*ಬಳ್ಳಾರಿ ವಿಮ್ಸ್ ಆಸ್ಪತ್ರೆ ಯಲ್ಲಿ ಗಲಾಟೆ ಪ್ರಕರಣ ದಾಖಲೆ!!.ಆಡಳಿತ ವ್ಯವಸ್ಥೆಯ ದುರ್ಬಲ.* ಬಳ್ಳಾರಿ ವಿಮ್ಸ್ ಆಸ್ಪತ್ರೆ ಯಲ್ಲಿ ಆಂಬುಲೆನ್ಸ್ ವಾಹನ ಚಾಲಕನಿಗೆ,ಆಟೋ ಡ್ರೈವರ್ ಗೆ,ಗಲಾಟೆ ನಡೆದು ಹಲ್ಲೆ ಮಾಡಿಕೊಂಡಿರವ ಘಟನೆ ನಡೆದಿದೆ.
ಗುರುವಾರ ವಿಮ್ಸ್ ಆಸ್ಪತ್ರೆ ಯಲ್ಲಿ ಎಮರ್ಜೆನ್ಸಿ ವಾರ್ಡ್ ಮುಂದೆ ಆಂಬುಲೆನ್ಸ್ ವಾಹನ ಮೂಲಕ ರೋಗಿಯನ್ನು ಶಿಫ್ಟ್ ಮಾಡುವ ಸಮಯದಲ್ಲಿ, ಆಂಬುಲೆನ್ಸ್ ವಾಹನ ಚಾಲಕ ಎಮರ್ಜೆನ್ಸಿ ವಾರ್ಡ್ ಮುಂದೆ ರಸ್ತೆ ಗೆ ಅಡ್ಡಲಾಗಿ ಇಟ್ಟಿರುವ ಆಟೊ ವನ್ನು ತೆಗೆಯಲು ಹೇಳಿದ್ದಾರೆ,ಅದಕ್ಕೆ ಆಕ್ರೋಶ ಗೊಂಡ ಆಟೋ ಚಾಲಕ ಆಂಬುಲೇನ್ಸ್ ಚಾಲಕನ ಮೇಲೆ ಹಲ್ಲೆ ಮಾಡಿದ್ದಾರೆ ಏಂದು ಕೌಲ್ ಬಜಾರ್ ಠಾಣೆಯಲ್ಲಿ ಒಬ್ಬರಿಗೆ ಒಬ್ಬರು ಪ್ರಕರಣ ದಾಖಲೆ ಮಾಡಿದ್ದಾರೆ.
ಎಮರ್ಜೆನ್ಸಿ ವಾರ್ಡ್ ಅಂದರೆ ತುರ್ತು ಪರಿಸ್ಥಿತಿಯಲ್ಲಿ ಇರುವ ರೋಗಿಗಳು ನ್ನು,ಸೇರಿಸುವ, ಶಿಫ್ಟ್ ಮಾಡುವ ತುರ್ತು ಪರಿಸ್ಥಿತಿ ಇರುತ್ತದೆ.
ಅದರಲ್ಲಿ ರಸ್ತೆ ಗೆ ಖಾಸಗಿ ವಾಹನ ಗಳು ಅಡ್ಡ ಇಟ್ಟರೆ ರೋಗಿಗಳ ಪರಿಸ್ಥಿತಿ ಏನು.
ಪ್ರತ್ಯೇಕವಾಗಿ ಆಟೋ ಸ್ಟಾಂಡ್ ಇದೇ ಅದನ್ನು ಹೊರತು ಪಡಿಸಿ ಅಡ್ಡಾದಿಡ್ಡಿ ಪಾರ್ಕಿಂಗ್ ಮಾಡಿದ್ದು ಏಷ್ಟು ಸರಿ ಅನ್ನವದು ಸಾರ್ವಜನಿಕರ ಪ್ರಶ್ನೆ ಆಗಿದೆ.
ಇಷ್ಟು ಆಗುತ್ತಿರುವ ಘಟನೆ ಗಳು ನಿರ್ದೇಶಕರ ದೃಷ್ಟಿ ಗೆ ಇಲ್ಲವೆಂದು ತಿಳಿದು ಬಂದಿದೆ.
ಆಸ್ಪತ್ರೆ ಯಾವ ದಾರಿಯಲ್ಲಿ ನಡೆಯುತ್ತದೆ ಅನ್ನವದು ಪ್ರಶ್ನೆ ಅಗಿದೆ.
ಇದು ಒಂದು ರೀತಿಯಲ್ಲಿ ದುರ್ಬಲ ಅಡಳಿತ ಅಗಿದೆ. (ಕೆ.ಬಜಾರಪ್ಪ ವರದಿಗಾರರು.)