This is the title of the web page
This is the title of the web page

Please assign a menu to the primary menu location under menu

State

ಶ್ರೀ ಲಲಿತಾನಂದನಾಥ ನಾದ ಆಶೀರ್ವಾದ ಐರಣಿ

ಶ್ರೀ ಲಲಿತಾನಂದನಾಥ ನಾದ ಆಶೀರ್ವಾದ ಐರಣಿ

ಶ್ರೀ ಲಲಿತಾನಂದನಾಥ ನಾದ ಆಶೀರ್ವಾದ ಐರಣಿ

ಸಿರುಗುಪ್ಪ: ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ನಗರದ ಪತ್ರಕರ್ತ ರಾಜೀವ ಐರಣಿ ಇವರ ಏಕೈಕ ಸುಪುತ್ರ ಆಶೀರ್ವಾದ ಐರಣಿ ತನ್ನ ಹತ್ತನೇ ವಯಸ್ಸಿನಲ್ಲಿ ವೇದಾಧ್ಯಯನದಲ್ಲಿ ಆಸಕ್ತಿ ಮೂಡಿಸಿಕೊಂಡು ಕನಕಪುರ ಬಳಿಯ ಓಂ ಶಾಂತಿಧಾಮ ವೇದ ಗುರುಕುಲದಲ್ಲಿ ಶಿಕ್ಷಣಾರ್ಥಿಯಾದರು. ರಾಜ್ಯ ಸರ್ಕಾರಿ ಪಠ್ಯಕ್ರಮದ ಜೊತೆಗೆ ವೇದಧ್ಯಾಯನ ಮಾಡಿದರು. ಇದಕ್ಕೂ ಮೊದಲೇ ಶ್ರೀ ಯೋಗಾತ್ಮಾನಂದರಿಂದ ಬಾಲಪಾಠ ಪಡೆದಿದ್ದ ಕಾರಣ ಕಲಿಕೆ ಸುಗಮವಾಗಿತ್ತು

ಗುರುಕುಲದಲ್ಲಿನ ಗುರುಮಾತೆ ಲಕ್ಷ್ಮಾಂಬಾ ಇವರಿಂದ ಬ್ರಹ್ಮವಿದ್ಯಾದೀಕ್ಷೆ ಮತ್ತು ಯೋಗದರ್ಶನ, ಉಪನಿಷತ್ ಹಾಗೂ ಸಂಖ್ಯಾಶಾಸ್ತ್ರ ಅಧ್ಯಯನ ಮಾಡಿದರು.

ಪದವಿ ಪೂರ್ವ ಶಿಕ್ಷಣಕ್ಕಾಗಿ ಮೈಸೂರು ನಗರದಲ್ಲಿ ಉನ್ನತ ಶಿಕ್ಷಣ ಜೊತೆಗೆ ಸಾಮವೇದ ಅದ್ಯಯನ ಮಾಡತ್ತಾ ಹೀಲಿಂಗನ್ನೂ ಅಧ್ಯಯನ ಮಾಡುತ್ತಾ ಪದವಿಧರರಾಗುತ್ತಾರೆ

ಈ ಶೋಭಕೃತ್ ನಾಮ ಸಂವತ್ಸರದಲ್ಲಿ ಗುರು ಪೌರ್ಣಮಿಯಂದು ತಮಿಳುನಾಡಿನ ಚೆನ್ನೈ ನಗರದ ತಾಂಬರಮ್ ಪ್ರದೇಶದ ಶ್ರೀಗುರು ಸನ್ನಿಧಾನದಲ್ಲಿ 40ಕ್ಕೂ ಹೆಚ್ಚು ಪಂಡಿತರ ಹಾಗೂ ಉಪಾಸಕರುಗಳ ಸಮ್ಮುಖದಲ್ಲಿ ಶ್ರೀ ಗುಹಾನಂದನಂದನಾಥ ಪರಂಪರಾಪ್ರಾಪ್ತ ಪರಮಹಂಸಿಕಾ ಶ್ರೀಚಂಪಕಾಂಬಾ ಪರಮಗುರು ಅನುಗ್ರಹದಿಂದ ಶ್ರೀಗಗನಾಂಬಿಕಾ ಸಹಿತ ಶ್ರೀಗಗನಾನಂದನಾಥ ಶ್ರೀಗುರುಗಳಿಂದ ಪೂರ್ಣಾಭಿಷೇಕ ಪಡೆದು ಇದೀಗ *ಶ್ರೀಲಲಿತಾಾನಂದನಾಥ* ಹೆಸರಿನಲ್ಲಿ ಪೂರ್ಣಾಭಿಷೇಕ ಗೊಂಡಿರುತ್ತಾರೆ.
ಇದೀಗ ದೇದಿಪ್ಯಮಾನ ಸಾಧನೆಯ ಅರ್ಹತೆಗೆ ಪಾತ್ರರಾಗಿದ್ದು ಧನ್ಯತೆಯ ಬಾವ ಎಲ್ಲರಲ್ಲೂ ಮೂಡುವಂತಾಗಿದೆ.

ಇವರನ್ನು ಅನೇಕ ಉಪಾಸಕರು ವಿದ್ವಾಂಸರುಗಳು ಮುಕ್ತ ಕಂಠದಿಂದ ಶ್ಲಾಘಿಸಿದ್ದು ಕಿರಯ ವಯಸ್ಸಿನಲ್ಲಿ ಇಂಥಹ ಸಾಧನೆ ಮಾಡಿದ ಇವರು ಇನ್ನು ಹೆಚ್ಚಿನ ಕೊಡುಗೆಗಳನ್ನು ಲೋಕಕ್ಕೆ ನೀಡಲಿ ಎಂದು ಆಶೀರ್ವಾದ ಪೂರಕವಾಗಿ ಹರಸಿರುತ್ತಾರೆ.


News 9 Today

Leave a Reply