*ಗಾಲಿ ಅರುಣಾ ಅವರ ಗೆ ಉಡಿ ತುಂಬುವ ಕಾರ್ಯಕ್ರಮ ದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿದ ಮಹಿಳೆಯರು.!!* ಬಳ್ಳಾರಿ(9) ಬಸವೇಶ್ವರ ನಗರದ ಸಂಗಮೇಶ್ವರ ದೇವಸ್ಥಾನ ದಲ್ಲಿ ಗುರುವಾರ ಸಾಯಂಕಾಲ ನೂತನ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ, ಬಳ್ಳಾರಿ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ಅಗಿರವ ಶ್ರೀಮತಿ ಗಾಲಿ ಅರುಣಾ ಜನಾರ್ದನ ರೆಡ್ಡಿ ಅವರಿಗೆ ಸ್ಥಳೀಯ ಮುತ್ತೈದೆಯರು ಉಡಿ ತುಂಬುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಸಾವಿರಾರು ಸಂಖ್ಯೆಯಲ್ಲಿ ಹಿರಿಯರು ಮಹಿಳೆಯರು ಉತ್ಸಾಹ ದಿಂದ ಕಳಸ ಮೇಳಗಳು ದಿಂದ ಸ್ವಾಗತಿಸಿದರು.
ಬಸವೇಶ್ವರ ನಗರ ಅಂದರೆ ಸಾಧಾರಣವಾಗಿ ಶೀಮಂತರು ಬುದ್ದಿವಂತರು,ಅಧಿಕಾರಿಗಳು,ಇರುವ ಬಡಾವಣೆ.
ಈಬಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮೇಲಿನ ವರ್ಗದ ಸಮುದಾಯ ಅವರು ತುಂಬಾ ಇದ್ದಾರೆ.
ಈಭಾಗದಲ್ಲಿ ಬಿಜೆಪಿಯ ಲಿಂಗಾಯತ ಸಮುದಾಯದ ಪಾಲಿಕೆ ಸದಸ್ಯ ಮಲ್ಲನ ಗೌಡ, ಪ್ರಭಾವಿ ಉಸ್ತುವಾರಿ ಸಚಿವ ಶ್ರೀ ರಾಮುಲು ಕಟ್ಟ ಅಭಿಮಾನಿ ಗುರುಲಿಂಗನ ಗೌಡ,ಅರಕ ಬಾಯಿ ಸಚೀವ ಸ್ಥಾನ ಕಳೆದು ಕೊಂಡ ಹಾಲುಮತ ಸಮಾಜ ವನ್ನು ದಾರಿ ತಪ್ಪಿಸಿ ಮೀಸಲಾತಿ ವಂಚನೆ ಮಾಡಿದ,ಈಶ್ವರಪ್ಪ ಸಂಬಂಧಿಗಳು ರಾಮಲಿಂಗಪ್ಪ,ವೇಮಣ್ಣ ಇರುವ ಪ್ರದೇಶ ಗಳಲ್ಲಿ ಜನಾರ್ದನ ರೆಡ್ಡಿ ಪಕ್ಷ ಕಡಿಮೆ ಅವದಿಯಲ್ಲಿ ಜನರ ಮನಸ್ಸನ್ನು ಸೆಳೆಯುತ್ತದೆ.
ಆರಂಭದಲ್ಲಿ ಆಥಿರಥ ಮಹರಥರ ಇರುವ ಜಿಲ್ಲೆ ಯಲ್ಲಿ ಯಾವುದೇ ಲೆಕ್ಕಿಸದೇ, ಅಲಿಖಾನ್,ದಮ್ಮೂರ್ ಶೇಖರ್, ಉಮರಾಜ್,ರಾಜಶೇಖರ ಗೌಡ. ಮಲ್ಲಿಕಾರ್ಜುನ ಆಚಾರಿ,ಇನ್ನೂ ಉಳಿದ ನಾಯಕರು,ಸಾಹಸ ದಿಂದ ಪ್ರಸ್ತುತ,ರೆಡ್ಡಿ ಪಕ್ಷ ನ್ಯಾಷನಲ್ ಪಕ್ಷದ ಸರಿಸಾಟಿಯಾಗಿ ನಿಂತಿದೆ.
ಬಿಜೆಪಿ ಬಳ್ಳಾರಿಯಲ್ಲಿ ಪ್ರಸ್ತುತ ಐಸಿಯು ವಾತಾವರಣ ದಲ್ಲಿ ಇದೇ.
ಬಿಜೆಪಿ ತಾತ್ಕಾಲಿಕ ಜಿಲ್ಲಾ ಅಧ್ಯಕ್ಷರು ಯಾರು ಕಾಣದಂತೆ ಆಗಿದ್ದಾರೆ.
ಬಡ್ಜೆಟ್ ತದನಂತರ ಬಿಜೆಪಿ ಪಕ್ಷ ಜಿಲ್ಲೆ ಯಲ್ಲಿ ವಿಸರ್ಜನೆ,ಅಗುವ ಸಾಧ್ಯತೆಗಳು ಇದ್ದಾವೆ.
ಈ ಸಂದರ್ಬದಲ್ಲಿ, ಮಹಿಳಾ ಅಧ್ಯಕ್ಷರು, ಜಿಲ್ಲಾ ಅಧ್ಯಕ್ಷರು, ಪಕ್ಷದ ಕಾರ್ಯಕರ್ತರು, ದೊಡ್ಡ ಮಟ್ಟದಲ್ಲಿ ಭಾಗವಹಿಸಿದ್ದರು. ಶುಕ್ರವಾರ ತಾಳುರು ರಸ್ತೆಯ ಗೊವಿಂದಪ್ಪ ಕಲ್ಯಾಣ ಮಂಟಪ ದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿದ್ದಾರೆ. ಒಟ್ಟಾರೆ ಗಾಲಿ ಪಕ್ಷ ಸುಡಿಗಾಳಿ ಮಾಡುತ್ತದೆ. ಮುಂದಿನ ದಿನಗಳಲ್ಲಿ ಬಹುತೇಕರು ಜನಾರ್ದನ ರೆಡ್ಡಿ ಪರವಾಗಿ ನಿಲ್ಲುತ್ತಾರೆ ಅನ್ನುವ ಸುಳಿವು ಇದೇ. ಆಥಿರಥರು ಕೂಡ ಸೇರುವ ಸಾಧ್ಯತೆ ಗಳು ಇದ್ದಾವೆ. (ಕೆ.ಬಜಾರಪ್ಪ ವರದಿಗಾರರು ಕಲ್ಯಾಣ ಕರ್ನಾಟಕ,ಚೀಫ್ ಬ್ಯೂರೋ.)