This is the title of the web page
This is the title of the web page

Please assign a menu to the primary menu location under menu

State

ಶ್ರೀ ರಾಮುಲು ದೇವರ ಮೇಲೆ ಆಣೆ ಪ್ರಮಾಣ.ಏಲ್ಲಿ ನಿಲ್ಲುತ್ತಾರೆ.??

ಶ್ರೀ ರಾಮುಲು ದೇವರ ಮೇಲೆ ಆಣೆ ಪ್ರಮಾಣ.ಏಲ್ಲಿ ನಿಲ್ಲುತ್ತಾರೆ.??

*ಶ್ರೀ ರಾಮುಲು ದೇವರ ಮೇಲೆ ಆಣೆ ಪ್ರಮಾಣ.ಏಲ್ಲಿ ನಿಲ್ಲುತ್ತಾರೆ.??*ಬಳ್ಳಾರಿ (15)ರಾಜಕೀಯ ಕೂಡಾ ಒಂದು ರೀತಿಯಲ್ಲಿ ನಾಟಕ ಕಂಪನಿ ಗಳು, ಪಾತ್ರದಲ್ಲಿ ಯಾರು ಚನ್ನಾಗಿ ಪ್ರದರ್ಶನೆ ಮಾಡಿದರೆ ಅವರಗೆ,ಸಿಳ್ಳು ಚಪ್ಪಾಳೆ ಹಾಕುತ್ತಾರೆ.

ಅದರೆ ಜನರು100% ಬಣ್ಣ ಬಣ್ಣದ ರಾಜಕೀಯ ಆಟದಲ್ಲಿ ಮೋಸ ಹೋಗುತ್ತಾರೆ.

ಯಾಕೆ ಅಂದರೆ ಮತಗಳನ್ನು ಮಾರಾಟ ಮಾಡಿಕೊಳ್ಳಿತ್ತಿವಿ.

ಹಲವಾರು ಆಮಿಷ ಗಳು ಗೆ ಮರಳು ಆಗುತ್ತಿವಿ.

*ಜನರು ಅಭಿವೃದ್ಧಿ ಕಾರ್ಯಗಳನ್ನು ಕೇಳುವ, ಹಕ್ಕುಗಳ ನ್ನು ಕಳೆದುಕೊಳ್ಳುತ್ತಾರೆ.*

ಒಂದು ಬಾರಿ ಗೆದ್ದರೆ ರಾಜಕಾರಣಿಗಳು ನಮ್ಮ ಮೇಲೆ, ಸವಾರಿ ಮಾಡುತ್ತರೆ.

ಚುನಾವಣೆ ಸಮಯದಲ್ಲಿ ನಾಯಕರು ಗೆ ಕ್ಷೇತ್ರಗಳು ಹುಡುಕಾಟ ಮಾಡಿಕೊಳ್ಳುತ್ತಾರೆ.

ಜನರನ್ನು ಯಾವರೀತಿ ಯಲ್ಲಿ ಸರ್ಕಸ್ ಮಾಡಿಸಬಹುದು ಅನ್ನುವ ದೊಡ್ಡ ಆಲೋಚನೆ ಗಳು ಮಾಡುತ್ತಾರೆ.

ಚುನಾವಣೆ ಹತ್ತಿರ ಬರುತ್ತದೆ ಎಷ್ಟೇ ದೊಡ್ಡ ನಾಯಕರು ಅಗಲಿ,ಕ್ಷೇತ್ರಗಳು ಹುಡುಕಾಟ ಮಾಡುತ್ತರೆ ಅಂದರೆ ಅದು ಸಾಮಾನ್ಯದ ಮಾತು ಅಲ್ಲ.??.

ಅಂದರೆ ಯಾಲ್ಲ ಪಕ್ಷದ ರಾಜಕಾರಣಿಗಳು ಗೆ ಕೂಡ ಸೋಲಿನ ಭಯದ ವಾತಾವರಣ ಇದೆ.

