This is the title of the web page
This is the title of the web page

Please assign a menu to the primary menu location under menu

State

ಬಳ್ಳಾರಿಯ ಯುವ ಮತದಾರರು ಗಾಲಿ ಅರುಣಾ ಲಕ್ಷ್ಮಿ ಗೆ ಬೆಂಬಲ.

ಬಳ್ಳಾರಿಯ ಯುವ ಮತದಾರರು ಗಾಲಿ ಅರುಣಾ ಲಕ್ಷ್ಮಿ ಗೆ ಬೆಂಬಲ.

*ಬಳ್ಳಾರಿಯ ಯುವ ಮತದಾರರು ಗಾಲಿ ಅರುಣಾ ಲಕ್ಷ್ಮಿ ಗೆ ಬೆಂಬಲ.*

ಬಳ್ಳಾರಿ : ಬಳ್ಳಾರಿಯ ಯುವ ಕಾರ್ಯಕರ್ತರು ಬಳ್ಳಾರಿಯ ಗಾಲಿ ಜನಾರ್ದನ್ ರೆಡ್ಡಿರವರ ನಿವಾಸಕ್ಕೆ ಭೇಟಿ ನೀಡಿ ಲಕ್ಷ್ಮಿ ಅರುಣ ಅವರ ಜೊತೆ ಚರ್ಚೆಯನ್ನು ನಡೆಸಿದರು.

2008ರಲ್ಲಿ ಅಂದು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಗಾಲಿ ಜನಾರ್ಧನ್ ರೆಡ್ಡಿ ಅವರು ಬಳ್ಳಾರಿಗೆ ಮಾಡಿದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿ, ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿ ಲಕ್ಷ್ಮಿ ಅರುಣರವರಿಗೆ ಬೆಂಬಲಿಸುವುದಾಗಿ ತಿಳಿಸಿದರು.

ಅನೇಕ ಯುವಕರು ಮೊದಲ ಬಾರಿಗೆ ಮತದಾನ ಮಾಡುವ ಉತ್ಸಾಹದಲ್ಲಿದ್ದು ಲಕ್ಷ್ಮಿ ಅರುಣಾ ರವರಿಗೆ ಬೆಂಬಲ ನೀಡುತ್ತೇವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಯುವ ಪಡೆ ಪಾದಯಾತ್ರೆಯ ಜಾಥಾವನ್ನು ಉದ್ಘಾಟಿಸಿ ಮಾತನಾಡಿದ ಲಕ್ಷ್ಮಿ ಅರುಣ ಜನಾರ್ಧನ್ ರೆಡ್ಡಿರವರು ಯುವಶಕ್ತಿ ದೇಶದ ಶಕ್ತಿಯಾಗಿದ್ದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ ಬೆಂಬಲ ವ್ಯಕ್ತಪಡಿಸಲು ನೂರಾರು ಸಂಖ್ಯೆಯ ಯುವಕರು ಸ್ವಯಂ ಪ್ರೇರಿತರಾಗಿ ಬೆಂಬಲ ಸೂಚಿಸುವುದನ್ನು ನೋಡಿ ನನಗೆ ತುಂಬಾ ಸಂತೋಷವಾಗಿದೆ ಎಂದರು.

ಇನ್ನೂ ಮೂರು ದಿನಗಳ ಕಾಲ ನಗರದ ವಿವಿಧ ವಾರ್ಡ್ಗಳಲ್ಲಿ ಬಹಿರಂಗ ಪ್ರಚಾರ ಸಭೆಗಳು ನಡೆಯಲಿದ್ದು, 7ನೇ ತಾರೀಕಿನಂದು ಗೋನಾಳ್ ಬೈಪಾಸ್ ರಸ್ತೆಯಲ್ಲಿರುವ ಪ್ರದೇಶದಲ್ಲಿ ಬೃಹತ್ ಮಹಿಳಾ ಸಮಾವೇಶವನ್ನು ಏರ್ಪಡಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ ಭಾರಿ ಸಂಖ್ಯೆಯ ಜನ ಬೆಂಬಲ ವ್ಯಕ್ತವಾಗುತ್ತಿದ್ದು, ಜನತೆ ಅಭಿವೃದ್ಧಿಯ ಹಿತದೃಷ್ಟಿಯಿಂದ ಬದಲಾವಣೆ ಬಯಸಿದ್ದಾರೆ ಎಂದು ತಿಳಿಸಿದರು.

ಈ ಬಾರಿ ಚುನಾವಣೆಯಲ್ಲಿ ಬಳ್ಳಾರಿ ಹೆಣ್ಣು ಮಗಳನ್ನು ಜನರು ಆಶೀರ್ವಾದ ಮಾಡುತ್ತಾರೆ.

ಚುನಾವಣೆ ಪ್ರಚಾರ ಸಮಯದಲ್ಲಿ ಜನರ ಜೊತೆಯಲ್ಲಿ ಸಂಬಂದಗಳು ನೋಡಿ ನಾವು ಏನೋ ಕಳೆದು ಕೊಂಡಿದ್ದಿವಿ, ಅನ್ನುವ ನೋವು, ಒಂದು ಕಡೆಯಾದರೆ,ಮತ್ತೋಂದು ಕಡೆಗೆ ನೋಡಿದರೆ ನನ್ನ ರಕ್ತ ಸಂಬಂದಿಗಳು ನಮ್ಮ ಮೇಲೆ ಶತ್ರು ತತ್ವಗಳು ತರವಿದೆ.

ಇದನ್ನು ನೋಡಿದರೆ ಬಳ್ಳಾರಿಯ ಲಕ್ಷಾಂತರ ಜನರು ನಮ್ಮ ಸಂಬಂಧಿಗಳು ಬಂಧು ಬಗೆನೀಯರು ಬಳ್ಳಾರಿ ನಗರದಲ್ಲಿ ಇದ್ದಾರೆ ಅನ್ನುವ ಸಂತೋಷವಿದೆ.

ಇಷ್ಟು ಜನರ ಸಂತೋಷ ಹಂಚಿಕೊಂಡ ಮೇಲೆ ನನಗೆ ಮನೆಯಲ್ಲಿ ಇರಲು ಮನಸ್ಸು ಬರುತ್ತಿಲ್ಲ.

ಜನರ ಮದ್ಯದಲ್ಲಿ ಇರಬೇಕು ಅನ್ನುವ ಕೂತುಹಲ ಹೆಚ್ಚಾಗಿದೆ.

ಕತ್ತಲು ಯಾಕೆ ಆಗುತ್ತದೆ ಅನ್ನುವ ಪ್ರಶ್ನೆ ಮೂಡಿದೆ, ಬೆಳಕಿನಲ್ಲಿ ಇನ್ನಷ್ಟು ಸಮಯ ಜನರ ಮದ್ಯದಲ್ಲಿ ಇರಬಹುದು ಅನ್ನುವ ಸಂತೋಷ ಮೂಡಿಸುತ್ತದೆ ಎಂದರು.(ಕೆ.ಬಜಾರಪ್ಪ ವರದಿಗಾರರು ಕಲ್ಯಾಣ ಕರ್ನಾಟಕ.)


News 9 Today

Leave a Reply