*ಆಟೋ ದಿಂದ ಜೀವನ ಮಾಡುತ್ತಿರುವ, ಬಡಪಾಯಿ ಗಳ ಕುಟುಂಬ ಗಳು ಬೀದಿಪಾಲ್.!?.ಯಾರು ಭ್ರಷ್ಟರು ಯಾರು ನಿಷ್ಠಾವಂತರು??* ಬಳ್ಳಾರಿ (2) ಇಡಿ ಜಗತ್ತಿನಲ್ಲಿ ಬಹುತೇಕ ನಗರ ಗಳಲ್ಲಿ ಸಾವಿರಾರು ಕುಟುಂಬ ಗಳು ಆಟೋ ಓಡಿಸಿ ಕುಟುಂಬ ನಿರ್ವಹಣೆ ಮಾಡುತ್ತ ಜೀವನ ಮಾಡುತ್ತ ಇರುತ್ತಾರೆ.
ಆಟೋ ಚಕ್ರ ಓಡಬೇಕು,ಕುಟುಂಬದ ಚಕ್ರ ನಡೆಯಬೇಕು. ಅಟೋ ಅಧಾರದ ಮೇಲೆ ಸಾಲಸೂಲ ಮಾಡಿಕೊಂಡು ಜೀವನ ಮಾಡುತ್ತಾರೆ.
ಹಗಲು ರಾತ್ರಿ ಎನ್ನದೇ ಹೆಂಡತಿ ಮಕ್ಕಳನ್ನು ಬಿಟ್ಟು ರಸ್ತೆ ಯಲ್ಲಿ ಬಿದ್ದು ಕೊಂಡು ಆಟೋ ಓಡಿಸಿದರೆ 1000 ಸಾವಿರ ಗಿಂತ ಜಾಸ್ತಿ ದುಡಿಯಲು ಸಾಧ್ಯವಿಲ್ಲ.
ಅದರಲ್ಲಿ ಸರ್ಕಾರದ ಉಚಿತ ಸ್ಕಿಮ್ ಗಳು ಇವರಿಗೆ ಗಂಡಾಂತರ ಆಗಿವೆ.
ಆದರೆ ಇತ್ತೀಚೆಗೆ ಕಾಂಗ್ರೆಸ್ ಸರ್ಕಾರ ಬಂದ ಆರು ತಿಂಗಳಲ್ಲಿ ಬಳ್ಳಾರಿ ಜಿಲ್ಲೆಯ ಅಡಳಿತ, ಆಟೋ ಗಳ ಮೇಲೆ ದಾಳಿ ಮಾಡುವ ಮಹತ್ತರ ಕಾರ್ಯಚರಣೆ ಮಾಡಿದ್ದು ತುಂಬಾ ಕಷ್ಟ ಪಟ್ಟು ನೂರಾರು ಗಾಡಿಗಳನ್ನು ಹಿಡಿದು ದಂಡ ವಸೂಲಿ ಮಾಡಿದ್ದಾರೆ.
ಆಟೋ ಗಳ ದಾಖಲೆ ಗಳು, ಸಾರಿಗೆ ರೂಲ್ಸ್ ಪ್ರಕಾರ ಇಲ್ಲದ್ದು, ಇನ್ನೂ ಹಲವಾರು ಲೋಪ ದೋಷಗಳು ಇದ್ದಾವೆ ಅನ್ನುವ ನಿಟ್ಟಿನಲ್ಲಿ ಕಾರ್ಯಚರಣೆ ಮಾಡಿದ್ದರು.
ತಕ್ಷಣವೆ ಆಟೋರಿಕ್ಷ ಚಾಲಕರ ಯೂನಿಯನ್ ಅಧ್ಯಕ್ಷರು INTUC.ಅಧ್ಯಕ್ಷರು ಹಿರಿಯರು ಆಗಿರುವ ಕೆ.ತಾಯಪ್ಪ ರವರು ಹೋರಾಟ ಮಾಡುತ್ತ ಆಟೋ ರಿಕ್ಷಾ ಚಾಲಕರಿಗೆ ಬೆನ್ನೆಲುಬು ಆಗಿರುವ ಅಧ್ಯಕರು ಹುಂಡೆಕರ್ ರಾಜೇಷ್ ಪ್ರವೇಶ ಮಾಡಿ 200 .300 ರೂಪಾಯಿಗಳು ದಂಡ ಹಾಕಿಸಿ ಮುಂದೆ ಎಲ್ಲವು ಸರಿಪಡಿಸಲು ಸಮಯ ಅವಕಾಶವನ್ನು ಕೊಡಿ ಎಂದು ಅಧಿಕಾರಿಗಳ ಜೊತೆಯಲ್ಲಿ ಮಾತನಾಡಿ ಸರಿಪಡಿಸಿದ್ದರು.
