This is the title of the web page
This is the title of the web page

Please assign a menu to the primary menu location under menu

State

ಕಾಂಗ್ರೆಸ್ಸಿನ ನಾಲ್ಕು ಅಭ್ಯರ್ಥಿಗಳು ನಾಮನೇಷನ್ !!

ಕಾಂಗ್ರೆಸ್ಸಿನ ನಾಲ್ಕು ಅಭ್ಯರ್ಥಿಗಳು ನಾಮನೇಷನ್ !!

ಕಾಂಗ್ರೆಸ್ಸಿನ ನಾಲ್ಕು ಅಭ್ಯರ್ಥಿಗಳು ನಾಮನೇಷನ್ !!

ಬಳ್ಳಾರಿ : ಕಾಂಗ್ರೆಸ್ ಅಭ್ಯರ್ಥಿ ಗಳ ಪಟ್ಟಿ ಸಿದ್ದವಾಗಿದ್ದು, ನಾಲ್ಕು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಸೂಚನೆ ನೀಡಿದ್ದಾರೆ ಎನ್ನುವ ಮಾಹಿತಿ ಬಹಿರಂಗಗೊಂಡಿದೆ.

ಕಾಂಗ್ರೆಸ್ ಪಕ್ಷಕ್ಕೆ ದುಡಿದ ಕಷ್ಟ ಕಾಲದಲ್ಲಿ ಪಕ್ಷದ ಪರವಾಗಿ ನಿಂತಿರುವ ಮಾನದಂಡಗಳನ್ನು ಅನುಸರಿಸಿ ಟಿಕೆಟ್‌ ನೀಡುವ ಸೂತ್ರಗಳನ್ನು ಮಾಡಲಾಗುತ್ತದೆ ಎಂದು ತಿಳಿದು ಬಂದಿದೆ.

ಪ್ರಸ್ತುತ ಕಾಂಗ್ರೆಸ್ ಟಿಕೆಟ್ ಕೆಆರ್’ಪಿಪಿ.ಅಭ್ಯರ್ಥಿಯ ಫೈನಲ್ ಮ್ಯಾಚ್ ಗೆ ಲಿಂಕ್ ಡಾಕ್ಯುಮೇಂಟ್ ಇದೆ.

ಈಗಾಗಲೇ ಬಿಜೆಪಿಯಲ್ಲಿ ಗೊಂದಲವಿದ್ದು, ಕೊನೆಯ ಕ್ಷಣದಲ್ಲಿ ಬಿಜೆಪಿ ಅಲಯನ್ಸ್ ಅಥವಾ ಬಿಜೆಪಿ ಅಭ್ಯರ್ಥಿ ಕೆಆರ್’ಪಿಪಿ ಕಡೆ ಸೇರುವ ಸಾಧ್ಯತೆಗಳು ಇರಬಹುದು ಎಂದು ಅಂದಾಜಿಸಲಾಗಿದೆ.

ಇದರಿಂದ ಚುನಾವಣೆ ಪ್ಲಾನ್ ಕಾಂಗ್ರೆಸ್ ಬೇರೆ ರೀತಿಯಲ್ಲಿ ಮಾಡಿದೆ ಎನ್ನುತ್ತಾರೆ.

ಈ ಬಾರಿ ಕಾಂಗ್ರೆಸ್ ಟಿಕೆಟ್ ಕೂಡ ಜನರ ಮದ್ಯದಲ್ಲಿ ಇರುವ ವ್ಯಕ್ತಿಗೆ ನೀಡುವ ಸಾಧ್ಯತೆಗಳು ಇದ್ದಾವೆ.

ಆಡಂಬರ, ಶ್ರೀಮಂತರಿಗೆ, ದರ್ಪ, ದರ್ಬಾರ್ ತೋರುವ ವ್ಯಕ್ರಿಗಳಿಗೆ ಮಣೆ ಹಾಕುವ ಸಾಧ್ಯತೆ ಕಡಿಮೆ ಇದೆ ಎಂದು ಹೇಳಲಾಗುತ್ತಿದೆ.

ಈಗಾಗಲೇ ನಗರದಲ್ಲಿ ಒಂದು ಬಣ ಅಂತಹ ಅಭ್ಯರ್ಥಿಗೆ ಟಿಕೆಟ್ ಕೊಟ್ಟರೆ ನಾವು ಕೆಲಸ ಮಾಡೋದು ಇಲ್ಲವೆಂದು ಕಿವಿ ಸಂದೇಶ ರವಾನೆ ಮಾಡಿದ್ದಾರೆ.

ಸಾಧಾರಣವಾಗಿ ಜನರ ಮದ್ಯದಲ್ಲಿ ಇರುವ ನಾಯಕರು ಬೇಕು.ಗೆಟ್, ಬಾಗಿಲುಗಳು ಕಾಯುವ ಅಭ್ಯರ್ಥಿಗಳು ಬೇಡವೆಂದು ಹೈ ಕಮಾಂಡ್ ಗೆ ಮನವರಿಕೆ ಮಾಡಿದ್ದಾರೆ.

ಕೆಲ ದೊಡ್ಡ ಮನೆಯವರು ಸಕ್ರಿಯ ರಾಜಕಾರಣಿಗಳು ಇಲ್ಲವೆಂದು ಕಡ್ಡಿ ಅಡಿಸುವ ತಂತ್ರಗಾರಿಕೆಯನ್ನು ಮಾಡುವ ಮೂಲಕ ರಾಜಕಾರಣ ಮಾಡುತ್ತಾರೆ ಅನ್ನುವ ಮಾಹಿತಿಯನ್ನು ಕೂಡ ಮುಟ್ಟಿಸಿದ್ದಾರೆ.

ಅದಕ್ಕೆ ಈ ಬಾರಿ ಅಂತಹ ಕುತಂತ್ರಗಳು ಆಗದಂತೆ ಎಚ್ಚರ ವಹಿಸಿದ್ದಾರೆ ಎಂದು ತಿಳಿದು ಬಂದಿದೆ.

*ರಾಜಕೀಯದಲ್ಲಿ ಕಾರ್ಯಕರ್ತರಿಗೆ ಸಂಕಟ* : *ಎಲ್ಲಿ ಗುರುತಿಸಿಕೊಳ್ಳಬೇಕು ಅನ್ನುವ ಸಂಕಟ!*

ಬಳ್ಳಾರಿ ನಗರದಲ್ಲಿ ದಿವಾಕರ ಬಾಬು, ಅಲ್ಲಂ ವೀರಭದ್ರಪ್ಪಗೆ ಕಾಂಗ್ರೆಸ್’ನಲ್ಲಿ ಹಿಡಿತ ಇದೆ.

ಆಂಜನೇಯಲುಗೆ ಹೈ ಕಮಾಂಡ್ ಕೃಪೆಯಿದೆ, ರೆಡ್ಡಿಗಳ ಅಳ್ವಿಕೆಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ನಿಂತು ಹೋರಾಟ ಮಾಡಿದ ದಿಟ್ಟ ನಾಯಕರು.

ಇನ್ನೂ ನಾರಾ ಭರತ್ ರೆಡ್ಡಿ ರಾಜಕೀಯದಲ್ಲಿ ಕಿರಿಯರು, ಅವರ ತಂದೆ ಸೂರ್ಯ ನಾರಾಯಣ ರೆಡ್ಡಿ ರಾಜಕೀಯದ ಅನುಭವಿಗಳು ಇದ್ದಾರೆ ಹಾಗೂ ಮಾಜಿ ಮುಖ್ಯಮಂತ್ರಿಗಳ ಕಾರ್ಯದರ್ಶಿ ಆಗಿದ್ದರು.

