This is the title of the web page
This is the title of the web page

Please assign a menu to the primary menu location under menu

State

ದಲಿತ ಕೇರಿಯ ಇಂದಿರಾ ಕ್ಯಾಂಟಿನ್ ಗೆ ಟಾರ್ಗೆಟ್ ಮಾಡಿದ್ದೇಕೆ ಆ ಪತ್ರಕರ್ತ. ಸಾವಿರಾರು ಜನ ಕ್ಕೆ ಆಹಾರ ಸರಬರಾಜು ಅಂದ್ರೆ ಸಣ್ಣ ಮಾತು ಅಲ್ಲ.

ದಲಿತ ಕೇರಿಯ ಇಂದಿರಾ ಕ್ಯಾಂಟಿನ್ ಗೆ ಟಾರ್ಗೆಟ್ ಮಾಡಿದ್ದೇಕೆ ಆ ಪತ್ರಕರ್ತ. ಸಾವಿರಾರು ಜನ ಕ್ಕೆ ಆಹಾರ ಸರಬರಾಜು ಅಂದ್ರೆ ಸಣ್ಣ ಮಾತು ಅಲ್ಲ.

ದಲಿತ ಕೇರಿಯ ಇಂದಿರಾ ಕ್ಯಾಂಟಿನ್ ಗೆ ಟಾರ್ಗೆಟ್ ಮಾಡಿದ್ದೇಕೆ ಆ ಪತ್ರಕರ್ತ. ಸಾವಿರಾರು ಜನ ಕ್ಕೆ ಆಹಾರ ಸರಬರಾಜು ಅಂದ್ರೆ ಸಣ್ಣ ಮಾತು ಅಲ್ಲ.

ಬಳ್ಳಾರಿ:ಜು,17; ಬಡ ಜನರಿಗೆ ಅನುಕೂಲವಾಗಲಿ ಬಡವರ ಹಸಿವು ನೀಗಿಸುವ ಮಹತ್ವಕಾಂಕ್ಷೆ ಯೋಜನೆಯಾದ ಇಂದಿರಾ ಕ್ಯಾಂಟೀನ್ ಯೋಜನೆ ಅತ್ಯಂತ ಜನಪ್ರಿಯ ಯೋಜನೆಯಾಗಿದೆ.

ಇಂತಹ ಯೋಜನೆಗೆ ಮಸಿ ಬಳಿಯೋ ಪ್ರಯತ್ನಕ್ಕೆ ಕೆಲವರು ಬಳ್ಳಾರಿಯಲ್ಲಿ ಕೈ ಹಾಕಿರೋದು ದುರದೃಷ್ಟಕರ ಸಂಗತಿ

ಬಳ್ಳಾರಿ ನಗರದ ಬಡವರಿಗೆ ಅನುಕೂಲವಾಗಲಿ ಎಂದು ಕಳೆದ ತಿಂಗಳು 27 ನೇ ತಾರೀಖಿನಂದು ಬಾಪೂಜಿ ನಗರದ ವೃತ್ತದ ಬಳಿ ಇಂದಿರಾ ಕ್ಯಾಂಟೀನ್ ಅನ್ನು ಶಾಸಕ ನಾರಾ ಭರತ್ ರೆಡ್ಡಿಯವರು ವಿಶೇಷ ಕಾಳಜಿಯಿಂದ ನಿರ್ಮಿಸಿ ಲೋಕಾರ್ಪಣೆಗೊಳಿಸಲಾಗಿತ್ತು.

ಈ ಇಂದಿರಾ ಕ್ಯಾಂಟಿನ್ ನಲ್ಲಿ ಪ್ರತಿದಿನ 400 ಕ್ಕೂ ಹೆಚ್ಚು ಜನ ಉಪಹಾರ ಮತ್ತು ಊಟವನ್ನು ಸೇವಿಸುತ್ತಾರೆ.
ಇಲ್ಲಿನ ಆಹಾರ ಮತ್ತು ಉಪಹಾರವು ಉತ್ತಮ ರುಚಿ-ಶುಚಿಯಾದ ಹಾಗೂ ಒಳ್ಳೆಯ ಗುಣಮಟ್ಟದ ಆಹಾರ ಇಲ್ಲಿ ಲಭ್ಯವಾಗಿದ್ದು, ಇದರಿಂದ ಬಡ ಜನರಿಗೆ ಮತ್ತು ಹತ್ತಿರದಲ್ಲಿರುವ ಕೊಲ್ಮಿಚೌಕ್ ನಲ್ಲಿ ಪ್ರತಿನಿತ್ಯ ಸೇರುವ ನೂರಾರು ಕಟ್ಟಡ ಕಾರ್ಮಿಕರಿಗೆ ಇದು ಅಕ್ಷಯ ಪಾತ್ರೆಯಾಗಿದೆ.

