*ಸೀರೆ ಅಂಗಡಿಯಲ್ಲಿ ಕಳವು ಮಾಡಿದ ಕಳ್ಳರು* ಬಳ್ಳಾರಿ.(20)ಗಣಿನಾಡು ಬಳ್ಳಾರಿಯಲ್ಲಿ ಖತರ್ನಾಕ್ ಕಳ್ಳಿಯರ ಗುಂಪೊಂದು ಸಕ್ರಿಯವಾಗಿದೆ.
ಇಬ್ಬರು ಮಹಿಳೆಯರ ಜೊತೆ ಮೂವರು ಪುರುಷರಿರುವ ಈ ಗುಂಪು ಕಾಲೋನಿಗಳಲ್ಲಿ ಇರುವ ಬಟ್ಟೆ ಅಂಗಡಿಗಳಿಗೆ ಸೀರೆ ಕೊಳ್ಳುವ ನೆಪದಲ್ಲಿ ಎಂಟ್ರಿ ಕೊಡುವ ಗ್ಯಾಂಗ್ ಅಂಗಡಿಯವರ ಗಮನ ಬೇರೆಡೆ ಸೆಳೆದು ಲಕ್ಷಾಂತರ ಮೌಲ್ಯದ ರೇಷಿಮೆ ಸೀರೆಗಳು ಹಾಗೂ ಬೆಲೆ ಬಾಳುವ ಸೀರೆಗಳನ್ನ ಕದ್ದ್ಯೂತ್ತಾರೆ…ಹೌದು ಹಾಗೆ ಗಾಂಧಿನಗರದ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿರುವ ವಿಜಯಶ್ರೀ ಸ್ಯಾರಿ ಅಂಗಡಿಗೆ ಬಟ್ಟೆ ಖರೀದಿ ಮಾಡುವ ನೆಪದಲ್ಲಿ ಬೇಟಿ ಕೊಟ್ಟು ಸುಮಾರು ಮೂರು ಲಕ್ಷ ರೂ ಬೆಲೆ ಬಾಳುವ ಸೀರೆಗಳನ್ನ ಲಪಟಾಯಿಸಿ ಪರಾರಿಯಾಗಿದ್ದಾರೆ.
ಆ ನಂತರ ಅವರ ನಡುವಳಿಗೆಯಿಂದ ಅನುಮಾನಗೊಂಡು ಸಿಸಿ ಕ್ಯಾಮರ ಪರಿಶೀಲಿಸಿದಾಗ ಖತರ್ನಾಕ್ ಕಳ್ಳರ ಕೈಚಳಕ ಬಯಲಿಗೆ ಬಂದಿದೆ.
ತಕ್ಷಣಕ್ಕೆ ಅಂಗಡಿಯಲ್ಲಿನ ಸೀರೆಗಳ ಸ್ಟಾಕ್ ನ್ನು ಪರಿಶೀಲಿಸಿದಾಗ ೨೬ ಸೀರೆಗಳು ಕಳ್ಳತನವಾಗಿದ್ದು ಅದರಲ್ಲಿ ಹತ್ತು ಸಾವಿರ ಬೆಲೆ ಬಾಳುವ ರೇಷ್ಮೆ ಸೀರೆಗಳು ಸೇರಿದಂತೆ ಇತರೆ ಬೆಲೆ ಬಾಳುವ ಸೀರೆಗಳು ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.
ಇದಲ್ಲದೆ ಬೇರೆ ಅಂಗಡಿಗಳಿಗೆ ತೆರಳಿರುವ ಗುಂಪು ಕಳ್ಳತನ ಮಾಡಲು ಪ್ರಯತ್ನ ನಡೆಸಿರುವ ಸಿಸಿ ಟಿವಿ ಫೋಟೇಜ್ ಲಭ್ಯವಾಗಿದೆ.
ಈ ಪ್ರಕರಣ ಕುರಿತಂತೆ ಅಂಗಡಿ ಮಾಲೀಕರಾದ ಕಲ್ಯಾಣಿ ಎಂಬುವವರು ಗಾಂಧಿನಗರ ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ.
ದೂರಿನ ಜೊತೆ ಸಿಸಿ ಕ್ಯಾಮರ ಪೋಟೇಜ್ ಪಡೆದಿದ್ದು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.ಇವರು ತುಂಭ ಸರ್ವಿಸ್ ಇರುವ ಖಿಲಾಡಿ ಗಳು ಅನಿಸುತ್ತದೆ.
ಕೆಲ ದಿನಗಳ ದಿಂದ ಈಅಂಗಡಿ ಮೇಲೆ ಕಣ್ಣು ಹಾಕಿ ಇರಬಹುದು.
ಕಳ್ಳರು ಅಂಗಡಿ ಒಳಗೆ ಬಂದು ತಕ್ಷಣವೇ ಅವರು ನೇರವಾಗಿ ತುಂಬಾ ಬೆಲೆಬಾಳುವ ಸೀರೆಗಳು ಇರುವ ಸ್ಥಳದಲ್ಲಿ ಟಿಕಾಣೆ ಹಾಕಿದ್ದಾರೆ.
ಮಾಲೀಕರು ತುಂಬ ದೊಡ್ಡ ಪಾರ್ಟಿ ಎಂದು ಕೊಂಡು ಯಾಲ್ಲ ಸೀರೆ ಗಳನ್ನು ತೋರಿಸಿದ್ದಾರೆ.
ಇದನ್ನು ನೋಡಿದರೆ ಇವರು ಇಂತಹ ಕಳವು ಗಳು ಎಷ್ಟು ಮಾಡಿ ಇರಬಹುದು ಅನ್ನವ ಅನುಮಾನಗಳು ಕಾಣುತ್ತೇವೆ.
ತಕ್ಷಣವೇ ಇವರನ್ನು ಬಂಧನ ಮಾಡದಿದ್ದರೆ ನಗರದಲ್ಲಿ ಇವರು ಹೆಚ್ಚಿನ ಮಟ್ಟದಲ್ಲಿ ಕಳವು ಗಳು ಮಾಡಬಹುದು ಅನ್ನುವ ಭಯ ಜನರಲ್ಲಿ ಮೂಡಿಸಿದೆ.
(ಕೆ.ಬಜಾರಪ್ಪ ವರದಿಗಾರರು.)