This is the title of the web page
This is the title of the web page

Please assign a menu to the primary menu location under menu

State

ನಾರಾ ಭರತ್ ರೆಡ್ಡಿಗೆ ನಗರ ವಿಧಾನ ಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಟಿಕೆಟ್ ನೀಡಿ:ವೀರಶೈವ ಮುಖಂಡರು ಒತ್ತಾಯ.

ನಾರಾ ಭರತ್ ರೆಡ್ಡಿಗೆ ನಗರ ವಿಧಾನ ಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಟಿಕೆಟ್ ನೀಡಿ:ವೀರಶೈವ ಮುಖಂಡರು ಒತ್ತಾಯ.

*ನಾರಾ ಭರತ್ ರೆಡ್ಡಿಗೆ ನಗರ ವಿಧಾನ ಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಟಿಕೆಟ್ ನೀಡಿ:ವೀರಶೈವ ಮುಖಂಡರು ಒತ್ತಾಯ.*

ಬಳ್ಳಾರಿ:(7)ನಾರಾ ಭರತ್ ರೆಡ್ಡಿ ಅವರಿಗೆ ಬಳ್ಳಾರಿ ನಗರ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ನ್ನು ನೀಡಬೇಕೆಂದು ವೀರಶೈವ ಮುಖಂಡರು ಕಾಂಗ್ರೆಸ್ ಹೈ ಕಮಾಂಡಿಗೆ ಒತ್ತಾಯಿಸಿದ್ದಾರೆ.

ನಗರದ ಖಾಸಗಿ ಹೊಟಲ್ ಸಭಾಂಗಣದಲ್ಲಿ ಮಂಗಳವಾರ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಲಿಂಗಾಯಿತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷರಾದ ಚಾನಾಳ್ ಶೇಖರ್‌,ಮಾತನಾಡಿ.ಭರತ್ ರೆಡ್ಡಿ ಅವರು ಈ ಹಿಂದೆ ಕೊರ್ಲಗುಂದಿ ಕ್ಷೇತ್ರದಿಂದ ಜಿಪಂ ಸದಸ್ಯರಾಗಿ,ಹತ್ತು ವರ್ಷ ಸೇವೆ ಸಲ್ಲಿಸಿದ್ದಾರೆ. ಟಚ್ ಫಾರ್ ಲೈಪ್ ಪೌಂಡೇಶನ್ ಮೂಲಕ ಸಮಾಜ ಸೇವೆ ಮಾಡುತ್ತಾ ಬಂದಿದ್ದಾರೆ.
ಇನ್ನು ಸಮಾಜದ ಜನತೆಗೆ ಕಷ್ಟದಲ್ಲಿದ್ದಾಗ ಅನೇಕ ರೀತಿಯಲ್ಲಿ ಸಹಾಯ, ಸಹಕಾರ ಮಾಡುತ್ತಾ ಬಂದಿದ್ದಾರೆ. ಅದೇರೀತಿ ವೀರಶೈವ ಸಮಾಜದ ಕಾರ್ಯಗಳಿಗೆ, ಜನತೆಗೂ ಸಾಕಷ್ಟು ಸಹಕಾರಿಯಾಗಿದ್ದಾರೆ. ಜನರಿಗಷ್ಟೇ ಅಲ್ಲದೆ ದೇವಸ್ಥಾನಗಳಿಗೆ ಭರತ್ ಅವರ ತಂದೆ ಮಾಜಿ ಶಾಸಕ ಸೂರ್ಯನಾರಾಯಣ ರೆಡ್ಡಿ ಅವರು ದಾನ, ಧರ್ಮ ಮಾಡಿದ್ದಾರೆ ಎಂದು ಹೇಳಿದರು.ಈಗಾಗಲೇ ಮನೆ ಮನೆಗೂ ಭರತ್ ಎಂಬ ಅಭಿಯಾನದಡಿ, ನಗರ ಸೇರಿದಂತೆ ಕ್ಷೇತ್ರದೆಲ್ಲಡೆ ಸಂಚರಿಸಿ ಎಲ್ಲಾ ಸಮಾಜದವರನ್ನು ಒಗ್ಗೂಡಿಸಿಕೊಂಡು ಹೋಗುವನೋಭಾವದ ಯುವಕರಾಗಿದ್ದು ಪಕ್ಷ ಇವರ ಸೇವೆ ಯನ್ನು ಪರಿಗಣಿಸಿ ಟಿಕೆಟ್ ನೀಡಬೇ ಕೆಂದು ಹೇಳಿದರು.
ಸುಮಂಗಳಮ್ಮ ಬಸವರಾಜ್ ಅವರು ಮಾತನಾಡಿ ಭರತ್ ರೆಡ್ಡಿ ಅವರು ಸಮಾಜದಲ್ಲಿ ಹಲವಾರು ಸಮಾಜ ಸೇವೆ ಸಂಕಷ್ಟದಲ್ಲಿರುವ ಬಡವರಿಗೆ ಸಹಾಯ ಮಾಡಿದ್ದಾರೆ,ಮಾಡುತ್ತಿದ್ದಾರೆ. ಅದರಲ್ಲೂ ಮಹಿಳೆಯ ರಿಗೂ ತುಂಬ ಸಹಾಯ ಮಾಡಿದ್ದಾರೆ. ಹಾಗಾಗಿ ಅವರಿಗೆ ಟಿಕೆಟ್ ನೀಡಬೇಕು ಎಂದು ಹೇಳಿದರು.

ಈ ಸುದ್ದಿಗೋಷ್ಠಿಯಲ್ಲಿ, ವೀರಶೈವ ಮುಖಂಡರಾದ ದಂಡಿನ ಶಿವಾನಂದ, ಸಂಗನ ಕಲ್ಲು ಬಸವರಾಜ್, ಹೆಚ್‌.ಎಂ.ಕೊಟ್ರೇಶ್‌,ಕೊರಿ ವಿರುಪಾಕ್ಷಿ, ಕೋಳೂರು ಮಲ್ಲಿಕಾರ್ಜುನ ಗೌಡ, ವಕೀಲರಾದ ನರೇಂದ್ರಬಾಬು, ತಿಮ್ಮನ ಗೌಡ, ಅಂಗಡಿ ಶಂಕರ, ಸೇರಿದಂತೆ ಇತರರು ಇದ್ದರು.


News 9 Today

Leave a Reply