ಪ್ರಸ್ತುತ ವಾತಾವರಣದಲ್ಲಿ ಜನರು ಬದಲಾವಣೆ ಬಯಸುವ ನೀರಿಕ್ಷೆದಲ್ಲಿ ಇದ್ದಾರೆ,ಈಹಿಂದೆ ಮಾಡಿದ ಕಥೆಗಳು ನೋಡಿ.

ಇಲ್ಲ ವೆಂದರೆ ಮತ್ತೆ ಇದನ್ನೇ ಬಯಸಿದರೆ, ಪ್ರಸ್ತುತ ಈವರೆಗೆ ಇದ್ದಂತೆ ಇರುತ್ತವಿ.!!

ಮತ್ತೊಂದು ಐದು ವರ್ಷ ಗಳು,ಇದೆ ಸರ್ಕಾರ ಮತ್ತೆ ಬಂದರೆ ನಾಯಕರು ಕೂಗಿ,ಕೂಗಿ,ಹೇಳುತ್ತಾರೆ, ಜನರು ನಮ್ಮ ಪರವಾಗಿ ಇದ್ದಾರೆ ಸರ್ಕಾರದ ಮೇಲೆ ಜನರ ಆಕ್ರೋಶ ಇಲ್ಲವೆಂದು.

ನಿರ್ಣಯ ಮತದಾರರ ಕೈಯಲ್ಲಿ ಇದೆ,ಈಗಾಗಲೇ ಶ್ರೀ ರಾಮುಲು ಅವರ ಗೆ ಸಿದ್ದ ರಾಮಯ್ಯ ಅವರಗೆ ಕೂಡ ಇದೇ ವಾತಾವರಣ.

ಇವರು ಕ್ಷೇತ್ರಗಳ ಹುಡುಕಾಟ ನೋಡಿದರೆ,ಗೊತ್ತು ಆಗುತ್ತದೆ,ಸಾಮಾನ್ಯವಾಗಿ ಯಾಲ್ಲ ನಾಯಕರು ಸರ್ವೇ ಆಫ್ ಇಂಡಿಯಾ ಕೂಡಾ ಸರ್ವೇ ಮಾಡಸಿಕೊಂಡುರುತ್ತಾರೆ.

ಸೋಲು ಗೆಲುವು ಲೆಕ್ಕಾಚಾರ ದಲ್ಲಿ ಇರುತ್ತಾರೆ.

ಅದರ ಈಬಾರಿ ರಾಮುಲು ಗೆ ಗ್ರಾಮೀಣ ಕ್ಷೇತ್ರದಲ್ಲಿ ಗೆಲ್ಲುವ ಒಲವು ಇದ್ದರು ಕೂಡ,ಅದು ಮತ್ತೊಂದು ರೂಪ ಪಡೆದು ಕೊಂಡಿದೆ.

ಬಿಜೆಪಿ ಅಂದರೆ ರಾಮುಲು ರೆಡ್ಡಿ ಗಳು ಅನ್ನುವ ಮಾತುಗಳು ಇದ್ದಾವೆ.

ಈವರೆಗೆ ಬಳ್ಳಾರಿ ರಾಜಕಾರಣದಲ್ಲಿ ಇವರನ್ನು ಹೊರತು ಪಡಿಸಿ ಯಾರು ಪಕ್ಷದ ಟಿಕೆಟ್ ಕೇಳಿದ ದಿನಮಾನಗಳು ಇಲ್ಲವೇ ಇಲ್ಲ!!.
ಪ್ರಸ್ತುತ ವಾತಾವರಣ ಬದಲಾವಣೆ ಅಗಿದೆ.

ಒಂದು ಕಡೆ ಸ್ವ ಪಕ್ಷದ ಅವರು ನಿಂದಲೇ ಕಿರುಕುಳ ಇದೆ ಏಂದು ಗಾಲಿ ಜನಾರ್ದನ ರೆಡ್ಡಿ ಅವರು ಆರೋಪ ಮಾಡುತ್ತಾರೆ.

