ಲಾರಿ ಮಾಲೀಕರ ಮುಷ್ಕರ
ಬಳ್ಳಾರಿ (12)ಫೆಡರೆಷನ್ ಆಫ್ ಕರ್ನಾಟಕ ಲಾರಿ ಸ್ಟೇಟ್ ಲಾರಿ ಓನರ್ಸ್ ಅಂಡ್ ಏಜೆಂಟ್ಸ್ ಅಸೋಸಿಯೇಷನ್ (ರಿ) ನ ಅಧ್ಯಕ್ಷರಾದ ಮಾನ್ಯ ಶ್ರೀ ಜಿ.ಅರ್. ಷಣ್ಮುಗಪ್ಪ ಇವರ ಅಧ್ಯಕ್ಷತೆಯಲ್ಲಿ ರಾಜ್ಯ ಲಾರಿ ಮಾಲೀಕರ ಜಿಲ್ಲಾ ಮತ್ತು ತಾಲೂಕು ಮಟ್ಟದ ಸಂಘಟನೆಗಳು ಸೇರಿ ದಿನಾಂಕ 05-04-2025 ರಂದು ಬೆಳ್ಳಿಗ್ಗೆ 10.30 ಗಂಟೆಗೆ ಸರಿಯಾಗಿ ಹೋಟೆಲ್ ಪ್ರಕಾಶ್ ಕೆಫೆ ಚಾಮರಾಜಪೇಟೆ, ಬೆಂಗಳೂರು -18 ಇಲ್ಲಿ ರಾಜ್ಯ ಸರ್ಕಾರದ ಬೆಲೆ ಏರಿಕೆಯ ಕುರಿತು ತುರ್ತು ಸಭೆಯನ್ನು ಏರ್ಪಡಿಸಲಾಗಿರುತ್ತದೆ.
ಈ ಸಭೆಯಲ್ಲಿ ದಿನಾಂಕ : 15-04-2025 ರಂದು ಬೆಳ್ಳಿಗ್ಗೆಯಿಂದ ಅನಿರ್ಧೀಷ್ಟವಾದಿ ಲಾರಿ ಮಾಲೀಕರ ಮುಷ್ಕರವನ್ನು ಕೈಗೊಳಲು ತಿರ್ಮಾನಿಸಲಾಗಿದೆ. ಈ ಮುಷ್ಕರಕ್ಕೆ ಬಳ್ಳಾರಿ ಜಿಲ್ಲಾ ಲಾರಿ ಮಾಲೀಕರ ಸಂಘದಿಂದ ಬೆಂಬಲ ನೀಡಲಾಗಿದೆ.
1. ಡೀಸಲ್ ದರ ಹೆಚ್ಚಳ .
ಕಳೆದ ವರ್ಷ 2024 ಜೂನ್ ತಿಂಗಳಲ್ಲಿ ರೂ. 3.00 ರೂಪಾಯಿ ಹೆಚ್ಚಳ ಮಾಡಿದ್ದು ಪುನಃ 2025 ಏಪ್ರಿಲ್ 01 ರಿಂದ ಏಕಾಏಕಿ ಯಾವುದೇ ಮುನ್ನುಚನೆಯನ್ನು ನೀಡದೆ ತಮ್ಮ ಸರ್ಕಾರ ಡೀಸಲ್ ಬೆಲೆಯನ್ನು 2.00 ರೂಪಾಯಿಗಳಷ್ಟು ಹೆಚ್ಚಿಸಿ ಲಾರಿ ಉದ್ಯಮದ ಮೇಲೆ ಬರೆ ಎಳದ್ದಿದ್ದಾರೆ. ಇದು ಎಷ್ಟು ಸಮಂಜಸ ನಮ್ಮ ಗಡಿ ಬಾಗದ ರಾಜ್ಯಗಳಲ್ಲಿ ಡೀಸಲ್ ಬೆಲೆ ಕರ್ನಾಟಕ ರಾಜ್ಯಕ್ಕಿಂತ ಹೇಚ್ಚು ಇದ್ದಾಗ ಹೊರ ರಾಜ್ಯದ ಲಾರಿಗಳು ನಮ್ಮ ರಾಜ್ಯದಲ್ಲಿ ಲಕ್ಷಾಂತರ ಲೀಟರ್ ಡೀಸಲ್ ತುಂಬಿಸಿಕೊಳ್ಳುತ್ತಿದ್ದವು. ಅದ್ದರಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಯಥೇಚ್ಚವಾಗಿ ತೆರೆಗೆ ರೂಪಾದಲ್ಲಿ ಹಣವು ಹರಿದು ಬರುತ್ತಿದ್ದು ಈಗ ಬೆಲೆ ಹೆಚ್ಚಳದಿಂದ ಆಯಾ ರಾಜ್ಯದ ವಾಹನಗಳು ಇನ್ನು ಮುಂದೆ ನಮ್ಮ ರಾಜ್ಯದಲ್ಲಿ ಡೀಸಲ್ ತುಂಬಿಸುವುದಿಲ್ಲ. ಇದರಿಂದ ರಾಜ್ಯ ಸರ್ಕಾರ ಬೊಕ್ಕಸಕ್ಕೆ ಹೇಳತೀರದಷ್ಟು ನಷ್ಟ ಉಂಟಾಗುತ್ತದೆ. ದಯವಿಟ್ಟು ಈಗ ಹೆಚ್ಚಿಸಿರುವ ಡೀಸಲ್ ದರವನ್ನು ಹಿಂಪಡೆಯಬೇಕೆಂದು ತಮ್ಮಲ್ಲಿ ಮನವಿ ಮಾಡಿಕೋಳ್ಳುತ್ತೆವೆ.
