ಮಾನ ಮರ್ಯಾದೆ ಹಾಳು ಮಾಡಿದ ಸಾರಿಗೆ ಇನ್ಸ್ಪೆಕ್ಟರ್ ಸಿ.ಹೇಮಂತ್ ಕುಮಾರ್.
ಬಳ್ಳಾರಿ(13) ಸಾರಿಗೆ ಇಲಾಖೆಯ (RTO)ಕಚೇರಿ ಇನ್ಸ್ಪೆಕ್ಟರ್ ಆಗಿರುವಂತ ಸಿ.ಹೇಮಂತ್ ಕುಮಾರ್ ರವರು, ಶನಿವಾರ ರಾತ್ರಿ ಬೆಂಗಳೂರು ರಸ್ತೆಯಲ್ಲಿ ವಾಹನಗಳನ್ನು ತನಿಖೆ ಮಾಡುವ ಸಮಯದಲ್ಲಿ ಲಾರಿ ಮಾಲಕರಿಂದ ದುಬಾರಿ ಹಣವನ್ನು ವಸೂಲಿ ಮಾಡಿ ಆ ಹಣವನ್ನು ಮತ್ತೊಂದು ನಂಬರಿಗೆ ಫೋನ್ ಪೆ ಮುಖಾಂತರ ವರ್ಗಾವಣೆ ಮಾಡಿದ್ದು,
ತದನಂತರ ಅಲ್ಲಿಯಾ ನಡೆಯುವ ಘಟನೆಯನ್ನು ಕೆ.ಆರ್. ಎಸ್.ಪಕ್ಷದ ಮುಖಂಡರು ವೀಡಿಯೊ ಸೆರೆ ಹಿಡಿದು ಅಧಿಕಾರಿಗಳಿಗೆ ಚಳಿ ಬಿಡಿಸಿ ದುಬಾರಿ ವಸೂಲಿ ಮಾಡಿದ ಹಣವನ್ನು ಮತ್ತೆ ವಾಪಸ್ ಲಾರಿ ವಾಹನ ದಾರಿಗೆ ಹಾಕಿಸಿದ್ದು ಜಾಲ ತಾಣದಲ್ಲಿ ಇಲಾಖೆಯ ಮರ್ಯಾದೆ ಹರಾಜು ಆಗಿದೆ.
ಸಿ.ಹೇಮಂತ್ ಕುಮಾರ್ ರವರು ಹಲವಾರು ವರ್ಷಗಳಿಂದ ಬಳ್ಳಾರಿಯಲ್ಲೇ ಸೇವೆ ಮಾಡುತ್ತಾ ಇಲಾಖೆಯನ್ನು ಭ್ರಷ್ಟಾ ವ್ಯವಸ್ಥೆಗೆ ಮಾರ್ಪಾಡು ಮಾಡಿ ಹಣ ಗಳಿಸುವ ನೀಚ ಅಧಿಕಾರಿಯಾಗಿದ್ದರು.
ಇತ್ತೀಚಿಗೆ ಕೆಲ ವಾಹನಗಳಿಗೆ ಸ್ಪೀಡ್ ಕಂಟ್ರೋಲರ್ ಅಳವಡಿಕೆ ವಿಚಾರವಾಗಿ ಪೊಲೀಸ್ ವರಿಷ್ಠ ಅಧಿಕಾರಿಗಳು ಜಿಲ್ಲಾಧಿಕಾರಿಗಳು ಸಾರಿಗೆ ಕಚೇರಿಗೆ ತರಳಿ ವಾಹನಗಳನ್ನು ಪರಿಶೀಲನೆ ಮಾಡುವ ಸಂಧರ್ಭದಲ್ಲಿ ವಿನಾಕಾರಣ ಜಿಲ್ಲಾಧಿಕಾರಿಗಳಿಗೆ ಆಗೌರವದಿಂದ ವರ್ತನೆ ಮಾಡಿದ್ದು, ಜಿಲ್ಲಾಧಿಕಾರಿ ಗಳಗೆ ಆಕ್ರೋಶ ಬರುವಂತೆ ಮಾಡಿ, ಅವರಿಂದಲೇ ಛೀಮಾರಿ ಹಾಕಿಸಿಕೊಂಡು, ಇವರನ್ನು ಅಮಾನತು ಮಾಡಿ ಎಂದು ಜಿಲ್ಲಾಧಿಕಾರಿಗಳು ಆದೇಶವನ್ನು ಕೂಡ ಮಾಡಿದ್ದರು.
