ಇವರಿಗೆ ಏನು ಅನ್ನಬೇಕು?ಕಣ್ಣುಗಳು ಇದ್ದಾವೇ.??ಕುಡಿಯುವ ನೀರಿಗೆ ಮಕ್ಕಳು ಗುಡಿ ಗುಂಡಾರ ಗಳ ಸುತ್ತು ತಿರಗಬೇಕು!!* ಬಳ್ಳಾರಿ(25) ನಗರದ ಮದ್ಯದಲ್ಲಿ ಸ್ವಾತಂತ್ರ್ಯ ಪೂರ್ವದ ಯಿಂದ ಕೊಟೆ ಪ್ರದೇಶದಲ್ಲಿ ಒಂದು ಶಾಲೆ ಇದೆ.
ಅದಕ್ಕೆ ಬಳ್ಳಾರಿ ಕೊಟೆ ಶಾಲೆ ಅನ್ನುತ್ತಾರೆ.1.ರಿಂದ 8ನೇ ತರಗತಿವರೆಗೆ ಶಾಲೆ ಇದೆ
ಜಿಪಂ ವ್ಯಾಪ್ತಿಯಲ್ಲಿ ಬರುತ್ತದೆ.
400ಮಕ್ಕಳು ಇದ್ದಾರೆ, ಪ್ರತಿದಿನ ಮನೆಯಿಂದ ಶಾಲೆಗೆ ಬಾಟಲ್ ಮೂಲಕ ನೀರು ತೆಗೆದುಕೊಂಡು ಹೋಗಬೇಕು.
ಬಿಸಿ ಊಟಕ್ಕೆ ಮನೆಯಿಂದ ತೆಗೆದುಕೊಂಡು ಹೊಗಿರವ ನೀರು ದಿಂದ ಉಟ ಮಾಡಬೇಕು ಆಗಿದೆ.
ಈಶಾಲೆಯಲ್ಲಿ ಒಂದು ಹನಿ ನೀರಿನ ವ್ಯವಸ್ಥೆ ಮಾಡಿಲ್ಲ ಸರ್ಕಾರ.
ಈ ಶಾಲೆ ಮಕ್ಕಳು ಮನೆ ಯಿಂದ ತೆಗೆದುಕೊಂಡು ಹೊಗಿರವ ನೀರುನ ಬಾಟಲ್ ಕಾಲಿ ಅದರೆ ಅಥವಾ ನೀರು ಮರೆತು ಹೋದರೆ ಸುತ್ತಮುತ್ತಲಿನ ಸಂತೋಷಿಮಾತ ದೇವಾಲಯ ,ಆಂಜನೇಯ ಸ್ವಾಮಿ ದೇವಾಲಯ ಗಳಲ್ಲಿ ಇರುವ ಕೊಳಾಯಿ ಗಳ ನೀರು ಇವರಿಗೆ ಗಥಿ!!
ಶಾಲೆಯ ಮುಖ್ಯಸ್ಥರು, ಶಿಕ್ಷಕರು ಗೆ ಮಿನರಲ್ ವಾಟರ್ ಜಿಪಂ ಯಲ್ಲಿ ಇರುವ R/O ಪ್ಲಾಂಟ್ ದಿಂದ ಅಡಿಗೆ ಸಹಾಯಕರು ದಿಂದ ತರಿಸಿ ಕೊಡುತ್ತಾರೆ.
ಅನೀರುನ್ನು ಮಕ್ಕಳು ಕುಡಿಯುವ ವಂತೆ ಇಲ್ಲ ಅನ್ನುವ ರೂಲ್ಸ್ ಇದೆ.
ಈ ಶಾಲೆ,ಪಕ್ಕದಲ್ಲಿ ಡಿಡಿಪಿಐ ಕಚೇರಿ,ಜಿಲ್ಲಾ ಪಂಚಾಯತಿ ಕಚೇರಿ. ಇನ್ನೂ ಹಲವಾರು ಕಚೇರಿ ಗಳು ಇದ್ದಾವೆ.
ಜಿಪಂ ಸಿಇಓ,ಡಿಡಿಪಿಐ ದೊಡ್ಡ ದೊಡ್ಡ ಏಸಿ ಕಾರುಗಳಲ್ಲಿ ದಿನಕ್ಕೆ ನಾಲ್ಕು ಬಾರಿ ಮಹಾರಾಜರ ರಂತೆ ಫಿಟ್ಟ್ಅಗಿ ಹೋಗುತ್ತಾರೆ.
ಆದರೆ ಈ ಶಾಲೆಯ ಮಕ್ಕಳು ಜವಾಬ್ದಾರಿ ಯಾರಿಗೂ ಬೇಕಿಲ್ಲ.
ಜಿಪಂ ಸಿಇಓ ಮೂಲತಃ ಬಳ್ಳಾರಿ ವಾಸಿ,ಹೈಟ್,ವೈಟ್ ನೋಡಿ ಜನರು,ಉತ್ತಮ ಕೆಲಸಗಾರರು ಅನ್ನುವ ವಾತಾವರಣ ಸೃಷ್ಟಿ ಆಗಿತ್ತು,ಆದರೆ ಕೇವಲ ಎ/ಸಿ ಕಚೇರಿ ಗೆ ಸರಿ ಹೋಗಿದ್ದಾರೆ.
