This is the title of the web page
This is the title of the web page

Please assign a menu to the primary menu location under menu

State

ಗಾಂಧಿನಗರ ಪೋಲಿಸರ ಯಶಸ್ವಿ ಕಾರ್ಯಾಚರಣೆ ಬ್ಯಾಟರಿ, ಇನವರ್ಟರ್,ಯುಪಿಎಸ್ ಕಳ್ಳತನ ಮಾಡಿದ ಆರೋಪಿತರ ಬಂಧನ.

ಗಾಂಧಿನಗರ ಪೋಲಿಸರ ಯಶಸ್ವಿ ಕಾರ್ಯಾಚರಣೆ ಬ್ಯಾಟರಿ, ಇನವರ್ಟರ್,ಯುಪಿಎಸ್ ಕಳ್ಳತನ ಮಾಡಿದ ಆರೋಪಿತರ ಬಂಧನ.

*ಗಾಂಧಿನಗರ ಪೋಲಿಸರ ಯಶಸ್ವಿ ಕಾರ್ಯಾಚರಣೆ ಬ್ಯಾಟರಿ, ಇನವರ್ಟರ್,ಯುಪಿಎಸ್ ಕಳ್ಳತನ ಮಾಡಿದ ಆರೋಪಿತರ ಬಂಧನ.*
ಬಳ್ಳಾರಿ(8)ಗಾಂಧಿನಗರ ಪೋಲಿಸರ ಯಶಸ್ವಿ ಕಾರ್ಯಾಚರಣೆ ಬ್ಯಾಟರಿ, ಇನವರ್ಟರ್,ಯುಪಿಎಸ್ ಕಳ್ಳತನ ಮಾಡ ಆರೋಪಿತರ ಬಂಧನ 92,000/- ಮೌಲ್ಯದ ವಸ್ತುಗಳು ಜಪ್ತಿ.

ದಿನಾಂಕ 5-05-2024 ರಂದು ರಾತ್ರಿ 10 ಪಿಎಂ ನಿಂದ ದಿನಾಂಕ 6-05-2024 ರ ಬೆಳಿಗ್ಗೆ 6.00 ಎಎಂ ಸಮಯದ ಒಳಗೆ ತಾಳೂರು ರಸ್ತೆಯ ನ್ಯಾಯಾಧೀಶರ ವಸತಿ ಗೃಹದ ಹೊರಗಡೆ ಆಳವಡಿಸಿರುವ 2 ಇನವರ್ಟರ್ 4 ಬ್ಯಾಟರಿ ಕಳ್ಳತನ ಮಾಡಿದ ಬಗ್ಗೆ ಬಳ್ಳಾರಿ ನ್ಯಾಯಾಲಯದ ಶಿರಸ್ತೇದಾರರಾದ ಜಯಣ್ಣ ರವರು ನೀಡಿದ ದೂರಿನ ಮೇರೆಗೆ ಗಾಂಧಿನಗರ ಪೋಲಿಸ್ ಠಾಣೆ ಗುನ್ನೆ ನಂ 54/2024 ಕಲಂ 379 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡಿದೆ.

