್ಕೆ ಕಂಡು ಬಂದಿರುತ್ತದೆ.
ಆದ್ದರಿಂದ ಈ ಕೆಳಕಂಡಂತೆ ಆದೇಶಿಸಿದೆ.
ಆದೇಶ
20.5.2.2.2.6/06/2024-25
23/12/2024.
ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ, ಶ್ರೀ ಕೆ.ಎಂ. ಮನೋಜಕುಮರ್ ತಂದೆ ಮುದ್ದನಗೌಡ ಇವರು ಪಡೆದಿರುವ 2ಎ ಜಾತಿ ಪ್ರಮಾಣ ಪತ್ರ ಸಂಖ್ಯೆ ಆರ್.ಡಿಸಂಖ್ಯೆ-5028181907854 ಮತ್ತು ಆರ್.ಡಿಸಂಖ್ಯೆ-0038181285146 ರ ಪ್ರಮಾಣ ಪತ್ರಗಳನ್ನು ಈ ಹಂತದಲ್ಲಿಯೇ “ತಿರಸ್ಕೃತಗೊಳಿಸಿ" ಆದೇಶಿಸಿದ್ದಾರೆ.
ಜೆಲ್ಲೆಯಲ್ಲಿ ಬಹುತೇಕ ವೀರಶೈವ ಲಿಂಗಾಯತ ಸಮಾಜ ದಲ್ಲಿ ಇಂತಹ ಜಾತಿ ಪ್ರಮಾಣ ಪತ್ರ ಗಳು ಪಡೆದಿದ್ದಾರೆ, ಎಂದು ಬಹಿರಂಗ ವಾಗಿದೆ. ಇನ್ನು ಕೆಲವರು, ಪರಶಿಷ್ಟ ಜಾತಿ ಪ್ರಮಾಣ ಪತ್ರ ಪಡೆದಿದ್ದು ಬಯಲು ಗೆ ಬಂದಿದೆ. ಇದು ಸೂಕ್ತ ತನಿಖೆ ಆಗಬೇಕು ಆಗಿದೆ. ವಂಚನೆ ಮಾಡಿ ಸೌಲಭ್ಯ ಗಳು ಪಡೆದಿದ್ದು ಸಾಬೀತು ಆದ್ರೆ ತುಂಬಾ ಅಪಾಯ ಇರುತ್ತದೆ ಎಂದು ಅಧಿಕಾರಿಗಳು ಹೇಳುತಾರೆ. ಸುಳ್ಳು ಜಾತಿ ಪ್ರಮಾಣ ಪತ್ರಗಳ ಬಿಸಿ ಆಡಳಿತ ಕೇ ತಲೆ ನೋವು ಆಗಿದೆ. ಇದು ದೊಡ್ಡ ಮಟ್ಟದಲ್ಲಿ ಹೋರಾಟ ಗಳು ಆಗುವ ಸಾಧ್ಯತೆ ಇದೆ.