ಹೊಸ ಡಿಡಿಪಿಐ ಕಥೆ ಕೆಲಸ ಯಾಲ್ಲವು ಶೂನ್ಯ ಅಗಿದೆ.
ಈ ಶಾಲೆಯನ್ನು ಇತ್ತೀಚೆಗೆ ಉಸ್ತುವಾರಿ ಸಚಿವರು ವೀಕ್ಷಣೆ ಮಾಡಿ ಶಾಲೆ ಕೆಲ ಭಾಗಗಳು ತುಂಬಾ ಹಳೆ ಕಟ್ಟಡ ದಲ್ಲಿ ಇದ್ದಾವೆ ಶಾಲೆಯನ್ನು ಹಸ್ತಾಂತರ ಮಾಡಲು ಸೂಚನೆ ಕೊಟ್ಟಿದ್ದಾರೆ ಅದು ಆಗಬೇಕು ಆಗಬೇಕು ಅಗಿದೆ.
ಈ ಶಾಲೆ ಗೆ ಪುಂಡರಿಗಳ ಹಾವಳಿ ಇದೇ ಅನ್ನುತ್ತಾರೆ ಪದೇ ಪದೇ ಶಾಲೆ ಯಲ್ಲಿ ಕಳವು ಮಾಡುತ್ತಾರೆ ಅನ್ನುತ್ತಾರೆ,ಹೆಡ್ ಮಾಸ್ಟರ್.
ಮಕ್ಕಳು ಶೌಚಾಲಯ ಕ್ಕೆ ಹೊಗಲು ಕೂಡ ನೀರಿನ ಸಮಸ್ಯೆ ಇದೆ ಅನ್ನುತ್ತಾರೆ,ಸಂಪ್ ದಿಂದ ಮೊಟರ್ ಮೂಲಕ ನೀರು ತೆಗೆದುಕೊಂಡು ಕೊಡಗಳು ಹಿಡಿದು ಕೊಂಡು ಹೋಗಬೇಕು ಅಗಿರವ ಕಷ್ಟ ಪರಿಸ್ಥಿತಿ ಇದೆ.
ಮೊದಲೆ ಸಣ್ಣ ಮಕ್ಕಳು ಇರುತ್ತಾರೆ,ಮೂತ್ರ ಮಾಡಲು ಯಾಲ್ಲವು ಸಮಸ್ಯೆಗಳು ಇರುತ್ತವೆ.
ಶಾಲೆ ನಿರ್ವಹಣೆ ಗೆ ವರ್ಷಕ್ಕೆ 5000/- ,ಕೊಡುತ್ತಾರೆ.ವರ್ಷಕ್ಕೆ10ಸಾವಿರಗಳು ಕರೆಂಟ್ ಬಿಲ್ ಬರುತ್ತದೆ,ರಿಜಿಸ್ಟರ್ ಪುಸ್ತಕ ಗಳು,ಪೆನ್ನು ಪೆನ್ಸಿಲ್ ಯಾಲ್ಲವು ಅದರಲ್ಲಿ ನೋಡಿಕೊಳ್ಳಬೇಕು.
ಕೈ ಯಿಂದ ಹಣವನ್ನು ಸಾಲ ಮಾಡಿ ನಿರ್ವಹಣೆ ಮಾಡುತ್ತಾಇದ್ದಿವಿ ಏಂದು ಹೆಡ್ ಮಾಸ್ಟರ್ ತಿಳಿಸಿದ್ದಾರೆ.
ಕೋಟಿ ಗಟ್ಟಲೆ ಮೈನಿಂಗ್ ಫಂಡ್ ಇದ್ದು,ನಗರದ ಮದ್ಯದಲ್ಲಿ ಇರುವ ಶಾಲೆ ಇಷ್ಟು ಹೀನಾಯವಾಗಿ ಇದೇ ಅಂದರೆ,ಸಂಬಂಧಿಸಿದ ಅಧಿಕಾರಿಗಳನ್ನು ಏನು ಎನ್ನಬೇಕು.??.ಇವರು ಮಕ್ಕಳು ಗೆ ಉತ್ತಮ ವಿದ್ಯಾಭ್ಯಾಸವನ್ನು ಮಾಡಿಸಿ,ಭವಿಷ್ಯ ದಲ್ಲಿ ಉನ್ನತ ಮಟ್ಟಕ್ಕೆ ಕಳಿಸಲು ಇವರಿಂದ ಸಾದ್ಯವೆ ಅನ್ನುವ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿಸಿದೆ.ಜಿಲ್ಲಾಡಳಿತ ಏನು ಮಾಡುತ್ತದೆ ಏಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. (ಕೆ.ಬಜಾರಪ್ಪ ನ್ಯೂಸ್ ಬ್ಯೂರೋ ಕಲ್ಯಾಣ ಕರ್ನಾಟಕ)