ರಾಜ್ಯದ ಮುಖ್ಯಮಂತ್ರಿಗಳು ಯಾರು?? ದೆಹಲಿ ನಾಯಕರಾ ರಾಜ್ಯದ ನಾಯಕರಾ.??. ಜಿಲ್ಲೆಯಲ್ಲಿ ಪೊಲೀಸ್ ವ್ಯವಸ್ಥೆ ಸರ್ವ ನಾಶ, ಮಟಕಾ,ಇಸ್ಪೇಟ್ ಗಾಂಜಾ ಕೇಂದ್ರಬಿಂದು ಬಳ್ಳಾರಿ.
ಮಾಜಿ ಸಚಿವ ಶ್ರೀರಾಮುಲು ಆಕ್ರೋಶ.
ಬಳ್ಳಾರಿ(17) ನಗರದಲ್ಲಿ ಗುರುವಾರ ಬಿಜೆಪಿ ಮುಖಂಡರು ಮಾಜಿ ಸಚಿವರಾಗಿರುವಂತ ಬಿ ಶ್ರೀರಾಮುಲು ರಾಜ್ಯ ಸರ್ಕಾರದ ವಿರುದ್ಧ ಕಂಡಮಂಡಲವಾಗಿದ್ದಾರೆ.
ಗುರುವಾರ ತಮ್ಮ ನಿವಾಸದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಚಿವ ಶ್ರೀರಾಮುಲು ಈ ರಾಜ್ಯಕ್ಕೆ ಮುಖ್ಯಮಂತ್ರಿಗಳು ಯಾರು ? ಸುರ್ಜಿವಾಲ ಅವರ ಅಥವಾ ಸಿದ್ದರಾಮಯ್ಯನವರ ಎಂದು ನೇರವಾಗಿ ಪ್ರಶ್ನೆ ಮಾಡಿದ್ದಾರೆ.
ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಸರ್ವನಾಶ ಆಗಿದೆ ಸರ್ಕಾರದ ಆಯುಷ್ಯವು ಮುಗಿದು ಹೋಗಿದೆ.
ಕಾಂಗ್ರೆಸ್ ಪಕ್ಷದ ದೆಹಲಿ ಮುಖಂಡರು,ಶಾಸಕರು ಸಚಿವರು ಆರೋಗ್ಯವಾಗಿದ್ದಾರಾ ಇಲ್ಲವಾ ಎಂದು ತಪಾಸಣಾ ಕೇಂದ್ರ ಮಾಡಿ ಸರ್ಕಾರದ ಆಯುಷ್ಯ ಪರಿಶೀಲನೆ ಮಾಡಿದ್ದಾರೆ.
ಈಗಾಗಲೇ ಬಳ್ಳಾರಿ ಜಿಲ್ಲೆ ಕೂಡ ಅಕ್ರಮ ದಂಧೆಗಳಿಗೆ ಕೇಂದ್ರ ಬಿಂದು ಆಗಿದೆ ಎಂದು, ಪೊಲೀಸ್ ವ್ಯವಸ್ಥೆ ಸರ್ವ ನಾಶ ಆಗಿದೆ ಎಂದು ಪೊಲೀಸರು ಇದ್ದರೋ ಇಲ್ಲವೋ ಜಿಲ್ಲೆಯಲ್ಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು .
ರಾಜಾರೋಷವಾಗಿ ಜಿಲ್ಲೆಯಲ್ಲಿ ಓ ಸಿ, ಇಸ್ಪೇಟ್ ಗಾಂಜಾ ಮುಂತಾದ ಅಕ್ರಮ ದಂದೆ ಗುಳು ರಾಜಾರಾಶವಾಗಿ ನಡೆಯುತ್ತಾ ಇದ್ದಾವೆ ಎಂದರು.
ನಗರದಲ್ಲಿ ಕಾಮಗಾರಿಗಳಿಗೆ ಉದ್ಘಾಟನೆ ಮಾಡಲು ಮುಖ್ಯಮಂತ್ರಿ ಬರ್ತಾ ಇದ್ದಾರೆ ಎಂದು , ನಗರ ಶಾಸಕ ಭರತ್ ರೆಡ್ಡಿ ಅವರು ಕಾಯುತ ಇದ್ದಾರೆ ಆಶ್ಚರ್ಯ ಮೂಡಿಸಿದೆ, ಎಂದು ಯಾವ ಮುಖ್ಯಮಂತ್ರಿ ಬರಬೇಕು.
ಯಾವಾಗ ಆಗಬೇಕು ಎನ್ನುವುದು ಪ್ರಶ್ನೆಯಾಗಿದೆ ಎಂದರು.
ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಇನ್ನು ಕೆಲ ಘಟಕಗಳು ಆರಂಭವಾಗದೆ ಜನರಿಗೆ ಸೇವೆ ಸಿಗದೆ ಪರದಾಡುವಂತಾಗಿದೆ.