ಇನ್ನು ಇಲ್ಲಿನ ಇಂದಿರಾ ಕ್ಯಾಂಟಿನ್ ಉದ್ಘಾಟಿಸಿದ ಸಂದರ್ಭದಲ್ಲಿ ಶಾಸಕ ಭರತ್ ರೆಡ್ಡಿ ಅವರು ಆಹಾರ ಗುಣಮಟ್ಟವನ್ನು ಪರೀಕ್ಷಿಸುವ ದೃಷ್ಟಿಯಿಂದ ಕಾಲಕಾಲಕ್ಕೆ ಅಧಿಕಾರಿಗಳು ಇಂದಿರಾ ಕ್ಯಾಂಟಿನ್‍ಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.

ಇದರಂತೆ ಇಲ್ಲಿನ ಇಂದಿರಾ ಕ್ಯಾಂಟಿನ್ ಉತ್ತಮವಾಗಿ ನಿರ್ವಹಣೆ ಆಗುತ್ತಿದೆ. ಆದರೆ ನಗರ ಶಾಸಕ ನಾರಾ ಭರತ್ ರೆಡ್ಡಿಯವರ ಅಭಿವೃದ್ಧಿ ಕೆಲಸ ಸಹಿಸದ ಕೆಲವರ ಮಾತು ಕೇಳಿ ಬಳ್ಳಾರಿಯ ಹಿರಿಯ ಪತ್ರಕರ್ತ ಎಂದು ಹೇಳಿಕೊಳ್ಳುವ ಓರ್ವ ಪತ್ರಿಕೆಯಲ್ಲಿ ಸುಳ್ಳು ಸುದ್ದಿ ಪ್ರಕಟಿಸಿ ಬಾಪೂಜಿ ನಗರದ ಜನರಿಂದ ಕ್ಯಾಕರಿಸಿ ಉಗಿಸಿಕೊಂಡ ಘಟನೆ ಬಳ್ಳಾರಿಯಲ್ಲಿ ನಡೆದಿದೆ.

ಪ್ರತಿನಿತ್ಯ ಇಂದಿರಾ ಕ್ಯಾಂಟಿನ್ ಕಾರ್ಯನಿರ್ವಹಿಸುತ್ತಿದ್ದರು ನಿರ್ವಹಿಸುತ್ತಿಲ್ಲ ಬಂದ್ ಆಗಿದೆ ಆಹಾರ ಕೊಡುತ್ತಿಲ್ಲ ನಾಮಕಾವಸ್ತೆ ಉದ್ಘಾಟನೆ ಮಾಡಿದರು ಜನರಿಗೆ ಇದು ಉಪಯೋಗವಾಗುತ್ತಿಲ್ಲ ಎಂದು ಪತ್ರಿಕೆಯಲ್ಲಿ ಸುದ್ದಿ ಮಾಡಿ ಬಾಪೂಜಿ ನಗರದ ಜನರಿಂದ ಸಖತ್ ಆಗಿ ಮಂಗಳಾರತಿ ಮಾಡಿಸಿಕೊಳ್ಳುತ್ತಿರುವ ದಿ ಗ್ರೇಟ್ ಪತ್ರಕರ್ತ ಈಗ ಬೆತ್ತಲಾಗಿ ನಿಂತಿದ್ದಾನೆ.

ಇನ್ನು ಶಾಸಕ ನಾರಾ ಭರತ್ ರೆಡ್ಡಿಯವರು ಉದ್ಘಾಟನೆಯ ವೇಳೆಯಲ್ಲಿ ಕ್ಯಾಂಟೀನಿನ ಆಹಾರ ಸೇವಿಸಿ ರುಚಿ ಹಾಗೂ ಗುಣಮಟ್ಟ ಪರೀಕ್ಷಿಸಿದ್ದು ನಾವು ಇಲ್ಲಿ ಕಾಣಬಹುದು. ಅಲ್ಲದೇ ಕಾರ್ಯಕರ್ತರಿಗೆ ಕೈ ತುತ್ತು ನೀಡಿ ಉಣ್ಣಿಸಿದರಲ್ಲದೇ, ಕಿಚನ್ ಕೌಂಟರಿನಲ್ಲಿ ನಿಂತು ಜನರಿಗೆ ಆಹಾರ ವಿತರಿಸಿದ್ದನ್ನ ನಾವು ಇಲ್ಲಿ ಸ್ಮರಿಸಬಹುದು ಇಂತಹ ಜನಪ್ರಿಯ ಯೋಜನೆಯನ್ನು ಜನರಿಗೆ ಉಪಯೋಗ ಆಗುತ್ತಿರುವ ಈ ಸಂದರ್ಭದಲ್ಲಿ ಕ್ಯಾಂಟಿನ್ ಉದ್ಘಾಟನೆಗೊಂಡು ಹದಿನೈದು ದಿನ ಕಳೆದಿಲ್ಲ ಆದಾಗಲೇ ರಾಜಕೀಯ ದುರುದ್ದೇಶದಿಂದ ಅದ್ಯಾವನೋ ಸುಳ್ಳು ಸುದ್ದಿಯನ್ನು ಹರಡಿಸಿದರೆ, ಅದನ್ನ ಪರಿಶೀಲಿಸದೇ, ಸತ್ಯಾಸತ್ಯತೆಯನ್ನು ತಿಳಿಯದೇ ಪರಿಶೀಲಿಸದೇ ಏಕಾಏಕಿಯಾಗಿ ಸುಳ್ಳು ಸುದ್ದಿ ತನ್ನ ಪತ್ರಿಕೆಯಲ್ಲಿ ಪ್ರಕಟಿಸಿ ಪತ್ರಿಕಾ ಧರ್ಮಕ್ಕೆ ಮಸಿ ಬಳಿದ ಹಿರಿಯ ಪತ್ರಕರ್ತನ ಕ್ರಮಕ್ಕೆ ಇಡೀ ಬಳ್ಳಾರಿಯ ಪ್ರಜ್ಞಾವಂತರು ಖಂಡಿಸಿದ್ದಾರೆ.

