ಲಾರಿ ಅಸೋಸಿಯೇಷನ್ ಅಧ್ಯಕ್ಷ ರಾಜೀನಾಮೆ.!! ರಾಜ್ಯ ಸರ್ಕಾರದ ಅಡಳಿತ ವ್ಯವಸ್ಥೆ ಹಳ್ಳ ಹಿಡಿದರೇ,ವ್ಯವಸ್ಥೆ ಬಂದಿ ದೊಡ್ಡಿ ಆಗುತ್ತದೆ.!! ಬಳ್ಳಾರಿ(27) ಈಗಾಗಲೇ ರಾಜ್ಯ ಸರ್ಕಾರದ ಆಡಳಿತ ವ್ಯವಸ್ಥೆ ಜನರು ನೋಡಿ ಬೇಸರ ಗೊಂಡಿರುವ ಉಚಿತ ಯೋಜನೆ ಗಳಿಂದ ಜನರ ಮೇಲೆ ದುಬಾರಿ ಪರಿಣಾಮ ಬೀರುತ್ತಿರುವ ವಾತಾವರಣ ನೋಡಿದ್ದು ತಿಳಿದ ವಿಚಾರ ಆಗಿದೆ. ಇಂತಹ ಸಂದರ್ಭದಲ್ಲಿ ಸಕ್ರಿಯ ನಾಯಕತ್ವ ಇಲ್ಲದೆ ವ್ಯವಸ್ಥೆ ಬಂದಿ ದೊಡ್ಡಿ ಆಗಿದೆ.
ದಿನ ದಿನಕ್ಕೆ ಸಿದ್ದ ರಾಮಯ್ಯ ಅವರ ಅಡಳಿತ ಭ್ರಷ್ಟಾಚಾರದ ದಾರಿ ಹಿಡಿದಿದೆ ಎಂದು, ರಾಜ್ಯ ದಲ್ಲಿ ಹಲವಾರು ಪ್ರಕರಣ ಗಳು,ಸಾಕ್ಷಿ ಆಗಿದ್ದಾವೆ.
*ಬಳ್ಳಾರಿ ಲಾರಿ ಮಾಲಿಕರ ಸಂಘದ ದಲಿತ ಸಮಾಜದ ಪೆದ್ದನ್ನ ರಾಜೀನಾಮೆ!!*ದಲಿತ ಸಮಾಜಗಳಲ್ಲಿ ಐಕ್ಯತೆ ಕೊರತೆ.* ಬಳ್ಳಾರಿಯಲ್ಲಿ ಈಹಿಂದೆ ಲಾರಿ ಟ್ರಾನ್ಸ್ ಪೋರ್ಟ್ ತುಂಬಾ ಚೆನ್ನಾಗಿ ನಡೆಯುತ್ತ ಇತ್ತು,ಗಣಿಗಾರಿಕೆ, ಸ್ಟಿಲ್ ಫ್ಯಾಕ್ಟರಿ ಗಳು ವ್ಯಾಪಾರ ವಹಿವಾಟು ತುಂಬಾ ಚೆನ್ನಾಗಿ ಇತ್ತು.
ಲಾರಿ ಮಾಲೀಕರ ಕೂಡ ಸಾಲಸುಲ ಮಾಡಿ ಲಾರಿಗಳು ಖರೀದಿ ಮಾಡಿದ್ದರು ನಾಲ್ಕು ರೂಪಾಯಿ ಗಳು ಗಳಿಸಿದ್ದರು. ಆ ಸಮಯದಲ್ಲಿ ಕೆಲವರು, ಲಾರಿ ಮಾಲಿಕರ ಸಂಘವನ್ನು ಸ್ಥಾಪಿಸಿ ಕೊಂಡು, ಲಾರಿ ಟರ್ಮಿನಲ್ ಯಲ್ಲಿ ಕಚೇರಿ ಮಾಡಿಕೊಂಡು ಅದರ ಅಡಿಯಲ್ಲಿ ವ್ಯವಹಾರ ಮಾಡಿಕೊಳ್ಳತ್ತಾ ಇದ್ದರು. ಲಾರಿ ಲೋಡಿಂಗ್ ಗೆ ಹೋಗುವ ಸಮಯದಲ್ಲಿ ಸಂಘಕ್ಕೆ ಒಂದಿಷ್ಟು ಹಣವನ್ನು ಕೊಡುವ ವ್ಯವಸ್ಥೆ ಮಾಡಿಕೊಂಡಿದ್ದರು. ಆಸಮಯದಲ್ಲಿ ಮುತ್ತು ಅನ್ನುವ ಅವರು ಕೂಡ ನ್ಯಾಷನಲ್ ಲಾರಿ ಸಂಘ ದಲ್ಲಿ ಇದ್ದರು ಎಲ್ಲಾ ಲಾರಿ ಮಾಲಿಕರಿಗೆ ನ್ಯಾಯ ಕೊಡಿಸುವ ಉದ್ದೇಶ ಇಟ್ಟುಕೊಂಡು ಮಾಲು ಕೊಡುವ ಅವರ ಜೊತೆಯಲ್ಲಿ ಚರ್ಚೆ ಮಾಡುತ್ತ ಇದ್ದರು.ತದನಂತರ ಫ್ಯಾಕ್ಟರಿ ಗಳ,ಮಾಲ್ ಸರಬರಾಜು ಮಾಡುವ ಅವರ ನಡುವೆ ವ್ಯತ್ಯಾಸ ಗಳು ಆಗಿ ಪೋಲಿಸ್ ಪ್ರಕರಣ ಗಳು ದಾಖಲೆಗಳು ಆಗಿದ್ದವು. ತದನಂತರ ರಾಜಕಾರಣ ಎಂಟ್ರಿ ಯಾಗಿ ಅಸೋಸಿಯೇಷನ್ ನಲ್ಲಿ ಬಿರುಕುಗಳು ಹುಟ್ಟು ಕೊಂಡು, ಮಂದಗತಿಯಲ್ಲಿ ಸಾಗುವ ವ್ಯವಸ್ಥೆ ಆಗಿತ್ತು. ಈಹಿಂದೆ, ವೆಂಕಟರಾವ್, ಭಾಸ್ಕರ ರೆಡ್ಡಿ,, ಮುನ್ನಾಭಾಯ್,ತದನಂತರ ಪೆದ್ದನ್ನ.ಪೆದ್ದನ್ನ ಒಬ್ಬ ದಲಿತ ಸಮಾಜದ ಅವರು, ಇವರು ಅಧ್ಯಕ್ಷರು ಆಗಿ ಇರೋದು ಪ್ರಸ್ತುತ ವಾತಾವರಣದ ಕಾಂಗ್ರೆಸ್ ನಾಯಕರುಗಳಿಗೆ ಮತ್ತು ಅವರ ಮತ್ತೊಂದು ಲಾರಿ ಮಾಲಿಕರ ಬೆಂಬಲಿಗರು ಗೆ ಸಹಿಸಿ ಕೊಳ್ಳಲು ಆಗಿಲ್ಲ, ವಿನಾಕಾರಣ ಜಗಳ ಗಳು, ಕಿರುಕುಳ ಗಳು ಆರಂಭ ಮಾಡಿದ್ದರು, ಇತ್ತಿಚೆಗೆ ಪ್ರಕರಣ ಗಳು ಕೂಡ ಆಗಿದ್ದವು, ಇಬ್ಬರು ಶಾಸಕರು,ದಲಿತ ಮುಖಂಡರು ಪಂಚಾಯತಿ ಮಾಡಿದರು, ಏನು ಆಗಿಲ್ಲ ,ಇದನ್ನು ನೊಂದ ಪೆದ್ದನ್ನ ಇಂತಹ ವ್ಯವಸ್ಥೆಯಲ್ಲಿ ಅಧ್ಯಕ್ಷರು ಆಗಿ ಏನು ಮಾಡೋದು ಎಂದು, ಬುದು ವಾರ ರಾಜೀನಾಮೆ ಮಾಡಿದ್ದಾರೆ.