ಯಂತ್ರೋಪಕರಣಗಳನ್ನು ತರಿಸಿದರೂ ಕೂಡ ಅವುಗಳನ್ನು ಸೂಕ್ತವಾಗಿ ನಿರ್ವಹಣೆ ಮಾಡಲು ರಆಗುತ್ತಿಲ್ಲವೆಂದು ಆರೋಪ ಮಾಡಿದರು.
ಇನ್ನೂ ಕೆಲ ಜಿಲ್ಲೆಗಳಲ್ಲಿ ನಗರದಲ್ಲಿ ವಿದ್ಯುತ್ ಅಂತರಾಯ ಲೆಕ್ಕಕ್ಕೆ ಇಲ್ಲದಷ್ಟು ಕಡಿತ ಎಂದು ಟೀಕೆ ಮಾಡಿದರು.
ಹಲವಾರು ತಿಂಗಳುಗಳಿಂದ ತುಂಗಭದ್ರ ಡ್ಯಾಮ್ ಗೇಟ್ ಗಳನ್ನು ಸರಿಪಡಿಸಲು ಸರ್ಕಾರಕ್ಕೆ ಸೂಚಿಸದರು ಕೂಡ ನಿರ್ಲಕ್ಷದ ಕಾರಣ ಈ ಭಾಗದ ರೈತರು ಒಂದು ಬೆಳೆಯನ್ನು ಕೂಡ ಸಕ್ರಿಯವಾಗಿ ಬೆಳೆಯಲು ಆಗುತ್ತಿಲ್ಲವೆಂದು ರೈತರಿಗೆ ಮೋಸ ಮಾಡುತ್ತಾ ಇದ್ದಾರೆ ಎಂದು , ಜಿಲ್ಲೆಯ ಉಸ್ತುವಾರಿ ಜಮೀರ್ ಅಹ್ಮದ್ ಅವರ ನಿರ್ಲಕ್ಷತನ ಎದ್ದು ಕಾಣುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ಗಾಲಿ ಜನಾರ್ದನ್ ರೆಡ್ಡಿಗೆ ನಮಗೆ ಯಾವುದೇ ಭಿನ್ನಾಭಿಪ್ರಾಯ ಇಲ್ಲವೆಂದು , ಕೇಂದ್ರ ಸಚಿವರು ಸೋಮಣ್ಣ ಅವರು ಮಾತನಾಡುವ ಸಂದರ್ಭದಲ್ಲಿ ಜನಾರ್ಧನ್ ರೆಡ್ಡಿ ಶ್ರೀರಾಮುಲು ದೆಹಲಿಗೆ ಬನ್ನಿ ಎಂದು ಹೇಳಿದ್ದಾರೆ ನಮ್ಮಿಬ್ಬರ ರಾಜಿ ಬಹುದೊಡ್ಡದು ಅಲ್ಲ ಬಿಸಿ ನೀರು ಕುಡಿಯುವಷ್ಟು ಅಂತರದಲ್ಲಿದೆ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಸೋಮಶೇಖರ್ ರೆಡ್ಡಿ ಶ್ರೀರಾಮುಲು ಜನಾರ್ಧನ್ ರೆಡ್ಡಿಯನ್ನು ಒಗ್ಗೂಡಿಸಬೇಕು ಎಂದು ಹೇಳಿರುವ ವಿಚಾರದಲ್ಲಿ ಸೋಮಶೇಖರ್ ರೆಡ್ಡಿಗೆ ಟಿವಿ,ಯಲ್ಲಿ ಪತ್ರಿಕೆಗಳು ಇಲ್ಲಿ ಕಾಣಿಸಿಕೊಳ್ಳುವ ಚಟ ಇದೆ ಎಂದು ಇದರಿಂದ ಆ ರೀತಿ ಹೇಳಿದ್ದಾರೆ ಎಂದರು.
ರಾಮಲನ್ನು ಬಿಟ್ಟು ರಾಜ್ಯದಲ್ಲಿ ಚುನಾವಣೆ ಮಾಡಲು ಯಾರಿಗೆ ಸಾಧ್ಯವಿಲ್ಲವೆಂದು ಎಂದರು.
ಇನ್ನೂ ಕೆಲವು ಶಾಸಕರು ಮಾಜಿ ಸಚಿವರು ಬೂಟಾಟಿಕೆ ಮಾಡುತ್ತಾ ಆಗೊಮ್ಮೆ ಈಗೊಮ್ಮೆ ಬಂದು ಕಿಸ್ ಕೊಟ್ಟುಕೊಳ್ಳವ ಸಂಪ್ರದಾಯವನ್ನು ಬೆಳೆಸಿಕೊಂಡಿದ್ದಾರೆ ಎಂದು ಹೇಳನೆ ಮಾಡಿದರು.