ಅದು ಸುಳ್ಳು”ಗಾಲಿ” ಮಾಡಿದ ಕಿತಾಪತಿ ತುಂಬಾ ಇದೆ ದೊಡ್ಡ ದೊಡ್ಡ ನಾಯಕರು ಗೆ ಪಕ್ಷದಲ್ಲಿ ಇರುವ ಅವರಗೆ ತುಂಬಾ ಅನ್ಯಾಯ ಮಾಡಿದ್ದಾರೆ,ಏಂದು ಬಿಜೆಪಿ ಪಕ್ಷದ ಹಿರಿಯ ಮುಖಂಡರು ನೇರವಾಗಿ ಆರೋಪ ಮಾಡಿದ್ದಾರೆ.

ಬಳ್ಳಾರಿ ಜಿಲ್ಲೆ ಯಲ್ಲಿ ಈವರೆಗೆ ವಿರೋಧ ಅಲೆಗಳು ಇರಲಿಲ್ಲ,ಪಕ್ಷಕ್ಕೆ ನಷ್ಟ ಆಗುತ್ತದೆ, ಬಿಜೆಪಿಗೆ ಸೋಲುವ ವಾತಾವರಣ ಇದೇ ಏಂದು ಪಕ್ಷದ ಹಿರಿಯ ನಾಯಕ ಮಾಜಿ ಪ್ರಭಾವಿ, ಸಚಿವ ಈಶ್ವರಪ್ಪ ಸಂಬಂದಿ ಗಳು ಹೇಳುತ್ತಾರೆ.ಇದರ ಮರ್ಮ ತುಂಬಾ ದೊಡ್ಡದು ಇದೆ.!!?ಇದಕ್ಕೆ ಯಾರು ಸೂತ್ರದಾರರು,ಅನ್ನುವುದು ಮುಂದಿನ ಸಂಚಿಕೆಯಲ್ಲಿ…?? .

ಇದರ ಮದ್ಯದಲ್ಲಿ, *ರಾಮುಲು ಕೂಡ ಕ್ಷೇತ್ರ ಸಂಚಾರಿ ಆಗಿದ್ದಾರೆ* ಕಾಲ ಚಕ್ರ ಬದಲಾವಣೆ ಅಗಿದೆ.

ರಾಮುಲು ಅವರ ಗೆ ಪಕ್ಷದಲ್ಲಿ ಯೇ ಅಸಮಾಧಾನ ವ್ಯಕ್ತಿ ಗಳು ಇದ್ದಾರೆ!!.

ಈವರೆಗೆ ರಾಜಕೀಯ ದಲ್ಲಿ ರಾಮುಲು ಯಾರನ್ನು ಬೆಳಸಲು ಇಲ್ಲ.

ಕೇವಲ ನಾಮಕ ವಸ್ತು ಸ್ಥಾನಗಳನ್ನು ನೀಡಿ ಕೆಲವರನ್ನು ಸರಿ ಪಡಿಸಿದ್ದಾರೆ.

ಇನ್ನೂ ಉಳಿದ ಶಕ್ತಿವಂತರನ್ನು ತನ್ನ ಹಿಂದಿನ ವಾಹನ ಕ್ಕೆ ರಿಜರ್ವ್ ಮಾಡಿದ್ದಾರೆ.

ಅದರ ಪ್ರಭಾವ ಈಬಾರಿ ಕೇಂದ್ರ ರಾಜ್ಯ ಮಟ್ಟದಲ್ಲಿ ರಾಮುಲು ಗೆ ಉಸಿರು ಕಟ್ಟುವಂತೆ ಮಾಡುತ್ತದೆ ಅನ್ನುತ್ತಾರೆ, ಕೆಲ ಅನುಭವಿ ಗಳು.

ಇದರ ಮದ್ಯದಲ್ಲಿ ಶೀರಾಮುಲು ಅವರ ಅಶ್ವಮೇಧ ವನ್ನು ನಿಯಂತ್ರಣ ಮಾಡುವ ವಿರೋಧಿ ಪಕ್ಷದ ನಾಯಕರು ಶೀರಾಮುಲು,ಸರಿಸಮಾನದ ಕಾಂಗ್ರೆಸ್ ಪಕ್ಷದಲ್ಲಿ ಪ್ರಭಾವಿ ನಾಯಕರು ಅಗಿರವ ಗ್ರಾಮೀಣ ಶಾಸಕ ನಾಗೇಂದ್ರ ಅವರು.

