*ಅಕ್ರಮ ಪಡಿತರ ವಶ.* ಬಳ್ಳಾರಿ,(9)ಸಿರುಗುಪ್ಪ ಪೊಲೀಸರ ದಾಳಿ ಅಕ್ರಮವಾಗಿ ಸಾಗಾಣಿಕೆ ಮಾಡುತಿದ್ದ ರೂ.4,21,000/- ಬೆಲೆಯ 560 ಚೀಲ ಪಡಿತರ ಅಕ್ಕಿ ವಶ, ಒಬ್ಬ ಆರೋಪಿಯ ಬಂಧನ.
ದಿನಾಂಕ: 07-09-2022 ರಂದು ಶ್ರೀ ಟಿ. ಮಹೇಶ ಆಹಾರ ಶಿರಸ್ತೆದಾರರು ಸಿರುಗುಪ್ಪ ಮತ್ತು ಶ್ರೀ ಕೆ.ರಂಗಯ್ಯ ಪಿ.ಎಸ್.ಐ. (ಕಾಸು) ಸಿರುಗುಪ್ಪ ಪೊಲೀಸ್‌ಠಾಣೆ ಹಾಗು ಸಿಬ್ಬಂದಿಯ ರವರು ಖಚಿತ ಮಾಹಿತಿ ಮೇರೆಗೆ ಸಿರುಗುಪ್ಪ ತಾಲೂಕಿನ ಇಬ್ರಾಂಪುರ ಗ್ರಾಮದ ಚೆಕ್ ಪೋಸ್ಟ್ ಹತ್ತಿರ, ಆಂದ್ರದಿಂದ ಕಾರಟಗಿಗೆ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಲಾರಿ ನಂಬರ್: ಕೆಎ34,ಎ8183 ನೇದ್ದರ ಮೇಲೆ ದಾಳಿಮಾಡಿ, ಅಕ್ರಮವಾಗಿ ಯಾವುದೇ ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ 560 ಪ್ಲಾಸ್ಟಿಕ್ ಚೀಲಗಳಲ್ಲಿ 280ಕ್ವಿಂಟಿಲ್ 70ಕೆ.ಜಿ. ಅಂದಾಜು ಬೆಲೆ 4,21,050/- ರೂಪಾಯಿಗಳು ಬೆಲೆ ಬಾಳುವ ಪಡಿತರ ಅಕ್ಕಿಯನ್ನು ಜಪ್ತುಪಡಿಸಿಕೊಳ್ಳಲಾಗಿದೆ. ಅಕ್ರಮವಾಗಿ ಅಕ್ಕಿಯನ್ನು ಸಾಗಿಸುತ್ತಿದ್ದ ಲಾರಿ ಚಾಲಕ ಮತ್ತು ಲಾರಿ ಮಾಲೀಕನ ವಿರುದ್ದು ಪ್ರಕರಣ ದಾಖಲಿಸಿ ಈ ಕೆಳಕಂಡ ಆರೋಪಿತನನ್ನು ಬಂಧಿಸಿ ಮುಂದಿನ ತನಿಖೆಯನ್ನು ಕೈಗೊಳ್ಳಲಾಗಿರುತ್ತದೆ.
ಆರೋಪಿತರ ಹೆಸರು:- 1.ರಜಾಕವಲಿ, ಲಾರಿ ಚಾಲಕ, 26ವರ್ಷ, ವಾಸ: ಮಿಲ್ಲರಪೇಟೆ, ಬಳ್ಳಾರಿ
ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಶ್ರೀ ಎಂ.ಜಿ.ಸತ್ಯನಾರಾಯಣರಾವ್ ಡಿ.ವೈ.ಎಸ್.ಪಿ ಸಿರುಗುಪ್ಪ ಉಪ-ವಿಭಾಗ, ಶ್ರೀ ಮಂಜುನಾಥಸ್ವಾಮಿ ತಹಶೀಲ್ದಾರರು ಸಿರುಗುಪ್ಪ, ಇವರ ಮಾರ್ಗದರ್ಶನದಲ್ಲಿ, ಕೆ. ರಂಗಯ್ಯ ಪಿ.ಎಸ್.ಐರವರ ನೇತೃತ್ವದಲ್ಲಿ, ಶ್ರೀ ಟಿ. ಮಹೇಶ ಆಹಾರ ಶಿರಸ್ತೆದಾರರು, ಹಾಗು ಸಿರುಗುಪ್ಪ ಪೊಲೀಸ್ ಠಾಣೆಯ ಅಧಿಕಾರಿ & ಸಿಬ್ಬಂದಿಯರು ಭಾಗವಹಿಸಿದ್ದು ಈ ಕಾರ್ಯಕ್ಕೆ ಎಸ್.ಪಿ.ಬಳ್ಳಾರಿ ರವರು ಮೆಚ್ಚಗೆಯನ್ನು ಸೂಚಿಸಿರುತ್ತಾರೆ.ರಾಯಚೂರು ಕೊಪ್ಪಳ, ಜಿಲ್ಲೆ ಗಳು ಅಕ್ರಮ ಪಡಿತರ ದಂದೆ ರಾಜರೋಷವಾಗಿ ನಡೆಯುತ್ತದೆ. ಗಡಿ ಭಾಗಗಳಲ್ಲಿ ದಿಂದ,ಮತ್ತು ಸ್ಥಳೀಯ ಅಹಾರ ಸರಬರಾಜು ಗೋದಾಮು ಗಳು ಯಿಂದ ರೈಸ್ ಮಿಲ್ ಗಳು ಗೆ ಹೋಗುತ್ತವೆ. ಅಧಿಕಾರಿಗಳು ಗೆ ಕಣ್ಣು ಕಾಣದಂತೆ ಅಗಿವೆ.