ಜನರಿಗೆ ಸೇವೆಯನ್ನು ಒದಗಿಸುವ ಭಾಗ್ಯ,ಸಿಕ್ಕಿದೆ. ಜನರು ಬೇಡಿಕೆ ಇಟ್ಟುಕೊಡಲೇ ಲಕ್ಷಾಂತರು ಗಳ ಸೇತುವೆ ನಿರ್ಮಾಣಕ್ಕೆ ಆದೇಶ.!! ಮುಂದೆ ಇನ್ನೂ ತುಂಬಾ ಕೆಲಸಗಳನ್ನು ಮಾಡುವ ಕನಸು ಇದೆ.ಸಚಿವ ನಾಗೇಂದ್ರ. ಬಳ್ಳಾರಿ ವಿಧಾನ ಸಭೆ ಕದನದಲ್ಲಿ ದಿಗ್ಗಜರ ಮುಂದೆ ಜನರ ಆಶೀರ್ವಾದ ಪಡೆದು ಕಾಂಗ್ರೆಸ್‌ನ ಸಿದ್ದ ರಾಮಯ್ಯ ಸರ್ಕಾರ ದಲ್ಲಿ ಸಚಿವ ಸ್ಥಾನವನ್ನು ಪಡೆದು,ಅಭಿವೃದ್ಧಿ ವಿಚಾರದಲ್ಲಿ ಹಗಲು ರಾತ್ರಿ ರಾಜ್ಯವನ್ನು ಸುತ್ತಾಡಿ ಕೇಂದ್ರ ಮಟ್ಟದಲ್ಲಿ ಬೆಳೆದು ನಿಲ್ಲುವ ಸ್ಥಾಯಿ ಗೆ ಹೆಜ್ಜೆ ಇಟ್ಟಿದ್ದಾರೆ. ಇದರ ಮದ್ಯದಲ್ಲಿ ಜಿಲ್ಲೆಯ ಉಸ್ತುವಾರಿ ಯಾಗಿ ಕೂಡ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಬಿಡುವು ಇಲ್ಲದೆ ಹಳ್ಳಿಗಳನ್ನು ಸುತ್ತುತ್ತಾ ರಾತ್ರಿ8ಗಂಟೆ ಅದರೂ ಜನರ ಮದ್ಯದಲ್ಲಿ ಹಳ್ಳಿಗಳಲ್ಲಿ ಇರುತ್ತಾರೆ.ಶನಿವಾರ ಬೆಳಿಗ್ಗೆ ಯಿಂದ ಹತ್ತಾರು ಹಳ್ಳಿಗಳಲ್ಲಿ ಜನರ ಸಮಸ್ಯೆಗಳನ್ನು ಕೇಳುತ್ತಾ ಸಂಬಂಧಿಸಿದ ಅಧಿಕಾರಿಗಳ ಗಳನ್ನು ಸ್ಥಳದಲ್ಲಿ ಇಟ್ಟುಕೊಂಡು,ಪರಿಹಾರ ಮಾಡುತ್ತ ಬಂದಿದ್ದರು. ರಾತ್ರಿ 7 .ಗಂಟೆಗೆ ಆಂದ್ರಾಳ್ ಬೊಬ್ಬಕುಂಟ ಹೆದ್ದಾರಿ ಮಾರ್ಗ ಹೊರಡುತ್ತಾ ಇದ್ದರು ಅದೆ ಸಮಯದಲ್ಲಿ ಅ ಭಾಗದಲ್ಲಿ ಇರುವ ನೂರಾರು ಜನರು ಹೆದ್ದಾರಿ ಯಲ್ಲಿ ನಿಂತು ಕೊಂಡಿದ್ದರು, ತಕ್ಷಣವೇ ಸಚಿವರ ಕಾನ್ವಾಯ್ ಅವರ ಬಳಿ ನಿಂತು ಕೊಂಡಿತ್ತು ಸಚಿವರು ನೇರವಾಗಿ ಜನರ ಬಳಿ ಬಂದು ಸಮಸ್ಯೆ ಏನು ಎಂದು ಕೇಳಿದರು. ಈ ಭಾಗದಲ್ಲಿ ನೂತನವಾಗಿ ನಿರ್ಮಾಣ ಕೊಳ್ಳುತ್ತಿರುವ ಹೆದ್ದಾರಿ ರಸ್ತೆ ನಿರ್ಮಾಣ ದಲ್ಲಿ ನಮ್ಮ ಮೂರು ನಾಲ್ಕು ಗ್ರಾಮದ ಎತ್ತಿನ ಬೂದಿಹಾಳು,ಇಬ್ರಾಹಿಂಪುರ,ಬೊಬ್ಬಕುಂಟ ಅಂದ್ರಾಳ್ ವಿಜಯಪುರ ಕ್ಯಾಂಪ್ ಸಾರ್ವಜನಿಕರು, ವಾಹನಗಳು, ವಿದ್ಯಾರ್ಥಿಗಳು ಹೈವೆ ಮೇಲೆ ಓಡಾಡಲು ಕಷ್ಟ ಅಗುತ್ತದೆ,ಅಪಾಯ ಗಳು ಆಗುತ್ತವೆ,ಬ್ರಿಡ್ಜ್ (Flyover)ನಿರ್ಮಾಣ ಮಾಡಿಕೊಳ್ಳಲು,ಮನವಿ ಮಾಡಿದರು. ಇದಕ್ಕೆ ತಕ್ಷಣವೇ ಸಚಿವರು ಗುತ್ತಿಗೆದಾರರು ಗೆ ಪೋನ್ ಮುಖಾಂತರ ಮಾತನಾಡಿ ಬ್ರಿಡ್ಜ್ ಆಥವಾ ಅಂಡರ್ ಪಾಸ್ ಯಾವುದಾದರೂ ಒಂದು ಮಾಡಿಕೊಡಬೇಕು,ಜನರಿಗೆ ತೊಂದರೆ ಅಗಬಾರದು ಎಂದು ಆದೇಶ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು ಜನರಿಗೆ ಸೇವೆ ಮಾಡುವ ಭಾಗ್ಯ ಸಿಕ್ಕಿದೆ, ಮುಂದೆ ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಕನಸು ಕಟ್ಟಿಕೊಂಡಿದ್ದಿವಿ,ಜನರ ಆಶೀರ್ವಾದ ಇದೆ ಸಾದ ಇರುತ್ತದೆ,ಎಂದರು. ಈಸಂದರ್ಭದಲ್ಲಿ ಹರಿಕೆರಿ ಗಾದಿಲಿಂಗಪ್ಪ, ಅಂದ್ರಾಳ್ ,ಪಕ್ಕಿರಪ್ಪ, ಶಿವರಾಂ,ಗವಿ ಸಿದ್ದಪ್ಪ,ಗೌಡ,ಮತ್ತು ಗ್ರಾಮದ ಮುಖಂಡರು ನೂರಾರು ಜನರು ಇದ್ದರು.ಕೆ.ಬಜಾರಪ್ಪ ವರದಿಗಾರರು ಕಲ್ಯಾಣ ಕರ್ನಾಟಕ
News 9 Today > State > ಜನರಿಗೆ ಸೇವೆಯನ್ನು ಒದಗಿಸುವ ಭಾಗ್ಯ,ಸಿಕ್ಕಿದೆ. ಜನರು ಬೇಡಿಕೆ ಇಟ್ಟುಕೊಡಲೇ ಲಕ್ಷಾಂತರು ಗಳ ಸೇತುವೆ ನಿರ್ಮಾಣಕ್ಕೆ ಆದೇಶ.!! ಮುಂದೆ ಇನ್ನೂ ತುಂಬಾ ಕೆಲಸಗಳನ್ನು ಮಾಡುವ ಕನಸು ಇದೆ.ಸಚಿವ ನಾಗೇಂದ್ರ.
ಜನರಿಗೆ ಸೇವೆಯನ್ನು ಒದಗಿಸುವ ಭಾಗ್ಯ,ಸಿಕ್ಕಿದೆ. ಜನರು ಬೇಡಿಕೆ ಇಟ್ಟುಕೊಡಲೇ ಲಕ್ಷಾಂತರು ಗಳ ಸೇತುವೆ ನಿರ್ಮಾಣಕ್ಕೆ ಆದೇಶ.!! ಮುಂದೆ ಇನ್ನೂ ತುಂಬಾ ಕೆಲಸಗಳನ್ನು ಮಾಡುವ ಕನಸು ಇದೆ.ಸಚಿವ ನಾಗೇಂದ್ರ.
Bajarappa21/01/2024
posted on

More important news
ಲಾರಿ ಮಾಲೀಕರ ಮುಷ್ಕರ
12/04/2025
ಮೀನುಗಳ ಮಾರಣ ಹೋಮ -ಕಾರಣ ನಿಗೂಢ.!?
10/04/2025
ಬಳ್ಳಾರಿ ಯಲ್ಲಿ ಉದೋಗ ಮೇಳ.
05/04/2025