*ಉಸ್ತುವಾರಿ ಸಚಿವರ ಮುಂದೆ ಸ್ಮಾರ್ಟ್ ಸಿಟಿಯ,ಕುಣಿಗಳನ್ನು(ಗುಂಡಿಗಳನ್ನು) ಮುಚ್ಚಿದರು.ಸಚಿವರು ನೋಡಿದರು…!!??* ಬಳ್ಳಾರಿ ನಗರವನ್ನು ಈಹಿಂದೆ ಸ್ಮಾರ್ಟ್ ಸಿಟಿ ಮಾಡಿದ್ದರು.
ಕೆಲ ಬಣ್ಣ ಬಣ್ಣ ದ ರಾಜಕಾರಣಿಗಳು.
ಅದ್ಬುತ ವಾಗಿರುವ ರಸ್ತೆ ಗಳು ಚರಂಡಿ ಗಳು ನಿರ್ಮಾಣ ಮಾಡಿದ್ದರು.
ಯಾವುದೆ ದೂಳು ಅಗಲಿ, ಭಯಂಕರ ಮಳೆ ಬಂದರು ಕೂಡ ಒಂದು ಗ್ಲಾಸ್ ನೀರು ನಿಲ್ಲದೆ ಇರುವ ಮಾದರಿಯ ನಗರವನ್ನಾಗಿ ಬಳ್ಳಾರಿ ಯನ್ನು ಮಾಡಿದ್ದರು.
ಯಾವುದೇ ಬ್ರಿಡ್ಜ್ ಕೆಳಗೆ ವಾಹನ ಗಳು ಗೆ ಮಳೆ ನೀರು ದಿಂದ ತೊಂದರೆ ಆಗದಂತೆ, ವ್ಯವಸ್ಥೆ ಮಾಡಿದ್ದರು.
ಸ್ಮಾರ್ಟ್ ಸಿಟಿ ಬಳ್ಳಾರಿ ಯಿಂದ ಹೆಲಿಕಾಪ್ಟರ್ ಮೂಲಕ, ಹೋಗಿ ಬೆಂಗಳೂರು ಯಲ್ಲಿ ಕಾಫಿ,ಟೀ,ಟಿಫಿನ್ ವಿಸರ್ಜನೆ ಮಾಡುವ ವ್ಯವಸ್ಥೆ ಮಾಡಿದ್ದರು.
ಕಾಲಕ್ರಮೇಣ ರಸ್ತೆ ಗಳು ಹಾಳು ಅಗಿದ್ದಾವೆ.
ಇದಕ್ಕೆ ಬಿ.ಕೆ.ಪುತ್ರ ರೋಗಿಗಳು ಇಲ್ಲ ವೆಂದು ಅಥವಾ ಉಸ್ತುವಾರಿ ಗೆ ಅವಮಾನ ಮಾಡಬೇಕು ಅನ್ನುವ ಉದ್ದೇಶವೋ ಗೊತ್ತಿಲ್ಲ, ಪವರ್ ಪೂಲ್ ತಾಕತ್ತ್ ದಮ್ಮು ಇರುವ ಸರ್ಕಾರದ ಸಚಿವರು,ರಾಜ್ಯದ ಮಾಜಿ ಮುಖ್ಯಮಂತ್ರಿಗಳನ್ನು ಬಾಯಿಗೆ ಬಂದಂತೆ,ನಿಂದನೆ ಮಾಡುವ, ರಾಜ್ಯದಲ್ಲಿ ಏಲ್ಲಿ ಬೇಕಾದರೂ ಚುನಾವಣೆಯಲ್ಲಿ ಗೆಲ್ಲುವ,ಶ್ರೀ ರಾಮುಲು, ಅವರು ಪ್ರಯಾಣ ಮಾಡುವ ಸಮಯ ದಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವ ಕೆಲಸ ಮಾಡಿದ್ದು,ಸಚಿವರು ಕೂಡ ನೋಡಿ,ಸೈರನ್ ಮೂಲಕ ಹೋಗುತ್ತಾರೆ.
ಕನಿಷ್ಠ ಜನರನ್ನು ನೋಡಿ ನಿಲ್ಲಿಸಿ ಸಮಸ್ಯೆ ಏನು ಯಾಕೆ ಈರೀತಿ ಮಾಡುತ್ತಿರಿ,ನಗರದ ರಸ್ತೆ ಗಳು,ರಿಪೇರಿ ಮಾಡಲಾಗುತ್ತದೆ ಏಂದು,ಸರ್ಕಾರದ ಜವಾಬ್ದಾರಿ ಸಚಿವರು ಹೇಳಬಹುದು ಆಗಿತ್ತು.
ಇದು ಒಂದು ರೀತಿಯಲ್ಲಿ ಸಚಿವರು ಮುಂದೆ ಗುಂಡಿಗಳನ್ನು ಸಂಘ ಸಂಸ್ಥೆಗಳು ಅವರು ಪಕ್ಷದ ಮುಖಂಡರು ಭಾಗವಹಿಸಿ,ಮುಚ್ಚುವ ಕೆಲಸ ಮಾಡುತ್ತಾರೆ ಅಂದರೆ ಜನರು ಏನು ಅರ್ಥ ಮಾಡಿಕೊಳ್ಳಬೇಕು.
ಇದು ಒಂದು ರೀತಿಯಲ್ಲಿ ಸರ್ಕಾರದ ನಿರ್ಲಕ್ಷ್ಯ, ಸಚಿವರು ನೋಡಿ ಸುಮ್ಮನೆ ಹೋಗಿದ್ದಾರೆ ಅಂದರೆ, ಜನರು ಸರ್ಕಾರದ ವಿರುದ್ಧ ಬೀದಿಗೆ ಬಂದ ಅಸಮಾಧಾನ ವ್ಯಕ್ತಪಡಿಸುತ್ತಾರೆ,ಏಂದು ಅರ್ಥ??.
ಸಾಮಾನ್ಯವಾಗಿ ಬಳ್ಳಾರಿ ಜನರು ಅಭಿವೃದ್ಧಿ ಕೆಲಸವನ್ನು ಕೇಳುವ ನೈತಿಕತೆ ಇಲ್ಲ.
ಯಾಕೆ ಅಂದರೆ ಚುನಾವಣೆಯಲ್ಲಿ1.kg,ಚಿಕನ್,ಸೀರೆ, ಅಕ್ಕಿ,ಒಂದು ಮತಕ್ಕೆ ಪ್ರಸ್ತುತ1000,2000,ಹಣವನ್ನು ತೆಗೆದುಕೊಂಡಿದ್ದಾರೆ.
ಈಬಾರಿ ಚುನಾವಣೆ ಗೆ ಮೊದಲೆ,ಕೆಲ ರಾಜಕಾರಣಿಗಳು,ಕಾಣಿಕೆಯನ್ನು ಕೊಡುತ್ತಾರೆ.
ಮತ್ತೆ ಸಮಸ್ಯೆಗಳು ಕೇಳಿದರೆ ನಾಚಿಕೆ ಆಗಬೇಕು.(ಕೆ.ಬಜಾರಪ್ಪ ವರದಿಗಾರರು ನ್ಯೂಸ್ ಬ್ಯೂರೋ ಕಲ್ಯಾಣ ಕರ್ನಾಟಕ.)