ವಾಲ್ಮೀಕಿ ಅಭಿವೃದ್ದಿ ನಿಗಮದ ಹಣ, ಎಂ.ಪಿ. ಚುನಾವಣೆಗೆ ಕೈ ನಾಯಕರ ಬಳಕೆ
21 ಕೋಟಿ ಮುಟ್ಟಿಲ್ಲ ಅಂದ್ರೆ ಆಣೆ ಮಾಡಲಿ – ಅನಿಲ್ ಲಾಡ್ ಸವಾಲು
ಬಳ್ಳಾರಿ: ನಾನು ಅಪರಂಜಿ ಚಿನ್ನ, ಅಕ್ರಮ ಎನ್ನುವುದು ಜಾಯಮಾನದಲ್ಲಿಲ್ಲ ಎನ್ನುವ, ಮಾಜಿ ಸಚಿವ ಬಿ.ನಾಗೇಂದ್ರ, ನಗರ ಶಾಸಕ ನಾರಾ ಭರತ್ ರೆಡ್ಡಿ, ಎಂ.ಪಿ.ಈ.ತುಕಾರಾಂ, ರಾಜ್ಯಸಭಾ ಸದಸ್ಯ ಡಾ. ನಾಸೀರ್ ಹುಸೇನ್ ಅವರು, ವಾಲ್ಮೀಕಿ ಅಭಿವೃದ್ದಿ ನಿಗಮದ ಹಣ ಮುಟ್ಟಿಲ್ಲ ಅಂದ್ರೆ, ಸಂಡೂರು ಶ್ರೀ ಕುಮಾರಸ್ವಾಮಿ ಅಥವಾ ಬಳ್ಳಾರಿ ಶ್ರೀ ಕನಕ ದುರ್ಗಮ್ಮ ದೇಗುಲದಲ್ಲಿ ಆಣೆ ಮಾಡಲಿ, ಹಣ ದುರ್ಬಳಕೆ ಮಾಡಿದ್ದಾರೆ ಎಂದು ನಾವು ಮಾಡ್ತೇವೆ ಎಂದು ಮಾಜಿ ಶಾಸಕ ಅನಿಲ್ ಲಾಡ್ ಅವರು ಸವಾಲು ಹಾಕಿದರು.
ನಗರದ ಜೆಡಿಎಸ್ ಜಿಲ್ಲಾ ಕಚೇರಿಯಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಹಿಂದುಳಿದವರು ಎಲ್ಲ ಕ್ಷೇತ್ರಗಳಲ್ಲಿ ಮುಂದೆ ಬರಲಿ ಎಂದು ರಾಜಕೀಯ ಕ್ಷೇತ್ರದಲ್ಲಿ ಮೀಸಲಾತಿ ಕಲ್ಪಿಸಿದೆ, ಎಸ್ಟಿ ಮೀಸಲು ಕ್ಷೇತ್ರದಿಂದ ಗೆಲುವು ಸಾಧಿಸಿ, ಎಸ್ಟಿ ಅಭಿವೃದ್ದಿ ನಿಗಮದ ಹಣವನ್ನೇ ಮಾಜಿ ಸಚಿವ ಬಿ.ನಾಗೇಂದ್ರ ಅವರು ದುರ್ಬಳಕೆ ಮಾಡಿಕೊಂಡಿದ್ದಾರೆ ಅಂದ್ರೆ ಏನರ್ಥ, ಇದನ್ನು ನಾವಲ್ಲ ಇಡಿ ಅಧಿಕಾರಿಗಳೇ ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಿದ್ದಾರೆ. 21 ಕೋಟಿ ರೂ.ಗೂ ಹೆಚ್ಚು ಹಣ ದುರ್ಬಳಕೆಯಾಗಿದೆ, ಅದು ನಾಗೇಂದ್ರ ಅವರ ಸೂಚನೆ ಮೇರೆಗೆ ದೊಡ್ಡ ಮಟ್ಟದ ಹಗರಣ ಇದಾಗಿದೆ ಎಂದಿದ್ದಾರೆ. ಸಿ.ಎಂ.ಸಿದ್ದರಾಮಯ್ಯ ಅವರು, ಹಣಕಾಸು ಇಲಾಖೆಯನ್ನು ತಮ್ಮ ಬಳಿಯೇ ಇಟ್ಟುಕೊಂಡಿದ್ದು, ಅವರ ಗಮನಕ್ಕಿಲ್ಲದೆ ಈ ಬಹುಕೋಟಿ ಹಗರಣ ನಡೆಯಲು ಸಾದ್ಯವೇ ಇಲ್ಲ, ಕಳೆದ ಲೋಕಸಭೆ ಚುನಾವಣೆಯಲ್ಲಿ ಕೈ ನಾಯಕರು ವಾಲ್ಮೀಕಿ ಅಭಿವೃದ್ದಿ ನಿಗಮದ 21 ಕೋಟಿ ಗೂ ಹೆಚ್ಚು ಹಣವನ್ನು ಬಳಸಿ, ಗೆಲುವು ಸಾಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು ಗೆಲುವು ಸಾಧಿಸಲಿದ್ದಾರೆ ಎಂದು ಬಹುತೇಕ ಸರ್ವೆಗಳು ಹೇಳಿದ್ದವು. ಕಾಂಗ್ರೆಸ್ ನವರ ಹಣದ ಪ್ರಭಾವ, ನಾನಾ ರೀತಿಯ ಆಮಿಷದಿಂದ ನಮ್ಮ ಅಭ್ಯರ್ಥಿ ಸೋಲು ಅನುಭವಿಸಬೇಕಾಯಿತು ಎಂದರು.
