ರಾಹುಲ್ ಗಾಂಧಿ ಹುಟ್ಟುಹಬ್ಬ ಆಚರಣೆ
ಬಳ್ಳಾರಿ.(19) ಸೋಮವಾರ. ರಂದು ಮುಂಡ್ರಿಗಿ ನಾಗರಾಜ್ ಅಭಿಮಾನಿ ಬಳಗದ ವತಿಯಿಂದ ಕಾಂಗ್ರೆಸ್ ಪಕ್ಷದ ಅಧಿನಾಯಕ ಶ್ರೀ ರಾಹುಲ್ ಗಾಂಧೀಜಿ ರವರ ಹುಟ್ಟುಹಬ್ಬದ ಪ್ರಯುಕ್ತ ಬಳ್ಳಾರಿಯ ವಿಮ್ಸ್ ಆಸ್ಪತ್ರೆಯ ಆವರಣದಲ್ಲಿನ ರೋಗಿಗಳು ಹಾಗೂ ಕೂಲಿ ಕಾರ್ಮಿಕರಿಗೆ ಆಹಾರದ ಪೊಟ್ಟಣ, ಹಣ್ಣು ಮತ್ತು ಕುಡಿಯುವ ನೀರನ್ನು ವಿತರಣೆ ಮಾಡಲಾಯಿತು. ಈ ಸಂಧರ್ಭದಲ್ಲಿ ಶ್ರೀನಿವಾಸ ಎಸ್, ಅರುಣ್ ಕುಮಾರ್ ಮುಂಡ್ರಿಗಿ, ಓಬಳೇಶ್, ಶ್ರೀನಿವಾಸ್ ಜವೆದಾರ್, ನಾಗರಾಜ್ ಹೆಗಡೆ, ಪ್ರಹ್ಲಾದ್ ತೆಗ್ಗಿನಬೂದಿಹಾಳ್, ಗೋವಿಂದ, ಪುರುಷೋತ್ತಮ ಮುಂತಾದವರು ಉಪಸ್ಥಿತರಿದ್ದರು.