ಅದರೆ ಕೇಲ ಆಟೋ ಗಳು ಬಿಟ್ಟಿಲ್ಲ ಅವುಗಳಿಗೆ RTO ಕೇಸ್ ಹಾಕಲಾಯಿತು.
ಒಂದು ಆಟೋ ಗೆ ಅಂದಾಜು 9000 ಸಾವಿರ ದಿಂದ 17000 ಸಾವಿರ ದಂಡ ಆಗುತ್ತದೆ ಎಂದು ಮೂರು ದಿನಗಳ ದಿಂದ ಒಂದಿಷ್ಟು ಆಟೋಗಳನ್ನು ಸಿಜ್ ಮಾಡಿದ್ದಾರೆ.
ದುಬಾರಿ ದಂಡವನ್ನು ಕಟ್ಟಲು ಆಟೋ ಮಾಲಿಕರು ಕಷ್ಟ ಆಗುತ್ತದೆ ಅನ್ನುತ್ತಾರೆ.
ಇದು ಒಂದು ರೀತಿಯಲ್ಲಿ ಅಚ್ಚರಿ ಇದರಲ್ಲಿ ಏನೋ ಮರ್ಮ ಕಾಣುತ್ತದೆ
ಅನ್ನುವುದು ಪ್ರಶ್ನೆ ಅಗಿದೆ.
ಇದ್ದಕ್ಕಿದ್ದಂತೆ ಪೋಲಿಸರು ಆರ್ ಟಿ ಓ ಆಟೋ ರಿಕ್ಷಾ ಗಳು ಮೇಲೆ ಬಿದ್ದಿದ್ದಾರೆ.
ನಗರದಲ್ಲಿ ಅಂದಾಜು ಸಾವಿರಾರು ಆಟೋ ರಿಕ್ಷಾಗಳು ಇದ್ದಾವೆ.
ಕೆಲ ವಾಹನಗಳ ಗೆ ಸಂಪೂರ್ಣ ದಾಖಲೆ ಗಳ ಕೊರತೆ ಇದೇ.
ಈಹಿಂದೆ ಹಳೆಯ ವಾಹನಗಳ ನ್ನು ಜಖಂ ಮಾಡಲಾಗಿತ್ತು ಇನ್ನೂ ಕೇಲ ವಾಹನಗಳಿ ಗೆ ಸಂಪೂರ್ಣ ದಾಖಲೆ ಗಳು ಇದ್ದಾವೆ ಆದರೆ ಕೂಡ ಸಣ್ಣಪುಟ್ಟ ವಿಚಾರ ಗಳಲ್ಲಿ ಕಿರುಕುಳ ಇರುತ್ತದೆ ಎಂದು ಚಾಲಕರ ನೋವು.
ಜಿಲ್ಲೆ ಯಲ್ಲಿ ಬಹುತೇಕ ದೊಡ್ಡ ವಾಹನಗಳಿಗೆ ಶಾಲೆ ಬಸ್ಸುಗಳಿ ಗೆ ಇಂತಹ ಕಾಯಿದೆ ಅನ್ವಯ ಅಗಲ್ಲವೇ ಎನ್ನುವ ಪ್ರಶ್ನೆ ಅವರನ್ನು ಕಾಡುತ್ತಾಇದೆ.
ವಾಹನ ಮಾಲೀಕರು ಕೂಡ ಯಾಲ್ಲ ದಾಖಲೆಯನ್ನು ಇಟ್ಟು ಕೊಳ್ಳಬೇಕು.