ಆದರೆ ಹೇಮಂತ್ ಕುಮಾರ್ ಅವರ ನಸೀಬ್ ಇನ್ನ ಗಟ್ಟಿಯಾಗಿ ಇದೇ ಎನ್ನುವ ಮಾತು ಕೇಳಿ ಬಂದಿತ್ತು.
ಹೇಮಂತ್ ಕುಮಾರ್ ಅವರ ಸರ್ವಿಸು ಕೆಲವೇ ದಿನಗಳಲ್ಲಿ ಒಂದು ತಿಂಗಳ ಒಳಗೆ ಮುಗಿಯುವುದರಿಂದ ನಿವೃತ್ತಿಗೊಳ್ಳುತ್ತಾರೆ ಎನ್ನುವ ವಿಚಾರವಾಗಿ ಜಿಲ್ಲಾಧಿಕಾರಿಗಳು ಯಾವುದೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದೆ ಬಿಟ್ಟಿರ ಬಹುದು ಎನ್ನುವ ಸಂದೇಶ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿತ್ತು.
ಆದರೆ ಮತ್ತೊಮ್ಮೆ ರಾಜಾ ರೋಷವಾಗಿ ಬಿದಿಗೆ ನಿಂತು ಹೊಟ್ಟೆ ತುಂಬಾ ಎಣ್ಣೆ ಹೊಡೆದು ನಿಶಾ ದಲ್ಲಿ (ಮತ್ತು ನಲ್ಲಿ) ಎಷ್ಟು ಬೇಕಂದರೆ ಅಷ್ಟು ದಂಡ ರೂಪದಲ್ಲಿ ಹಣ ವಸೂಲು ಮಾಡುವ ನೀಚ ಸಂಸ್ಕೃತಿಯನ್ನು ಮುಂದೆ ವರೆಸಿದ್ದರು.
ಹೇಮಂತ್ ಕುಮಾರ್ ಅಲ್ಲದೆ,ಎಸ್ ಡಿ ಸಿ ನಾಗರಾಜ್ ಅನ್ನವರು ಕೂಡ ಕಚೇರಿಯಲ್ಲಿ ಕೆಲಸ ಮಾಡದೆ ಹೇಮಂತಕುಮಾರ ವಾಹನಕ್ಕೆ ಡ್ರೈವರ್ ಆಗಿ ಮುಂದೆ ಒರಿಯುತ್ತಾ ಇದ್ದರು.
ಈಗಾಗಲೇ ಹೇಮಂತ್ ಕುಮಾರ್ ರಾಜ್ಯದಲ್ಲಿ ಅಕ್ರಮ ಸಂಪಾದನೆ ದಿಂದ ಭ್ರಷ್ಟಾಚಾರ ಮಾಡಿ ದೊಡ್ಡ ದೊಡ್ಡ ಶೋ ರೂಮಗಳು ರೆಸಾರ್ಟ್ ಗಳು ಖರೀದಿ ಮಾಡಿದ್ದೇನೆ ಎಂದು ಸಾರಿಗೆ ಕಚೇರಿ ವಲಯದಲ್ಲಿ ಕೇಳಿಬರುತ್ತದೆ.
ಈವರೆಗೆ ಮಾಡಿದ ಲೂಟಿ ಸಾಕಾಗಿದ್ದಲ್ಲದೇ ಕೇವಲ ಒಂದೇ ತಿಂಗಳಲ್ಲಿ ನಿವೃತ್ತಿ ಮಟ್ಟದಲ್ಲಿ ಇದ್ದು, ಮತ್ತಷ್ಟು ಎಂಜಲಿ ಕಾಸುಗೆ ಆಸೆ ಬಿದ್ದು ಸರ್ಕಾರದ ಗೌರವ, ಘನತೆ,ಇಲಾಖೆಯ ಮರ್ಯಾದೆ ಸಂಪೂರ್ಣ ನಾಶಮಾಡಿ ಜಿಲ್ಲೆಗೆ ಕೆಟ್ಟ ಹೆಸರು ತಂದಿರುವ ಕೀರ್ತಿ ಹೇಮಂತ್ ಕುಮಾರ್ ಅವರಿಗೆ ಸೋಲ್ಲುತ್ತದೆ.