2. ಟೋಲ್ ಹೆಚ್ಚಿಸಿರುವುದು.
ಕರ್ನಾಟಕ ರಾಜ್ಯದಲ್ಲಿ ಒಟ್ಟಾರೆ 18 ರಾಜ್ಯ ಹೆದ್ದಾರಿ ಟೋಲ್ ಬೂತ್‌ಗಳಲ್ಲಿ ಶುಲ್ಕವನ್ನು ಸಂಗ್ರಹಿಸಿತ್ತಿದ್ದು ನಾವುಗಳು ಪ್ರತಿ ವಾಹನಕ್ಕೆ ರಸ್ತೆ ತೆರಿಗೆ ಮತ್ತು ಡೀಸಲ್ ಮೇಲೆ ರಸ್ತೆ ಸೆಸ್‌ನ್ನು ಕಟ್ಟುತ್ತಿದ್ದೆವೆ. ದೇಶಕ್ಕೆ ಯಾವುದೇ ರಾಜ್ಯದಲ್ಲೂ ರಾಜ್ಯ ಹೆದ್ದಾರಿ ಟೋಲ್‌ಗಳು ಇರುವುದಿಲ್ಲ ನಮ್ಮಲ್ಲಿ ಮಾತ್ರ ಈ ಮಲತಾಯಿ ದೋರಣೆ ತೋರಿ ಯಾವುದೆ ವಾಹನ ಚಾಲಕರಿಗೆ ಮೂಲಸೌಕರ್ಯಗಳು ಹಾಗೂ ರಸ್ತೆ ಅಪಘಾತ ತಡೆಯುವುಕೆ ಕ್ರಮ ವಹಿಸದೆ ಕೇವಲ ಬಣ್ಣ ಬಡಿದು ಶುಲ್ಕ ವಸಿಲಿ ಮಾಡಿತ್ತಿರುವುದು ಸಮಂಜಸವಾಗಿರುವುದಿಲ್ಲ. ಅದ್ದರಿಂದ ಈ ಕೂಡಲೇ ರಾಜ್ಯ ಹೆದ್ದಾರಿಗಳಲ್ಲಿ ಟೋಲ್ ಶುಲ್ಕವನ್ನು ಸಂಗ್ರಹಿಸುವುದನ್ನು ಕೂಡಲೇ ಕೈಬಿಡಬೇಕೇಂದು ಎಲ್ಲಾ ಸಂಘ ಸಂಸ್ಥೆಗಳು ಹಾಗೂ ಸಂಘಟನೆಗಳು ಅಗ್ರಹಿಸುತ್ತೆವೆ.
3. ಬಾರ್ಡರ್ ಚೆಕ್‌ಪೋಸ್ಟ್ ತೆರುವುಗೊಳಿಸಬೇಕು.
