ಓಲ ವಾಹನ ಕಂಪನಿ ಗಳ ದಿಂದ ಖರೀದಿ ದಾರರುಗೆ ತೊಂದೆರೆಗಳು.ಪ್ರೂಫ್ ಕೊಟ್ಟಿದ್ದ ಜಿಲ್ಲೆ ಯಲ್ಲಿ ನಂಬರ್ ಕೊಡಲ್ಲ ಕಂಪನಿ!! RTO ಕಚೇರಿ ಯಾಕೆ??.
ಬಳ್ಳಾರಿ (27)ಬಳ್ಳಾರಿಯಲ್ಲಿ ಓಲ ಎಲೆಕ್ಟ್ರಾನಿಕ್ ಸ್ಕೂಟರ್ ಗಳ ಕಂಪನಿಯಿಂದ ಖರೀದಿ ದಾರರು ಗೆ ಸಮಸ್ಯೆಗಳು ಸೃಷ್ಟಿ ಮಾಡಿದೆ.
ಇತ್ತೀಚಿಗೆ ಪೆಟ್ರೋಲು ಡೀಸೆಲ್ ದುಬಾರಿಯಾಗಿದ್ದು ಗೃಹಕರು ಎಲೆಕ್ಟ್ರಾನಿಕ್ ವಾಹನ ಗಳು ಕಡೆ ಗಮನ ಸೆಳೆದಿದ್ದು ಈ ವಾಹನ ಖರೀದಿ ಕೂಡ ತುಂಬಾ ದುಬಾರಿ ಆಗಿದೆ. ಈಗಾಗಲೇ ಬಹುತೇಕ ಎಲೆಕ್ಟ್ರಾನಿಕ್ ವಾಹನಗಳು ಕಾರ್ ಸ್ಕೂಟರ್ ಮುಂತಾದ ವಾಹನಗಳು ಮಾರ್ಕೆಟ್ನಲ್ಲಿ ತುಂಬಿ ತುಳುಕುತ್ತಿದ್ದಾವೇ.
ಆದರೆ ಇವುಗಳ ಕೆಲ ಕಂಪನಿಗಳಿಗೆ ಸಾರಿಗೆ ಮಾನದಂಡಗಳು ಇಲ್ಲವೇ ಅನ್ನುವ ಪ್ರಶ್ನೆ ಆಗಿದೆ.
ಸಾರಿಗೆ (ಆರ್ ಟಿ ಓ) ಇಲಾಖೆಯಲ್ಲಿ ಇ.ವಿ ವಾಹನ ಗಳು ಗೆ ಮಾನದಂಡ ಇಲ್ಲವಾ..?? ಬಳ್ಳಾರಿಯಲ್ಲಿ ಮಾಲೀಕರು ಗೆ ಒಂದು ತಿಂಗಳದಿಂದ ನಂಬರ್ ಕೊಡದೆ ಇರುವ ಹಿನ್ನೆಲೆಯಲ್ಲಿ ಮಾಲೀಕರು ಓಲಾ ಕಚೇರಿ ಸುತ್ತು ಸುತ್ತಾಡ್ತಾ ಇದ್ದಾರೆ.
ಆದರೆ ಓಲ ಕಂಪನಿ ಸರಿಯಾಗಿ ಗ್ರಾಹಕರಿಗೆ ಸ್ಪಂದಿಸುತ್ತಾ ಇಲ್ಲ.
ಒಂದು ತಿಂಗಳ ಹಿಂದೆ ಬಳ್ಳಾರಿಯ ಮೂಲತ ಃ ಮುಸ್ತಾನ್ ಅನ್ನವ ಅವರು ಒಂದು ಲಕ್ಷ ಮೇಲ್ಪಟ್ಟು ಓಲ ವಾಹನವನ್ನು ಖರೀದಿ ಮಾಡಿದ್ದಾರೆ.
ಆದರೆ ಅವರಿಗೆ ನಂಬರ್ ಕೊಡದೆ ಸುತ್ತೋಡಿಸುತ್ತಾ ಇದ್ದಾರೆ.
ಇವರು ವಾಹನ ಖರೀದಿ ಸಮಯದಲ್ಲಿ ಬಳ್ಳಾರಿಯ ಸ್ಥಳೀಯ ಅಡ್ರೆಸ್ ಪ್ರೂಫ್ ಆಧಾರ್ ಕಾರ್ಡ್ ಡ್ರೈವಿಂಗ್ ಲೈಸೆನ್ಸ್ ಮುಂತಾದ ದಾಖಲೆ ನೀಡಿದ್ದು, ಬಳ್ಳಾರಿ ನಲ್ಲಿ ರಿಜಿಸ್ಟರ್ ಆಗಿ ನಂಬರ್,ಕೆ ಎ.34 ಅನ್ನುವ ನಂಬರ್ ಕೊಡಬೇಕಾಗಿತ್ತು,ಆದರೆ ಕೆ. ಎ.42 ಅನ್ನುವ ನಂಬರ್ ಬೇರೆ ಜಿಲ್ಲೆಯ ನಂಬರ್ ನೀಡಲು ಮುಂದಾಗಿದ್ದಾರೆ ಎಂದು
ಮಾಸ್ತನ್ ತಿಳಿಸಿದ್ದಾರೆ.
ಮೂಲತಃಬಳ್ಳಾರಿಯವರು ನಮಗೆ ಕೆ.ಎ. 34 ಅನ್ನುವ ಜಿಲ್ಲೆಯ ನಂಬರ್ ಬೇಕಾಗಿತ್ತು ತಾವು ಬೆಂಗಳೂರು, ಮಹಾರಾಷ್ಟ್ರ, ಸೀರಿಯಲ್ ನಂಬರ್ ಕೊಡುವುದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದ್ದಾರೆ.
