*ಬಳ್ಳಾರಿ: ಕಲಾವಿದರಿಗೆ ಬಕೇಟ್ ಹಿಡಿದು ಬೆತ್ತಲಾದ ರಂಗಣ್ಣ!*
ಬಳ್ಳಾರಿ,ಫೆ;4 ಕನ್ನಡ
ಮತ್ತು ಸಂಸ್ಕೃತಿ ಇಲಾಖೆಯ ಭ್ರಷ್ಟಾಚಾರ (ಲಂಚ)ದ ಆಡಿಯೋ ಒಂದು ವೈರಲ್ ಆದ ಪರಿಣಾಮ ಬಳ್ಳಾರಿ ಜಿಲ್ಲೆಯ ಮತ್ತು ಸರ್ಕಾರದ ಘನತೆ ಗೌರವ ಹಾಳು ಅಗಿದೆ ಎಂಬುವುದು ಕಲಾವಿದರ ಆರೋಪವಾಗಿದೆ.
ಪವರ್ ಫುಲ್ ಸಚಿವರು ರಾಜ್ಯ ಮಟ್ಟದಲ್ಲಿ ಸದಾ ಸದ್ದು ಮಾಡುವ ಮಾಸ್ ಲೀಡರ್ ಆದ ಜಿಲ್ಲಾ ಉಸ್ತುವಾರಿಗಳಾದ ಶ್ರೀರಾಮುಲುರವರ ತವರು ಜಿಲ್ಲೆಯಲ್ಲಿ ಈ ರೀತಿ ಅಧಿಕಾರಿಗಳು ಬಕೇಟ್ ಹಿಡಿದು ಬಹಿರಂಗವಾಗಿ ಲಂಚವನ್ನ ಕೇಳ್ತಾರೆ ಅಂದರೆ ವ್ಯವಸ್ಥೆ ಯಾವ ಮಟ್ಟಕ್ಕೆ ತಲುಪಿದೆ ಎಂಬುವುದು ಈ ಲಂಚದ ಅಡಿಯೋ ಬಹಿರಂಗಗೊಂಡಿರುವುದು ಸಾಕ್ಷಿಯಾಗಿದೆ.
ಕಷ್ಟ ಪಟ್ಟು ಜೀವನ ಮಾಡುತ್ತಿರುವ, ಬಡಕಲಾವಿದರು ಸರ್ಕಾರದದಿಂದ ಕನ್ನಡ ಸಂಸ್ಕೃತಿ ಇಲಾಖೆಯಿಂದ ಸಿಕ್ಕಿರುವ ಕಾರ್ಯಕ್ರಮಗಳಿಂದ ಬಂದಿರುವ ಸಂಭಾವನೆಯಿಂದ ಜೀವನ ಮಾಡಿಕೊಂಡು, ಬರುತ್ತಿರುವ, ಕಲಾವಿದರ ಬಳಿ ಸಹಾಯಕ ನಿರ್ದೇಶಕರೊಬ್ಬರು ಬಿಕ್ಷೆ ಬೇಡ್ತಾಯಿರೋದು ನೋಡಿದರೆ ನಾಚಿಕೆಯಾಗಬೇಕು ಕನ್ನಡ ಕನ್ನಡದ ಸಂಸ್ಕೃತಿ ಇಲಾಖೆಯ ಮಾನ ಮರ್ಯಾದೆ ರಾಜ್ಯದಲ್ಲಿ ಹೋಲ್ ಸೇಲ್ ಆಗಿ ರಂಗಣ್ಣ ಹರಾಜು ಮಾಡಿದ್ದಾನೆ.
ಬಳ್ಳಾರಿಯಲ್ಲಿ ಈ ರಂಗಣ್ಣ ಹಾಗೂ ಅವರ ಸಿಬ್ಬಂದಿ ಯಾವ ಭಯವು ಇಲ್ಲದೆ ವ್ಯಾಪಾರಕ್ಕೆ ನಿಂತಿರುವುದು ಸಚಿವರು ತಲೆತಗ್ಗಿಸುವಂತಾಗಿದೆ. ಜಿಲ್ಲೆಯ ಆಡಳಿತ ಸಂಪೂರ್ಣ ನಿಷ್ಕ್ರಿಯವಾಗಿದೆ ಎಂಬುವುದು ಕಲಾವಿದ ಆರೋಪ.
ಜಿಲ್ಲೆಯ ಆಡಳಿತ ಅಧಿಕಾರಿಗಳು ಆಡಳಿತ ನಡೆಸುವಲ್ಲಿ ವಿಫಲತೆ ಗೊಂಡಿದ್ದಾರೆ ಎಂಬ ಆರೋಪವು ಕೇಳಿ ಬಂದಿದೆ.
