This is the title of the web page
This is the title of the web page

Please assign a menu to the primary menu location under menu

State

ಶ್ರೀರಾಮುಲು ವಿರುದ್ಧ ತಿರುಗೇಟು ನೀಡಿದ ಸಂಡೂರು ಕಾಂಗ್ರೆಸ್‌ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ

ಶ್ರೀರಾಮುಲು ವಿರುದ್ಧ ತಿರುಗೇಟು ನೀಡಿದ ಸಂಡೂರು ಕಾಂಗ್ರೆಸ್‌ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ

*ಶ್ರೀರಾಮುಲು ವಿರುದ್ಧ ತಿರುಗೇಟು ನೀಡಿದ ಸಂಡೂರು ಕಾಂಗ್ರೆಸ್‌ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ*
*ಸೋಲಿನ ಹತಾಶೆಯಿಂದ ಮಾಜಿ ಸಚಿವರು ಮಾತನಾಡಿದ್ದಾರೆ*

ಸಂಡೂರು(03:) ವಾಲ್ಮೀಕಿ ನಿಗಮದ ಹಗರಣದಲ್ಲಿ ಪಾಲು ಕೇವಲ ಮಾಜಿ ಸಚಿವ ಬಿ ನಾಗೇಂದ್ರ ಅವರಿಗೆ ಮಾತ್ರ ಹೋಗಿಲ್ಲ. ಅದರಲ್ಲಿ ಒಂದಷ್ಟು ಪಾಲು ಬಳ್ಳಾರಿ ಸಂಸದ ಇ ತುಕಾರಾಂ ಅವರಿಗೂ ಹೋಗಿದೆ ಎಂದು ಮಾಜಿ ಸಚಿವ ಬಿ ಶ್ರೀರಾಮುಲು ಅವರ ಹೇಳಿಕೆಗೆ ಸಂಡೂರು ಉಪ ಚುನಾವಣೆಯ ಕಾಂಗ್ರೆಸ್‌ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಅವರು ತಿರುಗೇಟು ನೀಡಿದ್ದಾರೆ.

ತುಕಾರಾಂ ಅವರ ಮೇಲೆ ಶ್ರೀರಾಮುಲು ಅವರು ಇಲ್ಲ ಸಲ್ಲದ ಆರೋಪ ಮಾಡಿದ್ದಾರೆ. ತುಕಾರಾಂ ಅವರು ತಮ್ಮ ಇಡೀ ರಾಜಕೀಯ ಜೀವನದಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದೆ ಇದ್ದವರು. ಸೋಲಿನ ಹತಾಶೆಯಲ್ಲಿ ಇಂತಹ ಹೇಳಿಕೆ ನೀಡಿ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡ್ತಾ ಇದ್ದಾರೆ. ಇದರಿಂದ ಏನೂ ಪ್ರಯೋಜನ ಆಗುವುದಿಲ್ಲ ಎಂದು ವಿವರಿಸಿದರು.

ತುಕಾರಾಂ ಅವರು ಈವರೆಗೆ ಯಾವುದೇ ಹಗರಣದಲ್ಲಿ ಭಾಗಿಯಾದವರಲ್ಲ. ಒಂದು ವೇಳೆ ಹಗರಣದಲ್ಲಿ ತೊಡಗಿದ್ದರೆ ಸಂಡೂರಿನ ಜನ ನಾಲ್ಕು ಬಾರಿ ವಿಧಾನಸಭೆಗೆ ಹಾಗೂ ಒಂದು ಬಾರಿ ಲೋಕಸಭೆಗೆ ಕಳುಹಿಸುತ್ತಿರಲಿಲ್ಲ ಎಂದರು.

ತುಕಾರಾಂ ಅವರು ಕುಟುಂಬ ರಾಜಕಾರಣ ಮಾಡ್ತಾ ಇದ್ದಾರೆ ಎಂಬ ಶ್ರೀರಾಮುಲು ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಅನ್ನಪೂರ್ಣ ಅವರು, ಇಷ್ಟು ದಿನ ರೆಡ್ಡಿ ಅಂಡ್‌ ಗ್ಯಾಂಗ್‌ ಏನು ಮಾಡಿತು ಏನು ಎಂಬುದು ಜನರಿಗೆ ತಿಳಿದಿದೆ. ಅವರ ಮನೆಯಲ್ಲಿ ಶಾಂತಾ ಅವರು ಸಂಸದರಾದರು, ಕರುಣಾಕರ ರೆಡ್ಡಿ ಅವರು ಸಂಸದರಾದರು. ಸುರೇಶ್‌ ಬಾಬು, ಸೋಮಶೇಖರ ರೆಡ್ಡಿ ಶಾಸಕರಾಗಿದ್ದರು. ಕರುಣಾಕರ ರೆಡ್ಡಿ ಅವರು ಸಂಸದರಾಗಿದ್ದರು ಎಂದರು.

ನಾವು ಯಾವುದೇ ಕುಟುಂಬ ರಾಜಕಾರಣ ಮಾಡ್ತ ಇಲ್ಲ. ಜನರೇ ಒಪ್ಪಿ ಆಯ್ಕೆ ಮಾಡ್ತ ಇದ್ದಾರೆ. ಸಂತೋಷ್‌ ಲಾಡ್‌ ಹಾಗೂ ನಮ್ಮ ಕುಟುಂಬ ಸದಾ ಜನಸೇವೆಗೆ ಬದ್ಧರಾಗಿದ್ದೇವೆ. ಶ್ರೀರಾಮುಲು ಅವರು ಚುನಾವಣೆಯಲ್ಲಿ ಸೋತು ಸುಣ್ಣವಾಗಿ ಏನೇನೋ ಬಡಬಡಾಯಿಸುತ್ತಿದ್ದಾರೆ ಎಂದು ಅನ್ನಪೂರ್ಣ ಅವರು ವ್ಯಂಗ್ಯವಾಡಿದ್ದಾರೆ.


News 9 Today

Leave a Reply