*ಅಲ್ಲo ಕುಟುಂಬದ ಅವರ ಮೇಲೆ ಭೂಮಿ ಕಬಳಿಕೆ ಆರೋಪ,ಅಲ್ಲo ಪ್ರಶಾಂತ್ ದಿಂದ ಜೀವ ಬೆದಿರಿಕೆಯ ಆರೋಪ.*
ಬಳ್ಳಾರಿ(5) ಬಳ್ಳಾರಿ ತಾಲೂಕ ಮೋಕ ಹೋಬಳಿಯ ಹಿರೇಹಡ್ಲಿಗಿ ಗ್ರಾಮದ ಸರ್ವೇ ನಂಬರ್ 285 ರಲ್ಲಿ 18 ಎಕರೆ 28 ಸೆಂಟ್ಸು ಭೂಮಿ ಇರುತ್ತದೆ,ಈ ಭೂಮಿಗೆ ಮೂಲತಃ ಕರ್ನಾಟಕ ಸರ್ಕಾರ ಎಂದು ಪ್ರಸ್ತುತ ಪಹಣಿಯಲ್ಲಿ ತೋರಿಸುತ್ತದೆ. ಮತ್ತೊಂದು ಕಾಲಮ್ ನಲ್ಲಿ ವ್ಯವಸಾಯಗಾರನ ಹೆಸರು ಕಾಲಂನಲ್ಲಿ ಅಲ್ಲಂ ಬಸವರಾಜು ಎಂದು ಇರುತ್ತದೆ ಆದರೆ ಈ ಭೂಮಿಯಲ್ಲಿ ಐದು ಎಕರೆ ಮೇಲೆ ಪೆಟ್ಟು ಮೋಕಾ ಗ್ರಾಮದ ಮಲ್ಲಿಕಾರ್ಜುನ ಗೌಡ ಹಲವಾರು ವರ್ಷ ಗಳ ದಿಂದ ಉಳಿಮೆ ಮಾಡುತಾ ಇರುತಾರೆ.
ಈ ಭೂಮಿ 1968ರಲ್ಲಿ ಬರಿಕಾರ ಇನಾಮಿ ಎಂದು ದಾಖಲೆಗಳು ದಾಖಲೆಗಳು ಇದ್ದಾವೆ ಎಂದು ತಿಳಿದು ಬಂದಿದೆ, ಆದರೆ 18 ಎಕರೆ 28 ಸೆಂಟ್ಸ್ ನಲ್ಲಿ 13 ಎಕರೆ ಮೇಲ್ಪಟ್ಟು ಚಿನ್ನ ಮಾರಣ್ಣ ಬಸರಕೊಡು ಅನ್ನುವರಿಗೆ ಅಲ್ಲo ವಂಶಸ್ಥರು ಗುತ್ತಿಗೆ ನೀಡಿದ್ದಾರೆ ಎಂದು ಕಾನೂನು ವಿರುದ್ಧ ವಾಗಿ ಕುಟ್ಟಿ ದಾಖಲೆ ಗಳು ಮಾಡಿಸಿ ಕೊಂಡು, ನಮ್ಮ 5ಎಕರೆ ಭೂಮಿ ಬಿಡುವಂತೆ ಅಲ್ಲo ಪ್ರಶಾಂತ್,ದಬ್ಬಾಳಿಕೆ ಮಾಡುತಾರೆ ಎಂದು, ಮೋಕಾ ಗ್ರಾಮದ ಕೆ. ಮಲ್ಲಿಕಾರ್ಜುನ ಗೌಡ ಶನಿವಾರ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ತಿಳಿಸಿದ್ದಾರೆ.
ಪದೇ ಪದೇ ಕಿರುಕುಳ ಆಗುತಾ ಇದೇ ಠಾಣೆ ಯಲ್ಲಿ ದೂರು ಕೊಟ್ಟರು ಅಧಿಕಾರಿಗಳು ಕ್ರಮ ಮಾಡುತಾ ಇಲ್ಲ ವೆಂದು, ಆರೋಪ ಮಾಡಿದ್ದಾರೆ. ದಾಖಲೆ ಗಳು ಇದ್ದಾವೆ ನ್ಯಾಯ ಕೊಡಿಸಿ ಎಂದು ಮನವಿ ಮಾಡಿದ್ದಾರೆ.