ಇಲಾಖೆಯಲ್ಲಿ ಇಷ್ಟು ಭ್ರಷ್ಟಾಚಾರ ನಡೆಯುತ್ತದೆ ಎಂದರೇ ಇವರ ಮೇಲಿನ ಅಧಿಕಾರಿಗಳಿಗೆ ಕಣ್ಣು, ಕಿವಿ, ಇಲ್ಲದೆ ಇರಬಹುದು.
ಈ ಪಾಪದ ಹಣದಲ್ಲಿ ಯಲ್ಲರೂಗೆ ಪಾಲು ಇರುವ ಸಾಧ್ಯತೆ ಇರುತ್ತದೆ.
ಈಗಲಾದರೂ ಹೇಮಂತ್ ಕುಮಾರ್ ಮೇಲೆ ಪ್ರಕರಣ ದಾಖಲಿಸಿ ಲೂಟಿ ಮಾಡಿದ ಹಣವನ್ನು ಸರ್ಕಾರಕ್ಕೆ ವಾಪಸ್ ಮಾಡಿಸಿ, ಹಲವಾರು ಯೋಜನೆಗಳಿಗೆ ಬಳಕೆ ಮಾಡಿಕೊಳ್ಳ ಬೇಕಾಗಿದೆ, ಎಂದು ಸಾರ್ವಜನಿಕರ ಒತ್ತಾಯ ಆಗಿದೆ.
ಇದೇ ಕಚೇರಿಯಲ್ಲಿ ಮತ್ತಷ್ಟು ಸಿಬ್ಬಂದಿ ಗಳ ಮೊಬೈಲ್ ಗಳಿಗೆ ಹಣ ವರ್ಗಾವಣೆ ಮಾಡಿದ್ದು ಕೂಡ ಕೇಳಿ ಬರುತ್ತದೆ.
ನಿವೃತ್ತಿ ಹತ್ತಿರದಲ್ಲಿರುವ ಬಹುತೇಕ ಅಧಿಕಾರಿಗಳು ಈ ರೀತಿಯಲ್ಲಿ ಭ್ರಷ್ಟಾಚಾರ ಮಾಡುತ್ತಿರುವುದು ಇತರ ಇಲಾಖೆಗಳಲ್ಲಿ ಕೂಡ ಇದೆ ಎನ್ನುವುದು ಕೇಳಿಬರುತ್ತದೆ ಸರ್ವಿಸ್ ಇರುವ ಸಮಯದಲ್ಲಿ ಕೈ ತುಂಬಾ ಸಂಬಳ ಪಡೆದು ಹಲವಾರು ಸೆಟಲ್ಮೆಂಟ್ ಮಾಡಿ ಕೋಟಿ, ಕೋಟಿ ಹಣ ಗಳಿಸಿ, ಕೊನೆ ಹಂತದಲ್ಲಿ ಆದರೂ ಜನರಿಗೆ ಸೇವೆ ಸಲ್ಲಿಸಿ ಹೆಸರು ಗಳಿಕೆ ಮಾಡಬೇಕು ಎನ್ನುವ ಮನಸ್ಥಿತಿ ಇಲ್ಲದೆ ಕಳ್ಳ ಮಾರ್ಗಗಳಿಂದ ಸಿಬ್ಬಂದಿಗಳನ್ನು ಬಳಕೆ ಮಾಡಿಕೊಂಡು ಲೂಟಿ ಮಾಡುವ ವಿಚಾರ ಕೂಡ ಇತ್ತೀಚಿಗೆ ಬಯಲುಗ ಬರುತ್ತಾ ಇದೆ, ಇವರ ಮೇಲಿನ ಅಧಿಕಾರಿಗಳು ಇಂತಹ ನಿವೃತ್ತಿ ಹತ್ತಿರದಲ್ಲಿರುವ ಅವರಿಗೆ ಯಾವುದೇ ಅಧಿಕಾರ ನೀಡದೆ ಕೇವಲ ಕಚೇರಿಗೆ ಮಾತ್ರ ಸೀಮಿತ ಮಾಡಿ ಆದೇಶ ಮಾಡಿದರೆ ಮಾತ್ರ ಸರ್ಕಾರದ ಗೌರವ ಉಳಿಯುವ ಅವಕಾಶ ಇರುತ್ತದೆ ಇಲ್ಲವಂದರೆ ಬೀದಿಯಲ್ಲಿ ಬೆತ್ತಲೆ ಆಗುವ ಅಪಾಯ ಇಂತಹ ಅಧಿಕಾರಿಗಳಿಂದಲೇ ಆಗುತ್ತದೆ..