ಎಸ್ಟಿ ಅಭಿವೃದ್ದಿ ನಿಗಮದ ಬಹುಕೋಟಿ ಹಗರಣ ತನಿಖೆ ಇನ್ನೂ ನಡೆಯಲಿದೆ, ಹಣ ಯಾರಿಗೆ ಹೋಯ್ತು, ಎಲ್ಲಿಂದ ಬಂತು, ಕಿಂಗ್ ಪಿನ್ ಯಾರು ಎಂಬುದು ಬಯಲಾಗಲಿದೆ. ಈಗಾಗಲೇ ಇಡಿ ಅಧಿಕಾರಿಗಳು ಈ ಕುರಿತು ಚಾರ್ಜ್ ಶೀಟ್ ಸಲ್ಲಿಸಿದ್ದು, ಕಾಂಗ್ರೆಸ್ ನವರಿಗೆ ನಡುಕ ಶುರುವಾಗಿದೆ. ಈ ಹಗರಣ ಹಣ ಜಿಲ್ಲೆಗೆ 86 ಕೋಟಿ ಬಂದಿದೆ ಎನ್ನುವ ಮಾತಿದೆ, ಇದು ಸುಲಭದ ಮಾತಲ್ಲ, ಇದರಲ್ಲಿ ನಾಗೇಂದ್ರ ಹಾಗೂ ಸಿ.ಎಂ.ಸಿದ್ದರಾಮಯ್ಯ ಅವರ ಪಾತ್ರವಿದೆ, ತನಿಖೆ ಬಳಿಕ ಎಲ್ಲವೂ ಬಯಲಾಗಲಿದೆ ಎಂದರು.
ಸಂಡೂರು ಉಪ ಚುನಾವಣೆ: ಜೆಡಿಎಸ್ ಜಿಲ್ಲಾಧ್ಯಕ್ಷ ಮೀನಳ್ಳಿ ತಾಯಣ್ಣ ಅವರು ಮಾತನಾಡಿ,
ಕ್ಷೇತ್ರದ ಶಾಸಕ ಈ. ತುಕಾರಾಂ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಶೀಘ್ರದಲ್ಲೇ ಉಪ ಚುನಾವಣೆ ನಡೆಯಲಿದೆ. ಅಭ್ಯರ್ಥಿ ಯಾರು ಎಂಬುದು ವರಿಷ್ಠರು ತೀರ್ಮಾನಿಸಲಿದ್ದಾರೆ, ಎಸ್ಟಿ ಮೀಸಲು ಕ್ಷೇತ್ರಕ್ಕೇ ಜೆಡಿಎಸ್, ಬಿಜೆಪಿ ಮೈತ್ರಿ ಅಭ್ಯರ್ಥಿ ಕಣಕ್ಕಿಳಿಯಲಿದ್ದು, ಅಭ್ಯರ್ಥಿ ಯಾರೆಂಬುದು ವರಿಷ್ಠರು ನಿರ್ಣಯವೇ ಅಂತಿಮ. ಜೆಡಿಎಸ್ ಅಭ್ಯರ್ಥಿ ಯಾಗಲಿ ಎಂಬುದು ನಮ್ಮ ಅಭಿಪ್ರಾಯ, ತೀರ್ಮಾನ ವೃಷ್ಟರಿಗೆ ಬಿಟ್ಟಿದ್ದು, ಯಾರಿಗೆ ಟಿಕೆಟ್ ಕೊಟ್ರೂ ಈ ಬಾರಿ ಗೆಲುವು ನಮ್ಮದಾಗಲಿದೆ. ಕ್ಷೇತ್ರದ ಜನತೆ ಈ ಬಾರಿ ಕಾಂಗ್ರೆಸ್ ಗೆ ತಕ್ಕ ಪಾಠ ಕಲಿಸಲು ತುದಿಗಾಲ ಮೇಲೆ ನಿಂತಿದ್ದಾರೆ. ಅಭ್ಯರ್ಥಿ ಯಾರೇ ಆಗಲಿ ಅವರ ಗೆಲುವಿಗಾಗಿ ಅತ್ಯಂತ ಪ್ರಾಮಾಣಿಕವಾಗಿ ಕೆಲಸ ಮಾಡಲಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಜೆಡಿಎಸ್ ಯುವ ಘಟಕದ ರಾಜ್ಯ ಕಾರ್ಯದರ್ಶಿ, ಮುಖಂಡರಾದ , ರಾಜೂ ನಾಯಕ್, ಸೋಮಪ್ಪ,ಲಕ್ಷ್ಮಿ ಕಾಂತ್ ರೆಡ್ಡಿ,ಶಿವನಾರಾಯಣ, ಹೊನ್ನೂರು ಸ್ವಾಮಿ,ಕಿರಣ್ ಕುಮಾರ್, ಅಶೋಕ್ ಸಂಗನಕಲ್ಲು, ಬಸಪ್ಪ,ವನ್ನೂರು ವಾಲಿ, ಭವಾನಿ, ರೂಮಾನ, ನಾಗವೇಣಿ, ಯಶೋಧ, ಶಭಾನ, ನೀಲಾ, ರೇಣುಕಾ, ಶಮೀನ್ ಬಾನು ಮತ್ತಿತರರು ಭಾಗವಹಿಸಿದ್ದರು.