ಭಾರತ ದೇಶದ ಡಿಜಟಲ್ ಇಂಡಿಯಾ ಆದ ನಂತರ ದಿನ ನಿತ್ಯ ಬೀದಿ ವ್ಯಾಪಾರಗಳಿಂದ ಹಿಡಿದು ಬ್ಯಾಂಕುಗಳು ಸಾವಿರಾರು ಕೋಟಿಯ ಹಣದ ವ್ಯವಹಾರದಿಂದ ಎಲ್ಲಾ ಇಲಾಖೆಯ ದಾಖಾಲಾತಿಗಳವರೆವಿಗೂ ತಂತ್ರಾಜ್ಞಾನದ ಅಳವಡಿಕೆಯಿಂದ ಬಹಳಷ್ಟು ಮುಂದುವರೆದ ಕಾರಣ ಆರ್.ಟಿ.ಓ ಇಲಾಖೆಯ ಬಾರ್ಡರ್ ಚೆಕ್‌ಪೋಸ್ಟ್ ಅವಶ್ಯಕತೆ ಏನಿರುತ್ತದೆ. ಈಗಾಗಲೇ ದೇಶದ ಹಲವಾರು ರಾಜ್ಯಗಳಲ್ಲಿ ಈಗಾಗಲೇ ಎಲ್ಲಾ ಚೆಕ್‌ಪೋಸ್ಟ್‌ಗಳನ್ನು ರದ್ದು ಮಾಡಿರುತ್ತಾರೆ.
ಏಪ್ರಿಲ್ 15 ತಾರೀಖಿನಿಂದ ಮಹಾರಾಷ್ಟ್ರದ ಬಾರ್ಡರ್ ಚೆಕ್‌ಪೋಸ್ಟ್‌ನ್ನು ಮಹಾರಾಷ್ಟ್ರ ಸರ್ಕಾರವು ಸಹ ರದ್ದುಗೊಳಿಸಲು ಆದೇಶಿರುತ್ತದೆ. ಕೂಡಲೇ ತಾವು ಕರ್ನಾಟಕದ ಗಡಿ ಭಾಗದ ಚೆಕ್‌ಪೋಸ್ಟ್‌ನ್ನು ರದ್ದುಗೊಳಿಸಬೇಕು.
4. ಎಫ್.ಸಿ ಶುಲ್ಕ ಹೆಚ್ಚಳ
ಲಾರಿ ಉದ್ಯಮಕ್ಕೆ ಸಂಭಂದಪಟ್ಟ ಪ್ರತಿಯೊಂದು ಅಂಶದಲ್ಲೂ ತಾವುಗಳು ಈ ರೀತಿ ಬೆಲೆ ಹೆಚ್ಚಳ ಮಾಡುವುದರಿಂದ ಲಾರಿ ಉದ್ಯಮವನ್ನು ಕಷ್ಟಕರವಾಗಿರುತ್ತದೆ. 15 ವರ್ಷಗಳ ಬಳಿಕ ದೈಹಿಕ ಸಾಮರ್ಥ್ಯದ ಶುಲ್ಕವನ್ನು ಏಕಾಏಕಿ ರೂ 15000 ರೂಪಾಯಿಗೆ ಏರಿಸಲು ಕೇಂದ್ರ ಸರ್ಕಾರ ಮಾರ್ಗಸೂಚಿಯನ್ನು ವರಡಿಸಿರುತ್ತದೆ. ಆದರೆ ಈ ಶುಲ್ಕವು ರಾಜ್ಯ ಹಣಕಾಸಿಗೆ ಸಂಬಂದ ಪಟ್ಟಿರುವುದರಿಂದ ಈ ಮಾರ್ಗಸೂಚಿಯನ್ನು ಯಾವುದೇ ಕಾರಣಕ್ಕೂ ಕಾರ್ಯ ರೂಪಕ್ಕೆ ತರಬಾರದೆಂದು ಎಲ್ಲಾ ಸಂಘ ಸಂಸ್ಥೆಗಳು ಹಾಗೂ ಸಂಘಟನೆಗಳು ಅಗ್ರಹಿಸಿತ್ತೆವೆ.
