ಅಬಕಾರಿ ಅಧಿಕಾರಿಗಳ ಕಿರುಕುಳ.ಬಳ್ಳಾರಿ ಜಿಲ್ಲಾ ಮದ್ಯ ಮಾರಾಟ ಸಂಘದ ಅಧ್ಯಕ್ಷ ಸತೀಶ್ ಬಾಬು ಬಹಿರಂಗ ಆರೋಪ.
ಬಳ್ಳಾರಿ(4) ಜಿಲ್ಲಾ ಮದ್ಯ ಮಾರಾಟಗಾರರ ಸಂಘ ಮತ್ತು ರಾಜ್ಯಮಟ್ಟದ ಎಲ್ಲಾ ಸನ್ನುದಾರರ ನೇತೃತ್ವದಲ್ಲಿ ಒಂದು ದಿನ ಸಾಂಕೇತಿಕ ಧರಣಿ ಹಮ್ಮಿಕೊಳ್ಳಲಾಗಿತ್ತು ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಅಬಕಾರಿ ಅಧಿಕಾರಿಗಳ ಕಿರುಕುಳ ತುಂಬಾ ಇದೆ ಎಂದು ವಿನಾಕಾರಣ ಪ್ರಕರಣಗಳು ದಾಖಲೆ ಮಾಡಿ ತೊಂದರೆ ಮಾಡುತ್ತಿದ್ದಾರೆ ಎಂದು 5ಸಾವಿರ ದಿಂದ ಹಿಡಿದು 50 ಸಾವಿರ ವರೆಗೆ ದಂಡ ಹಾಕುತ್ತಿದ್ದಾರೆ ಎಂದು ಆಕ್ರೋಶ ಬೇಸರ ವ್ಯಕ್ತಪಡಿಸಿದ್ದರು . ಶುಕ್ರವಾರ ಬಳ್ಳಾರಿ ಜಿಲ್ಲಾ ಕಚೇರಿ ಮುಂದೆ ಸಾಂಕೇತಿಕ ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಅಧಿಕಾರಿಗಳ ಕಿರುಕುಳ ಇದೆ ಎಂದು ಬಹಿರಂಗವಾಗಿ ಬಳ್ಳಾರಿ ಜಿಲ್ಲಾ ಮದ್ಯ ಮಾರಾಟದ ಸಂಘದ ಅಧ್ಯಕ್ಷ ಸತೀಶ್ ಬಾಬು , ಆರೋಪ ಮಾಡಿದ್ದಾರೆ.
ಅಂದರೆ ಜಿಲ್ಲೆ ಯಲ್ಲಿ ಅಬಕಾರಿ ಅಧಿಕಾರಿಗಳು ಕಿರುಕುಳ ಎಷ್ಟರ ಮಟ್ಟಗೆ ಇದೇ, ಏನೋ ಆಲೋಚನೆ ಇಟ್ಟುಕೊಂಡು, ಈರೀತಿ ಕಿರುಕುಳ ಇದರ ಹೆಂದೆ ಅಸಲಿ ಮರ್ಮ ಇದೇ.??. ಸತೀಶ್ ಬಾಬು ಅವರು ತುಂಬಾ ದೊಡ್ಡ ಮದ್ಯದ ಉದ್ಯಮಿ, ಎಲ್ಲಿ ಏನು ಮಾಡಬೇಕು ಅಲ್ಲಿ ಮಾಡುವ ಸಾಮರ್ಥ್ಯ ಉಳ್ಳವ ಉದ್ಯಮಿ, ಇಂಥವರಿಗೆ ಅಧಿಕಾರಿಗಳ ಕಿರುಕುಳ ಇದೆ ಎಂದರೆ ಅಬಕಾರಿ ಅಧಿಕಾರಿಗಳ ಕರ್ತವ್ಯ ಎಷ್ಟು ಭ್ರಷ್ಟಾಚಾರಕ್ಕೆ ಹೋಗುತ್ತೆ ಎನ್ನುವುದು ಮೇಲುನೋಟಕ್ಕೆ ಕಂಡು ಬರುತ್ತದೆ.
ಇಂತಹ ಅಧಿಕಾರಿಗಳು ಇತರ ಅಂಗಡಿಗಳಿಗೆ ವ್ಯಾಪಾರ ವಹಿವಾಟು ಮಾಡುವರಿಗೆ ಇನ್ನು ಇಷ್ಟರ ಮಟ್ಟಿಗೆ ಕಿರುಕುಳ ನೀಡಿರಬಹುದು.. ಅನ್ನೋದು ಸಾರ್ವಜನಿಕರ ಪ್ರಶ್ನೆಯಾಗಿದೆ.