*ಜೇಸ್ಕಂ ಇಲಾಖೆ ಯಲ್ಲಿ ಭ್ರಷ್ಟಾಚಾರ ಕ್ಕೆ ಕಡಿವಾಣ ಇಲ್ಲದಂತೆ ಆಗಿದೆ. ರಾಜಾರೋಷವಾಗಿ, ಲೂಟಿ..ಲೂಟಿ!?* ಬಳ್ಳಾರಿ ಜೇಸ್ಕಂ ಇಲಾಖೆ ಯಲ್ಲಿ ನಿರಂತರವಾಗಿ ಭ್ರಷ್ಟಾಚಾರ ನಡೆಯುತ್ತದೆ, ಅಧಿಕಾರಿಗಳು ಕಣ್ಣು ಮುಚ್ಚಿ ಕೊಂಡು ಕೂತಿರವೇ ಅನ್ನುವ ಅನುಮಾನ ಗಳು ಬರುತ್ತವೆ.
ಗ್ರಾಮೀಣ ವ್ಯಾಪ್ತಿಯಲ್ಲಿ ಔಟ್ ಗಳಿಗೆ ವಿದ್ಯುತ್ ಅನುಮತಿ ಸಂಪರ್ಕ ನೀಡುವ ವಿಚಾರದಲ್ಲಿ “ಹಗಲು ದರೋಡೆ” ಮಾಡುತ್ತಾ ಇದ್ದಾರೆ.
ಬಡಾವಣೆಯ ಮಾಲೀಕರ ದಿಂದ ಲಕ್ಷಗಟ್ಟಲೆ ಹಣವನ್ನು ಪಡೆಯುತ್ತಾರೆ ಸಂಪರ್ಕ ನೀಡುತ್ತಾರೆ, ಅದರಲ್ಲಿ ಅಧಿಕೃತವಾಗಿ ಮಾಡುತ್ತಾರೆ ಎಲ್ಲವು.
ಆದರೆ ಸರ್ಕಾರ ಕ್ಕೆ ವಂಚನೆ ಮಾಡುತ್ತಾರೆ!! ಸಂಬಂಧಿಸಿದ ಅಧಿಕಾರಿಗಳು, ಶಾಖೆಯ ಅಧಿಕಾರಿಗಳು ಲೇನ್ ಮ್ಯಾನ್ ಗಳು ಸೇರಿಕೊಂಡು ಭ್ರಷ್ಟಾಚಾರ ಮಾಡುತ್ತಾರೆ.ಗ್ರಾಮೀಣ ವ್ಯಾಪ್ತಿಯಲ್ಲಿ ಪಿಡಿ ಹಳ್ಳಿ ಶಾಖೆಯಲ್ಲಿ,ಒಂದು ಬಡಾವಣೆ ಗೆ ಟಿ.ಸಿ.ಒಂದು ಟಿ.ಪಿ ಮಾಡಿಕೊಂಡು ಸಂಪರ್ಕ ಮಾಡುತ್ತಾರೆ, ಅದರೆ ಆದ್ದರಿಂದ ವಿದ್ಯುತ್ ಬಳಕೆ ಮಾಡದೇ ಕಟ್ಟಡ ನಿರ್ಮಾಣಕ್ಕೆ, ಮತ್ತು ತುಂಬಾ ದೂರವಿರುವ ನಿವಾಸಕ್ಕೆ ಸರ್ವೀಸ್ ವೇರ್ ದಿಂದ ಸಂಪರ್ಕ ಕೊಟ್ಟು, ಅದಕ್ಕೆ ಅಡ್ರೆಸ್ ಇಲ್ಲದೆ ಮೀಟರ್ ಹಾಕಿ ನಿವಾಸಿಗಳ ಹತ್ತಿರ ಹಣವನ್ನು ತೆಗದುಕೊಂಡು ಸಕ್ರಿಯವಾಗಿ ಮೀಟರ್ ಹಾಕದೇ ಆರ್,ಆರ್ ನಂಬರ್ ಇಲ್ಲದಂತೆ ಸಂಪರ್ಕ ಕೊಟ್ಟಿದ್ದು ಬೆಳಕಿಗೆ ಬಂದಿದೆ. ಬಡಾವಣೆಯಲ್ಲಿ ಕೂಡ ಕೆಲ ವಿದ್ಯುತ್ ಪೋಲ್ ಗಳು ಅನುಮತಿ ಇಲ್ಲದೆ ಹಾಕಲಾಗಿದೆ ಎಂದು ಕೇಳಿ ಬರುತ್ತದೆ. ಒಂದು ಟಿ.ಪಿ ಮೀಟರ್ ಮೂಲಕ ಹಲವಾರು ಸಂಪರ್ಕ ಗಳನ್ನು ನೀಡಲಾಗಿದೆ, ಎಂದು ತಿಳಿದು ಬಂದಿದೆ. ಇಷ್ಟು ರಾಜಾರೋಷವಾಗಿ ಭ್ರಷ್ಟಾಚಾರ ನಡೆಯುತ್ತದೆ, ಇದು ಮೇಲಿನ ಅಧಿಕಾರಿಗಳ ಗಮನಕ್ಕೆ ಬಂದಮೇಲೆ ಸ್ಥಳ ಪರಿಶೀಲನೆ ಮಾಡಿ ಸಂಪರ್ಕ ಕಡತ ಮಾಡಲಾಗಿದೆ. ಆದರೆ ಇದಕ್ಕೆ ಕಾರಣಭೂತರು ಆಗಿರುವ ಅವರ ಮೇಲೆ ಯಾವುದೇ ಕ್ರಮ ಆಗಿಲ್ಲ. ಮೇಲಿನ ಅಧಿಕಾರಿಗಳು ಕೂಡ ಭ್ರಷ್ಟಾಚಾರ ತಡೆಗಟ್ಟಲು ಆಗಿಲ್ಲ. ಯಾಲ್ಲವು ಅನುಮಾನ ಆಸ್ಪದ ಗಳು ಆಗಿದ್ದಾವೆ.