ಇವರು ಕೂಡ ವಾಲ್ಮೀಕಿ ಸಮುದಾಯದ ದಲ್ಲಿ ದೊಡ್ಡ ನಾಯಕರು.

ಜಿಲ್ಲೆ ಯಲ್ಲಿ, ರಾಜ್ಯದಲ್ಲಿ ರಾಮುಲು ಒಬ್ಬ ರೆ ಸಮಾಜದ ಮುಖಂಡರು ಅನ್ನುವ ವಾತಾವರಣ ಇತ್ತು.ಕಾಂಗ್ರೆಸ್ ಪಕ್ಷದಲ್ಲಿ ಕೂಡ ಅದೇ ರೆಂಜ್ ಅದೇ ಸಮಬಲ ಇರುವ ನಾಯಕ ನಾಗೇಂದ್ರ ಅವರು.

ಆಂಧ್ರಪ್ರದೇಶ ಪ್ರದೇಶದಲ್ಲಿ ,ಕರ್ನಾಟಕ ದಲ್ಲಿ ಇವರ ರಾಜಕೀಯದ ಸ್ತಂಭಗಳು ಇದ್ದಾವೆ.

ಇದರಿಂದ ಈಗಾಗಲೇ ತುಂಬಾ ಮಟ್ಟದಲ್ಲಿ ಬೆಳೆದ ಶ್ರೀ ರಾಮುಲು ರಾಜ್ಯದಲ್ಲಿ ಎಲ್ಲಿಂದ ಬೇಕಾದರೂ ಸ್ಪರ್ಧೆ ಮಾಡಬಹುದು.

ರಾಜಕೀಯದಲ್ಲಿ ಯಾಲ್ಲ ಸ್ಥಾನ ಮಾನಗಳು ಪಡೆದ ನಾಯಕರು,ಅದರಿಂದ ನಾಗೇಂದ್ರ ಗೆ ತಾವು ವಿರೋಧವಾಗಿ ಸ್ಪರ್ಧೆ ಮಾಡಬಾರದು,ಅವರು ಕೂಡ ನಮ್ಮ ಮುಖಂಡರು, ಏಂದು,ಸಲಹೆ ಸೂಚನೆಗಳನ್ನು ಕೊಟ್ಟಿದ್ದಾರೆ ಅನ್ನುವ ಮಾತುಗಳು ಇದ್ದಾವೆ.

ಸಮಾಜ ಈಬಾರಿ ಈ ಕ್ಷೇತ್ರದಲ್ಲಿ, ನಾಗೇಂದ್ರ ಪರವಾಗಿ ನಿಲ್ಲುತ್ತಾರೆ ಅನ್ನುವ ಸಂದೇಶ ಇದೇ, ಅವರ ಸಮಾಜ ಇಬ್ಬರು ಬೆಳೆಯಬೇಕು ಅನ್ನುವ ಆಲೋಚನೆ ಮಾಡಿದ್ದಾರೆ.

ಇದರಿಂದ ರಾಮುಲು ಅವರು ಕ್ಷೇತ್ರ ಸಂಚಾರಿ ಯಾಗಿ ಆಣೆ ಪ್ರಮಾಣ ವಾಗಿ,ಪ್ರಸ್ತುತ ಇರುವ ಕ್ಷೇತ್ರ ವನ್ನು ಅಯ್ಕೆ ಮಾಡಿಕೊಂಡ ಇರಬಹುದು.ಮತ್ತೆ ತಿಪ್ಪೇಸ್ವಾಮಿ ಅವರ ಗೆ,ಸಂಕಟವನ್ನು ಉಂಟು ಮಾಡಬಹುದು.!!(ಕೆ.ಬಜಾರಪ್ಪ ವರದಿಗಾರರು ಬಳ್ಳಾರಿ.)


News 9 Today

Leave a Reply