5. ಸರಕು ಸಾಗಣಿಕೆ ವಾಹನಗಳಿಗೆ NO ENTRY
ಬೆಂಗಳೂರು ಸೇರಿದಂತೆ ರಾಜ್ಯದ ಹಲವು ನಗರದ ಒಳಗಡೆ ಸರಕು ಸಾಗಣಿಕೆ ವಾಹನಗಳನ್ನು ನಿಷೇದ ಮಾಡಿ ಕೇವಲ 5 ಗಂಟೆ ಸಮಯವನ್ನು ನಮಗೆ ನೀಡಿರುತ್ತಿರಿ. ಆದರೆ ಈ ಒಂದು ನಮ್ಮ ಇಡೀ ಟ್ರಾನ್ಸ್‌ಪೋರ್ಟ
ಉದ್ಯಮದ ಮೇಲೆ ಬಹಳ ವ್ಯತಿರಿಕ್ತವಾದ ಪರಿಣಾಮ ಉಂಟಾಗಿ ಚಾಲಕರ ಕೋರತೆಯನ್ನು ಹೆದುರಿಸುತ್ತಿದ್ದೆವೆ. ದಯಮಾಡಿ ಇದರ ಬಗ್ಗೆ ಕುಲಂಕುಶವಾಗಿ ಪರಿಶೀಲನೆ ಮಾಡಿ ಸಂಭಂದಪಟ್ಟ ಅಧಿಕಾರಿಗಳ ಸಭೆಯನ್ನು ನಮ್ಮ ಉಪಸ್ಥಿತಿಯಲ್ಲಿ ನಡೆಸಬೇಕೇಂದು ತಮ್ಮಲ್ಲಿ ಕೇಳಿಕೋಳ್ಳುತ್ತವೆ. NO ENTRY ಹೆಸರಿನಲ್ಲಿ ನಮ್ಮ ಚಾಲಕರಿಗೆ ಪೊಲೀಸರಿಂದ ಮತ್ತು ಆರ್.ಟಿ.ಒಗಳಿಂದ ಕಿರುಕುಳವು ಹೆಚ್ಚಾಗಿ ಕಂಡು ಬಂದಿರುತ್ತದೆ.
ದಿನಾಂಕ 05-04-2025 ರ ಬೆಂಗಳೂರಿನಲ್ಲಿ ಸಭೆ ಸೇರಿ ದಿನಾಂಕ 14-04-2025ರ ವರೆಗೂ ಸರ್ಕಾರಕ್ಕೆ ಗಡವೂ ನೀಡುತ್ತಿದ್ದು ದಿನಾಂಕ 15-04-2025 ರ ಬೆಳ್ಳಿಗ್ಗೆ 6.00 ಗಂಟೆಯಿಂದ ಅನಿರ್ಧಿಷ್ಟ ಮುಷ್ಕರ ಕೈಗೊಳ್ಳಲಾಗುವುದು.
ಸರ್ಕಾರಕ್ಕೆ ಲಾರಿ ಉದ್ಯಮದಿಂದ ಅತಿ ಹೆಚ್ಚು ತೆರಿಗೆ ಜಮಾ ಆಗುತ್ತಿರುತ್ತದೆ.
ವಾಹನಗಳ ಬಿಡಿಭಾಗಗಳು (ಸ್ಪೇರ್‌ಪಾರ್ಟ್ಸ್, ಟೈರ್, ಟ್ಯುಬ್, ಡಿಸಲ್ ಹಾಗೂ ಮುಂತಾದವುಗಳು) ಇವುಗಳ ಮೇಲೆ ಹೆಚ್ಚು ತೆರಿಗೆ ಪಾವತಿ ಮಾಡಲಾಗುತ್ತಿರುತ್ತದೆ. ಈಗಿರುವಾಗ ಸರ್ಕಾರದಿಂದ ನಮ್ಮ ಉದ್ಯಮಕ್ಕೆ ಯಾವೂದೇ ಅಗತ್ಯ ಅನೂಕೂಲಗಳು ಇಲ್ಲದ್ದಿದ್ದರು ಸಹ ಈ ಬೆಲೆ ಏರಿಕೆಗಳಿಂದ ಲಾರಿ ಮಾಲೀಕರು ತತ್ತಾರಿಸಿ ಹೊಗುತ್ತಿರುತ್ತಾರೆ ಎಂದು ಶನಿವಾರ ಬಳ್ಳಾರಿ ನಗರದ ಪತ್ರಿಕಾ ಭವನ ದಲ್ಲಿ ಪತ್ರಿಕಾ ಗೋಷ್ಠಿ ಮಾಡಿ ಬಳ್ಳಾರಿ ಜಿಲ್ಲಾ ಲಾರಿ ಮಾಲೀಕರ ಸಂಘದ ಅಧ್ಯಕ್ಷರು ವಿ. ಶ್ರೀನಿವಾಸ್ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ,ಮಾಜಿ ಅಧ್ಯಕ್ಷರು ಪೆದ್ದನ್ನ, ಮಹೇಬು ಭಾಷ, ಮಾಜಿ ಸೆಕ್ರೆಟರಿ ಬಸವರಾಜ್.ಪೂಜಾ ದೇವಿ ಸೀನ, ವಿಶ್ವನಾಥ್ ಫಯಾಜ್. ಇನ್ನೂ ಲಾರಿ ಮಾಲೀಕರು ಉಪಸ್ಥಿತರಿದ್ದರು.