ಸಚಿವ ನಾಗೇಂದ್ರ ಅವರ ಗೆ ಅಪಾರ ಬೆಂಬಲ ತೋರಿಸಿದ,ಗ್ರಾಮಸ್ಥರು.
ಬಳ್ಳಾರಿ(22)ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಯುವ ಸಬಲೀಕರಣ, ಕ್ರೀಡೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಸಚಿವರು ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ನಾಗೇಂದ್ರ ಅವರು ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ವ್ಯಾಪ್ತಿಯ ಬೆಳಗಲ್ ತಾಂಡ.ಬೆಳಗಲ್ ಹರಗಿನಡೋಣಿ.ಜಾನೆಕುಂಟೆ ಗ್ರಾಮಗಳಲ್ಲಿ ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿ ಈ.ತುಕಾರಾಂ ಪರವಾಗಿ ಭರ್ಜರಿ ಮತ ಪ್ರಚಾರ ನಡೆಸಿದರು.
ಸರ್ಕಾರದ ಕಾರ್ಯಕ್ರಮಗಳನ್ನು ಮೆಚ್ಚಿ ಸಚಿವ ಬಿ.ನಾಗೇಂದ್ರ ಅವರ ಸಮ್ಮುಖದಲ್ಲಿಬೆಳಗಲ್ ಗ್ರಾಮದ ಸುಮಾರು ಇಪ್ಪತ್ತಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಪಕ್ಷ ತೊರರದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಈ ವೇಳೆ ಸಚಿವ ನಾಗೇಂದ್ರ ಅವರು ಮಾತನಾಡಿ,ಕಾಂಗ್ರೆಸ್ ಸರ್ಕಾರ ದೀನ,ದಲಿತರ ಹಾಗೂ ಶೋಷಿತರು,ಬಡವರ ಪರ ಇರುಂತ ಸರ್ಕಾರ.ಕಳೆದ ವಿಧಾನಸಭೆ ಚುನಾವಣೆ ವೇಳೆ ಹೇಳಿದಂತೆ ಭಾಗ್ಯಗಳನ್ನ ನಾಡಿನ ಜನತೆಗೆ ನೀಡುವ ಮೂಲಕ ನುಡಿದಂತೆ ನಡೆದುಕೊಂಡಿದ್ದೇವೆ.ಇದೀಗ ಲೋಕಸಭಾ ಚುನಾವಣಾ ಹೊಸ್ತಿಲಲ್ಲಿದ್ದು ಪಕ್ಕದ ಸಂಡೂರು ಕ್ಷೇತ್ರದ ಶಾಸಕ ತುಕಾರಾಂ ಅವರು ಲೋಕಸಭಾ ಅಭ್ಯರ್ಥಿ ಯಾಗಿ ಸ್ಪರ್ಧಿಸಿದ್ದಾರೆ.ಅವರು ತುಂಬಾ ಸೌಮ್ಯ ಸ್ವಭಾವ ಉತ್ತಮ ನಡವಳಿಕೆ ಹಾಗೂ ಚೆನ್ನಾಗಿ ಓದಿಕೊಂಡವರಾಗಿರುತ್ತಾರೆ ಅದ್ದರಿಂದ ನೀವುಗಳು ತುಕಾರಾಂ ಅವರಿಗೆ ಮತ ನೀಡುವ ಮೂಲಕ ಗೆಲಗಲಿಸಿ ಕಳಿಸಿದರೆ ಈ ಭಾಗದ ಸಮಸ್ತೆಗಳ ಬಗ್ಗೆ ಬೆಳಕು ಚೆಲ್ಲುವ ಮೂಲಕ ಧ್ವನಿಯಾಗುತ್ತಾರೆ ಎಂದರಲ್ಲದೆ,ರಾಜ್ಯ ಸರ್ಕಾರದ ಗ್ಯಾರೆಂಟಿ ಜೊತೆ ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಲ್ಲಿ ವರ್ಷಕ್ಕೆ ಒಂದು ಕುಟುಂಬಕ್ಕೆ ಒಂದು ಲಕ್ಷ ಗ್ಯಾರೆಂಟಿ ಯೋಜನೆಯ ಹಣ ದೊರೆಯಲಿದೆ ಅದ್ದರಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ತುಕಾರಾಂ ಅವರನ್ನ ಹೆಚ್ಚಿನ ಬಹುಮತದಿಂದ ಗೆಲ್ಲಿಸುವಂತೆ ಮನವಿ ಮಾಡಲಾಗಿದೆ, ಕಡೆವರೆಗೂ ನಿಮ್ಮ ಜೊತೆ ನಿಮ್ಮ ಕಷ್ಟ.ಸುಖಗಳಲ್ಲಿ ಭಾಗಿಯಾಗಿ ನಿಮ್ಮೊಟ್ಟಿಗೆ ಇರುವುದಾಗಿ ತಿಳಿಸಿದರು.ಮತ ಪ್ರಚಾರ ದಲ್ಲಿ ತೂಕರಾಂ ಅವರನ್ನು ಸರಿಯಾಗಿ ಜನ ನೋಡಿಲ್ಲ ಅದರು ಸಚಿವರ ಪ್ರಭಾವ ದೊಡ್ಡ ಮಟ್ಟದಲ್ಲಿ ಇದೇ ಏಂದು ಕಾಣುತ್ತದೆ.
ಪ್ರಚಾರ ಕಾರ್ಯಕ್ರಮದಲ್ಲಿ ಜಿಲ್ಲಾನಗರ ಕಾಂಗ್ರೆಸ್ ಅಧ್ಯಕ್ಷರಾದ ಅಲ್ಲಂ. ಪ್ರಶಾಂತ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮಂಜುಳಾ.ಪಕ್ಷದ ಮುಖಂಡರಾದ.ಸಣ್ಣಬಸವರಾಜ್.ಮಹಾರುದ್ರಗೌಡ.ಎ.ಮಾನಯ್ಯ.ವೆಂಕಟೇಶ್ ಪ್ರಸಾದ್.ವೆಂಕಟರಾವ್ ನಾನಿ.
ಗೋವರ್ಧನರೆಡ್ಡಿ.ಹೊನ್ನಪ್ಪ.ಹೊನ್ನೂರಪ್ಪ.ಪಿ.ಜಗನ್ನಾಥ. ಎಲ್.ಮಾರೆಣ್ಣ.ಮುದಿ ಮಲ್ಲಯ್ಯ.ನಾಗಭೂಷಣಗೌಡ ಸೇರಿದಂತೆ ಹಲವಾರು ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.