ನಿರಂತರ ಜ್ಯೋತಿಗೆ ವಿದ್ಯುತ್ ಸಂಪರ್ಕ ಕೊಡಲು ಹೋಗಿ ಓರ್ವ ಮೃತಿ
ದಮ್ಮುರು(24) ಗ್ರಾಮದಲ್ಲಿ ಕೃಷಿಲೈನ್ ನನ್ನು ನಿರಂತರ ಜ್ಯೊತಿ ಲೈನ್ ಗೆ ಸ್ವತಃ ಸಂಪರ್ಕ ಕೊಡಲು ಹೋದ ರೈತನೊಬ್ಬ ವಿದ್ಯುತ್ ಅಪಘಾತದಿಂದ ಸಾವನ್ನಪ್ಪಿರುತ್ತಾನೆ.
ಅದೇ ಗ್ರಾಮದ ವೀರಭದ್ರ 30.ವರ್ಷ ತಮ್ಮ ಸಂಬಂಧಿಗಳ ಹೊಲ ಕ್ಕೆ ನೀರು ಕಟ್ಟಲು ಹೋಗಿದ್ದು, ಐ.ಪಿ. ಸೆಟ್ ಗಳುಗೆ ಸರಬರಾಜು ಆಗುವ ವಿದ್ಯುತ್ ಸಮಯ ಕ್ಕೆ ಕಡತ ಗೊಂಡ ಮೇಲೆ ರೈತರು ಅನಧಿಕೃತ ವಾಗಿ ನಿರಂತರ ಜ್ಯೋತಿಗೆ ಸಂಪರ್ಕ ಮಾಡಿಕೊಂಡು ಪಂಪ್ ಸೆಟ್ ಗಳು ನಡೆಸುತ್ತಾರೆ.
ಇದು ಇಡೀ ಜಿಲ್ಲೆ ತುಂಬಾ ನಡೆಯುತ್ತದೆ.
ಗುರುವಾರ ಬೆಳಿಗ್ಗೆ.6 ಗಂಟೆಯ ಸಮಯದಲ್ಲಿ ವೀರಭದ್ರ ಕಂಬದ ಮೇಲೆ ಏರಿ ಸಂಪರ್ಕ ಪಡೆಯುತ್ತಿರುವ ಸಮಯದಲ್ಲಿ ಅಪಾಯ ಸಂಭವಿಸಿದೆ.
ದೇಹದಿಂದ ತಲೆ ಬೇರ್ಪಟ್ಟಿದೆ ನಿರಂತರ ಜ್ಯೋತಿ ಸಂಪರ್ಕದಿಂದ ಐಪಿ ಸೆಟ್ ಗಳು ನಡೆಸುವಂತೆ ಇಲ್ಲ.ಆದರೆ ಕೇಲ ರಾಜಕಾರಣಿಗಳ ಒತ್ತಡ ಕೆಲ ಕೆಇಬಿ ಅಧಿಕಾರಿಗಳು ದಿಗಲುಬಾಚಿ ವ್ಯವಸ್ಥೆ ಅನ್ನದಾತನ ಸಾವುಗಳಿಗೆ ಕಾರಣವಾಗುತ್ತಿದೆ.
ವಿದ್ಯುತ್ ಅಧಿಕಾರಿಗಳು ನಿರಂತರ ಜ್ಯೋತಿ ಗೆ ಸಂಪರ್ಕ ಬೇಡ ಎಂದು ಅಡ್ಡಿ ಪಡಿಸಿದರೆ ಅವರ ಮೇಲೆ ಹಲ್ಲೆ ಗಳು ಮಾಡುತ್ತಿದ್ದಾರೆ, ಇಲ್ಲ ನಾಲ್ಕು ಬಿಡಿಗಾಸುಗೆ ಅವರನ್ನು ಖರೀದಿ ಮಾಡುತ್ತಿದ್ದಾರೆ
ಇದರಿಂದ ಪ್ರತಿಯೊಂದು ಹಳ್ಳಿಗಳಲ್ಲಿ ಖಾಸಗಿ ಲೈನ್ ಮ್ಯಾನ್ ಗಳು,ಅನಧಿಕೃತ ವಿದ್ಯುತ್ ಸಂಪರ್ಕವನ್ನು ಮಾಡುವವರ ಸಂಖ್ಯೆ ಯಥೇಚ್ಛವಾಗಿದೆ.
ಅವರಿಗೆ ವಿದ್ಯುತ್ ಬಗ್ಗೆ ತಿಳುವಳಿಕೆ ಇರುವುದಿಲ್ಲ. ಅದರಿಂದ ತುಂಬಾ ಅಪಾಯ ಗಳು ಸಂಭವಿಸುತ್ತಿವೆ.
ಇದಕ್ಕೆ ಒಂದು ರೀತಿಯಲ್ಲಿ ವಿದ್ಯುತ್ ಅಧಿಕಾರಿಗಳು ಕೂಡ ಕಾರಣ ಎನ್ನಬಹುದು.
