ಕ್ಲಬ್,ಪಬ್ ,ಗಳು ಬೇಡ ನವಬೃಂದಾವನ ಸಮೀಪ ದಲ್ಲಿ.
ಮನರಂಜನಾ ಪಾರ್ಕ್,
ವಾಣಿಜ್ಯ ಹೆಸರಿನಲ್ಲಿ ಕ್ಲಬ್, ರೆಸಾರ್ಟ್ ಸ್ಥಾಪಿಸಲು
ಅನುಮತಿ ನೀಡಬಾರದು-ರಾಜಶೇಖರ ಹಿಟ್ನಾಳ್
ಹೊಸಪೇಟೆ:
ಸಚಿವ ಆನಂದ್ ಸಿಂಗ್ ಅವರು ಹಿಂದೂಗಳಿಗೆ ಅತ್ಯಂತ ಪವಿತ್ರ ಸ್ಥಳವಾಗಿರುವ ನವವೃಂದಾವನದ ಬಳಿ ಮನರಂಜನಾ ಪಾರ್ಕ್, ವಾಣಿಜ್ಯ ಉದ್ದೇಶದ ಹೆಸರಿನಲ್ಲಿ ಕ್ಲಬ್, ರೆಸಾರ್ಟ್ ಸ್ಥಾಪಿಸಲು
ಮುಂದಾಗಿದ್ದು ಸರಕಾರ ಅನುಮತಿ ನೀಡಬಾರದು ಎಂದು ಕಾಂಗ್ರೆಸ್ ಮುಖಂಡ ರಾಜಶೇಖರ್ ಹಿಟ್ನಾಳ್ ಒತ್ತಾಯಿಸಿದರು.
ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಚಿವ ಆನಂದ್ ಸಿಂಗ್ ಅವರ ಕುಟುಂಬಸ್ಥರ ಹೆಸರಿನಲ್ಲಿರುವ ೫೧
ಎಕರೆ ಜಮೀನಿನ ಬಳಿಯೇ ಹಿಂದೂಗಳ ಪವಿತ್ರ ಸ್ಥಳವಾದ ನವಬೃಂದಾವನ ಕ್ಷೇತ್ರವಿದೆ. ನಿತ್ಯ ರಾಜ್ಯ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಇದನ್ನೇ ಬಂಡವಾಳವನ್ನಾಗಿಸಿಕೊಂಡು ವ್ಯವಹಾರ ನಡೆಸಲು ಮುಂದಾಗಿದ್ದು ಆ ಮೂಲಕ ಹಿಂದೂಗಳ
ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ಪವಿತ್ರ
ಸ್ಥಳದಲ್ಲಿ ಸಚಿವರಿಗೆ ಕ್ಲಬ್, ರೆಸಾರ್ಟ್ ತೆಗೆಯಲು ಸರಕಾರ ಅವಕಾಶ ನೀಡಬಾರದು ಎಂದು ಆಗ್ರಹಿಸಿದರು.
ಸಚಿವ ಆನಂದ್ ಸಿಂಗ್ ಭಾವನಾತ್ಮಕವಾಗಿ ತಮ್ಮ ಭಾಷಣಗಳಲ್ಲಿ
ದೇವರ ಬಗ್ಗೆ ಮಾತನಾಡುತ್ತಾರೆ. ಆದರೆ ಇಂತಹ
ಕಾರ್ಯಗಳಿಗೆ ಕೈಹಾಕುವ ಮೂಲಕ ಅವರ ಕಾರ್ಯಗಳ ಮನಃಸ್ಥಿತಿ ತೋರಿಸುತ್ತದೆ. ಚುನಾವಣೆ ಕಾವಿನಲ್ಲಿ ಯಾರು ಕೇಳಿವುದಿಲ್ಲ ಎಂಬ ಮನೋಭಾವದಲ್ಲಿ ಅನುಮತಿ ಪಡೆಯಲು
ಮುಂದಾಗಿದ್ದು ರಾಜ್ಯ ಸರಕಾರ ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದು. ಹಿಂದೂಗಳ ಭಕ್ತರ ಭಾವನೆಗೆ ಕೈಹಾಕಬಾರದು. ಅವರ ಮಾತುಗಳು ಭೂತದ ಬಾಯಲ್ಲಿ ಭಗವದ್ಗೀತೆಯಂತೆ ಆಗಿದೆ ಎಂದು ಕುಟುಕಿದರು.
ನಗರದ ಸಾಯಿಬಾಬಾ ದೇವಸ್ಥಾನದ ಕಾಂಪೌAಡ್ ಗೋಡೆ ಸರಕಾರಿ ಜಾಗದಲ್ಲಿದೆ ಎಂದು ಕೆಡವಿದ್ದರು. ಆದರೆ ಸಚಿವ ಆನಂದ್ ಸಿಂಗ್ ಅವರ ಮನೆ ಸರಕಾರಿ ಜಾಗದಲ್ಲಿದೆ ಎಂದು ನಗರಸಭೆ ಸದಸ್ಯರೊಬ್ಬರು ದೂರು ನೀಡಿದ್ದರು. ಅಲ್ಲದೇ ಒಂದು ವೇಳೆ
ಸರಕಾರಿ ಜಾಗದಲ್ಲಿ ಇರುವುದೇ ನಿಜವಾದರೆ ಸಚಿವರು ರಾಜೀನಾಮೆ ನೀಡುವ ಸವಾಲು ಹಾಕಿದ್ದರು. ಆದರೆ ಅವರ ಮನೆ ಸರಕಾರಿ
ಜಾಗದಲ್ಲಿ, ದೇವಸ್ಥಾನದ ಕಾಂಪೌಂಡ್ ಇರದಂತೆ ಮಾಡಿದ್ದಾರೆ ಎಂದು ದೂರಿದರು.
ನವಬೃಂದಾವನ ಸಮೀಪದಲ್ಲಿ ಮನರಂಜನಾ ಪಾರ್ಕ್, ವಾಣಿಜ್ಯ ಉದ್ದೇಶದ ಹೆಸರಿನಲ್ಲಿ ಕ್ಲಬ್, ರೆಸಾರ್ಟ್ ಸ್ಥಾಪಿಸಲು ಸರಕಾರ ಅನುಮತಿ ನೀಡಲು ಮುಂದಾದರೆ ಹೊಸಪೇಟೆ ಬಂದ್ ಮಾಡುವುದು ಸೇರಿದಂತೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು. ಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ
ವಿನಾಯಕ ಶೆಟ್ಟರ್, ಮುಖಂಡರಾದ ಗುಜ್ಜಲ್ ನಾಗರಾಜ್, ರಾಮಕೃಷ್ಣ, ನಿಂಬಗಲ್, ವೀರಭದ್ರ ನಾಯಕ ಇತರರಿದ್ದರು.