*ಮರಳು ದಂದೆಯ ಮರ್ಮ ನಗರಕ್ಕೆ ಎಂಟ್ರಿ ಇಲ್ಲವಂತೆ,ಪದೇ ಪೇದೆ ಆಡಚಣೆಗಳು!?ಇಲಾಖೆ ಅಧಿಕಾರಿಗಳ ನಡುವೆ ಮರಳಿನ ಮರ್ಮ!!* ಬಳ್ಳಾರಿ ಜಿಲ್ಲೆಯ ಮರಳು ದಂದೆ ಅಂದರೆ ದೇಶ ಮಟ್ಟದಲ್ಲಿ ಸದ್ದು ಮಾಡುತ್ತದೆ. ನಮ್ಮ ಜಿಲ್ಲೆ ಸಂಪನ್ಮೂಲ ನಮ್ಮ ಜನರಿಗೆ ಅಗ್ಗದ ದರದಲ್ಲಿ ಸಿಗದೇ ದುಬಾರಿ ಆಗಿದೆ.ಮರಳು ಗುತ್ತಿಗೆ ಕೂಡ ಟೆಂಡರ್ ನಲ್ಲಿ ಅಧಿಕ ದರದಲ್ಲಿ ಹೋಗುತ್ತದೆ. ಆದರೆ ಬಳ್ಳಾರಿ ಜಿಲ್ಲೆ ಯಲ್ಲಿ ಮರಳು ಟೆಂಡರನ್ನು ಯಾರೇ ಮಾಡಲಿ ಅದನ್ನು ಸಕ್ರಿಯವಾಗಿ ನಡೆಸಲು ತುಂಬಾ ಆಡಚಣೆಗಳು ಇರುತ್ತವೆ, ಅಧಿಕಾರಿಗಳು, ಸಚಿವರಿಂದ ಹಿಡಿದು, ಶಾಸಕರು ಸಂಸದರು,ಸಂಘಸಂಸ್ಥೆಗಳು, ಹಿಂಬಾಲಕರು, ಕೇಲ ಮುಖ್ಯವಾಹಿನಿಗಳಿಗೆ ಮಾಧ್ಯಮ ಗಳಿಗೆ ,ಮತ್ತು ಗ್ರಾಮ ಪಂಚಾಯತಗಳಿಂದ ಹಿಡಿದು ನೋಡಿಕೊಂಡು ಹೋಗುವ ವಾತಾವರಣ ಇರುತ್ತದೆ ಅನ್ನುವುದು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತದೆ. ಇಷ್ಟು ಮಾಡಿದರೆ ಕೂಡ ಮರಳು ದಂದೆ ಅಡಚಣೆಗಳು ಕಾಡುತ್ತಾ ಇರುತ್ತವೆ. ಇಂತಹ ಸಂದರ್ಭಗಳಲ್ಲಿ ಮರಳು ಗುತ್ತಿಗೆ ದಾರರರು, ಸಕ್ರಿಯವಾಗಿ ದಂದೆ ಮಾಡೋದು ಕನಸಿನ ಮಾತು ಆಗಿದೆ. ಇದನ್ನೇ ನೆಪ ಮಾಡಿಕೊಂಡು, ರಾಜಾರೋಷವಾಗಿ ಅಕ್ರಮ ದಂದೆ ಮಾಡುತ್ತ ಇದ್ದಾರೆ ಅನ್ನುವುದು ಜಗತ್ ಜಾಗಿರಿ ಆಗಿದೆ. ಒಂದು ವಾರದ ಹಿಂದೆ ನಗರದಲ್ಲಿ ಒಂದಿಷ್ಟು ಮರಳು ಗಾಡಿ ಗಳನ್ನು ಎರಡು ದಿನ ನಿಲ್ಲಿಸಲಾಗಿತ್ತು.