*ಲಾರಿ ಅಸೋಸಿಯೇಷನ್ ಗೆ ಪಾಲಿಕೆ ಸದಸ್ಯರು ಎಂಟ್ರಿ!!* ಬುಧುವಾರ ಅಸೋಸಿಯೇಷನ್ ಗೆ ಪಾಲಿಕೆ ಸದಸ್ಯರು ಮಿಂಚು ಸೀನ,ಬಿ,ಆರ್ ಎಲ್ ,ಸೀನ ಪ್ರಭಂಜನ್ ನೂರ್ ಅವರು ಎಂಟ್ರಿ ಕೊಟ್ಟ ಲಾರಿ ಮಾಲಿಕರ ಮೀಟಿಂಗ್ ನಲ್ಲಿ ಪಾಲ್ಗೊಂಡು ಎಲ್ಲಾರು ಹೊಂದಾಣಿಕೆ ಮೇಲೆ ಹೋಗಬೆಕು ಎನ್ನುವ ಸಂದೇಶ ರವಾನೆ ಮಾಡಿದ್ದರು, ಇಬ್ಬರು ಶಾಸಕರು ಪರವಾಗಿ ಬರಲಾಗಿದೆ ಎಂದು ಬಿ,ಆರ್,ಎಲ್ ಹೇಳುತ್ತಾ, ಇಲ್ಲಿನ ವ್ಯವಸ್ಥೆ ಬದಲಾವಣೆ ಮಾಡಬೇಕು ಎನ್ನುವುದನ್ನು, ಹೇಳುತ್ತಾ, ಹಂಗಾಮಿ ಅಧ್ಯಕ್ಷರಾಗಿ ವಿಶ್ವನಾಥ್ ಅವರನ್ನು ನೇಮಕ ಮಾಡಲಾಗಿದೆ. ಇಷ್ಟು ವರ್ಷಗಳ ಗಳಲ್ಲಿ ಲಾರಿ ಅಸೋಸಿಯೇಷನ್ ಗೆ ಪಾಲಿಕೆ ಸದಸ್ಯರು ಎಂಟ್ರಿ ಕೊಟ್ಟು ರಾಜಕಾರಣ ಮಾಡಿದ್ದ ದಾಖಲೆ ಗಳು ಇಲ್ಲ.ಈಗಾಗಲೇ ಲಾರಿ ಅಸೋಸಿಯೇಷನ್ ಬಾಡಿ ಅನುಮತಿ ಇಲ್ಲದೆ ಕೇಲ ಶಾಸಕರ ಬೆಂಬಲಿಗರು, ಬೈಲ ವಿಧಾನ ಗಳು ಗಾಳಿ ಗೆ ತೂರಿ, ಪದಾಧಿಕಾರಿಗಳು ಯಾಗಿ ನೇಮಕ ಮಾಡಿ ಸಂಬಂಧಿಸಿದ ಇಲಾಖೆ ಗೆ ರವಾನೆ ಮಾಡಿದ್ದು ಅಚ್ಚರಿ ಅನುಮಾನ ಗಳು ಮೂಡಿಸಿವೆ.
ಅಸೋಸಿಯೇಷನ್ ಗೆ ಸಂಬಂಧ ಇಲ್ಲದೆ ಇರುವ ಅವರು ರಾಜಕೀಯ ಬಣ್ಣ ದಿಂದ ಅಧ್ಯಕ್ಷರು ಆಗುತ್ತಾರೆ ಅನ್ನುವ ಸಂದೇಶ ರವಾನೆ ಆಗಿದ್ದು, ಎರಡೂ ಗುಂಪುಗಳಿಗೆ ಜ್ಞಾನ ಅಗಿದೆ.
ಈಗಾಗಲೇ ಲಾರಿ ಅಸೋಸಿಯೇಷನ್ ಗೆ ಒಂದಿಷ್ಟು ಭೂಮಿ ಇದೆ,ಅದರೆ ಒಂದಿಷ್ಟು ಪೆಟ್ರೋಲ್ ಬಂಕ್ ಗೆ,ಒಂದಿಷ್ಟು ಇತರರ ಗೆ ಲೀಜ್ ಗೆ,ಕೊಟ್ಟು ಅಸೋಸಿಯೇಷನ್ ಆಸರೆ ಮಾಡಿದ್ದು ಎಲ್ಲಾ ಲಾರಿ ಮಾಲೀಕರಿಗೆ ಅರಿವು ಇದೆ.ಆದರೆ ಇನ್ನೂ ಉಳಿದ ಭೂಮಿ ಮೇಲೆ ಕೆಲ ಪ್ರಭಾವಿ ಗಳು ಗುರಿಯನ್ನು ಇಟ್ಟಿದ್ದಾರೆ ಎನ್ನುವುದು ಲಾರಿ ಮಾಲೀಕರ ಮಾತು ಹಳ್ಳಿ ಕಟ್ಟೆಯಲ್ಲಿ ಮಾತನಾಡುತ್ತಾ ಇದ್ದಾರೆ.ಈಗಾಗಲೇ ಈವರೆಗೆ ಲೀಸ್ ಆಗಿರುವ ಸ್ಥಳ ಮುಂದೆ ದೊಡ್ಡ ವಿಚಾರ ಆಗಲಿದೆ. ಒಟ್ಟಾರೆ ಲಾರಿ ಅಸೋಸಿಯೇಷನ್ ಗೆ ರಾಜಕಾರಣ ಗಳ,ಸುಂಕು ಸೋಕಿದೇ.ಆದರೆ ಲಾರಿ ಅಸೋಸಿಯೇಷನ್ ಕಥೆ ಮುಂದೆ ಏನು ಆಗಬಹುದು. ಅನ್ನುವುದು ಕಾದು ನೋಡಬೇಕು ಆಗಿದೆ. ಕೆ.ಬಜಾರಪ್ಪ ವರದಿಗಾರರು.