This is the title of the web page
This is the title of the web page

Please assign a menu to the primary menu location under menu

State

ಬಳ್ಳಾರಿಯಲ್ಲಿ ಖಾಸಗಿ ಕಿಸ್ಕಂದ ವಿಶ್ವವಿದ್ಯಾಲಯ ಪ್ರಾರಂಭ

ಬಳ್ಳಾರಿಯಲ್ಲಿ ಖಾಸಗಿ ಕಿಸ್ಕಂದ ವಿಶ್ವವಿದ್ಯಾಲಯ ಪ್ರಾರಂಭ

ಬಳ್ಳಾರಿಯಲ್ಲಿ ಖಾಸಗಿ ಕಿಸ್ಕಂದ ವಿಶ್ವವಿದ್ಯಾಲಯ ಪ್ರಾರಂಭ

ಬಳ್ಳಾರಿ : ಬಸವರಾಜೇಶ್ವರಿ ಸಮೂಹ ಶಿಕ್ಷಣ ಸಂಸ್ಥೆಯ ಅಡಿಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಬಳ್ಳಾರಿಯಲ್ಲಿ ಹೊಸದಾಗಿ ಖಾಸಗಿ ಕಿಷ್ಕಿಂದ ವಿಶ್ವವಿದ್ಯಾಲಯವನ್ನು ಪ್ರಾರಂಭ ಮಾಡಲಾಗಿದೆ ಎಂದು ತುಂಗಾಭದ್ರ ಟ್ರಸ್ಟ್ ನ ಅಧ್ಯಕ್ಷ ಡಾ. ಎಸ್ ಜೆ ವಿ ಮಹಿಪಾಲ್ ಅವರು ಹೇಳಿದರು.

ಬಳ್ಳಾರಿ ನಗರದ ಬಿಬಿಸಿ ಕಾಲೇಜ್ ನಲ್ಲಿ ಮಂಗಳವಾರ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು. ಕಿಷ್ಕಿಂದ ವಿಶ್ವವಿದ್ಯಾಲಯವು ಕರ್ನಾಟಕ ಸರ್ಕಾರದ ಕಾಯ್ದೆ 2023 ಕರ್ನಾಟಕ ಅಧಿನಿಯಮ ಸಂಖ್ಯೆ 20/2023 ಸ್ಥಾಪಿತವಾಗಿ ಈ ವರ್ಷದಿಂದ ಬಳ್ಳಾರಿಯಲ್ಲಿ ಪ್ರಾರಂಭಿಸಲಾಗಿದೆ. ಈ ಸಂಸ್ಥೆ ಬಳ್ಳಾರಿ ಜಿಲ್ಲೆಯ ಸಿರಗುಪ್ಪ ರಸ್ತೆಯ ಸಿಂಧಿಗೇರಿ ಗ್ರಾಮದ ಹತ್ತಿರ ಟ್ರಸ್ಟಿನ ಸ್ವಂತ 50 ಎಕರೆಯಲ್ಲಿ ಶಾಶ್ವತ ವಿಶ್ವವಿದ್ಯಾಲಯದ ಕ್ಯಾಂಪಸ್ ಸ್ಥಾಪನೆಯಾಗಲಿದೆ ಎಂದು ಮಾಹಿತಿ ನೀಡಿದರು. ಈ ವಿಶ್ವವಿದ್ಯಾಲಯವನ್ನು ಎರಡು ವರ್ಷದ ಕಾಲ ತಾತ್ಕಾಲಿಕವಾಗಿ ಬಿಐಟಿಎಂ ಮತ್ತು ಬಿಬಿಸಿಯಲ್ಲಿ ನಡೆಸಲು ಸರ್ಕಾರದ ಅನುಮತಿ ದೊರೆತಿದ್ದು, ಇಂಜಿನಿಯರಿಂಗ್ ಕೋರ್ಸುಗಳನ್ನು ಕರ್ನಾಟಕ-ಸಿಇಟಿ ಮುಖಾಂತರ ಭರ್ತಿ ಮಾಡಲು ಸಿಇಟಿ ಕೌನ್ಸಿಲಿಂಗ್ ಕೋಡ್ ಇ-301 ನೀಡಲಾಗಿದೆ. ಇದನ್ನು ವಿದ್ಯಾರ್ಥಿಗಳು ಆಯ್ಕೆಯ ಎಂಟ್ರಿ ಮೂಲಕ ಉಪಯೋಗಿಸಿಕೊಳ್ಳಬಹುದು. ಇದೇ ಮುಂದಿನ ದಿನಗಳಲ್ಲಿ ಸ್ನಾತಕೋತ್ತರ ಪದವಿಯ ಪ್ರವೇಶಗಳಿಗಾಗಿಯೂ ನೊಂದಯಿಸಲು ಅವಕಾಶ ಇರುತ್ತದೆ ಎಂದರು.

ಕಿಸ್ಕಂದ ವಿಶ್ವವಿದ್ಯಾಲಯದಲ್ಲಿ ಪ್ರಸಕ್ತ ವರ್ಷದಿಂದ ಇಂಜಿನಿಯರಿಂಗ್ & ಟೆಕ್ನಾಲಜಿ ಸ್ಟೀಮ್ ನಿಂದ 4 ವರ್ಷದ ಪದವಿ ಕೋರ್ಸುಗಳಾದ ಬಿ.ಟೆಕ್ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್, ಬಿ.ಟೆಕ್‌-ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್‌ ಇಂಜಿನಿಯರಿಂಗ್, ಬಿ.ಟೆಕ್-ಎಲೆಕ್ಟಿಕಲ್ & ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಹಾಗೂ 3 ವರ್ಷದ ಪದವಿ ಬಿ.ಸಿ.ಎ ಮತ್ತು ಸ್ನಾತಕೋತ್ತರ ಪದವಿಗಳಾದ ಎಂಬಿಎ, ಕೋರ್ಸುಗಳನ್ನು ಪ್ರಾರಂಭಿಸಲು ಅನುಮೋದನೆ ದೊರೆತಿರುತ್ತದೆ ಎಂದರು.

ಈ ಸಂದರ್ಭದಲ್ಲಿ ಕಿಷ್ಕಿಂದ ವಿಶ್ವ ವಿದ್ಯಾಲಯದ ಕುಲಪತಿ ಡಾ. ಯಶವಂತ್ ಭೂಪಾಲ್, ಪೃಥ್ವಿರಾಜ್, ವಿ.ಜಿ ಭರತ್, ಅಮರಾಜ್ ಭೂಪಾಲ್, ಆಡಳಿತಾಧಿಕಾರಿ ಅಮರೇಶಯ್ಯ ಹಾಜರಿದ್ದರು.(ಕೆ.ಬಜಾರಪ್ಪ ವರದಿಗಾರರು ಬಳ್ಳಾರಿ.)


News 9 Today

Leave a Reply