ಇದರಲ್ಲಿ ರಾಜಕಾರಣಿಗಳ ಕೈವಾಡ ಇದೇ ನಗರದಲ್ಲಿ ಮರಳು ಗಾಡಿಗಳು ಓಡಾಟ ಆಗಬಾರದು ಅನ್ನುವ ನಿಟ್ಟಿನಲ್ಲಿ ಅಧಿಕಾರಿಗಳನ್ನು ಬಳಕೆ ಮಾಡಿಕೊಂಡು ಕಿರುಕುಳ ಮಾಡಲಾಗಿದೆ ಎಂದು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತದೆ.!!. ಮರಳು ದಂದೆಗೆ,ನಗರ/ಗ್ರಾಮೀಣ ಅನ್ನುವ ರಾಜಕಾರಣ ಆರಂಭ ವಾಗಿದೆ. ನಿಂತ ಮರಳು ಗಾಡಿಗಳ ವಿವರಗಳನ್ನು ಗಣಿ ಮತ್ತು ಭೂವಿಜ್ಞಾನ ಅಧಿಕಾರಿಗಳು ಹೇಳುತ್ತಾರೆ, ಓವರ್ ಲೋಡ್ ಇತ್ತು ಗಾಡಿಗಾಳನ್ನು ನಿಲ್ಲಿಸಲಾಗಿದೆ ಎನ್ನುತ್ತಾರೆ ಓವರ್ ಲೋಡ್ ಇದ್ದರೆ ,ಕ್ಷಣದಲ್ಲಿ ದಂಡ ಹಾಕಿ ಗಾಡಿ ಗಳನ್ನು ಕಳಿಸಲಾಗುತ್ತದೆ, ಅದರೆ ಎರಡು ದಿನ ಗಾಡಿಗಳು ನಿಂತಿದ್ದು ಅಧಿಕಾರಿಗಳ ಕರ್ತವ್ಯ ಪ್ರಶ್ನೆ ಮಾಡುವಂತೆ ಅಗಿದೆ, ಹಲವಾರು ಅನುಮಾನಗಳು ಎಡೆಮಾಡಿಕೊಟ್ಟಿದೆ.ಓವರ್ ಲೋಡ್ ಗಾಡಿಗಳಿಗೆ ಭೂವಿಜ್ಞಾನ ಅಧಿಕಾರಿಗಳು ದಂಡ ಹಾಕುತ್ತಾರೆ, ಇದೆ ವಾಹನಗಳಿಗೆ ಆರ್.ಟಿ.ಓ,ಅನುಮತಿ ಬೇಕು ಅದರೆ ಈವರೆಗೆ ಸಾರಿಗೆ ಇಲಾಖೆ ಗೆ ಇದರ ಮಾಹಿತಿಯನ್ನು ಕೊಟ್ಟಿಲ್ಲ, ಭೂವಿಜ್ಞಾನ ಅಧಿಕಾರಿಗಳು, ಸಾರಿಗೆ ಇನ್ಸ್ಪೆಕ್ಟರ್ ಗಳನ್ನು ಕೇಳಿದರೆ ಭೂವಿಜ್ಞಾನ ಅಧಿಕಾರಿಗಳು ಗಾಡಿ ಗಳನ್ನು ನಿಲ್ಲಸಲಾಗಿತ್ತು,ನಮಗೆ ವಾಹನಗಳ ಪರವಾನಗಿ ಜೊತೆಯಲ್ಲಿ ಡ್ರೈವರ್ ಗಳ ವಾಹನಗಳು ಕಳಸಿಕೊಡಿ ಎಂದು ಹೇಳಲಾಗಿತ್ತು ಆದರೆ ಅದನ್ನು ಅವರು ಮಾಡಿಲ್ಲ,ಸಾರಿಗೆ ಕಚೇರಿ ಗೆ ಮಾಹಿತಿ ಕೊಟ್ಟಿಲ್ಲ, ಈವಿಚಾರ ಗ್ರಾಮೀಣ ಠಾಣೆ ಗಳಿಗೆ ಕೂಡ ಮಾಹಿತಿ ಇಲ್ಲ. ಸಾರಿಗೆ ಅಧಿಕಾರಿಗಳು ಭೂವಿಜ್ಞಾನ ಅಧಿಕಾರಿಗಳನ್ನು ಕೇಳಿದರೆ ತಕ್ಷಣವೇ, ಮರಳು ದಂದೆ ಮಾಡುವ ಅವರಿಂದ ಪೋನ್ ಕಾಲ್ ಬರುತ್ತದೆ ಎಲ್ಲಾ ಸರಿಹೋಗಿದೆ ಎಂದು, ಆಡಳಿತ ಅಧಿಕಾರಿಗಳು ಕೇವಲ ದೃಷ್ಟಿ ಗೊಂಬೆ ಆಗಿದ್ದಾರೆ, ಈ ರೀತಿ ಮಾಡಿದರೆ ಸಾರ್ವಜನಿಕ ವಲಯದಲ್ಲಿ ಸರ್ಕಾರದ ಮೇಲೆ ನಂಬಿಕೆ ಇಲ್ಲದಂತೆ ಆಗುತ್ತದೆ ಸಕ್ರಿಯವಾಗಿ ಅಧಿಕಾರ ಚಲಾವಣೆಗೆ ಮಾಡಲು ಆಗದೇ ಇರುವ ವಾತಾವರಣ ನಿರ್ಮಾಣ ಆಗಿದೆ. ಭೂವಿಜ್ಞಾನ ಅಧಿಕಾರಿಗಳು ನಮ್ಮ ವ್ಯಾಪ್ತಿಯ ಅಧಿಕಾರ ಚಲಾವಣೆಗೆ ಮಾಡಲಾಗಿದೆ ಅನ್ನುತ್ತಾರೆ, ಸಾರಿಗೆ, ಇಲಾಖೆ ಅಧಿಕಾರಿಗಳು ನಮ್ಮ ವ್ಯಾಪ್ತಿಯ ಅಧಿಕಾರ ಚಲಾವಣೆ ಮಾಡಲು ಆಗುತ್ತಾ ಇಲ್ಲ ವಂತೆ, ಪೋಲಿಸ್ ಠಾಣೆಗಳು ಮಾತ್ರ ಸಿಂಪಲ್ ಉತ್ತರ ನಮಗೆ ಅದರ ಮಾಹಿತಿ ಇಲ್ಲ ಅನ್ನುತ್ತಾರೆ. ಸಂಬಂಧಿಸಿದ ಅಧಿಕಾರಿಗಳಿಗೆ ಸಮನ್ವಯತೆ ಕೊರತೆ ಮತ್ತು ಹಲವಾರು ಅನುಮಾನಗಳನ್ನು ಹುಟ್ಟಿಸಿದೆ.ಸಾರಿಗೆ,ಠಾಣೆ ಅಧಿಕಾರಿಗಳು ಇದರ ಮಾಹಿತಿ ಪಡೆದು ಗಾಡಿಗಳನ್ನು ವಾಪಸ್ಸು ಕರೆಸಿ ಯಾವ ಕ್ರಮ ಮಾಡುತ್ತಾರೆ ಎಂದು ಕಾದು ನೋಡಬೇಕು.??.
News 9 Today > State > ಮರಳು ದಂದೆಯ ಮರ್ಮ ನಗರಕ್ಕೆ ಎಂಟ್ರಿ ಇಲ್ಲವಂತೆ,ಪದೇ ಪೇದೆ ಆಡಚಣೆಗಳು!?ಇಲಾಖೆ ಅಧಿಕಾರಿಗಳ ನಡುವೆ ಮರಳಿನ ಮರ್ಮ!!
ಮರಳು ದಂದೆಯ ಮರ್ಮ ನಗರಕ್ಕೆ ಎಂಟ್ರಿ ಇಲ್ಲವಂತೆ,ಪದೇ ಪೇದೆ ಆಡಚಣೆಗಳು!?ಇಲಾಖೆ ಅಧಿಕಾರಿಗಳ ನಡುವೆ ಮರಳಿನ ಮರ್ಮ!!
Bajarappa13/11/2024
posted on