ಒಂದು ತಿಂಗಳ ದಿಂದ ಗಾಡಿ ರಸ್ತೆ ನಲ್ಲಿ ಓಡಾಟ ಮಾಡುತಾ ಇದೇ.
ಯಾವದೇ ನಂಬರ್ ಇಲ್ಲ ಟಿ.ಪಿ ನಂಬರ್ ಇಲ್ಲ. ಬಳ್ಳಾರಿ RTO ಗೆ ಇದರ ಮಾಹಿತಿ ಇಲ್ಲ..!!
ಕೊನೆಗೆ Rto ಗೆ ಸಂಪರ್ಕ ಮಾಡಿದ್ರೆ ಕಥೆ,ಪುರಾಣ, ಆರಂಭ ಮಾಡಿದ್ದರೆ, ವಾಹನ ರೆಜಿಸ್ಟರ್ ನಮಗೆ ಬರೋದು ಇಲ್ಲ ಯಾಲ್ಲವು ನೇರವಾಗಿ ಆನ್ ಲೈನ್ ಆಗಿದೆ, ಟ್ಯಾಕ್ಸ್ ಪೇ ಮಾಡಿ ಎಲ್ಲಿಂದ ಆದ್ರೂ ರಿಜಿಸ್ಟರ್ ಮಾಡಿಸಿ ಕೊಳ್ಳಬಹುದು, ವಾಹನ ತಪಾಸಣೆ ಗೆ ಕೂಡ ನಮ್ಮ ಕಚೇರಿ ಗೆ ಬರೋದು ಕೂಡ ಬೇಕಾಗಿಲ್ಲ,ರೂಲ್ಸ್ ಯಾಲ್ಲ ಬದಲಾವಣೆ ಆಗಿದ್ದಾವೆ, ಶೋ ರೂಮ್ ನವರು ಟ್ಯಾಕ್ಸ್ ಪೇ ಮಾಡಿದ ಸಂದರ್ಭದಲ್ಲಿ ಎಲ್ಲಿ ರಿಜಿಸ್ಟರ್ ಆಗಬೇಕು ಎಂದು ಅಪ್ಲೈ ಮಾಡಿದರೆ ಅಲ್ಲಿ ಆಗುತ್ತೆ ಅಲ್ಲಿಯ RTO ಕಚೇರಿ ಅವರು ಅನುಮತಿ ಕೊಡುತಾರೆ ಎಂದು ಹೇಳಿಬಿಟ್ರು.
ಆದ್ರೆ ಬಳ್ಳಾರಿ ಅಡ್ರಸ್ಸ್ ದಾಖಲೆ ಕೊಟ್ಟರೆ ಹೊರ ಜಿಲ್ಲೆಯಾ,ರಿಜಿಸ್ಟರ್ ನಂಬರ್, ಹೊರ ರಾಜ್ಯದ ನಂಬರ್ ಸಿಗುತ್ತೆ ಆಂದ್ರೆ, ವಾಹನ ಮಾಲೀಕರು “ಯಾವ ಕಲ್ಲು ದಿಂದ ಕೊಟ್ಟಿ ಕೊಳ್ಳಬೇಕು.”ಮಾಸ್ತನ್ ಗೆ kA42.EJ.1628 ಅನ್ನುವ ನಂಬರ್ ಕೊಡಲು ಮುಂದೆ ಆಗಿದ್ದಾರೆ.
ಆನ್ಲೈನ್ ನಲ್ಲಿ ತೋರಿಸಿದ್ದಾರೆ, ಸ್ವಾಮಿ ನಾವು ಬಳ್ಳಾರಿ ಅಡ್ರೆಸ್ಸ್ ಪ್ರೂಫ್ ಕೊಟ್ಟಿದ್ದು, ನಮ್ಮಗೆ KA.34 ರಿಜಿಸ್ಟರ್ ಬೇಕು ಎಂದರು, ಅದ್ಕಕೆ ಅವರ ಸಮರ್ಪಕ ಉತ್ತರ ಕೊಡೆದೆ ಏನೂಆಗಲ್ಲ ಹೋಗಿ ಸರಿ ಮಾಡಿಸಿ ಕೊಡೀತೀವಿ ಎಂದು ಯಾವದೇ ನಂಬರ್ ಕೊಡದೆ, ಅರಿಕೆ ಉತ್ತರ ಕೊಟ್ಟು ಕಳಸಿದ್ದಾರೆ.134 ಅಂಧಾಜು ವಾಹನ ಗಳು ಗೆ ಬೇರೆ ಜಿಲ್ಲೆಯಾ ನಂಬರ್ ಬಂದಿದೆ ಎಂದು ಕಂಪನಿ ಮೂಲದ ಅವರು ತಿಳಿಸಿದ್ದಾರೆ.
ಓಲ ಕಂಪನಿ ಬಳ್ಳಾರಿ ನಲ್ಲಿ ಇದಿಯಾ ಎಂದು ಒಬ್ಬ ಅಧಿಕಾರಿ ಪ್ರಶ್ನೆ ಮಾಡಿದ್ದಾರೆ. ಸಾರಿಗೆ ಅಧಿಕಾರಿಗಳ ಕರ್ತವ್ಯ ಏನು, ಇಂತಹ ಕಂಪನಿ ಗಳು ಮೇಲೆ ಕ್ರಮ ಏನು..??.