ಖಾಸಗಿ+ಇಲಾಖೆ,ಅವರು ಸೇರಿಕೊಂಡು ಪ್ರತಿ ಹಳ್ಳಿಯಲ್ಲಿ ವಿದ್ಯುತ್ ಕಾಮಗಾರಿ ಗಳನ್ನು ಅಕ್ರಮ ಸಕ್ರಮ ದಲ್ಲಿ ಮಾಡುತ್ತಿದ್ದಾರೆ.
ಅದಕ್ಕೆ ಪ್ರತಿ ಹಳ್ಳಿಯಲ್ಲಿ ಖಾಸಗಿ ಅವರು ತುಂಬಾ ಇರುತ್ತಾರೆ.
ಪ್ರತಿ ಸಣ್ಣ ಕೆಲಸಕ್ಕೆ ಲೈನ್ ಮ್ಯಾನ್ ಗಳು ಹೋಗಿ ಕೆಲಸಮಾಡಲು ಸಾಧ್ಯವಿಲ್ಲ.
ಕೆಇಬಿ ಯಲ್ಲಿ ಅಧಿಕಾರಿಗಳು ಗುತ್ತಿಗೆ ದಾರರು ಆಗಿದ್ದಾರೆ.
ಇದರಿಂದ ಇಲಾಖೆ ಮಾರಾಟ ಆಗುವ ಸಾಧ್ಯತೆ ಗಳು ಇದ್ದಾವೆ.
ರೈತರ ಪಾಡು ಹೇಳುವಂತೆ ಇಲ್ಲ ಬೇಸಾಯದ ಮೇಲೆ ಜೀವನ ಮಾಡುವ ಅವರು ಅಪಾಯ ವನ್ನು ಲೆಕ್ಕಿಸದೆ ಬೇಸಾಯ ಮಾಡಬೇಕು ಸಾಲ-ಸೂಲ ಮಾಡಿ ವರ್ಷ ಪೂರ್ತಿ ಕಷ್ಟ ಪಟ್ಟರೆ ಮಾತ್ರವೇ ಜೀವನ.
ಈಗಾಗಲೇ ಮಳೆಯ ರಾಯನ ಅಭಾವ, ನಾಲೆಗಳು ಡ್ಯಾಮೆಜ್,ದುಬಾರಿ ಖರ್ಚು ಗಳು, ಇವುಗಳನ್ನು ಮೀರಿ ಜೀವನ ಮಾಡಬೇಕು ಅಗಿದೆ, ಸಕ್ರಿಯ ವಾಗಿ ರೈತರಿಗೆ ವಿದ್ಯುತ್ ಸರಬರಾಜು ಮಾಡಿದರೆ ಇಂತಹ ಸಮಸ್ಯೆಗಳು ನಿಯಂತ್ರಣ ಮಾಡಬಹುದು.
ರಾಜಕಾರಣಿಗಳು ಕೂಡ ಬಣ್ಣದ ಭಾಷಣ ದಿಂದ ಆಕ್ರೋಶ ಮಾತುಗಳಿಂದ ಜನರನ್ನು ಮರಳು ಮಾಡುವ ಕುತಂತ್ರ ಮಾಡಿಕೊಂಡಿದ್ದಾರೆ, ರೈತರು ಕಷ್ಟ ಸುಖಗಳನ್ನು ನೋಡುವವರು ಯಾರು ಇಲ್ಲ!!.ಇನ್ನೂ ಬಳ್ಳಾರಿ ಜೇಸ್ಕಂ ಇಲಾಖೆ ಇಲ್ಲಿ ಕೇಲ ಅಧಿಕಾರಿಗಳ ದರ್ಪ,ದುರಹಂಕಾರ, ತಲೆ ಮೇಲೆ ಮೂರು ಅಡಿ ಎತ್ತರದ ದಲ್ಲಿ ಇದೇ.
ಕೇಲ ಅಧಿಕಾರಿಗಳು ಅಚ್ಚು ಕಟ್ಟಾಗಿ ಕೆಲಸ ನಿಭಾಯಿಸುವ ಚಲ ಇದ್ದರೂ ಅವರನ್ನು ಕೂಡ ಸಗಣಿ ತಿನ್ನುವ ವ್ಯವಸ್ಥೆ ಗೆ ಮಾರ್ಪಾಡು ಮಾಡುತ್ತಾರೆ.
ಅಕ್ರಮ ಲೂಟಿ ಆರೋಪದಡಿಯಲ್ಲಿ ಸಿಕ್ಕಿ ಕೊಂಡರು ಕೂಡ ಅವರು ಇನ್ನೂ ಗೌರವಸ್ಥರು ಅನ್ನುವ ರೀತಿಯಲ್ಲಿ ಇದ್ದಾರೆ.
ಮೇಲಿನ ಅಧಿಕಾರಿಗಳನ್ನು XYZಮೂಲಕ ದಾರಿತಪ್ಪಿಸುವ ಕೆಲಸವನ್ನು ಮಾಡುವ ಮುಟ್ಟಾಳರು ಇದ್ದಾರೆ.
ಕೆ.ಬಜಾರಪ್ಪ ವರದಿಗಾರರು. ಬಳ್ಳಾರಿ