This is the title of the web page
This is the title of the web page

Please assign a menu to the primary menu location under menu

State

ಗಣೇಶ ನಿಮ್ಮಜ್ಜನ ಎಪಿಎಂಸಿ ಠಾಣೆ ವ್ಯಾಪ್ತಿಯಲ್ಲಿ

ಗಣೇಶ ನಿಮ್ಮಜ್ಜನ ಎಪಿಎಂಸಿ ಠಾಣೆ ವ್ಯಾಪ್ತಿಯಲ್ಲಿ

ಗಣೇಶ ನಿಮ್ಮಜ್ಜನ ಎಪಿಎಂಸಿ ಠಾಣೆ ವ್ಯಾಪ್ತಿಯಲ್ಲಿ ನಗರದಲ್ಲಿ ಶಾಂತಿಯುತವಾಗಿ ಮುಕ್ತಾಯ.

ಬಳ್ಳಾರಿ(20)ಗಣೇಶ ಚತುರ್ಥಿ ಅಂಗವಾಗಿ ನಡೆದ ಗಣೇಶ ಮೂರ್ತಿ ವಿಸರ್ಜನೆ ಕಾರ್ಯಕ್ರಮವು ಬಳ್ಳಾರಿ ನಗರದ ವಿವಿಧ ಭಾಗಗಳಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶವಾಗದಂತೆ ಶಾಂತಿಯುತವಾಗಿ ನಡೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ವಿಶೇಷವಾಗಿ ಎಪಿಎಂಸಿ ಮಾರ್ಕೆಟ್ ಪೊಲೀಸ್ ಠಾಣೆ ವ್ಯಾಪ್ತಿಯು ವಿಶಾಲವಾಗಿದ್ದು, ಸೂಕ್ಷ್ಮ ಹಾಗೂ ಅತಿಸೂಕ್ಷ್ಮ ಪ್ರದೇಶಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಸಿಬ್ಬಂದಿ ಕೊರತೆಯ ನಡುವೆಯೂ ಠಾಣೆಯ ಅಧಿಕಾರಿ ಮೊಹಮ್ಮದ್ ರಫೀ ಅವರ ನೇತೃತ್ವದಲ್ಲಿ ಪೊಲೀಸರು ಗಣೇಶ ವಿಸರ್ಜನೆ ಸಂದರ್ಭದಲ್ಲಿ ವಿಶೇಷ ಮುನ್ನೆಚ್ಚರಿಕೆ ವಹಿಸಿ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ.

ಗಣೇಶೋತ್ಸವ ಮೊಹರಂ ಸೇರಿದಂತೆ ವಿವಿಧ ಹಬ್ಬಗಳ ಸಂದರ್ಭದಲ್ಲಿ ಸೂಕ್ಷ್ಮ ಪ್ರದೇಶಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ಪೊಲೀಸರಿಗೆ ಸವಾಲಿನ ಕೆಲಸವಾಗಿರುತ್ತದೆ.

ಈ ಹಿನ್ನೆಲೆಯಲ್ಲಿ ಎಪಿಎಂಸಿ ಮಾರ್ಕೆಟ್ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿ ಸಾರ್ವಜನಿಕರೊಂದಿಗೆ ಸಮನ್ವಯ ಸಾಧಿಸಿ ಯಾವುದೇ ದೊಡ್ಡ ಮಟ್ಟದ ಗಲಾಟೆ ಅಥವಾ ಅಹಿತಕರ ಘಟನೆ ನಡೆಯದಂತೆ ನಿಮ್ಮಜ್ಜನೆ ಕಾರ್ಯಕ್ರಮವನ್ನು ಸುಗಮವಾಗಿ ನಡೆಸಿಕೊಟ್ಟಿರುವುದು ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.

ಇದೇ ವೇಳೆ ಕೌಲ್ ಬಜಾರ್ ಬ್ರೂಸ್‌ಪೇಟೆ ಹಾಗೂ ಗಾಂಧಿನಗರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿಯೂ ಪೊಲೀಸರು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಹಬ್ಬದ ಸಂದರ್ಭದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಶ್ರಮಿಸಿದ್ದಾರೆ.