ನಂತರ ಸದರಿ ಪ್ರಕರಣದಲ್ಲಿ ಆರೋಪಿತರ ಮತ್ತು ಮಾಲು ಪತ್ತೆಗಾಗಿ ಮಾನ್ಯ ಶ್ರೀಮತಿ ಶೋಭಾರಾಣಿ ವಿ.ಜೆ ಐಪಿಎಸ್ ಪೋಲಿಸ್ ಅಧೀಕ್ಷಕರು ಬಳ್ಳಾರಿರವರ ನಿರ್ದೇಶನದ ಮೇರೆಗೆ ಮಾನ್ಯ ಶ್ರೀ ಕೆ.ಪಿ ರವಿಕುಮಾರ ಕೆ.ಎಸ್.ಪಿ.ಎಸ್ ಹೆಚ್ಚುವರಿ ಪೋಲಿಸ್ ಅಧೀಕ್ಷಕರು, ಶ್ರೀ ನವೀನಕುಮಾರ ಕೆ.ಎಸ್.ಪಿ.ಎಸ್ ಹೆಚ್ಚುವರಿ ಪೋಲಿಸ್ ಅಧೀಕ್ಷಕರು-2 ರವರು, ಶ್ರೀ ಚಂದ್ರಕಾಂತ ನಂದರಡ್ಡಿ ಪೋಲಿಸ್ ಉಪಾಧೀಕ್ಷಕರು ನಗರ ಉಪವಿಭಾಗ ರವರ ಮಾರ್ಗದರ್ಶನದಂತೆ ಗಾಂಧಿನಗರ ಪೋಲಿಸ್ ಠಾಣೆಯ ಪೋಲಿಸ್ ಇನ್ಸಪೆಕ್ಟರ್ ಸಿದ್ದರಾಮೇಶ್ವರ ಗಡೇದ, ಪಿ.ಎಸ್.ಐ ನಾರಾಯಣಸ್ವಾಮಿ ಹಾಗೂ ಸಿಬ್ಬಂದಿಯವರಾದ ಹೆಡ್ ಕಾನ್ಸಟೇಬಲರವರಾದ ಜೈರಾಮ, ನಾರಾಯಣ, ಕಾನ್ಸಟೇಬಲ್‌ರವರುಗಳಾದ ಮಾರುತಿ, ತಿಮ್ಮಪ್ಪ, ಮಂಜುನಾಥ ಮತ್ತು ಚಾಲಕರಾದ ಪ್ರಶಾಂತರವರುಗಳ ತಂಡ ಸದರಿ ಪ್ರಕರಣದಲ್ಲಿ ಆರೋಪಿತರಾದ 1) ರವಿ @ಬೆಂಗಳೂರು ರವಿ ತಂ ಲೇಟ್ ಗಂಗಪ್ಪ 38 ವರ್ಷ ಆಟೋ ಡ್ರೈವರ್ ಕೆಲಸ ವಾಸ್ 2 ನೇ ಕ್ರಾಸ್ ರೇಣುಕಾ ನಗರ ಬಳ್ಳಾರಿ 2) ಈಶ್ವರ @ ಕುನ್ನ ತಂ ಗಾದಿಲಿಂಗಪ್ಪ 27 ವರ್ಷ ಅಟೋ ಡ್ರೈವರ್ ವಾಸ ಹರಿಶ್ಚಂದ್ರ ನಗರ ಬಳ್ಳಾರಿ 3) ಹನುಮಂತ @ ಹಂದಿ ಬಾಲ ತಂ ಗಾದಿಲಿಂಗಪ್ಪ 38 ವರ್ಷ ಸ್ಮಶಾನದಲ್ಲಿ ಗುಂಡಿ ತೋಡುವ ಕೆಲಸ ವಾಸ ಹರಿಶ್ಚಂದ್ರ ನಗರ ಬಳ್ಳಾರಿ ರವರನ್ನು ಇಂದು ದಿನಾಂಕ 08-08-2024 ರಂದು ಮದ್ಯಾಹ್ನ 2.00 ಗಂಟೆಗೆ ಕೆ.ಇ.ಬಿ ಸರ್ಕಲ್ ನಲ್ಲಿ ಹಿಡಿದುಕೊಂಡು ವಿಚಾರಣೆ ಮಾಡಿ ಸದರಿ ಆರೋಪಿತರಿಂದ 2 ಬ್ಯಾಟರಿಗಳು 2 ಇನ್‌ವರ್ಟ‌್ರಗಳು ಮತ್ತು ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಅದೇ ಜಾಗದಲ್ಲಿ ಕಳ್ಳತನ ಮಾಡಿದ ಗುನ್ನೆ ನಂ 137/23 ಕಲಂ 379 ಐಪಿಸಿ ಪ್ರಕರಣದ ಒಂದು ಮೈಕ್ರೋಟೆಕ್ ಕಂಪನಿಯ ಡಬಲ್ ಬ್ಯಾಟರಿ ಯುಪಿಎಸ್ ಎರಡು ಪ್ರಕರಣದಲ್ಲಿ ಕಳುವಾದ ಅಂದಾಜು ಮೌಲ್ಯ 92000/- ರೂಪಾಯಿಗಳ ಬ್ಯಾಟರಿ,ಇನವರ್ಟರ್ ಮತ್ತು ಯುಪಿಎಸ್ ಗಳನ್ನು ಜಪ್ತಿ ಪಡಿಸಿಕೊಂಡಿರುತ್ತದೆ.ನಂತರ ಎಲ್ಲಾ ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿಕೊಡಲಾಗಿದೆ.

ಸದರಿ ಗಾಂಧಿನಗರ ಪೋಲಿಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂಧಿಗಳ ಈ ಕಾರ್ಯಕ್ಕೆ ಮಾನ್ಯ ಎಸ್.ಪಿ ಮೇಡಂ ಬಳ್ಳಾರಿ. ಹೆಚ್ಚುವರಿ ಪೋಲಿಸ್ ಅಧೀಕ್ಷಕರು ಹಾಗೂ ಡಿ.ಎಸ್.ಪಿ ನಗರವರುಗಳು ಪ್ರಶಂಸೆ ವ್ಯಕ್ತಪಡಿಸಿರುತ್ತಾರೆ.


News 9 Today

Leave a Reply