ಅಡ್ಡಾದಿಡ್ಡಿ ಆಟೋಗಳನ್ನು ನಿಲ್ಲಿಸಿ ಸಂಚಾರ ಕ್ಕೆ ಅಡ್ಡಿಪಡಿಸುವ ಮೂಲಕ ಜನರ ರಿಂದ ಶಾಪ ಹಾಕಿಸಿ ಕೊಳ್ಳ ಬಾರದು.
ಪೋಲಿಸ್ ವ್ಯವಸ್ಥೆ ಮತ್ತು ಆರ್ ಟಿ ಓ ಇಲಾಖೆ ಗಳು ಜಿಲ್ಲೆ ಯಲ್ಲಿ ತಿಮಿಂಗಿಲಗಳು ನ್ನು ಬಿಟ್ಟು ಬಡಪಾಯಿ ಗಳ ಬದುಕಿ ಗೆ ಚೂರಿ ಹಾಕಿದ್ದಾರೆ,ಎಂದು ಭ್ರಷ್ಟಾಚಾರ ಮಾಡೋದು ಯಾರು ನಿಷ್ಠಾವಂತರು ಯಾರು ಅನ್ನುವುದು ತಿಳಿಯದಂತೆ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರ್ಕಾರ ಕಾಲ ಅವಕಾಶ ಕೊಟ್ಟರೆ ಸರಿಪಡಿಸಿ ಕೊಂಡು ವಾಹನಗಳ ನಡೆಸುತ್ತೇವೆ ಇಲ್ಲವೇ ಎಂದರೆ ಬೀದಿಗೆ ಇಳಿದು ಹೋರಾಟ ಮಾಡುತ್ತೇವೆ ಎಂದು ಬೇಸರ ವ್ಯಕ್ತಿ ಪಡಿಸಿದ್ದಾರೆ.
ಇದರಲ್ಲಿ ರಾಜಕೀಯ ಪ್ರೇರಿತ ಉದ್ದೇಶ ಕಾಣುತ್ತದೆ.
ನಮಗೆ ಇರುವ ರೂಲ್ಸ್ ಎಲ್ಲಾರಿಗೂ ಇರಬೇಕು ನಮಗೆ ಮಾಡಿದ ದಂಡವನ್ನು ಇತರೆ ವಾಹನ ಗಳಿಗೂ ಇರಬೇಕು,ಅವರು ಮಾಡಿಲ್ಲ ಅಂದರೆ ನಾವೇ ಇಂತಹ ಇತರೆ ವಾಹನಗಳ ನ್ನು ಹಿಡಿದು,ಅವುಗಳನ್ನು ರಸ್ತೆಯಲ್ಲಿ ಹೋಗದಂತೆ ಮಾಡುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಡಪಾಯಿ ಗಳು ಮೇಲೆ ರಾಜಕೀಯ ಮಾಡಿದರೆ ನಮಗೆ ಗೊತ್ತು ಏನು ಮಾಡಬೇಕು ಅನ್ನುವ ಗುಸು ಗುಸು ಕೇಳಿ ಬಂದಿದೆ.
ಅಧಿಕಾರಿಗಳು ಮಾಡುವ ಭ್ರಷ್ಟಾಚಾರ ಬೀದಿಗೆ ಬಂದು ರಾಜಕಾರಣಿಗಳ ಮನೆ ಬಾಗಿಲು ಕಾಯುವ ವಾತಾವರಣ ಸೃಷ್ಟಿ ಅಗಿದೆ.
ಈಗಾಗಲೇ ಸಂಸದ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಬಿಸಿ ತುಪ್ಪ ಆಗುವ ಸಾಧ್ಯತೆ ಕಾಣುತ್ತದೆ.
ಆಟೋರಿಕ್ಷಾ ಗಳು ಕಥೆ ಬಹುದೊಡ್ಡ ಮಟ್ಟದಲ್ಲಿ ಇದೆ.
ಮುಂದೆ ಕಾದು ನೋಡಬೇಕು ಅಗಿದೆ?? (ಕೆ.ಬಜಾರಪ್ಪ ವರದಿಗಾರರು ಕಲ್ಯಾಣ ಕರ್ನಾಟಕ.)