ಈ ರಂಗಣ್ಣನವರ ನಡತೆ ಈ ಹಿಂದೆ ಅವರು ಕೆಲಸ ಮಾಡಿದ ಸ್ಥಳಗಳಲ್ಲಿ ಕೂಡ ಇಂತಹ ನ್ಯೂಸೆನ್ಸ್ ಮತ್ತು ಲಂಚಗೊಳಿತನ ಇತ್ತು ಎನ್ನುವ ಆರೋಪಗಳಿ ಸಹ ಕೇಳಿ ಬಂದಿವೆ. ಈ ರಂಗಣ್ಣ ಇಷ್ಟು ದಿನ ಮಾಡಿದ್ದು ಹಿಟ್ಲರ್ ಅಡಳಿತ ಎಂದು ಹೇಳಲಾಗುತ್ತಿದೆ. ಇವನು ಕಚೇರಿಯಲ್ಲಿ ಮಾಡುವ ಕಿರಿಕಿರಿ ಬಾನಗಡಿಗಳು ಕೇಳಿದರೆ ಬೆಚ್ಚಿ ಬೀಳ್ತೀರಾ? ಯಾಕೆಂದರೆ ಇವನು ಕಛೇರಿಯಲ್ಲಿ ಮಹಿಳಾ ಸಿಬ್ಬಂದಿಯೊಂದಿಗೆ ಏಕ ವಚನದಲ್ಲಿ ಸಂಭಾಷಣೆ ಮಾಡ್ತಿದ್ದ ಎಂಬ ಮಾತುಗಳು ಸಹ ಕೇಳಿಬಂದಿವೆ. ಅಲ್ಲದೇ ಇವನು ಬಳೆಗಳ ಸದ್ದಿಗೆ ಉಸಿರು ಬಿಗಿ ಹಿಡಿದುಕೊಳ್ಳಲಾಗದೆ ಮಾಡಬಾರದ ಕೆಲಸಗಳನ್ನ ಮಾಡಿದ್ದಾನೆ ಎಂದು ಕಛೇರಿಯ ಕಿಟಕಿ ಬಾಗಿಲುಗಳು ಹೇಳುತ್ತವೆ. ಈ ಭ್ರಷ್ಟನ ವಿರುದ್ದ ಡಿಸಿಗೆ ಕಲಾವಿದರ ಹಲವು ಬಾರೀ ಮನವಿ ಸಲ್ಲಿಸಿದರು ಯಾವುದೇ ಪ್ರಯೋಜನೆ ಆಗಿಲ್ಲ ಅಂತಾರೆ ಕಲಾವಿದರು. ಇನ್ನು ಇವನು ವಿಜಯನಗರ ಜಿಲ್ಲೆಯಲ್ಲಿಯು ಹೀಗೆ ಸಾಕಷ್ಟು ಅಕ್ರಮಗಳು ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ.
ಈ ವಿಚಾರ ಅರಿತ ಪವರ್ ಫುಲ್ ಮಿನಿಸ್ಟರ್ ಸುನೀಲ್ ಕುಮಾರ್ ನಿನ್ನೆ ಇವನಿಗೆ ಗೇಟ್ ಪಾಸ್ ಕೊಟ್ಟು ಮನೆ ಸೇರುವಂತೆ ಮಾಡಿದ್ದಾರೆ.
ಸಚಿವ ಸುನೀಲ್ ಕುಮಾರ್ ನಡೆಗೆ ಕಲಾವಿದರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಳ್ಳಾರಿ ಜಿಲ್ಲೆಯಲ್ಲಿ ಇಂತಹ ಭ್ರಷ್ಟರು ಸಾಕಷ್ಟು ಜನ ಅಧಿಕಾರಿಗಳು ಹಣ ಕೊಟ್ಟು ಪೋಸ್ಟಿಂಗ್ ಮಾಡಿಸಿಕೊಂಡು ಬಂದಿದ್ದಾರೆ ಇವರು ಸಹ ಮುಂದೆ ಬಕೇಟ್ ಹಿಡಿಯೋ ಎಲ್ಲ ಲಕ್ಷಣಗಳು ಇವೆ ಹಾಗಾಗಿ ಸಚಿವ ಶ್ರೀರಾಮುಲು ಮತ್ತು ಜಿಲ್ಲಾಧಿಕಾರಿ ಎಚ್ಚೆತ್ತುಕೊಳ್ಳಬೇಕು ಇಲ್ಲವಾದರೆ ಬಳ್ಳಾರಿಯ ವ್ಯವಸ್ಥೆ ಮುಂದಿನ ದಿನಗಳಲ್ಲಿ ರಾಜ್ಯ ಮಟ್ಟದಲ್ಲಿ ತಲೆತಗ್ಗಿಸುವ ಪರಿಸ್ಥಿತಿ ಉಂಟಾದರೆ ಅಚ್ಚರಿ ಇಲ್ಲ.
( *ಕೆ.ಬಜಾರಪ್ಪ ವರದಿಗಾರರು ಕಲ್ಯಾಣ ಕರ್ನಾಟಕ)*