ಪ್ರತಿ ದಿನ ಇಲ್ಲಿನ ಇಂದಿರಾ ಕ್ಯಾಂಟಿನ್ ನಲ್ಲಿ ನೂರಾರು ಜನ ಊಟ ಮಾಡುತ್ತಾರೆ. ಒಳ್ಳೆಯ ರೀತಿಯಲ್ಲಿ ಇಂದಿರಾ ಕ್ಯಾಂಟಿನ್ ನಿರ್ವಹಣೆಯಾಗುತ್ತಿದೆ. ಇಂತಹ ಇಂದಿರಾ ಕ್ಯಾಂಟಿನ್ ಮುಚ್ಚಿದೆ, ಉಪಹಾರ ನೀಡುತ್ತಿಲ್ಲ, ಎಂದು ಸುಳ್ಳು ಸುದ್ದಿ ಪ್ರಕಟಿಸಿ ಪ್ರಚಾರ ಮಾಡಿದ ಆ ಪತ್ರಕರ್ತನ ಕ್ರಮಕ್ಕೆ ಸಾರ್ವಜನಿಕರು ಭಾರೀ ಅಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಎಂದು ಕರೆಸಿಕೊಳ್ಳುವ ಪತ್ರಿಕಾ ರಂಗದಲ್ಲಿದ್ದು ನಾನು ಹಿರಿಯ, ನಾನು ಮುದಿಯಾ, ನಾನು ಮೇನ್ ಸ್ಟ್ರೀಮ್, ನಾನು ಸಾಚಾ, ನಾನು ಸತ್ಯಹರಿಚ್ಶಂದ್ರ, ಬೇರೆಯವರೆಲ್ಲ ದಡ್ಡರು, ಎರಡು ಲೈನ್ ಸುದ್ದಿ ಮಾಡಲು ಬರಲ್ಲ ಎಂದು ಬಡಾಯಿಕೊಚ್ಚಿಕೊಳ್ಳುವ ಪದೇ ಪದೇ ಕೆಲ ಚಾನಲ್ ವರದಿಗಾರರು ಹೊಂದೆಗೆ ಹೋಗಿ ಅಧಿಕಾರಿಗಳು ಗೆ ಕಿವಿ ಕಚ್ಚುವ ಚಾಳಿ ಇರುವ ಇವ ಇತ್ತಿಚೆಗೆ ಮಾಡುತ್ತಿರುವುದಾದರೂ ಏನೂ? ದಲಿತ ಪ್ರದೇಶ ದಲ್ಲಿ ಇರುವ ಕ್ಯಾಂಟೀನ್ ಟಾರ್ಗೆಟ್ ಯಾಕೆ?? ಅವರು ನಮ್ಮ ಅಂತೆ ಅಲ್ಲವೇ??..ಇತ್ತೀಚೆಗಷ್ಟೇ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷ ಕೆ.ಇ.ಚಿದಾನಂದಪ್ಪ ರವರು ಇವನಿಗೆ ಜಾಹೀರಾತು ಕೊಟ್ಟಿಲ್ಲ ಎಂದು ಮುಖಕ್ಕೆ ಮಸಿ ಬಳಿಸಿ ಸುದ್ದಿ ಪ್ರಕಟಿಸಿದ ಘಟಕ ಮಾಸುವ ಮುನ್ನ ಮತ್ತೆ ಈಗ ಎಡವಟ್ಟು ಮಾಡಿಕೊಂಡಿದ್ದಾನೆ ಸರಿಯಾಗಿ ನಿರ್ವಹಣೆ ಆಗುತ್ತಿರುವ ಇಂದಿರಾ ಕ್ಯಾಂಟಿನ್ ಸರಿಯಾಗಿ ನಿರ್ವಹಣೆಯಾಗುತ್ತಿಲ್ಲ, ಪ್ರತಿದಿನ ಓಪನ್ ಇರುವ ಕ್ಯಾಂಟಿನ್ ಮುಚ್ಚಿದೆ ಎಂದು ಸುಳ್ಳು ಸುದ್ದಿ ಮಾಡಿ ಜನರಿಂದ ಛೀಮಾರಿ ಹಾಕಿಸಿಕೊಂಡು ಬೆತ್ತಾಗಿದ್ದಾನೆ ಇಂತಹ ಪತ್ರಕರ್ತ ಹೇಳೋದು ಆಚಾರ ತಿನ್ನೊದು ಬದನೆಕಾಯಿ ಎಂಬಂತಾಗಿದೆ.


News 9 Today

Leave a Reply