*ವೀರಶೈವ ಲಿಂಗಾಯತ ಸಮುದಾಯವನ್ನು ಹಿಂದುಳಿದ ವರ್ಗದ ಪಟ್ಟಿಗೆ(ಒಬಿಸಿ) ಸೇರಿಸುವಂತೆ ಒತ್ತಾಯ. ಬಳ್ಳಾರಿ(1)ಕೇಂದ್ರ ಸರ್ಕ ತನ್ನ ಮೀಸಲು ಪಟ್ಟಿಯಲ್ಲಿ ವೀರಶೈವ ಲಿಂಗಾಯತ ಸಮುದಾಯವನ್ನು ಹಿಂದುಳಿದ ವರ್ಗದ ಪಟ್ಟಿಗೆ(ಒಬಿಸಿ) ಸೇರಿಸುವಂತೆ ಒತ್ತಾಯಿಸಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದಿಂದ ಇಂದು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು. ನಗರದ ಮುನ್ಸಿಪಲ್ ಕಾಲೇಜು ಆವರಣದಿಂದ ಡಿಸಿ ಕಚೇರಿಯವರೆಗೆ
ವೀರಶೈವ ಲಿಂಗಾಯತ ಮಹಾಸಭಾದ ಸಾವಿರಾರೂ ಸದಸ್ಯರು ರ್ಯಾಲಿ ನಡೆಸಿದರು.
ಈ ಸಂರ್ಭದಲ್ಲಿ ಮಾತನಾಡಿದ ಮುಖಂಡರು, ವೀರಶೈವ ಲಿಂಗಾಯತ ಸಮಾಜದ ಮುಂದಿನ ಪೀಳಿಗೆಯ ಭವಿಷ್ಯದ ದೃಷ್ಟಿಯಿಂದ, ಕೇಂದ್ರದ ಮೀಸಲು ಒಬಿಸಿ ಪಟ್ಟಿಯಲ್ಲಿ ಸೇರಿಸಬೇಕು. ಹಿಂದುಳಿದ ವರ್ಗಗಳ ಸೌಲಭ್ಯ ಪಡೆಯಲು, ಕೇಂದ್ರದ ಮಹತ್ವದ ಹುದ್ದೆಗಳನ್ನು ಒಬಿಸಿ ಮೀಸಲು ಪಡೆಯಲು ನಮ್ಮ ಸಮುದಾಯಕ್ಕೆ ಅವಶ್ಯ ಇದೆ ಎಂದರು. ರಾಜ್ಯ 25 ಸಂಸದರಲ್ಲಿ 11 ಜನ ವೀರಶೈವ ಲಿಂಗಾಯತರಿದ್ದಾರೆ. ರಾಜ್ಯದಿಂದ ಮೂವರು ಸಚಿವರಿದ್ದು, ಅವರ ಸಹ ನಮ್ಮ ಬೇಡಿಕೆಗೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಬೇಕು ಎಂದರು. ಅಖೀಲ ಭಾರತ ವೀರಶೈವ ಮಹಾಸಭಾದ ಕರ್ನಾಟಕ ಘಟಕದ ಅಧ್ಯಕ್ಷರಾಗಿ ಎನ್. ತಿಪ್ಪಣ್ಣ ಮಾಜಿ ಸಚಿವ
ಅಲ್ಲಂ ವೀರಭದ್ರಪ್ಪವಿಧಾನ ಪರಿಷತ್ ಸದಸ್ಯ ವೈ.ಎಂ.ಸತೀಶ್, ಬಿಜೆಪಿ ಮುಖಂಡ ಕೆ.ಬಿ.ಶ್ರೀನಿವಾಸರೆಡ್ಡಿ ಸೇರಿದಂತೆ ಹಲವಾರು ಮುಖಂಡರು ಭಾಗವಹಿಸಿದ್ದರು.
News 9 Today > State > ವೀರಶೈವ ಲಿಂಗಾಯತ ಸಮುದಾಯವನ್ನು ಹಿಂದುಳಿದ ವರ್ಗದ ಪಟ್ಟಿಗೆ(ಒಬಿಸಿ) ಸೇರಿಸುವಂತೆ ಒತ್ತಾಯ.
ವೀರಶೈವ ಲಿಂಗಾಯತ ಸಮುದಾಯವನ್ನು ಹಿಂದುಳಿದ ವರ್ಗದ ಪಟ್ಟಿಗೆ(ಒಬಿಸಿ) ಸೇರಿಸುವಂತೆ ಒತ್ತಾಯ.
Bajarappa01/08/2022
posted on
