*ಸೊಳ್ಳೆ, ಕೀಟಗಳ ಬಾಧೆಯಿಂದ ಬೇಸತ್ತ ಸಿಬ್ಬಂದಿ.*
*ಮೂಲ ಸೌಕರ್ಯಗಳಿಲ್ಲದೆ ಹೈರಾಣದ ಚೆಕ್ ಪೋಸ್ಟ್ ಸಿಬ್ಬಂದಿ.*
ಬಳ್ಳಾರಿ : ಕರ್ನಾಟಕ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿದ್ದು, ಚುನಾವಣೆ ಕರ್ತವ್ಯವನ್ನು ಜವಾಬ್ದಾರಿಯುತವಾಗಿ ನಡೆಸುವ ಕರ್ತವ್ಯ ಎಲ್ಲಾ ಅಧಿಕಾರಿಗಳಿಗೆ ಇರುತ್ತದೆ.
ಚುನಾವಣೆ ನಡೆಸುವ ಸಂಬಂಧ ಪಾರದರ್ಶಕತೆಯಿಂದ ಕಾಪಾಡುವ ಸಲುವಾಗಿ ಚೆಕ್ ಪೋಸ್ಟ್ ನಿರ್ಮಾಣ ಮಾಡಲಾಗುತ್ತದೆ.
ಚುನಾವಣೆ ಹಿನ್ನೆಲೆಯಲ್ಲಿ ಚೆಕ್ ಪೋಸ್ಟ್ ಸೇರಿದಂತೆ ಇತರೆಗಳಿಗೆ ಕೋಟಿ ಕೋಟಿ ಹಣ ಖರ್ಚು ಮಾಡಲಾಗುತ್ತದೆ.
ಜಿಲ್ಲೆಯಲ್ಲಿ ಪಾರದರ್ಶಕ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸುವ ನಿಟ್ಟಿನಲ್ಲಿ ಚೆಕ್ ಪೋಸ್ಟ್ ನಿರ್ಮಿಸಿ ಭದ್ರತೆ ವ್ಯವಸ್ಥೆ ಕಲ್ಪಿಸಿ ಸಿಬ್ಬಂದಿಗಳು ನೇಮಿಸಲಾಗುತ್ತದೆ.
ಚೆಕ್ ಪೋಸ್ಟ್ ಗಳಲ್ಲಿ ಹಗಲು ರಾತ್ರಿ ಕಾರ್ಯನಿರ್ವಹಿಸುವ ತನಿಖೆ ಸಿಬ್ಬಂದಿಗಳಿಗೆ ಸೂಕ್ತ ಮೂಲಭೂತ ಸೌಕರ್ಯಗಳನ್ನು ಒದಗಿಸದ ಪರಿಸ್ಥಿತಿ ಸದ್ಯ ಎದುರಾಗಿದೆ.
ಬಳ್ಳಾರಿ ನಗರ ಸೇರಿದಂತೆ ಗ್ರಾಮೀಣ ಭಾಗದ ಕೆಲವೊಂದು ಕಡೆ ಮೂಲ ಸೌಕಾರ್ಯಗಳಿಲ್ಲದೆ ಸಿಬ್ಬಂದಿಗಳು ಹೈರಾಗಿದ್ದಾರೆ.
ಸೊಳ್ಳೆಗಳ ಕಾಟ, ವಿಷಪೂರಿತ,ಕೀಟಗಳ ಬಾಧೆಯಿಂದ ಸಿಬ್ಬಂದಿಗಳಿಗೆ ಕರ್ತವ್ಯ ನಿರ್ವಹಿಸಲು ತಲೆನೋವಾಗಿ ಪರಿಣಮಿಸಿದೆ.
ಬಳ್ಳಾರಿ ಜಿಲ್ಲೆಯ ವಿವಿಧ ತಾಲ್ಲೂಕಿನ ಪ್ರದೇಶಗಳಲ್ಲಿ ಚೆಕ್ ಪೋಸ್ಟ್ ಸಿಬ್ಬಂದಿಗಳು ತುಂಬಾ ಸಮಸ್ಯೆಗಳನ್ನು ಎದುರಿಸುತ್ತಾರೆ.
ಸೊಳ್ಳೆಗಳ ಕಾಟಗಳಿಂದ ರಾತ್ರಿ ಪಾಳೆಯಲ್ಲಿ ಕೆಲಸ ಮಾಡುವ ಸಿಬ್ಬಂದಿಗಳ ರಕ್ತ ಹಿರುತ್ತಿವೆ.
ಆರೋಗ್ಯವನ್ನು ಹಾಳು ಮಾಡಿಕೊಂಡು ಕರ್ತವ್ಯ ನಿರ್ವಹಿಸುವ ಸನ್ನಿವೇಶ ಬಂದಿದೆ.
ಕುಡಿಯುವ ನೀರು, ಊಟ, ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಕೂಡ ಸರಿಯಾಗಿ ಇಲ್ಲ.
ಚುನಾವಣೆಗೆ ಎಂದು ಕೋಟಿಗಟ್ಟಲೇ ಖರ್ಚು ಮಾಡುವ ಜಾಯಮಾನದಲ್ಲಿ ಇದ್ದು, ಚುನಾವಣೆಯ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಳಿಗೆ ಕನಿಷ್ಠ ಮೂಲ ಸೌಕರ್ಯಗಳಿಲ್ಲದಿರುವುದು ನೋವಿನ ಸಂಗತಿ.
ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಪಾಟಿ ಅವರು ಇಂತಹ ಕನಿಷ್ಠ ಸಮಸ್ಯೆಗಳನ್ನು ಆಲಿಸಿ, ಚುನಾವಣೆ ಸಿಬ್ಬಂದಿಗಳಿಗೆ ಅಗತ್ಯ ಮೂಲಭೂತ ಸೌಲಭ್ಯ ಒದಗಿಸಲು ಮುಂದಾಗಬೇಕಿದೆ. ಸಿಬ್ಬಂದಿ ಗಿಡ ಗಂಟಲು ಕಳಗೆ ಅಜೂಬಾಜ್ ಇರುವ ಡಬ್ಬಿ ಅಂಗಡಿಗಳು ಕಳಗೆ ನಿಂತು ಕರ್ತವ್ಯ ಮಾಡುವ ವಾತಾವರಣ ಸೃಷ್ಟಿ ಅಗಿದೆ. ಸಮಯಕ್ಕೆ ತಿಂಡಿ ಸಿಗದೆ ಬಿಸ್ಕತ್ತು, ಬಟಾಣಿ, ತಿಂದು ಕರ್ತವ್ಯ ಮಾಡುವ ಸ್ಥಿತಿ ಇದೆ ಅನ್ನುತ್ತಾರೆ ಅವರ ಪರಿಸ್ಥಿತಿ ನೋಡದ ಜನರು.
(ಕೆ.ಬಜಾರಪ್ಪ ವರದಿಗಾರರು ಕಲ್ಯಾಣ ಕರ್ನಾಟಕ.)