ಸಿಬ್ಬಂದಿ ಕೊರತೆ ಹಾಗೂ ಠಾಣೆಗಳ ವ್ಯಾಪ್ತಿ ವಿಸ್ತಾರವಾಗಿದ್ದರೂ ಪೊಲೀಸರು ಶಕ್ತಿಮೀರಿ ಕಾರ್ಯನಿರ್ವಹಿಸಿ ಗಣೇಶೋತ್ಸವವನ್ನು ಶಾಂತಿಯುತವಾಗಿ ಮುಕ್ತಾಯಗೊಳಿಸಿರುವುದು ಜಿಲ್ಲಾ ಪೊಲೀಸ್ವರಿಷ್ಟ ಅಧಿಕಾರಿಗಳ ಮಾರ್ಗದರ್ಶನ ಮತ್ತು ಸಿಬ್ಬಂದಿಯ ಕರ್ತವ್ಯನಿಷ್ಠೆಗೆ ಸಾಕ್ಷಿಯಾಗಿದೆ ಎಂದು ಸಾರ್ವಜನಿಕರು ಸಂತಸ ವ್ಯಕ್ತಪಡಿಸಿದ್ದಾರೆ. ಪ್ರತಿ ವರ್ಷ ಪ್ರತಿವರ್ಷಗಿಂತಲೂ ಈ ಬಾರಿ ಅತ್ಯಂತ ವಿಜೃಂಭಣೆಯಿಂದ ಬಳ್ಳಾರಿ ನಗರದಲ್ಲಿ ಗಣೇಶ್ ಉತ್ಸವ ಸಂಭ್ರಮ ಮುಗಿಲುಮುಟ್ಟಿತ್ತು ಈಗಾಗಲೇ ರಾಜ್ಯ ಬರಗಾಲದಲ್ಲಿದ್ದು ಅನ್ನದಾತರು ಸಂಕಷ್ಟದಲ್ಲಿದ್ದು ಇಂತಹ ಸಂದರ್ಭದಲ್ಲಿ ಗಣೇಶನನ್ನು ಪ್ರಾರ್ಥನೆ ಮಾಡಿದರೆ ಪಾರ್ವತಿ ಪುತ್ರ ಎನ್ನುವ ಭಕ್ತಿಯನ್ನು ಸಾರಿ ಬಹುತೇಕರು ಮಳೆರಾಯನ ಗೋಸ್ಕರ ಪೂಜೆಯನ್ನು ಮಾಡಿರೋದು ನಗರದಲ್ಲಿ ಕಂಡುಬಂದಿತ್ತು. ಸಮೃದ್ಧಿ ಮಳೆ ಬೆಳೆ ಆದರೆ ನಾಡಿಗೆ ಸಂಪತ್ತು ಹರಿದು ಬಂದಂತೆ. ನಂಬಿಕೆ ಮೇಲೆ ಮಾಡುವ ಪೂಜೆ ಪುನಸ್ಕಾರಗಳು ಒಂದಿಷ್ಟು ಫಲ ನೀಡಿದ್ದಾವೆ ಎನ್ನುವುದು ಸಾಕ್ಷಿಯಾಗಿದೇ.

ಮೂರು ನಾಲ್ಕು ದಿನದಿಂದ ಅಲ್ಪ ಸ್ವಲ್ಪ ಮಳೆ ಆಗ್ದಿದ್ದು ಗಣೇಶನ ಮಹಿಮೆ ಎನ್ನುವ ಭಾವನೆ ನಾಡಿನಾದ್ಯಂತ ಹುಟ್ಟು ಕೊಂಡಿದೆ ಮತ್ತಷ್ಟು ಮಳೆ ನದಿಗೆ ನೀರು ಬಂದರೆ ಜನಸಾಮಾನ್ಯರಲ್ಲಿ
ದಸರೆ ದೀಪಾವಳಿ ಮತ್ತಷ್ಟು ಅದ್ದೂರಿಯಲ್ಲಿ ಮಾಡುವ ಉತ್ಸಾಹ ಕಂಡು ಬರುತ್ತದೆ.


News 9 Today

Leave a Reply