ಭರತ್ ರೆಡ್ಡಿ ಪರಿಚಯ ಮಾಡಿಕೊಳ್ಳುವ ಮೂಲಕ ಗಿಫ್ಟ್ ಹಂಚಿಕೆ ಮಾಡಿದ್ದಾರೆ,ಅದು ಎಷ್ಟು ವರ್ಕ್ ಔಟ್ ಅಗಿದೆ ಅನ್ನುವ ಲೆಕ್ಕಾಚಾರ ಸಿಕ್ಕಿಲ್ಲ.

ಜನರ ಮನಸ್ಸಿನಲ್ಲಿ ಇದಿಯ ಅನ್ನುವುದು ಪ್ರಶ್ನೆ ಎದ್ದಿದೆ.

ಭರತ್ ರೆಡ್ಡಿ ಅವರ ಸಂಬಂಧಿಗಳು ಕೂಡ ವಿಜಯನಗರ ಜಿಲ್ಲೆಯಲ್ಲಿ ಬಿಜೆಪಿ ಪ್ರಭಾವಿ ರಾಜಕಾರಣಿಗಳು.

ಭರತ್ ರೆಡ್ಡಿಗೆ ಟಿಕೆಟ್ ಕೊನೆಯವರೆಗೆ ಅಂದರೆ ನಾಮ ಪತ್ರ ಸಲ್ಲಿಕೆ ಆಗುವವರೆಗೆ ಹಿಂಪಡೆಯುವವರೆಗೆ ಗೊಂದಲ ಇರುತ್ತದೆ.

ಕೊನೆಯ ಹಂತದಲ್ಲಿ ದಿವಾಕರ ಬಾಬು ಆಥವಾ ಭರತ್ ಮದ್ಯದಲ್ಲಿ ಇರುತ್ತದೆ ಅನ್ನುತ್ತಾರೆ.

ಈಗಾಗಲೇ ಇಬ್ಬರಲ್ಲಿ ಯಾರಿಗೆ ಬರಲಿ ಅನ್ನುವ ಸಂದೇಶ ರವಾನೆ ಮಾಡಿದ್ದಾರೆ, ಈ ಹಿನ್ನೆಲೆಯಲ್ಲಿ 100% ಮಾಜಿ ಸಚಿವ ದಿವಾಕರ ಬಾಬು ಅನ್ನುವ ಸಂದೇಶ ಕೇಳಿಬರುತ್ತದೆ.

ನಾರಾ ಸೂರ್ಯನಾರಾಯಣ ರೆಡ್ಡಿಯವರಿಗೆ (ಭರತ್) ದಿವಾಕರ ಬಾಬು ಗೆಲ್ಲಿಸುವ ಜವಾಬ್ದಾರಿ ನೀಡಿ ಪಕ್ಷದಲ್ಲಿ ದೊಡ್ಡ ಸ್ಥಾನವನ್ನು ನೀಡಬಹುದು ಎಂದು ಕಾರ್ಯಕರ್ತರಲ್ಲಿ ಕೇಳಿಬರುತ್ತದೆ.ಭರತ್ ನಡೆ ಕೂಡ ಅನುಮಾಸ್ಪದ ಕಾಣುತ್ತದೆ ಅನ್ನುವ ಲೆಕ್ಕಾಚಾರ ಗಳು ಇದ್ದಾವೆ ಎಂದು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತದೆ.

ಈಬಾರಿ ಭರತ್ ಹೈ ಕಮಾಂಡ್ ದಾರಿಯಲ್ಲಿ ನಡೆಯಬೇಕು ಇಲ್ಲದಿದ್ದರೆ ಕಂಪನಿ ಬದಲು ಮಾಡಬೇಕು ಅಗಿರವ ವಾತಾವರಣ ಸೃಷ್ಟಿ ಅಗಿದೆ.

(ಕೆ.ಬಜಾರಪ್ಪ,ಕಲ್ಯಾಣ ಕರ್ನಾಟಕ ಚೀಫ್ ಬ್ಯೂರೋ.)


News 9 Today

Leave a Reply